ಮದುಮಗಳಾಗಿ ಮಿಂಚಿದ ಬಿಗ್‌ಬಾಸ್ ಚೆಲುವೆ – ಕಿರುತೆರೆ ಬ್ಯೂಟಿ ದೀಪಿಕಾ ದಾಸ್ ಮದುವೆ

ಮದುಮಗಳಾಗಿ ಮಿಂಚಿದ ಬಿಗ್‌ಬಾಸ್ ಚೆಲುವೆ – ಕಿರುತೆರೆ ಬ್ಯೂಟಿ ದೀಪಿಕಾ ದಾಸ್ ಮದುವೆ

ಬಿಗ್‌ಬಾಸ್ ಮೂಲಕ ಕನ್ನಡಿಗರ ಮನಗೆದ್ದ ಚೆಲುವೆ, ಕಿರುತೆರೆ ಬ್ಯೂಟಿ ನಟಿ ದೀಪಿಕಾ ದಾಸ್ ವಿವಾಹ ಆಗಿದ್ದಾರೆ. ಮದುವೆ ಫೋಟೋಗಳನ್ನು ದೀಪಿಕಾ ದಾಸ್ ಹಂಚಿಕೊಂಡಿದ್ದಾರೆ. ದೀಪಿಕಾ ದಾಸ್ ಮದುವೆ ನಡೆದಿದ್ದು ಗೋವಾದಲ್ಲಿ.

ಇದನ್ನೂ ಓದಿ: ಯೋಧ ಸಿನಿಮಾದ ಟ್ರೇಲರ್ ಔಟ್‌ – ಹೈಜಾಕ್ ಕಥೆ ಹೇಳಲು ಬಂದ ಸಿದ್ದಾರ್ಥ್!

ನಾಗಿಣಿ ಎಂದೇ ಫೇಮಸ್ ಆಗಿರುವ ಕಿರುತೆರೆ ಬ್ಯೂಟಿ ದೀಪಿಕಾ ದಾಸ್ ಸದ್ದಿಲ್ಲದೆ ಮದುವೆ ಆಗಿದ್ದಾರೆ. ಗೋವಾದಲ್ಲಿ ದೀಪಿಕಾ ದಾಸ್ ಮದುವೆ ನಡೆದಿದೆ. ದುಬೈನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಉದ್ಯಮಿಯನ್ನು ಅವರು ವರಿಸಿದ್ದಾರೆ. ನಾಗಿಣಿ ಧಾರಾವಾಹಿಯಲ್ಲಿ ದೀಪಿಕಾ ನಟಿಸಿದ್ದರು. ಬಿಗ್ ಬಾಸ್ ನಲ್ಲೂ ಸ್ಪರ್ಧಿಸಿದ್ದರು. ಇದೀಗ ದೀಪಿಕಾ ದಾಸ್ ಮದುವೆಯ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಆಗಿದ್ದಾರೆ ಅನ್ನೋದಕ್ಕೆ ಫೋಟೋಗಳೇ ಸಾಕ್ಷಿ ನೀಡುತ್ತಿವೆ. ಗೋವಾದ ಕಡಲ ತೀರದಲ್ಲಿ ಕರ್ನಾಟಕ ಮೂಲದ ದುಬೈ ಉದ್ಯಮಿ ಜೊತೆ ಅದ್ದೂರಿಯಾಗಿಯೇ ಹಸೆಮಣೆ ಏರಿದ್ದಾರೆ ನಟಿ ದೀಪಿಕಾ ದಾಸ್. ದೀಪಿಕಾ ಮದುವೆಯಲ್ಲಿ ಎರಡು ಕುಟುಂಬದ ಸದಸ್ಯರು, ಆಪ್ತರಷ್ಟೇ ಭಾಗಿದ್ದರು. ಮದುವೆಯ ಸುಂದರ ಫೋಟೋಗಳನ್ನು ಶೇರ್ ಮಾಡಿ ಕಾಮೆಂಟ್ ಬಾಕ್ಸ್ ಅನ್ನು ಆಫ್ ಮಾಡಿದ್ದಾರೆ. ಮೂರು ಫೋಟೋಗಳನ್ನು ಹಂಚಿಕೊಂಡಿರುವ ದೀಪಿಕಾ ದಾಸ್ ‘ಮಿಸ್ಟರ್ & ಮಿಸೆಸ್ ಡಿ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಡಿ-ದೀಪಿಕಾ ಎಂಬುದು ಎಲ್ಲರಿಗೂ ಗೊತ್ತು. ಹುಡುಗನ ಹೆಸರು ಕೂಡ ‘ಡಿ’ ಅಕ್ಷರಿದಿಂದಲೇ ಶುರುವಾಗಲಿದೆಯಾ? ಗೊತ್ತಿಲ್ಲ.

ಇನ್ನು ಅಭಿಮಾನಿಗಳು ಮಾತ್ರ ಇದು ನಿಜವಾದ ಮದುವೆಯಲ್ಲ. ಇದು ಶೂಟಿಂಗ್ ಫೋಟೋ ಇರಬಹುದು ಅಂತಿದ್ದಾರೆ. ಇದಕ್ಕೆಲ್ಲಾ ಸ್ವತಃ ನಟಿ ದೀಪಿಕಾ ದಾಸ್ ಉತ್ತರ ಕೊಡಬೇಕಷ್ಟೇ.

Sulekha