ಜಿಂಬಾಬ್ವೆಯಲ್ಲಿ ಭೀಕರ ಬರಗಾಲ – ಕುಡಿಯಲು ನೀರಿಲ್ಲದೆ 100ಕ್ಕೂ ಆಧಿಕ ಆನೆಗಳ ಸಾವು!

ಜಿಂಬಾಬ್ವೆಯಲ್ಲಿ ಭೀಕರ ಬರಗಾಲ – ಕುಡಿಯಲು ನೀರಿಲ್ಲದೆ 100ಕ್ಕೂ ಆಧಿಕ ಆನೆಗಳ ಸಾವು!

ಆಫ್ರಿಕಾ ಖಂಡದ ಜಿಂಬಾಬ್ವೆಯಲ್ಲಿ ತೀವ್ರ ಬರಗಾಲ ಉಂಟಾಗಿದೆ. ಕುಡಿಯಲು ನೀರಿಲ್ಲದೇ ಪ್ರಾಣಿ, ಪಕ್ಷಿಗಳ ಸಾಯುತ್ತಿವೆ. ಬರಗಾಲದ ತೀವ್ರತೆಗೆ ಒಂದಲ್ಲ ಎರಡಲ್ಲ 100 ಕ್ಕೂ ಅಧಿಕ ಆನೆಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ.

ಹೌದು, ತೀವ್ರ ಬರಗಾಲದಿಂದ ಕುಡಿಯಲು ನೀರು, ತಿನ್ನಲು ಆಹಾರವಿಲ್ಲದೇ ಜಿಂಬಾಬ್ವೆಯಲ್ಲಿ ನೂರಕ್ಕೂ ಅಧಿಕ ಆನೆಗಳು ಅಸುನೀಗಿವೆ. ಅತೀದೊಡ್ಡ ರಾಷ್ಟ್ರೀಯ ಉದ್ಯಾನವನ ಹ್ವಾಂಗೇಯಲ್ಲಿ ಈ ದುರಂತ ಸಂಭವಿಸಿದೆ.

ಇದನ್ನೂ ಓದಿ: ಹಣ ಸಂಗ್ರಹಿಸೋ ವಿಚಾರದಲ್ಲೂ ಕಾಂಗ್ರೆಸ್ ಮಹಾ ಎಡವಟ್ಟು! – ಬಿಜೆಪಿ ಆಡಿದ ಗೇಮ್ ಏನು?  

ವಯಸ್ಸಾದ ಮತ್ತು ಅನಾರೋಗ್ಯದ ಬರಗಾಲಕ್ಕೆ ತುತ್ತಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆನೆಗಳು ಸಾಯುತ್ತಿವೆ. ವಯಸ್ಸಾದ ಹಾಗೂ ಅನಾರೋಗ್ಯದಿಂದ ಬಳಸಲುತ್ತಿರುವ ಆನೆಗಳು ನೀರು ಹುಡುಕಿಕೊಂಡು ಹೆಚ್ಚು ದೂರ ಹೋಗಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನೀರಿನ ಕೊರತೆಯುಂಟಾಗಿ ಸಾಯುತ್ತಿವೆ. ಹ್ವಾಂಗೆ ರಾಷ್ಟ್ರೀಯ ಉದ್ಯಾನವನದಲ್ಲಿ ಬರದಿಂದಾಗಿ 2019 ರಲ್ಲಿ ಇನ್ನೂರು ಆನೆಗಳು ಸಾವನ್ನಪ್ಪಿರುವುದನ್ನು ನಾವಿಲ್ಲಿ ಗಮನಿಸಬಹುದು.

45 ಸಾವಿರ ಆನೆಗಳು, 100ಕ್ಕೂ ಅಧಿಕ ಸಸ್ತನಿಗಳು, 400ಕ್ಕೂ ಅಧಿಕ ಪಕ್ಷಿ ಪ್ರಭೇದಗಳು ಇಲ್ಲಿವೆ. ಮುಂದಿನ ದಿನಗಳಲ್ಲಿ ಪ್ರಾಣಿಗಳ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಭೀತಿಯಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ಸಾಧಾರಾಣ ವಯಸ್ಸಿನ ಆನೆಗೆ ಪ್ರತೀ ದಿನಕ್ಕೆ 200 ಲೀಟರ್‌ ನೀರು ಬೇಕಾಗುತ್ತದೆ.

Shwetha M