ರಿಲೀಸ್ ದಿನವೇ ಪಠಾಣ್ ಗೆ ಪೈರಸಿ ಕಾಟ – ಶಾರುಖ್ ಟೀಮ್ ಗೆ ಬಿಗ್ ಶಾಕ್

ರಿಲೀಸ್ ದಿನವೇ ಪಠಾಣ್ ಗೆ ಪೈರಸಿ ಕಾಟ – ಶಾರುಖ್ ಟೀಮ್ ಗೆ ಬಿಗ್ ಶಾಕ್

ಸಾಕಷ್ಟು ವಿವಾದಗಳಿಗೆ ಸಿಲುಕಿದ್ದ ಶಾರುಖ್ ಖಾನ್  ನಟನೆಯ ‘ಪಠಾಣ್’ ಸಿನಿಮಾ ಕಡೆಗೂ ರಿಲೀಸ್ ಆಗಿದೆ. ಬಾಯ್ಕಾಟ್ ನಡುವೆಯೂ ಈ ಸಿನಿಮಾಗೆ ಪ್ರೇಕ್ಷಕರಿಂದ  ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಆದರೆ ಇದೀಗ ಚಿತ್ರ ತಂಡಕ್ಕೆ ಪೈರಸಿ ಕಾಟ ಶುರುವಾಗಿದೆ.

ಸಿನಿಮಾ ತಂಡ ಥಿಯೇಟರ್ ನಲ್ಲಿ ಯಾರೂ ಕೂಡ ಸಿನಿಮಾದ ದೃಶ್ಯಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಬೇಡಿ ಎಂದು ಮನವಿ ಮಾಡಿತ್ತು. ಅಲ್ಲದೇ ಸಿನಿಮಾ ಲೀಕ್ ಆಗದಂತೆ ಎಚ್ಚರಿಕೆ ವಹಿಸಿತ್ತು. ಆದರೆ ಇದೀಗ ಸಿನಿಮಾ ರಿಲೀಸ್ ಆಗುವ ಕೆಲವೇ ಗಂಟೆಗಳ ಮೊದಲು ಪಠಾಣ್ ಸಿನಿಮಾ ಲೀಕ್ ಆಗಿದೆ. ಡಿವಿಡಿ ಹಾಗೂ ಹೆಚ್ ಡಿ ಕ್ವಾಲಿಟಿ ಇರುವ ಪ್ರಿಂಟ್ ಗಳು ಲೀಕ್ ಆಗಿದೆ.

ಇದನ್ನೂ ಓದಿ:ಥಿಯೇಟರ್ ಗಳನ್ನು “ಕಬ್ಜ” ಮಾಡಲು ಮುಹೂರ್ತ ಫಿಕ್ಸ್ – ಅಪ್ಪು ಬರ್ತಡೇಯಂದೇ ಪರಾಕ್!

ಹಿಂದೂ ಧರ್ಮಕ್ಕೆ ಸಿನಿಮಾ ತಂಡ ಅವಮಾನ ಮಾಡಿದೆ ಎನ್ನುವ ಕಾರಣಕ್ಕಾಗಿ ಈ ಸಂಚು ಮಾಡಿ ಸಿನಿಮಾವನ್ನು ಸೋಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲದೇ ಹಣಕ್ಕಾಗಿ  ಕೆಲ ವೆಬ್ ಸೈಟ್ ಗಳು ಸಿನಿಮಾ ರಿಲೀಸ್ ದಿನವೇ ಚಿತ್ರವನ್ನು ಲೀಕ್ ಮಾಡಿವೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹಾಗಾಗಿ ಚಿತ್ರತಂಡಕ್ಕೆ ದೊಡ್ಡ ಆತಂಕ ಎದುರಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸಿನಿಮಾ ಪ್ರದರ್ಶನಕ್ಕೆ ಯಾವುದೇ ತೊಂದರೆ ಮಾಡಬಾರದು ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಆದರೆ ಕೆಲ ಸಂಘಟನೆಗಳು ಮಾತ್ರ ಚಿತ್ರದ ವಿರುದ್ದ ಆಕ್ರೋಶ ಹೊರಹಾಕುತ್ತಲೇ ಇದ್ದಾರೆ. ಇಂದೂ ಕೂಡ ದೇಶದ ಹಲವು ಕಡೆಗಳಲ್ಲಿ ಚಿತ್ರದ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗಾವಿ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ  ಚಿತ್ರಪ್ರದರ್ಶನ ನಿಲ್ಲಿಸುವಂತೆ ಥಿಯೇಟರ್ ಗೆ ಮುತ್ತಿಗೆ ಹಾಕುವಂತಹ ಕೆಲಸಗಳು ನಡೆದಿವೆ. ಇನ್ನು ಬಿಹಾರದ ಭಾಗಲ್ಪುರ ಥಿಯೇಟರ್ ಮುಂಭಾಗದಲ್ಲಿ ಹಿಂದೂ ಪರ ಸಂಘಟನೆಯ ಗುಂಪೊಂದು ಸಿನಿಮಾದ ಪೋಸ್ಟರ್ ಗಳನ್ನು ಹರಿದು ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಈ ಹಿಂದೆಯೂ ಕೂಡ ಪಠಾಣ್ ಸಿನಿಮಾದ ಟ್ರೈಲರ್ ಕೂಡ ಒಂದು ದಿನ ಮುಂಚೆಯೇ ಲೀಕ್ ಆಗಿತ್ತು.

suddiyaana