ವಿದೇಶಿ ಕೋವಿಡ್‌ ಲಸಿಕೆ ಪಡೆದವರಿಗೆ ಗಂಭೀರ ಆರೋಗ್ಯ ಸಮಸ್ಯೆ! – ಮೆದುಳು, ಹೃದಯ, ರಕ್ತದ ಕಾಯಿಲೆ ಹೆಚ್ಚಳ!

ವಿದೇಶಿ ಕೋವಿಡ್‌ ಲಸಿಕೆ ಪಡೆದವರಿಗೆ ಗಂಭೀರ ಆರೋಗ್ಯ ಸಮಸ್ಯೆ! – ಮೆದುಳು, ಹೃದಯ, ರಕ್ತದ ಕಾಯಿಲೆ ಹೆಚ್ಚಳ!

ಕೋವಿಡ್‌ 19 ಸುಮಾರು ಎರಡು ವರ್ಷಗಳ ಕಾಲ ವಿಶ್ವವನ್ನು ಆಳಿತ್ತು. ಅದರ ರೌದ್ರ ನರ್ತನಕ್ಕೆ ಲಕ್ಷಾಂತರ ಜನರು ಸಾವನ್ನಪ್ಪಿದ್ದರು. ಇದರಿಂದ ರಕ್ಷಣೆ ಪಡೆಯಲು ವಿಶ್ವದ ಜನರು ಕೋವಿಡ್‌ ಲಸಿಕೆಗಳನ್ನು ಹಾಕಿಸಿಕೊಂಡಿದ್ದರು. ಇದೀಗ ವಿದೇಶಿ ಕೋವಿಡ್‌ ಲಸಿಕೆ ಹಾಕಿಸಿಕೊಂಡವರಲ್ಲಿ ಗಂಭೀರ ಕಾಯಿಲೆಗಳು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕರಾವಳಿ ಗಡಿಯಲ್ಲಿ ಚೀನಾದ ಬೋಟ್‌ ಪತ್ತೆ! – ಗೂಢಚಾರಿಕೆ ನಡೆಸುತ್ತಿದ್ಯಾ ಡ್ರ್ಯಾಗನ್‌ ರಾಷ್ಟ್ರ?

ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಕೆಲವು ಪಾಶ್ಚಾತ್ಯ ಕೋವಿಡ್‌ ಲಸಿಕೆ ಪಡೆದವರಲ್ಲಿ ಮೆದುಳು, ಹೃದಯ ಮತ್ತು ರಕ್ತದ ಕಾಯಿಲೆಗಳ ಸೇರಿದಂತೆ 13 ಕಾಯಿಲೆಗಳು ಹೆಚ್ಚಾಗಿವೆ ಎಂಬ ಆತಂಕದ ಅಂಶ ತಿಳಿದುಬಂದಿದೆ. ಫೈಜರ್, ಮಾಡೆರ್ನಾ ಮತ್ತು ಅಸ್ಟ್ರಾಜೆನೆಕಾದಂತಹ ಕಂಪನಿಗಳ ಡೋಸ್‌ಗಳನ್ನು ಪಡೆದ 9 ಕೋಟಿ ಜನರನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಈ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಸಂಶೋಧನಾ ವಿಭಾಗವಾದ ಗ್ಲೋಬಲ್ ವ್ಯಾಕ್ಸಿನ್ ಡಾಟಾ ನೆಟ್‌ವರ್ಕ್‌ ಸಂಶೋಧಕರು ಅರ್ಜೆಂಟೀನಾ, ಆಸ್ಟ್ರೇಲಿಯಾ, ಕೆನಡಾ, ಡೆನ್ಮಾರ್ಕ್, ಫಿನ್ಲೆಂಡ್‌, ಫ್ರಾನ್ಸ್, ನ್ಯೂಜಿಲೆಂಡ್ ಮತ್ತು ಸ್ಕಾಟ್ಲೆಂಡ್ ಸೇರಿದಂತೆ ಎಂಟು ದೇಶಗಳ ಜನರನ್ನು ಅಧ್ಯಯನಕ್ಕೆ ಒಳಪಡಿಸಿ, ವರದಿ ಸಿದ್ಧಪಡಿಸಿದ್ದಾರೆ. ಈ ವರದಿಯಲ್ಲಿ ಫೈಜರ್-ಬಯೋಟೆಕ್ ಮತ್ತು ಮಾಡೆರ್ನಾದ ಎಂಆರ್‌ಎನ್‌ಎ ಲಸಿಕೆಗಳ ಮೊದಲ, ಎರಡನೇ ಮತ್ತು ಮೂರನೇ ಡೋಸ್‌ ಪಡೆದ ಕೆಲವರು ಹೃದಯ ಸ್ನಾಯುವಿನ ಉರಿಯೂತದ ಸಮಸ್ಯೆ ಅನುಭವಿಸಿದ್ದಾರೆ. ಇವರಲ್ಲಿ ಮಾಡರ್ನಾ 2ನೇ ಡೋಸ್ ನಂತರ ಸ್ನಾಯುವಿನ ಉರಿಯೂತ ಅನುಭವಿಸಿದವರು ಹೆಚ್ಚಿದ್ದಾರೆ ಎಂದು ವರದಿಯಾಗಿದೆ.

ಅಸ್ಟ್ರಾಜೆನೆಕಾದ ಲಸಿಕೆಯ ಮೂರನೇ ಡೋಸ್ ತೆಗೆದುಕೊಂಡವರಲ್ಲಿ ಪೆರಿಕಾರ್ಡಿಟಿಸ್ ಎಂಬ ಮತ್ತೊಂದು ಹೃದಯ ಕಾಯಿಲೆ ಕಂಡುಬಂದಿದೆ. ಇದನ್ನು ಪಡೆದವರು ಶೇ.6.9 ಪಟ್ಟು ಹೆಚ್ಚಿನ ಹೃದಯ ಕಾಯಿಲೆ ಅಪಾಯವನ್ನು ಹೊಂದಿದ್ದರೆ, ಮಾಡರ್ನಾದ ಮೊದಲ ಮತ್ತು ನಾಲ್ಕನೇ ಡೋಸ್ ಕ್ರಮವಾಗಿ 1.7 ಪಟ್ಟು ಮತ್ತು 2.6 ಪಟ್ಟು ಹೆಚ್ಚಿನ ಅಪಾಯವನ್ನು ಹೊಂದಿವೆ.

ಅಸ್ಟ್ರಾಜೆನೆಕಾ ಲಸಿಕೆ ತೆಗೆದುಕೊಂಡವರಲ್ಲಿ ಅಪರೂಪದ ನರವೈಜ್ಞಾನಿಕ ಅಸ್ವಸ್ಥತೆ (ಗುಲ್ಲೆನ್-ಬಾರ್ ಸಿಂಡ್ರೋಮ್) ಕಾಣಿಸಿಕೊಳ್ಳುವ ಹೆಚ್ಚಿನ ಅಪಾಯವಿದೆ ಮತ್ತು ಶೇ.3.2 ಪಟ್ಟು ರಕ್ತ ಹೆಪ್ಪುಗಟ್ಟುವ ಅಪಾಯ ಹೊಂದಿದ್ದಾರೆ.

ಮಾಡೆರ್ನಾ ಲಸಿಕೆ ತೆಗೆದುಕೊಂಡ ನಂತರ ನರವೈಜ್ಞಾನಿಕ ಅಸ್ವಸ್ಥತೆ ತೀವ್ರವಾಗಿ ಹರಡುವ ಎನ್ಸೆಫಾಲೊಮೈಲಿಟಿಸ್ ಉಂಟಾಗುವ ಅಪಾಯವು 3.8 ಪಟ್ಟು ಹೆಚ್ಚಾಗಿದೆ ಮತ್ತು ಅಸ್ಟ್ರಾಜೆನೆಕಾ ಲಸಿಕೆಯ ನಂತರ ಇದರ ಅಪಾಯ 2.2 ಪಟ್ಟು ಹೆಚ್ಚಿದೆ ಅಧ್ಯಯನ ತಿಳಿಸಿದೆ.

ಭಾರತೀಯರ ಕೋವಿಡ್‌ ಲಸಿಕೆ ಪರಿಣಾಮ ಬೀರಿದ್ಯಾ?

ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ಹೊಸ ಅಧ್ಯಯನವು ಕೋವಿಡ್-19ನಿಂದ ಬದುಕುಳಿದವರು ಗಮನಾರ್ಹ ಶ್ವಾಸಕೋಶ ಮತ್ತು ಉಸಿರಾಟದ ಸಮಸ್ಯೆಗಳನ್ನು ಅನುಭವಿಸಿದ್ದಾರೆ ಎಂದು ತೋರಿಸಿದೆ. ಕೋವಿಡ್ -19 ಸೋಂಕಿನ ಒಂದು ವರ್ಷದೊಳಗೆ ಹೆಚ್ಚಿನವರು ಚೇತರಿಸಿಕೊಂಡರೆ, ಇತರರು ಶಾಶ್ವತ ಶ್ವಾಸಕೋಶದ ಹಾನಿಯನ್ನು ಹೊಂದಿದ್ದಾರೆ ಎಂದು ಅಧ್ಯಯನ ವರದಿಯಲ್ಲಿ ಉಲ್ಲೇಖವಾಗಿದೆ.

Shwetha M