ಬಾಕ್ಸ್‌ ಆಫೀಸ್‌ನಲ್ಲಿ ಹಣದ ಸುರಿಮಳೆಗೈದ ಜವಾನ್..! – 15 ದಿನದಲ್ಲಿ ಸಿನಿಮಾದ ಕಲೆಕ್ಷನ್‌ ಎಷ್ಟು?

ಬಾಕ್ಸ್‌ ಆಫೀಸ್‌ನಲ್ಲಿ ಹಣದ ಸುರಿಮಳೆಗೈದ ಜವಾನ್..! – 15 ದಿನದಲ್ಲಿ ಸಿನಿಮಾದ ಕಲೆಕ್ಷನ್‌ ಎಷ್ಟು?

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ – ತಮಿಳಿನ ಸ್ಟಾರ್ ಡೈರೆಕ್ಟರ್ ಅಟ್ಲಿ ಕಾಂಬಿನೇಷನ್ ನಲ್ಲಿ ಮೂಡಿಬಂದ ಸಿನಿಮಾ ‘ಜವಾನ್’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಒಂದೊಂದು ದಿನ ಒಂದೊಂದು ಕಲೆಕ್ಷನ್ ವರದಿ ಹೊರ ಬೀಳುತ್ತಿದ್ದವು. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳಲ್ಲಿ ಇದು ಗೊಂದಲಕ್ಕೆ ಕಾರಣವಾಗಿತ್ತು. ಇದೀಗ ಅಧಿಕೃತವಾಗಿಯೇ ನಿರ್ಮಾಣ ಸಂಸ್ಥೆಯೇ ಕಲೆಕ್ಷನ್ ವಿವರವನ್ನು ಹಂಚಿಕೊಂಡಿದೆ.

ಜವಾನ್‌ ಸಿನಿಮಾ ರಿಲೀಸ್‌ ಆಗಿ ಸುಮಾರು 15 ದಿನಗಳು ಕಳೆದಿದೆ. ಇದೀಗ ಚಿತ್ರ ನಿರ್ಮಾಣ ಸಂಸ್ಥೆಯೇ ಸಿನಿಮಾದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎಷ್ಟು ಎಂಬ ಮಾಹಿತಿಯನ್ನು ಹಂಚಿಕೊಂಡಿದೆ. ಜವಾನ್‌ ಸಿನಿಮಾ 15 ದಿನಕ್ಕೆ ವಿಶ್ವದಾದ್ಯಂತ ಬರೋಬ್ಬರಿ 937.61 ಕೋಟಿ ರೂಪಾಯಿ ಬಾಚಿಕೊಂಡಿದೆ. ಶೀಘ್ರದಲ್ಲೇ ಸಾವಿರ ಕೋಟಿ ರೂಪಾಯಿ ಕೂಡ ತಲುಪಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಯೂಟ್ಯೂಬರ್ ನಿರ್ದೇಶನದ ಚಿತ್ರಕ್ಕೆ ಓಕೆ ಎಂದ ನಯನತಾರಾ – ಜವಾನ್ ಚಿತ್ರದ ಬೆಡಗಿ ನಡೆಗೆ ಎಲ್ಲೆಡೆ ಅಚ್ಚರಿ

ಒಂದು ಕಡೆ ‘ಜವಾನ್’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಜವಾನ್ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳು ಕೂಡ ಕೇಳಿ ಬರುತ್ತಿವೆ. ಸಮಾರಂಭವೊಂದರಲ್ಲಿ ಸಿನಿಮಾದ ಕುರಿತು ಮಾತನಾಡಿರುವ ನಿರ್ದೇಶಕ ಅಟ್ಲಿ ತಮ್ಮ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಬರಬೇಕು. ಆ ಪ್ರಶಸ್ತಿ ಪಡೆಯಲು ಚಿತ್ರಕ್ಕೆ ಎಲ್ಲ ಅರ್ಹತೆಯೂ ಇದೆ ಎಂದು ಹೇಳಿಕೊಂಡಿದ್ದಾರೆ.

ಈ ನಡುವೆ ನಿರ್ದೇಶಕ ಅಟ್ಲಿ ತಮ್ಮ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದನ್ನು ನೀಡಿದ್ದಾರೆ. ‘ಜವಾನ್’ ಯಶಸ್ಸಿನ ಬೆನ್ನಲ್ಲೇ ಅವರು ‘ಜವಾನ್ 2’ ಸಿನಿಮಾ ಮಾಡಲು ಮುಂದಾಗಿದ್ದು, ಇದರ ಜೊತೆಗೆ ಶಾರುಖ್ ಖಾನ್ ಅಭಿಮಾನಿಗಳಿಗೆ ಮತ್ತೊಂದು ಸರ್ ಪ್ರೈಸ್ ನೀಡಿದ್ದಾರೆ.

ಜವಾನ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ನೂರಾರು ಕೋಟಿ ಬ್ಯುಸಿನೆಸ್ ಮಾಡಿದೆ. ಭಾರತದಲ್ಲೇ 400 ಕೋಟಿಗೂ ಅಧಿಕ ಹಣ ಬಾಚಿದೆ. ವಿಶ್ವದಾದ್ಯಂತ 800 ಕೋಟಿಗೂ ಅಧಿಕ ಹಣ ನಿರ್ಮಾಪಕರಿಗೆ ಹರಿದು ಬಂದಿದೆ. ಈ ಖುಷಿಯಲ್ಲೇ ಅಟ್ಲಿ ಜವಾನ್ 2 ಸಿನಿಮಾ ಘೋಷಣೆ ಮಾಡಿದ್ದಾರೆ. ಜೊತೆಗೆ ಶಾರುಖ್ ಖಾನ್ ಮತ್ತು ವಿಜಯ್ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಮಾಡುವ ಆಲೋಚನೆಯನ್ನೂ ಅವರು ಹೇಳಿಕೊಂಡಿದ್ದಾರೆ.

Shwetha M