ಪಠಾಣ್ ಹೀರೋ ‘ನಂಬರ್ 1’ – 100 ಪ್ರಭಾವಿ ವ್ಯಕ್ತಿಗಳಲ್ಲಿ ‘ಶಾರುಖ್ ಖಾನ್’ ಬೆಸ್ಟ್..!

ಪಠಾಣ್ ಹೀರೋ ‘ನಂಬರ್ 1’ – 100 ಪ್ರಭಾವಿ ವ್ಯಕ್ತಿಗಳಲ್ಲಿ ‘ಶಾರುಖ್ ಖಾನ್’ ಬೆಸ್ಟ್..!

ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಅವರಿಗೆ ನಂಬರ್​ ಒನ್​ ಪಟ್ಟ ಸಿಕ್ಕಿದೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಅಮೆರಿಕದ ಪ್ರತಿಷ್ಠಿತ ‘ಟೈಮ್’ ಮ್ಯಾಗಜಿನ್​ನ ಓದುಗರ ಸಮೀಕ್ಷೆಯಲ್ಲಿ ಪಠಾಣ್ ಹೀರೋ ನಂಬರ್ ಒನ್ ಆಗಿದ್ದಾರೆ. ಸಿನಿಮಾ, ರಾಜಕೀಯ, ಉದ್ಯಮ, ಕ್ರೀಡೆ, ಸಾಮಾಜಿಕ ಕಾರ್ಯ ಮುಂತಾದ ಕ್ಷೇತ್ರಗಳ ಘಟಾನುಘಟಿಗಳನ್ನೂ ಮೀರಿಸಿ ಶಾರುಖ್​ ಖಾನ್​ ನಂಬರ್​ ಒನ್​ ಆಗಿದ್ದಾರೆ.

ಇದನ್ನೂ ಓದಿ: ನಟಿ ಪರಿಣಿತಿ ಚೋಪ್ರಾ, ಆಪ್ ನಾಯಕ ರಾಘವ್ ಚಡ್ಡಾ ನಡುವೆ ನಿಶ್ಚಿತಾರ್ಥಕ್ಕೆ ಸಿದ್ಧತೆ?

ಟೈಮ್​’ ಮ್ಯಾಗ್‌ಜಿನ್​ಗೆ 12 ಲಕ್ಷಕ್ಕೂ ಅಧಿಕ ಓದುಗರು ವೋಟ್​ ಮಾಡಿದ್ದಾರೆ. 100 ಪ್ರಭಾವಿ ವ್ಯಕ್ತಿಗಳಲ್ಲಿ ಯಾವ ಸೆಲೆಬ್ರಿಟಿಯು ಎಷ್ಟನೇ ಸ್ಥಾನಕ್ಕೆ ಅರ್ಹರಾಗಿದ್ದಾರೆ ಎಂಬುದನ್ನು ಓದುಗರ ಸಮೀಕ್ಷೆಯ ಮೂಲಕ ನಿರ್ಧರಿಸಲಾಗಿದೆ. ಶೇ.4ರಷ್ಟು ಓದುಗರು ಶಾರುಖ್​ ಖಾನ್​ಗೆ ವೋಟ್​ ಹಾಕಿದ್ದು, ಅವರು ನಂಬರ್​ ಸ್ಥಾನ ಅಲಂಕರಿಸಿದ್ದಾರೆ. ಆಸ್ಕರ್​ ವಿಜೇತ ನಟಿ ಮಿಶಾಲ್​ ಯೋ, ಟೆನ್ನಿಸ್​ ಆಟಗಾರ್ತಿ ಸೆರೆನಾ ವಿಲಿಯಮ್ಸ್​, ಮೆಟಾ ಸಿಇಓ ಮಾರ್ಕ್​ ಝಕರ್​ಬರ್ಗ್​ ಮುಂತಾದವರನ್ನು ಶಾರುಖ್​ ಖಾನ್​ ಹಿಂದಿಕ್ಕಿದ್ದಾರೆ. ಫುಟ್ಬಾಲ್​ ಆಟಗಾರ ಲಿಯೋನೆಲ್​ ಮೆಸ್ಸಿ ಅವರು 5ನೇ ಸ್ಥಾನದಲ್ಲಿದ್ದಾರೆ.

ಶಾರುಖ್​ ಖಾನ್​ ಅವರು ಅಗ್ರ ಸ್ಥಾನ ಪಡೆದಿರುವುದಕ್ಕೆ ಫ್ಯಾನ್ಸ್ ಖುಷಿಯಾಗಿದ್ದಾರೆ. ಯಾಕೆಂದರೆ, ವೃತ್ತಿಜೀವನದಲ್ಲಿ ಶಾರುಖ್​ ಖಾನ್ ಹಲವಾರು ಬಾರಿ ಸೋಲು ಕಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಅವರು ನಟಿಸಿದ ಯಾವ ಸಿನಿಮಾ ಕೂಡ ಗೆಲ್ಲುತ್ತಿರಲಿಲ್ಲ. ಅದೇ ವೇಳೆಗೆ ಪುತ್ರ ಆರ್ಯನ್​ ಖಾನ್​ ಅವರು ಡ್ರಗ್ಸ್​ ಪಾರ್ಟಿ ಮಾಡಿದ ಆರೋಪದಲ್ಲಿ ಜೈಲು ಸೇರಿದ್ದರಿಂದ ಕಿಂಗ್​ ಖಾನ್​ ಕುಟುಂಬದ ಪ್ರತಿಷ್ಠಿಗೆ ಧಕ್ಕೆ ಆಗಿತ್ತು. ಆದರೆ 2023ರ ಆರಂಭದಲ್ಲೇ ‘ಪಠಾಣ್​’ ಸಿನಿಮಾ ಮೂಲಕ ಶಾರುಖ್​ ಖಾನ್ ಅವರು ಟ್ರ್ಯಾಕ್​ಗೆ ಮರಳಿದರು. ಈಗ ಅವರಿಗೆ ಡಿಮ್ಯಾಂಡ್​ ಹೆಚ್ಚಾಗಿದೆ. ಶಾರುಖ್​ ಖಾನ್​ ಅವರು ನಿರ್ದೇಶಕ ಅಟ್ಲಿ ಕುಮಾರ್​ ಜೊತೆ ‘ಜವಾನ್​’ ಸಿನಿಮಾ ಮಾಡುತ್ತಿದ್ದಾರೆ. ರಾಜ್​ಕುಮಾರ್​ ಹಿರಾನಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಡಂಕಿ’ ಚಿತ್ರದಲ್ಲೂ ಶಾರುಖ್​ ನಟಿಸುತ್ತಿದ್ದಾರೆ. ಹೊಸ ಹೊಸ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.

suddiyaana