ರಾಮನಗರಿಯಲ್ಲಿ ಸಿನಿತಾರೆಯರ ದಂಡು – ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾದವರು ಯಾರೆಲ್ಲ?

ರಾಮನಗರಿಯಲ್ಲಿ ಸಿನಿತಾರೆಯರ ದಂಡು – ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾದವರು ಯಾರೆಲ್ಲ?

ಐತಿಹಾಸಿಕ ಮತ್ತು ಅಭೂತಪೂರ್ವ ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಕೆಲ ನಿಮಿಷಗಳಷ್ಟೇ ಬಾಕಿ. ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಅಯೋಧ್ಯೆ ನಗರಿಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಗಣ್ಯಾತಿಗಣ್ಯರು ರಾಮನಗರಿಗೆ ಆಗಮಿಸಿದ್ದು, ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಯೋಧ್ಯೆಗೆ ಭಾರತೀಯ ಸಿನಿಮಾ ರಂಗದ ಅನೇಕ ತಾರೆಯರು ಕೂಡ ಭಾಗಿಯಾಗಿದ್ದಾರೆ.

ಈಗಾಗಲೇ ಕನ್ನಡದ ಹೆಸರಾಂತ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಅನಿಲ್ ಕುಮಾರ ಸ್ವಾಮಿ, ತೆಲುಗು ನಟರಾದ ಚಿರಂಜೀವಿ, ರಾಮ್‌ಚರಣ್, ಪವನ್‌ ಕಲ್ಯಾಣ್‌ ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ತ್‌, ಕತ್ರಿನಾ ಕೈಫ್‌ ಕೂಡ ಆಯೋಧ್ಯೆಗೆ ಆಗಮಿಸಿದ್ದಾರೆ.

ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಅಯೋಧ್ಯೆ ಭೇಟಿ ಕ್ಯಾನ್ಸಲ್ ಮಾಡಿದ ಅಡ್ವಾಣಿ! – ಇದಕ್ಕೆ ಕಾರಣ ಏನು ಗೊತ್ತಾ?

ಇನ್ನು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಹ್ವಾನದ ಮೇರೆಗೆ ಬಾಲಿವುಡ್‌ ಬಿಗ್‌ಬಿ ಕುಟುಂಬ ಅಯೋಧ್ಯೆಗೆ ಆಗಮಿಸಿದೆ. ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್ ವಿಐಪಿ ಸಾಲಿನಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಅಯೋಧ್ಯೆಗೆ ಆಗಮಿಸಿದ್ದು ರಾಮಮಂದಿರ ಉದ್ಘಾಟನೆಯಲ್ಲಿ ಭಾಗಿಯಾಗಿದ್ದಾರೆ. ಆಲಿಯಾ ಭಟ್, ರಣಬೀರ್ ಕಪೂರ್, ವಿಕ್ಕಿ ಕೌಶಲ್, ಅನುಪಮ್‌ ಖೇರ್ ಕೂಡ ಅಯೋಧ್ಯೆ ಆಗಮಿಸಿದ್ದಾರೆ.

ಕೇವಲ ಸಿನಿಮಾ ನಟರು ಮಾತ್ರವಲ್ಲ, ಕ್ರೀಡಾ ತಾರೆ ಸಚಿನ್‌ ತೆಂಡೂಲ್ಕರ್‌, ವಿರಾಟ್‌ ಕೊಹ್ಲಿ, ವೆಂಕಟೇಶ್‌ ಪ್ರಸಾದ್‌, ಆರ್‌.ಅಶ್ವಿನ್‌, ಸೈನಾ ನೆಹ್ವಾಲ್‌ ಸೇರಿದಂತೆ ಅನೇಕರು ಅಯೋಧ್ಯೆಗೆ ಆಗಮಿಸಿದ್ದು, ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.

Shwetha M