ಕ್ರಿಕೆಟ್ ವ್ಯಾಮೋಹ.. ಕೂದಲಿಗೆ ಕತ್ತರಿ.. ಅಣ್ಣನ ಬದಲು ಬಾಯ್ಸ್ ಟೀಮ್ ಗೆ ಎಂಟ್ರಿ! – ಶಫಾಲಿ ವರ್ಮಾ ಕ್ರಿಕೆಟ್ ಜರ್ನಿ!

ಅದು 2013.. ಅಕ್ಟೋಬರ್ ತಿಂಗಳಾಂತ್ಯ.. ಹರಿಯಾಣದ ಲಾಹ್ಲಿ ಸ್ಟೇಡಿಯಂನಲ್ಲಿ ಮುಂಬೈ ವರ್ಸಸ್ ಹರಿಯಾಣ ನಡುವೆ ರಣಜಿ ಪಂದ್ಯ ನಡಿತಾ ಇತ್ತು. ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ವೃತ್ತಿ ಜೀವನದ ಕೊನೆಯ ಪ್ರಥಮ ದರ್ಜೆ ಪಂದ್ಯ ಅನ್ನೋ ಕಾರಣಕ್ಕೆ ಹೆಚ್ಚಿನ ಮಹತ್ವ ಪಡೆದಿತ್ತು. ಪಂದ್ಯ ನೋಡಲು ಅದೆಷ್ಟೋ ಫ್ಯಾನ್ಸ್ ಬಂದಿದ್ರು.. ಆ ಗ್ಯಾಲರಿಯಲ್ಲಿ ಒಂಬತ್ತು ವರ್ಷದ ಪುಟ್ಟ ಹುಡುಗಿ ತುಂಬಾ ಕ್ಯೂರಿಯಾಸಿಟಿಯಿಂದ ಪಂದ್ಯ ನೋಡ್ತಿದ್ಲು.. ಕ್ರಿಕೆಟ್ ದೇವರ ಅಬ್ಬರ ಬ್ಯಾಟಿಂಗ್ ನೋಡಿದ ಈ ಪುಟ್ಟ ಪೋರಿ.. ತಾನು ಒಂದು ದಿನ ಇಂತಹ ದಾಖಲೆಗಳನ್ನು ಮಾಡ್ಬೇಕು ಅಂತಾ ಡಿಸೈಡ್ ಮಾಡಿದ್ಲು. ಹಾಗೇ ಅಂದು ಕೊಂಡಿದ್ದನ್ನ ಆ ಪುಟಾಣಿ ಸಾಧಿಸಿಯೇ ಬಿಟ್ಲು.. ನೋಡ ನೋಡ್ತಿದ್ದಂತೆ ಹದಿನಾರು ವರ್ಷ ತುಂಬೋದ್ರೊಳಗೆ ಮಹಿಳೆಯರ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ತನ್ನ ನಿರ್ಭೀತಿ ಬ್ಯಾಟಿಂಗ್ ಮೂಲಕ ಎಲ್ಲರನ್ನ ನಿಬ್ಬೆರಗಾಗಿಸಿದ್ದಳು. ಎಸ್.. ಆಕೆ ಬೇರೆ ಯಾರು ಅಲ್ಲ.. ಶಫಾಲಿ ವರ್ಮ! ಅಂದು ಬೆರಗುಗಣ್ಣಿಂದ ಸಚಿನ್ ಬ್ಯಾಟಿಂಗ್ ನೋಡಿದ್ದ ಈಕೆ ಈಗ ಸಿಕ್ಸರ್ ಕ್ವೀನ್ ಎನಿಸಿಕೊಂಡಿದ್ದಾಳೆ. ಈಕೆಯ ಕ್ರಿಕೆಟ್ ಜರ್ನಿಯ ರೋಚಕ ಸ್ಟೋರಿ ಇಲ್ಲಿದೆ.
ಇದನ್ನೂ ಓದಿ: ರಾಹುಕಾಲಕ್ಕೂ ಮೊದಲೇ ಬಜೆಟ್ ಆರಂಭ – ಎಷ್ಟು ಲಕ್ಷ ಕೋಟಿ ಆಯವ್ಯಯ ಮಂಡಿಸ್ತಾರೆ ಸಿಎಂ ಸಿದ್ದರಾಮಯ್ಯ?
ಜನವರಿ 28, 2004.. ಹರ್ಯಾಣದ ರೋಹ್ಟಕ್ ಎಂಬಲ್ಲಿ ಒಂದು ಹೆಣ್ಣು ಮಗು ಜನಿಸುತ್ತೆ.. ಆ ಮುದ್ದಾದ ಮಗುಗೆ ಶಫಾಲಿ ವರ್ಮಾ ಅಂತಾ ಹೆಸರಿಡ್ತಾರೆ.. ತಂದೆ ಸಂಜೀವ್ ವರ್ಮಾ.. ಒಡವೆ ಅಂಗಡಿ ಇಟ್ಕೊಂಡಿದ್ರು.. ತಾಯಿ ಪರ್ವೀನ್ ಬಾಲಾ.. ಶಫಾಲಿ ಹುಟ್ಟಿದ ಟೈಮ್ ನಲ್ಲಿ ಹರ್ಯಾಣದಲ್ಲಿ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗಿತ್ತು.. ಕುಟುಂಬದಲ್ಲಿ ಹೆಣ್ಣು ಹುಟ್ಟಿದ್ರು.. ಅಡುಗೆ, ಮನೆಕೆಲಸ ಮಾಡ್ಕೊಂಡು ಬಿದ್ದಿರ್ಬೇಕಿತ್ತು. ಆದ್ರೆ ಶಫಾಲಿ ತಂದೆ ಇದಕ್ಕೆ ತದ್ವಿರುದ್ಧ.. ತಮ್ಮ ಮನೆಯ ಹೆಣ್ಣು ಮಕ್ಕಳನ್ನೂ ಗಂಡು ಮಕ್ಕಳಂತೆ ಬೆಳೆಸಿದ್ರು.. ಕ್ರಿಕೆಟ್ ಆಡಲು, ನೋಡಲು ಮಗನ ಜೊತೆ ಮಗಳನ್ನೂ ಕರ್ಕೊಂಡು ಹೋಗ್ತಿದ್ರು.. 2013 ರಲ್ಲಿ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ತನ್ನ ಜೀವನದ ಅಂತಿಮ ರಣಜಿ ಪಂದ್ಯವಾಡಲು ಹರ್ಯಾಣಕ್ಕೆ ಬಂದಿದ್ರು.. ಶಫಾಲಿ ತಂದೆಗೆ ಮೊದಲೇ ಕ್ರಿಕೆಟ್ ಹುಚ್ಚು.. ಆ ದಿನ ಸಚಿನ್ ಆಟ ನೋಡಲು ಮಗಳನ್ನೂ ಕರ್ಕೊಂಡು ಹೋಗಿದ್ರು.. ಆ ಪಂದ್ಯದಲ್ಲಿ ಸಚಿನ್ ಅಜೇಯ 79 ರನ್ ಬಾರಿಸಿ ಮುಂಬೈ ಜಯದ ರೂವಾರಿಯಾಗಿದ್ದರು. ಕ್ರಿಕೆಟ್ ದೇವರನ್ನು ನೋಡಿದ್ದ ಈಕೆಯ ಮನಸ್ಸಿನಲ್ಲಿ ಒಂದು ವಿಷಯ ಅಚ್ಚೊತ್ತಿತ್ತು. ಕ್ರಿಕೆಟ್ ದೇವರಂತೆ ತಾನೂ ಕ್ರಿಕೆಟ್ ನಲ್ಲಿ ದೊಡ್ಡ ಸಾಧನೆ ಮಾಡ್ಬೇಕು ಅಂತಾ ಅಂದ್ಕೊಳ್ತಾಳೆ.. ಅದುವೇ ಶಫಾಲಿಯ ಜೀವನದ ಅತಿದೊಡ್ಡ ಟರ್ನಿಂಗ್ ಪಾಯಿಂಟ್..
ಶಫಾಲಿ ಕ್ರಿಕೆಟ್ ಕನಸಿಗೆ ಆಕೆಯ ತಂದೆ ಬೆನ್ನೆಲುಬಾಗಿ ನಿಲ್ತಾರೆ.. ಸಂಜೀವ್ ವರ್ಮಾ ಸ್ಥಳೀಯ ಕ್ರಿಕೆಟ್ ಆಟಗಾರನಾಗಿದ್ರು. ಹೀಗಾಗಿ ಶಫಾಲಿಗೆ ಮೊದಲು ಕ್ರಿಕೆಟ್ ನ ಆರಂಭಿಕ ಪಾಠ ಮಾಡುತ್ತಾರೆ. ನಂತರ ಅಕಾಡೆಮಿಯಲ್ಲಿ ತರಬೇತಿ ಕೊಡಬೇಕೆಂದು ಡಿಸಯ್ಡ್ ಮಾಡ್ತಾರೆ. ಆದ್ರೆ ಯಾವುದೇ ಸ್ಥಳೀಯ ಅಕಾಡಮಿ ಹುಡುಗಿಗೆ ಕ್ರಿಕೆಟ್ ಕಲಿಸಲು ಮುಂದೆ ಬರುವುದಿಲ್ಲ. ಬಹಳ ಹುಡುಕಾಟದ ನಂತರ ಒಂದು ಅಕಾಡಮಿಗೆ ಶಫಾಲಿ ಸೇರುತ್ತಾಳೆ. ಇದಕ್ಕಾಗಿ ಈ ಎಳೆಯ ಹುಡುಗಿ ದಿನಾ ಎಂಟು ಕಿ.ಮೀ ಸೈಕಲ್ ತುಳಿಯಬೇಕಿತ್ತು. ಶಫಾಲಿ ಆ ಅಕಾಡೆಮಿಯಲ್ಲಿ ಹುಡುಗರ ಜೊತೆ ಆಡಬೇಕಿತ್ತು.. ಹೀಗಾಗಿ ಶಫಾಲಿ ಮನೆಯರು ಆಕೆಯ ಕನಸು ಈಡೇರಲು ಕೂದಲಿಗೆ ಕತ್ತರಿ ಹಾಕಿದ್ದರು. ಉದ್ದ ಕೂದಲು ಬಿಟ್ಟಿದ್ದ ಶಫಾಲಿ ಕ್ರಿಕೆಟ್ ಆಟದ ಹುಚ್ಚಿಗೆ ಬಾಯ್ ‘ಕಟ್ ಮಾಡಿಸಿದ್ಲು.. ಕ್ರಿಕೆಟ್ ಕೋಚಿಂಗ್ ಗೆ ಸೇರಿದ ಶಫಾಲಿ ತನಗಿಂತ ಜಾಸ್ತಿ ಪ್ರಾಯದ ಹುಡುಗರ ವೇಗದ ಎಸೆತಗಳನ್ನು ಲೀಲಾಜಾಲವಾಗಿ ಎದುರಿಸುತ್ತಿದ್ದಳು. ಬಾಯ್ ಕಟ್ ಮಾಡಿದ ಕಾರಣ ಅಣ್ಣ ರೀತಿಯಂತೆ ಕಾಣುತ್ತಿದ್ದ ಶಫಾಲಿಯನ್ನ ಆಕೆಯ ತಂದೆ ಕೆಲವು ಪಂದ್ಯಗಳಲ್ಲಿ ಅಣ್ಣನ ಬದಲು ಆಡಲು ಕಳಿಸ್ತಿದ್ರು. 10,12 ವರ್ಷಕ್ಕೆ ಬಾಯ್ ಕಟ್ ಇದ್ದ ಆಕೆಯನ್ನ ಹುಡುಗಿಯಾ ಹುಡುಗನಾ ಅಂತಾ ಗುರುತು ಹಿಡಿಯಲು ಕಷ್ಟ ಇತ್ತು. ಹೀಗಾಗೇ ಅಣ್ಣ ಬದಲು ಆಡಿ ಈ ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿ ಗೆಲ್ತಾ ಇದ್ಲು.
ಇನ್ನು ಮುನ್ನುಗ್ಗಿ ಹೊಡೆಯುವುದು ಶಫಾಲಿಯ ಶೈಲಿ. ಈ ಆಟದಿಂದಲೇ ಹರ್ಯಾಣ ರಾಜ್ಯ ತಂಡದಲ್ಲಿ ಯಶಸ್ಸು ಪಡೆದಳು. ರಾಜ್ಯದ ಪರ ಆರು ಶತಕ ಮೂರು ಅರ್ಧ ಶತಕ ಬಾರಿಸಿದ ಶಫಾಲಿ 1923 ರನ್ ಗಳಿಸಿ ಟೀಂ ಇಂಡಿಯಾಗೆ ಆಯ್ಕೆಯಾದಳು. ದಕ್ಷಿಣ ಆಫ್ರಿಕಾ ವಿರುದ್ಧ ಪದಾರ್ಪಣೆ ಮಾಡಿದ ಈಕೆ ವಿಂಡೀಸ್ ವಿರುದ್ಧ ಅರ್ಧ ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ 30 ವರ್ಷದ ಹಿಂದೆ ಮಾಡಿದ್ದ ದಾಖಲೆಯನ್ನು ಮುರಿದಳು. ಮಹಿಳಾ ಲೀಗ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಪಟ್ಟಿಯಲ್ಲಿ ಭಾರತದ ಆಟಗಾರ್ತಿಯರಲ್ಲಿ ಶಫಾಲಿ ಅಗ್ರ ಸ್ಥಾನದಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಶಫಾಲಿ ವರ್ಮಾ ಸಿಕ್ಸರ್ ಕ್ವಿನ್ ಎಂದೇ ಖ್ಯಾತಿ ಪಡೆದಿದ್ದಾರೆ. ಇವರು ಆಡಿದ 18 ಕ್ಕೂ ಹೆಚ್ಚು ಪಂದ್ಯಗಳಲ್ಲಿ 561 ಕ್ಕೂ ಹೆಚ್ಚು ರನ್ ಸಿಡಿಸಿದ್ದಾರೆ. ಈ ವೇಳೆ ಇವರು 33 ಸಿಕ್ಸರ್ ಬಾರಿಸಿ ಮಿಂಚಿದ್ದಾರೆ. ಇನ್ನು 59 ಬೌಂಡರಿ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಬಾಯ್ ಕಟ್ ಮಾಡಿಕೊಂಡಿರುವ ಶಫಾಲಿ ನೋಡಲು ಮಾತ್ರವಲ್ಲದೆ ಈಕೆಯ ಕ್ರಿಕೆಟ್ ಶಾಟ್ ಗಳು ಕೂಡ ಹುಡುಗರಂತೆಯೇ ಪವರ್ ಫುಲ್. ಇನ್ನು ಆಕೆಗೆ ಲೇಡಿ ಸೆಹ್ವಾಗ್ ಎಂದೇ ಫೇಮಸ್ ಆಗಿದ್ದಾರೆ.. ಮಾಜಿ ಡ್ಯಾಶಿಂಗ್ ಒಪನರ್ ಸೆಹ್ವಾಗ್ ರೀತಿಯಲ್ಲಿ ಬ್ಯಾಟ್ ಬೀಸುತ್ತಿರುವುದರಿಂದ ಶಫಾಲಿಗೆ ಈ ಹೆಸರು ಲಭಿಸಿದೆ. ಇದೀಗ WPL ನಲ್ಲೂ ಶಫಾಲಿ ವರ್ಮಾ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲೂ ಸಿಡಿಲ್ಲಬ್ಬರದ ಬ್ಯಾಟಿಂಗ್ ಮಾಡಿ ಅಭಿಮಾನಿಗಳ ಮನಗೆದ್ದಿದ್ದಾರೆ.