ಅಮೆರಿಕದಲ್ಲಿ ವೈಟ್ ಪ್ಲೇಗ್ ಹೆಮ್ಮಾರಿ ಅಟ್ಟಹಾಸ – ಭಾರತದಲ್ಲೂ ಹೆಚ್ಚುತ್ತಾ ಮಾರಕ ಕಾಯಿಲೆ ಅಟ್ಟಹಾಸ!

ಕೋವಿಡ್-19 ಬಳಿಕ ಮತ್ತೊಂದು ಗಂಭೀರ ಕಾಯಿಲೆ ಇಡೀ ವಿಶ್ವವನ್ನ ಬೆಚ್ಚಿ ಬೀಳಿಸಿದೆ.ಟಿಬಿ ಅಥವಾ ಕ್ಷಯ ಎಂದು ಕರೆಯುವುದನ್ನು ಶತಮಾನಗಳ ಹಿಂದೆ ‘ವೈಟ್ ಪ್ಲೇಗ್’ ಎಂದು ಕರೆಯಲಾಗುತ್ತಿತ್ತು. ಈ ಕಾಯಿಲೆಯಿಂದ ಬಳಲುತ್ತಿರುವವರು ಅತಿಯಾದ ಸುಸ್ತು ಹಾಗೂ ದುರ್ಬಲರಾಗುತ್ತಾರೆ ಎಂಬ ಕಾರಣದಿಂದಾಗಿ ಇದು ಈ ಹೆಸರನ್ನು ಪಡೆದುಕೊಂಡಿದೆ. ವೈಟ್ ಪ್ಲೇಗ್ ಒಂದು ಸಾಂಕ್ರಾಮಿಕ ಬ್ಯಾಕ್ಟೀರಿಯಾದ ಸೋಂಕಾಗಿದ್ದು, ಇದು ಪ್ರಾಥಮಿಕವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿಯ ಹೊರತಾಗಿಯು ಟಿಬಿ ವಿಶ್ವದ ಅತ್ಯಂತ ಮಾರಕ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿದೆ.
ಈ ರೋಗವು ಮತ್ತೊಮ್ಮೆ ಅಮೆರಿಕದ 25ಕ್ಕೂ ಹೆಚ್ಚು ರಾಜ್ಯಗಳಲ್ಲಿ ವೇಗವಾಗಿ ಹರಡುತ್ತಿದೆ. ನ್ಯೂಯಾರ್ಕ್ ನಗರದಲ್ಲಿ ಮಾತ್ರ ಸುಮಾರು 1,000 ಪ್ರಕರಣಗಳು ವರದಿಯಾಗಿವೆ. ದೀರ್ಘಕಾಲೀನ ಸಾವಿನ ಪ್ರಕರಣಗಳ ವಿಷಯದಲ್ಲಿ ಈ ರೋಗವು COVID-19 ಅನ್ನು ಮೀರಿಸಬಹುದು ಎಂದು ವಿಜ್ಞಾನಿಗಳು ತಿಳಿಸುತ್ತಾರೆ. 18 & 19ನೇ ಶತಮಾನಗಳಲ್ಲಿ ಯುರೋಪ್, ಅಮೆರಿಕದಲ್ಲಿ ಜನಸಂಖ್ಯೆಯ ಗಮನಾರ್ಹ ಭಾಗವನ್ನು ನಾಶಪಡಿಸಿದ ರೋಗ ಇದಾಗಿದೆ.
ಇದನ್ನೂ ಓದಿ: ಪ್ರತಿದಿನ ಈ ವ್ಯಾಯಾಮ ಮಾಡಿದ್ರೆ ಈ ಕಾಯಿಲೆ ನಿಮ್ಮ ಹತ್ರ ಸುಳಿಯಲ್ಲ!
ವೈಟ್ ಪ್ಲೇಗ್ ಅಂದ್ರೇನು? :
ವೈಟ್ ಪ್ಲೇಗ್ ಹೊಸ ರೋಗವಲ್ಲ. ಪ್ರಸ್ತುತ ಇದನ್ನು ಟಿಬಿ ಎಂದು ಕರೆಯಲಾಗುತ್ತದೆ. ಟಿಬಿಯು ಗಾಳಿ ಮೂಲಕ ರೋಗ ಹರಡುವ ಗಂಭೀರ ಸಾಂಕ್ರಾಮಿಕ ಕಾಯಿಲೆಯಾಗಿದೆ. ಶ್ವಾಸಕೋಶದ ಟಿಬಿ ಸೋಂಕಿಗೆ ಒಳಗಾದ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ ಅಥವಾ ಮಾತನಾಡಿದಾಗ, ಬ್ಯಾಕ್ಟೀರಿಯಾ ಹೊಂದಿರುವ ಸಣ್ಣ ಕಣಗಳು ಅವರ ಬಾಯಿ ಅಥವಾ ಮೂಗಿನಿಂದ ಗಾಳಿಯಲ್ಲಿ ಹೊರಹಾಕಲ್ಪಡುತ್ತವೆ. ಈ ಸಾಂಕ್ರಾಮಿಕ ಕಣಗಳನ್ನು ಉಸಿರಾಡುವ ಮೂಲಕ ಯಾವುದೇ ವ್ಯಕ್ತಿಯು ಟಿಬಿ ಹರಡಬಹುದು. ಟಿಬಿ ಸೋಂಕಿಗೆ ಒಳಗಾದ ಪ್ರತಿಯೊಬ್ಬರೂ ತಕ್ಷಣ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ. ಏಕೆಂದರೆ ಬ್ಯಾಕ್ಟೀರಿಯಾವು ದೇಹದೊಳಗೆ ಸುಪ್ತವಾಗಿ ಉಳಿಯಬಹುದು. ಇದು ಎರಡು ರೀತಿಯ ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ. ಸುಪ್ತ ಟಿಬಿ, ಇದರಲ್ಲಿ ಯಾವುದೇ ಲಕ್ಷಣಗಳಿಲ್ಲ ಹಾಗೂ ಅದು ಸಾಂಕ್ರಾಮಿಕವಲ್ಲ ಮತ್ತು ಆಕ್ಟಿವ್ ಟಿಬಿ, ಇದು ಸಾಂಕ್ರಾಮಿಕವಾಗಿದ್ದು, ರೋಗಲಕ್ಷಣಗಳು ಕಾಣಿಸುತ್ತವೆ. ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ.
ಆ್ಯಕ್ಟಿವ್ ಟಿಬಿಯ ಸಾಮಾನ್ಯ ಲಕ್ಷಣಗಳಲ್ಲಿ ನಿರಂತರ ಕೆಮ್ಮು, ಎದೆ ನೋವು, ರಕ್ತ ಇಲ್ಲವೇ ಕಫದೊಂದಿಗೆ ಕೆಮ್ಮುವುದು, ಜ್ವರ, ರಾತ್ರಿ ಬೆವರು, ತೂಕ ನಷ್ಟ ಮತ್ತು ಆಯಾಸ ಸೇರಿವೆ. ಕೆಲವು ಗುಂಪಿನ ಜನರು ಈ ಕಾಯಿಲೆಗೆ ಹೆಚ್ಚು ಒಳಗಾಗುತ್ತಾರೆ. (ಉದಾಹರಣೆಗೆ ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಗಳು, ಮಧುಮೇಹ ಅಥವಾ ಎಚ್ಐವಿ/ಏಡ್ಸ್ ನಿಂದ ಬಳಲುತ್ತಿರುವವರು ಮತ್ತು ಹೆಚ್ಚು ಜನದಟ್ಟಣೆಯ ವಾತಾವರಣದಲ್ಲಿ ವಾಸಿಸುವ ಜನರು).
ಅಮೆರಿಕದಲ್ಲಿ ಪ್ರಕರಣ ಹೆಚ್ಚಳ
ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಇತ್ತೀಚಿನ ವರದಿಯ ಪ್ರಕಾರ, ಟಿಬಿ ವಿಶ್ವದ ಅತ್ಯಂತ ಮಾರಕ ಸಾಂಕ್ರಾಮಿಕ ಕಾಯಿಲೆಗಳಲ್ಲಿ ಒಂದಾಗಿದೆ. ಇದು ಕಾಲಾನಂತರದಲ್ಲಿ ಮರಣದ ವಿಷಯದಲ್ಲಿ COVID-19 ಮೀರಿಸಿದೆ. ಈ ಕಾಯಿಲೆಯು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಆತಂಕಕಾರಿಯಾಗಿ ಹರಡುತ್ತಿದೆ. ಟಿಬಿ ಪ್ರಕರಣಗಳಲ್ಲಿ ಅಮೆರಿಕದಲ್ಲಿ ಹಠಾತ್ ಏರಿಕೆಯನ್ನು ಕಂಡಿದೆ. ನ್ಯೂಯಾರ್ಕ್ ನಗರದಲ್ಲಿ ಮಾತ್ರ ಸುಮಾರು 1,000 ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಅಧಿಕಾರಿಗಳು ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ. COVID-19 ಸಾಂಕ್ರಾಮಿಕ ಸಮಯದಲ್ಲಿ ತಪಾಸಣೆ, ಚಿಕಿತ್ಸೆಯ ಕೊರತೆಯಿಂದ ಕ್ಷಯರೋಗ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ.

ನೋಡಿರಿ

