ಪಠಾಣ್ ಇಷ್ಟ ಆಗಿಲ್ಲ ಎಂದ ಮಗು – ಬಾಲಿವುಡ್ ಕಿಂಗ್ ಖಾನ್ ಶಾರುಖ್ ಹೇಳಿದ್ದೇನು?

ಪಠಾಣ್ ಇಷ್ಟ ಆಗಿಲ್ಲ ಎಂದ ಮಗು – ಬಾಲಿವುಡ್ ಕಿಂಗ್ ಖಾನ್ ಶಾರುಖ್ ಹೇಳಿದ್ದೇನು?

ನವದೆಹಲಿ: ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್​ ನಾಲ್ಕು ವರ್ಷಗಳ ಬಳಿಕ “ಪಠಾಣ್” ಚಿತ್ರದ ಮೂಲಕ ಗ್ರೇಟ್ ಕಮ್ ಬ್ಯಾಕ್ ಮಾಡಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನ ಸಾಕಷ್ಟು ವಿವಾದದಲ್ಲಿ ಸಿಲುಕಿದ್ದರು ಕೂಡ ಪಠಾಣ್ ಆಬ್ಬರ ಮಾತ್ರ ನಿಂತಿರಲಿಲ್ಲ. ಇದೀಗ ಚಿತ್ರ ಬಿಡುಗಡೆಯಾಗಿ ವಿಶ್ವದಾದ್ಯಂತ ಬರೋಬ್ಬರಿ 700 ಕೋಟಿ ರೂ. ಗೂ ಅಧಿಕ ಹಣ ಗಳಿಸುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆದಿದೆ.

ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರು ಶಾರುಖ್ ಖಾನ್ ಅಭಿನಯಕ್ಕೆ ಫಿದಾ ಆಗಿದ್ದಾರೆ. ಈ ವಯಸ್ಸಿನಲ್ಲೂ ಸದೃಢ ದೇಹವನ್ನು ಶಾರುಖ್ ನಿರ್ವಹಿಸುವ ರೀತಿಯನ್ನು ಕಂಡು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಇಲ್ಲೊಂದು ಮಗುವಿಗೆ “ಪಠಾಣ್” ಇಷ್ಟ ಆಗಿಲ್ವಂತೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನಟ ಶಾರುಖ್ ಆ ಮಗುವಿನ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:‘ಪಠಾಣ್’ ಯಶಸ್ಸಿನ ಅಲೆ – ಪಾರ್ಟ್ 2ಗೆ ಓಕೆ ಎಂದ ಶಾರುಖ್ ಖಾನ್!

ಟ್ವಿಟರ್ ನಲ್ಲಿ ಅಭಿಷೇಕ್ ಕುಮಾರ್ ಎಂಬುವರು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಆಹಾನ ಎಂಬ ಪುಟ್ಟ ಮಗುವಿಗೆ ಯಾವ ಸಿನಿಮಾ ನೋಡಿದೆ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಉತ್ತರ ನೀಡುವ ಆಹಾನ “ಪಠಾಣ್” ಎಂದು ಹೇಳುತ್ತಾಳೆ. ಬಳಿಕ ನಿನಗೆ ಆ ಸಿನಿಮಾ ಇಷ್ಟವಾಯಿತಾ? ಎಂದು ಪ್ರಶ್ನಿಸಲಾಗುತ್ತದೆ. ಇದಕ್ಕೆ ಇಷ್ಟ ಆಗಲಿಲ್ಲ ಎನ್ನುವ ಆಹಾನ, ಯಾಕೆ ಇಷ್ಟ ಆಗಲಿಲ್ಲ ಎಂಬ ಕಾರಣವನ್ನು ತಿಳಿಸದೇ ಸುಮ್ಮನೇ ನಗುತ್ತಾಳೆ.

ಅಭಿಷೇಕ್ ಕುಮಾರ್ ಪೋಸ್ಟ್ ಮಾಡಿರುವ ವಿಡಿಯೋವನ್ನು ಶೇರ್ ಮಾಡಿ, ಶಾರುಖ್ ಪ್ರತಿಕ್ರಿಯೆ ನೀಡಿದ್ದಾರೆ. ‘ಓಹೋ… ಹಾಗಾದರೆ ನಾನೀಗ ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡಬೇಕಿದೆ! ಡ್ರಾಯಿಂಗ್ ಬೋರ್ಡ್‌ಗೆ ಹಿಂತಿರುಗಬೇಕಿದೆ. ಯುವ ಪ್ರೇಕ್ಷಕರು ನಿರಾಶೆಗೊಳ್ಳಲು ನಾನು ಬಿಡುವುದಿಲ್ಲ. ದಯವಿಟ್ಟು ಒಮ್ಮೆ ಅವಳಿಗೆ ಡಿಡಿಎಲ್‌ಜೆ ಸಿನಿಮಾ ತೋರಿಸಿ, ಬಹುಶಃ ಆಕೆ ರೊಮ್ಯಾಂಟಿಕ್ ಅನ್ಸುತ್ತೆ’ ಎಂದು ಶಾರುಖ್ ಟ್ವೀಟ್ ಮಾಡಿದ್ದಾರೆ.

ಶಾರುಖ್ ಟ್ವೀಟ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಶಾರುಖ್ ಅವರು ಅಕ್ಷರಶಃ ಪ್ರತಿ ಟ್ಯಾಗ್ ಅನ್ನು ಓದುತ್ತಾರೆ. ಈ ಮನುಷ್ಯ ಎಂದಿಗೂ ಬದಲಾಗಿಲ್ಲ. ಬದಲಾಯಿಸಿದರೆ ಅವರು ಇನ್ನೂ ಉತ್ತಮವಾಗಿ ಬದಲಾಗುತ್ತಾರೆ. ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

suddiyaana