ಕೇಸರಿ ಬಿಕಿನಿ ಹಾಕಿದ ದೃಶ್ಯಕ್ಕೆ ಬಿತ್ತು ಕತ್ತರಿ -‘ಪಠಾಣ್’ ಸಿನಿಮಾದ ವಿವಾದಕ್ಕೆ ಬ್ರೇಕ್ ಹಾಕಿದ ಶಾರುಖ್

ಕೇಸರಿ ಬಿಕಿನಿ ಹಾಕಿದ ದೃಶ್ಯಕ್ಕೆ ಬಿತ್ತು ಕತ್ತರಿ -‘ಪಠಾಣ್’ ಸಿನಿಮಾದ ವಿವಾದಕ್ಕೆ ಬ್ರೇಕ್ ಹಾಕಿದ ಶಾರುಖ್

ಬಾಲಿವುಡ್‌ ಅಂಗಳದಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ಸಿನಿಮಾ ‘ಪಠಾಣ್’. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಸಿನಿಮಾದ ‘ಬೇಷರಂ ರಂಗ್..’ ಹಾಡು ಕೂಡಾ ವಿವಾದಕ್ಕೂ ಕಾರಣವಾಗಿತ್ತು. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ, ಕೇಸರಿ ಬಣ್ಣದ ಬಿಕಿನಿ ಹಾಕಿ ಡ್ಯಾನ್ಸ್ ಮಾಡಿದ್ದು ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ದೃಶ್ಯಕ್ಕೆ ಕತ್ತರಿ ಹಾಕಲೇಬೇಕು ಎಂಬ ಒತ್ತಾಯವೂ ಕೇಳಿಬಂದಿತ್ತು. ಇದೀಗ ಕೊನೆಗೂ ‘ಬೇಷರಂ ರಂಗ್..’ ಸಾಂಗ್‌ನ ವಿವಾದಕ್ಕೆಡೆ ಮಾಡಿಕೊಟ್ಟ ದೃಶ್ಯವನ್ನು ತೆಗೆಯಲಾಗಿದೆ. ಇದಲ್ಲದೆ ದೀಪಿಕಾ ಹಾಟ್ ಆಗಿ ಕಾಣಿಸಿಕೊಂಡ ಇನ್ನೂ ಕೆಲ ದೃಶ್ಯಗಳಿಗೆ ಶಾರುಖ್ ಕತ್ತರಿ ಹಾಕಿದ್ದಾರೆ.

ಇದನ್ನೂ ಓದಿ: ‘ವೀರ ಕಂಬಳ’ ಸಿನಿಮಾಕ್ಕಾಗಿ ಬಣ್ಣ ಹಚ್ಚಿದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ

‘ಪಠಾಣ್’ ಚಿತ್ರ ರಿಲೀಸ್ ಮಾಡಲು ಬಿಡುವುದಿಲ್ಲ ಅನ್ನೋ ಮಾತು ಕೂಡಾ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕೊನೆಗೂ ಚಿತ್ರಕ್ಕೆ ಎದುರಾದ ಅಡೆತಡೆಗಳನ್ನ ತಡೆಯಲು ಶಾರುಖ್ ತಾವೇ ಖುದ್ದು ಕೆಲ ದೃಶ್ಯಗಳಿಗೆ ಕತ್ತರಿ ಹಾಕಿಸಿದ್ದಾರೆ. ‘ಬೇಷರಂ ರಂಗ್..’ ಹಾಡು ಒಟ್ಟಾರೆ ಒಂದು ನಿಮಿಷ ಕಡಿಮೆ ಆಗಲಿದೆ ಎನ್ನಲಾಗುತ್ತಿದೆ. ಇದರಿಂದ ವಿವಾದ ತಣ್ಣಗಾಗಲೂ ಬಹುದು. ಬಾಲಿವುಡ್‌ನ ಹಲವು ಸಿನಿಮಾಗಳು ಬೈಕಾಟ್ ಟ್ರೆಂಡ್‌ಗೆ ಸಿಲುಕಿ ತೋಪಿದ್ದು ಹೋಗಿವೆ. ಆ ಸಾಲಿನಲ್ಲಿ ‘ಪಠಾಣ್’ ಸಿನಿಮಾ ಕೂಡ ಇದೆ. ಇದರಿಂದ ತಪ್ಪಿಸಿಕೊಳ್ಳಲು ಚಿತ್ರತಂಡ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದೆ. ಕೇಸರಿ ಬಣ್ಣದ ಬಿಕಿನಿ ತೊಟ್ಟು ಡ್ಯಾನ್ಸ್ ಮಾಡಿದ ದೃಶ್ಯಕ್ಕೆ ಕತ್ತರಿ ಹಾಕಿದ್ದೂ ಕೂಡಾ ಇದೇ ಕಾರಣಕ್ಕೆ ಎನ್ನಲಾಗ್ತಿದೆ.

suddiyaana