ಗೃಹಜ್ಯೋತಿ ಲಾಭ ಪಡೆಯಲು ಹೋದವರಿಗೆ ಶಾಕ್‌! – ಅರ್ಜಿ ಸಲ್ಲಿಸಲು ಅಪ್ಲಿಕೇಶನ್ ಓಪನ್ ಆಗುತ್ತಿಲ್ಲ..

ಗೃಹಜ್ಯೋತಿ ಲಾಭ ಪಡೆಯಲು ಹೋದವರಿಗೆ ಶಾಕ್‌! – ಅರ್ಜಿ ಸಲ್ಲಿಸಲು ಅಪ್ಲಿಕೇಶನ್ ಓಪನ್ ಆಗುತ್ತಿಲ್ಲ..

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌ ನೀಡುವುದಾಗಿ ಹೇಳಿದೆ. ಈ ಯೋಜನೆ ಜುಲೈ 1 ರಿಂದ ಜಾರಿಯಾಗಲಿದ್ದು, ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ಜನರೂ ಕೂಡ ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಅರ್ಜಿ ಸಲ್ಲಿಸಲು ಸೈಬರ್‌ ಗಳಿಗೆ ತೆರಳುತ್ತಿದ್ದಾರೆ. ಆದರೆ ಅರ್ಜಿ ಸಲ್ಲಿಸಿದ ಅಪ್ಲಿಕೇಶನ್ ಓಪನ್ ಆಗುತ್ತಿಲ್ಲ ಎಂದು ಸೈಬರ್ ಆಪರೇಟರ್ಸ್ ಹೇಳುತ್ತಿದ್ದಾರೆ.

ಇದನ್ನೂ ಓದಿ: ‘ಬಾಡಿಗೆದಾರರಿಗೂ ಉಚಿತ ವಿದ್ಯುತ್ ಯೋಜನೆ ಸಿಗಲಿದೆ’ – ಗೊಂದಲಗಳಿಗೆ ತೆರೆ ಎಳೆದ ಸಿಎಂ ಸಿದ್ದರಾಮಯ್ಯ

ಸರ್ಕಾರದ ಆದೇಶದ ಬೆನ್ನಲ್ಲೇ ಜನರು ಸೈಬರ್‌ ಸೆಂಟರ್‌ ಗಳಿಗೆ ತೆರಳಿ ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಮುಂದಾಗಿದ್ದಾರೆ. ಆದರೆ ಅರ್ಜಿ ಸಲ್ಲಿಸಿದ ವೇಳೆ ಅಪ್ಲಿಕೇಷನ್‌ ಓಪನ್‌ ಆಗುತ್ತಿಲ್ಲ. ಸರ್ಕಾರ ಪೋರ್ಟಲ್ ಐಡಿ ಕೊಟ್ಟ ತಕ್ಷಣವೇ ಅರ್ಜಿ ಸ್ವೀಕಾರವಾಗಲಿದೆ ಎಂದು ಆಪರೇಟರ್ಸ್ ಹೇಳುತ್ತಿದ್ದಾರೆ. ಸೇವಾಸಿಂಧುವಿನಲ್ಲಿ ಅಪ್ಲಿಕೇಶನ್ ಹಾಕಲು ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಸರ್ಕಾರದಿಂದ ಪೋರ್ಟಲ್ ಡೀಟೇಲ್ಸ್ ಬಂದ ತಕ್ಷಣವೇ ಅರ್ಜಿ ಸ್ವೀಕೃತಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದ ಹೇಳುತ್ತಿದ್ದಾರೆ. ಹಾಗಾಗಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನು ಕಾಲವಕಾಶಬೇಕಿದೆ.

ಗೃಹ ಜ್ಯೋತಿ ಯೋಜನೆ ಜುಲೈ 1 ರಿಂದ ಜಾರಿಯಾಗಲಿದೆ. ಗೃಹಜ್ಯೋತಿ ಯೋಜನೆ ಪಡೆದುಕೊಳ್ಳಬಹಸುವವರಿಗೆ ಸೇವಾಸಿಂಧು ಆಪ್ ಮೂಲಕ ಅರ್ಜಿ ಸಲ್ಲಿಸಲು ಸರ್ಕಾರ ಸೂಚಿಸಿದೆ. ಅರ್ಜಿ ಸಲ್ಲಿಸಿದವರಿಗಷ್ಟೇ 200 ಯುನಿಟ್​ವರೆಗೆ ವಿದ್ಯುತ್ ಉಚಿತವಾಗಿ ಸಿಗಲಿದೆ.

suddiyaana