ಗೌತಮ್ ಗಂಭೀರಕ್ಕೆ RO-KO ಸೆಡ್ಡು – BCCI ಆಫೀಸರ್ಸ್ ಜತೆ ಡೈರೆಕ್ಟ್ ಡೀಲ್
2027ರ ವಿಶ್ವಕಪ್ ಆಡೋದು ಪಕ್ಕಾ?

ಗೌತಮ್ ಗಂಭೀರಕ್ಕೆ RO-KO ಸೆಡ್ಡು – BCCI ಆಫೀಸರ್ಸ್ ಜತೆ ಡೈರೆಕ್ಟ್ ಡೀಲ್2027ರ ವಿಶ್ವಕಪ್ ಆಡೋದು ಪಕ್ಕಾ?

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾ ಕಂಡಂತಹ ಅಪರೂಪದ ಮುತ್ತುಗಳು. ಕ್ಯಾಪ್ಟನ್ಸ್ ಆಗಿ ಬ್ಯಾಟರ್ಸ್ ಆಗಿ ಭಾರತ ತಂಡಕ್ಕೆ ಬಹುದೊಡ್ಡ ಕೊಡುಗೆಯನ್ನೇ ನೀಡಿದ್ದಾರೆ. ಟಿ-20ಐ ಹಾಗೇ ಟೆಸ್ಟ್​ ಫಾರ್ಮೆಟ್​​ಗೆ ಗುಡ್ ಬೈ ಹೇಳಿರೋ ಈ ಇಬ್ಬರು ಲೆಜೆಂಡರಿ ಸ್ಟಾರ್ಸ್ ಏಕದಿನ ವಿಶ್ವಕಪ್ ಗೆಲ್ಬೇಕು ಅನ್ನೋದಷ್ಟೇ ಅವ್ರ ವೃತ್ತಿಜೀವನದ ಪರಮಗುರಿ. ಆದ್ರೆ 2027ರ ಏಕದಿನ ವಿಶ್ವಕಪ್​ವರೆಗೂ ತಂಡದಲ್ಲಿ ಇರ್ತೀವೋ ಇಲ್ವೋ ಅನ್ನೋ ಕ್ಲಾರಿಟಿ ಇಲ್ಲ. ಅದಕ್ಕಾಗಿ ಈಗ ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ಹೆಡ್ ಕೋಚ್ ಗೌತಮ್ ಗಂಭೀರ್​ಗೆ ಸೆಡ್ಡು ಹೊಡೆದು ಡೈರೆಕ್ಟ್ ಆಗಿ ಬಿಸಿಸಿಐ ಬಿಗ್ ಬಾಸ್​ಗಳನ್ನೇ ಮೀಟ್ ಮಾಡಿದ್ದಾರೆ.

ಇದನ್ನೂ ಓದಿ : ಕೊಹ್ಲಿ SLOTನಲ್ಲಿ ಇಶಾನ್ ಕಿಶನ್ – ವಿಕೆಟ್ ಕೀಪಿಂಗ್ KLಗೆ ಸಿಗಲ್ವಾ?

ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ್ಮೇಲೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೊತೆಗಿನ ಬಾಂಡಿಂಗ್ ಅಷ್ಟಕ್ಕಷ್ಟೇ ಇದೆ. ಌಂಡ್ ಇಬ್ಬರು ಲೆಜೆಂಡರಿ ಪ್ಲೇಯರ್ಸ್ ಟೆಸ್ಟ್ ಕ್ರಿಕೆಟ್​​ಗೆ ವಿದಾಯ ಘೋಷಣೆ ಮಾಡಿದ್ದಕ್ಕೆ ಗಂಭೀರ್ ಅವ್ರ ಪ್ರೆಶರ್ರೇ ಕಾರಣ ಅನ್ನೋ ಆರೋಪವೂ ಇದೆ. ಅಲ್ದೇ ಏಕದಿನ ಮಾದರಿಯಿಂದ ಹೊರಗಿಡೋಕೆ ಸಾಕಷ್ಟು ಟ್ರೈ ಮಾಡ್ತಿದ್ದಾರೆ. ಆದ್ರೆ ಇದಕ್ಕೆ ರೋಹಿತ್ ಮತ್ತು ಕೊಹ್ಲಿ ಒಪ್ಪಿಲ್ಲ. ಶತಾಯ ಗತಾಯ ವಿಶ್ವಕಪ್ ಗೆದ್ದು ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳ್ಬೇಕು ಅಂತಾ ಈಗ ದೊಡ್ಡ ಹೆಜ್ಜೆ ಇಟ್ಟಿದ್ದಾರೆ.

ರೋ-ಕೊ ಕಾರಣಕ್ಕೆ ಏಕದಿನದಲ್ಲಿ ಗಂಭೀರ್ ಗೆ ಹಿಡಿತ ಸಿಕ್ಕಿಲ್ವಾ?

ಈಗಾಗ್ಲೇ ಟೀಂ ಇಂಡಿಯಾದಲ್ಲಿ ಟೆಸ್ಟ್ ಮತ್ತು ಟಿ-20ಐ ತಂಡದಲ್ಲಿ ಗಂಭೀರ್ ನಿರ್ಧಾರಗಳೇ ಅಂತಿಮ. ಆದ್ರೆ ಏಕದಿನ ಅಂತಾ ಬಂದಾಗ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇರೋದ್ರಿಂದ ಗಂಭೀರ್​ಗೆ ಆ ಕಂಟ್ರೋಲ್ ಸಿಕ್ಕಿಲ್ಲ. ತಂಡದಲ್ಲಿ ಅವ್ರನ್ನ ಕಂಟಿನ್ಯೂ ಮಾಡ್ಬೇಕಾ ಅಥವಾ ಕೈಬಿಡ್ಬೇಕಾ ಅನ್ನೋ ಕ್ಲಾರಿಟಿ ಇಲ್ಲ. ಕೈಬಿಡ್ಬೇಕು ಅನ್ಕೊಂಡ್ರೂ ಸಾಧ್ಯವಾಗ್ತಿಲ್ಲ. ಆದ್ರೆ ಗಂಭೀರ್ ಕನ್ಫ್ಯೂಷನ್ ನಡುವೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವ್ರನ್ನೇ ಓವರ್ ಟೇಕ್ ಮಾಡಿದ್ದಾರೆ. ನೇರವಾಗಿ ಬಿಸಿಸಿಐ ಉನ್ನತ ಅಧಿಕಾರಿಗಳನ್ನು ಮೀಟ್ ಮಾಡಿದ್ದಾರೆ ಎನ್ನಲಾಗಿದೆ. 2027ರ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಸೆಲೆಕ್ಷನ್ ಮತ್ತು ಫ್ಯೂಚನ್ ಪ್ಲ್ಯಾನ್​ಗಳನ್ನ ಸ್ಪಷ್ಟ ಪಡಿಸಬೇಕು ಅಂತಾ ಚರ್ಚಿಸಿದ್ದಾರೆ. ರೋಕೊ ಜೋಡಿಯ ಇದೇ ನಡೆ ಗಂಭೀರ್ ಮತ್ತು ಅಗರ್ಕರ್​ಗೆ ಬಿಸಿತುಪ್ಪವಾಗಿದೆ.

ಹಿಟ್ ಮ್ಯಾನ್ & ಕಿಂಗ್ ಕಾರಣಕ್ಕೆ ಕನ್ಫ್ಯೂಷನ್!

ಗೌತಮ್ ಗಂಭೀರ್ ಏಕಪಕ್ಷೀಯ ನಿರ್ಧಾರಗಳಿಗೆ ಇಲ್ಲಿ ಸ್ವಲ್ಪ ಅಡೆತಡೆ ಇರೋದೇ ಈ ಇಬ್ಬರು ಲೆಜೆಂಡರಿ ಪ್ಲೇಯರ್​ಗಳಿಂದ. ಈಗ ಬಿಸಿಸಿಐ ಅಧಿಕಾರಿಗಳೊಂದಿಗೆ ಟೀಮ್ ಇಂಡಿಯಾ ಸ್ಟಾರ್ಸ್ ನೇರವಾಗಿ ಮೀಟ್ ಮಾಡಿ ಮಾತಾಡಿರೋದು ಕೋಚ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ಪಾಲಿಗೆ ಬಿಸಿತುಪ್ಪವಾದಂತಾಗಿದೆ. ಯಾಕಂದ್ರೆ ರೋಕೊ ಜೋಡಿ ಏಕದಿನ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಪರ ಆಡುವುದು ಬಹುತೇಕ ಕನ್ಫರ್ಮ್ ಎಂದೇ ಹೇಳಲಾಗಿದೆ. ಯಾಕಂದ್ರೆ ರೋಹಿತ್ ಮತ್ತು ಕೊಹ್ಲಿಯನ್ನ ಒತ್ತಾಯಪೂರ್ವಕವಾಗಿ ತಂಡದಿಂದ ಹೊರಗಿಡೋಕೆ ಸಾಧ್ಯನೇ ಇಲ್ಲ. ನಿವೃತ್ತಿ ಹೊತ್ತಲ್ಲಿ ಸ್ವಲ್ಪ ಕೇರ್​ಲೆಸ್ ಮಾಡಿದ್ರೂ ಬ್ಯಾಕ್ ಫೈರ್ ಆಗುತ್ತೆ. ಹೀಗಾಗಿ ಗಂಭೀರ್ ಮತ್ತು ಅಗರ್ಕರ್ ಎಚ್ಚರಿಕೆಯ ಹೆಜ್ಜೆ ಇಡ್ಬೇಕಾಗಿದೆ. ಮತ್ತೊಂದೆಡೆ ರೋಕೊ ಜೋಡಿಯ ಮೂವ್​ಮೆಂಟ್ ನೋಡಿದ್ರೆ 2027ರ ಏಕದಿನ ವಿಶ್ವಕಪ್ ಆಡೋದು ಪಕ್ಕಾ ಎನ್ನುವಂತೆಯೇ ಇದೆ.

Shantha Kumari

Leave a Reply

Your email address will not be published. Required fields are marked *