ದೆಹಲಿಯಲ್ಲಿ APP ಆಧಾರಿತ ಬೈಕ್ ಟ್ಯಾಕ್ಸಿಗಳಿಗೆ ನಿಷೇಧ – ಸುಪ್ರೀಂ ಕೋರ್ಟ್ ನಿಂದ ಮಹತ್ವದ ಆದೇಶ

ದೆಹಲಿಯಲ್ಲಿ APP ಆಧಾರಿತ ಬೈಕ್ ಟ್ಯಾಕ್ಸಿಗಳಿಗೆ ನಿಷೇಧ – ಸುಪ್ರೀಂ ಕೋರ್ಟ್ ನಿಂದ ಮಹತ್ವದ ಆದೇಶ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರುವುದು ಹೊಸದೇನಲ್ಲ. ವಾಯುಮಾಲಿನ್ಯ ಹೆಚ್ಚಾದಾಗ ಕೆಲ ವಾಹನಗಳಿಗೆ ನಿರ್ಬಂಧ ವಿಧಿಸಲಾಗುತ್ತದೆ. ಆದರೆ ಈಗ ಉಬರ್, ರ್ಯಾಪಿಡೋ ಮತ್ತು ಓಲಾ ಸೇರಿದಂತೆ ಬೈಕ್ ಟ್ಯಾಕ್ಸಿ ಅಪ್ಲಿಕೇಶನ್‌ಗಳ ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

ದೆಹಲಿ ಸರ್ಕಾರದ ಪ್ರಕಾರ, ಕ್ಯಾಬ್‌ಗಳಾಗಿ ಕಾರ್ಯನಿರ್ವಹಿಸುವ ದ್ವಿಚಕ್ರ ವಾಹನಗಳಿಂದ ಮೋಟಾರು ವಾಹನ ಕಾಯ್ದೆ ಮತ್ತು ದೆಹಲಿ ಮೋಟಾರು ವಾಹನ ಸಮಗ್ರ ಯೋಜನೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದೆ. ಈ ವರ್ಷದ ಆರಂಭದಲ್ಲಿ ಸಾರಿಗೆ ಇಲಾಖೆಯು ದೆಹಲಿಯಲ್ಲಿ ಎಲ್ಲಾ ಬೈಕ್ ಟ್ಯಾಕ್ಸಿಗಳನ್ನ ನಿಷೇಧ ಮಾಡಿತ್ತು.  ಫೆಬ್ರವರಿಯಲ್ಲಿ ನೀಡಲಾದ ಸಾರ್ವಜನಿಕ ಪ್ರಕಟಣೆಯಲ್ಲಿ, ಎಎಪಿ ಸರ್ಕಾರವು ದೆಹಲಿಯಲ್ಲಿ ಸಂಚರಿಸದಂತೆ ಬೈಕ್-ಟ್ಯಾಕ್ಸಿಗಳನ್ನು ಎಚ್ಚರಿಕೆ ನೀಡಿತ್ತು. ಹಾಗೇನಾದ್ರೂ ನಿಯಮ ಉಲ್ಲಂಘಿಸಿದರೆ ರೂ 1 ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂದು ವಾರ್ನಿಂಗ್ ನೀಡಿತ್ತು. ಇದನ್ನ ಪ್ರಶ್ನಿಸಿ ಌಪ್ ಆಧಾರಿತ ಸಂಸ್ಥೆಗಳು ಕೋರ್ಟ್ ಮೆಟ್ಟಿಲು ಏರಿದ್ದರು.

ಇದನ್ನೂ ಓದಿ : ಲಗೇಜ್ ಟಿಕೆಟ್ ಪಡೆಯಲು ಮಹಿಳೆಯರ ತಕರಾರು –  ಬಸ್‌ನಿಂದ ಕೆಳಗಿಳಿಸಿ ಹೊರಟ ಕಂಡಕ್ಟರ್

ದೆಹಲಿ ಸರ್ಕಾರವು ನೀತಿಯನ್ನು ರೂಪಿಸುವವರೆಗೆ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು ಎಂಬುದು ಬೈಕ್-ಟ್ಯಾಕ್ಸಿ ಅಗ್ರಿಗೇಟರ್‌ಗಳ ಬೇಡಿಕೆಯಾಗಿತ್ತು. 2023 ರ ಫೆಬ್ರವರಿಯಲ್ಲಿ ದೆಹಲಿ ಸರ್ಕಾರವು ಸಾರ್ವಜನಿಕ ಸೂಚನೆಯನ್ನು ನೀಡಿತ್ತು. ಈ ಮೂಲಕ ದೆಹಲಿಯಲ್ಲಿ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಲಾಯಿತು. ಇದರ ವಿರುದ್ಧ ರಾಪಿಡೊ ಮತ್ತು ಉಬರ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು.

ಅಸಲಿಗೆ ದ್ವಿಚಕ್ರ ವಾಹನಗಳನ್ನು ಅಗ್ರಿಗೇಟರ್‌ಗಳು (ಮಾಲೀಕರು) ಸರಿಯಾದ ಪರವಾನಗಿ ಇಲ್ಲದೆ ಬಳಸುತ್ತಿದ್ದಾರೆ ಎಂಬುದು ದೆಹಲಿ ಸರ್ಕಾರದ ಪ್ರಮುಖ ವಾದವಾಗಿತ್ತು. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 93ರಲ್ಲಿ ಅಗ್ರಿಗೇಟರ್‌ಗೆ ಪರವಾನಗಿಯ ಅಗತ್ಯವನ್ನು ಒದಗಿಸಲಾಗಿದೆ. ಈ ಮಾರ್ಗಸೂಚಿಗಳು ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳಿಗೆ ಮಾತ್ರ ಎಂಬುದು ದೆಹಲಿ ಸರ್ಕಾರದ ವಾದವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ, ಅಗ್ರಿಗೇಟರ್‌ಗಳು ಪಾಲಿಸಿಯನ್ನು ತರದೆ ಸಾರಿಗೆಯೇತರ ಟು-ವೀಲರ್‌ಗಳನ್ನು ಬಳಸುವಂತಿಲ್ಲ. ದೆಹಲಿ ಸರ್ಕಾರ ನೀತಿಯೊಂದನ್ನು ರೂಪಿಸುತ್ತಿದೆ. ಇದು ಜಾರಿಯಾಗುವವರೆಗೆ ದ್ವಿಚಕ್ರ ವಾಹನಗಳನ್ನು ಬೈಕ್ ಟ್ಯಾಕ್ಸಿಯಾಗಿ ಬಳಸುವುದರ ಮೇಲಿನ ನಿಷೇಧ ಮುಂದುವರಿಯಲಿದೆ ಎಂದು ಹೇಳಿತ್ತು. ಅದೇ ಸಮಯದಲ್ಲಿ, ದೆಹಲಿ ಸರ್ಕಾರದ ನಿರ್ಧಾರವನ್ನು ತಡೆಹಿಡಿಯಲು ಹೈಕೋರ್ಟ್‌ಗೆ ಅಧಿಕಾರವಿದೆ ಎಂದು Rapido ಮತ್ತು Uber ಮಾಲೀಕರು ಹೇಳಿದರು. ಎರಡನೇ ವಾದವೆಂದರೆ ಸಾವಿರಾರು ಸವಾರರು ಇಂತಹ ಬೈಕ್ ಟ್ಯಾಕ್ಸಿಗಳನ್ನು ಓಡಿಸುತ್ತಾರೆ ಮತ್ತು ಈ ನಿಷೇಧವು ಅವರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ. ವಾಣಿಜ್ಯ/ಸಾರಿಗೆ ವಾಹನಗಳಾಗಿ ಸೇರ್ಪಡೆಗೊಂಡಿರುವ ಖಾಸಗಿ ದ್ವಿಚಕ್ರ ವಾಹನಗಳಿಗೆ ನೀತಿಯನ್ನು ರೂಪಿಸಿ ಪರವಾನಗಿ ಪಡೆಯುವವರೆಗೆ ಪ್ರಯಾಣಿಕರನ್ನು ಸಾಗಿಸಲು ಅವಕಾಶ ನೀಡಬೇಕು. ದ್ವಿಚಕ್ರ ವಾಹನಗಳನ್ನು ಅಗ್ರಿಗೇಟರ್‌ಗಳ ಅಡಿಯಲ್ಲಿ ಚಲಾಯಿಸಲು ಪರವಾನಗಿ ಅಗತ್ಯ ಎಂದು ವಿಚಾರಣೆಯ ಸಂದರ್ಭದಲ್ಲಿ ಹೇಳಿದೆ. ಇನ್ನು ಬೆಂಗಳೂರಿನಲ್ಲಿ ಆಗಾಗ್ಗೆ ಆಟೋ ಮತ್ತು ಟ್ಯಾಕ್ಸಿ ಚಾಲಕರು ರ್ಯಾಪಿಡೋ ಚಾಲಕರ ಜೊತೆಗೆ ಜಗಳಕ್ಕೆ ಇಳಿಯುವುದು ಕಾಮನ್‌ ಆಗಿದ್ದು, ದೆಹಲಿಗೆ ಸಂಬಂಧಿಸಿದ ಆದೇಶ ಈಗ ಹೆಚ್ಚಿನ ಮಹತ್ವ ಪಡೆದಿದೆ..

 

suddiyaana