ನಿಲ್ಲದ ಯುದ್ಧ- ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನಿನ ಡ್ರೋನ್ ಸ್ಫೋಟ

ನಿಲ್ಲದ ಯುದ್ಧ- ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನಿನ ಡ್ರೋನ್ ಸ್ಫೋಟ

ಯುಎಇಯ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನಿನ ಡ್ರೋನ್ ಸ್ಫೋಟಗೊಂಡಿದ್ದು, ದುಬೈಗೆ ತೆರಳುತ್ತಿದ್ದ ಹಲವಾರು ವಿಮಾನಗಳನ್ನು ತಡೆಹಿಡಿಯಲಾಗಿದೆ ಎಂದು ವರದಿಯಾಗಿದೆ. ಇರಾನ್ ಕ್ಷಿಪಣಿ ಎಚ್ಚರಿಕೆಯ ನಂತರ ಇಸ್ರೇಲ್ ರಾಜಧಾನಿ ಜೆರುಸಲೆಮ್‌ನಲ್ಲಿ ಸ್ಫೋಟಗಳು ಸಂಭವಿಸಿವೆ ಎಂದು ವರದಿಯಾಗಿದೆ. ಪ್ರತಿದಾಳಿಯಾಗಿ ಇಸ್ರೇಲಿ ಪಡೆಗಳು ಶನಿವಾರ ಟೆಹ್ರಾನ್ ಮೇಲೆ ದಾಳಿ ಮಾಡಿದ್ದು, ರಾಜಧಾನಿಯ ಮೆಹ್ರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರದ ಇತರ ಭಾಗಗಳಲ್ಲಿ ಸ್ಫೋಟಗಳು ಸಂಭವಿಸಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬೀದಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಸುತ್ತಾಟ – ರಾಕಿಭಾಯ್ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ

ಇರಾನ್ ವಿರುದ್ಧ ಅಮೆರಿಕ-ಇಸ್ರೇಲಿ ಯುದ್ಧವು 7 ನೇ ದಿನಕ್ಕೆ ಕಾಲಿಟ್ಟಿದ್ದು, ಪಶ್ಚಿಮ ಏಷ್ಯಾದ ಎರಡೂ ದೇಶಗಳ ಸೇನಾ ನೆಲೆಗಳ ಮೇಲೆ ಟೆಹ್ರಾನ್ ಹೊಸ ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಇಸ್ರೇಲಿ  ಪಡೆಗಳು ಲೆಬನಾನ್‌ನಲ್ಲಿರುವ ಹೆಜ್ಬೊಲ್ಲಾ ಸ್ಥಳಗಳ ಮೇಲೆ ದಾಳಿ ನಡೆಸಿದವು. ಯುದ್ಧ ಆರಂಭವಾದಾಗಿನಿಂದ ಇರಾನ್‌ನಲ್ಲಿ 1,230 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಲೆಬನಾನ್‌ನಲ್ಲಿ 70 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಇಸ್ರೇಲ್‌ನಲ್ಲಿ ಸುಮಾರು ಒಂದು ಡಜನ್ ಜನರು ಸಾವನ್ನಪ್ಪಿದ್ದಾರೆ ಮತ್ತು ಆರು ಅಮೇರಿಕನ್ ಸೈನಿಕರು ಸಹ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇರಾನ್‌ನ ಅಣು ಕಾರ್ಯಕ್ರಮ ಮತ್ತು ಮಧ್ಯಪ್ರಾಚ್ಯದಲ್ಲಿ ಅದರ ಪ್ರಭಾವವನ್ನು ತಡೆಯುವ ಉದ್ದೇಶದಿಂದ ಅಮೆರಿಕಾ ಮತ್ತು ಇಸ್ರೇಲ್ ಫೆಬ್ರವರಿ 28ರಂದು ದಾಳಿ ಆರಂಭಿಸಿತ್ತು. ಇರಾನ್ ಸುಪ್ರೀಮ್ ಲೀಡರ್ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಹಲವು ನಾಯಕರನ್ನು ಹತ್ಯೆ ಮಾಡಲಾಯಿತು. ಇರಾನ್‌ನ ಅಣು ಸೌಲಭ್ಯಗಳು, ಮಿಲಿಟರಿ ಬೇಸ್‌ಗಳು ಮತ್ತು ಕ್ಷಿಪಣಿ ವ್ಯವಸ್ಥೆಗಳನ್ನು ಧ್ವಂಸ ಮಾಡಲಾಯಿತು. ಇದಕ್ಕೆ ಪ್ರತಿಯಾಗಿ ಇರಾನ್ ಇಸ್ರೇಲ್ ಮತ್ತು ಅಮೆರಿಕಾ ಬೆಂಬಲಿತ ಗಲ್ಫ್ ದೇಶಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ತೀವ್ರಗೊಳಿಸಿದೆ.

Kishor KV