ಈ ಸ್ಥಳಗಳಲ್ಲಿ ಸೆಲ್ಫಿ ತೆಗೆದರೆ ನಿಮಗೆ ಬೀಳಬಹುದು ದಂಡ! ಎಚ್ಚರ…

ಈ ಸ್ಥಳಗಳಲ್ಲಿ ಸೆಲ್ಫಿ ತೆಗೆದರೆ ನಿಮಗೆ ಬೀಳಬಹುದು ದಂಡ! ಎಚ್ಚರ…

ಇಂದಿನ ಸ್ಮಾರ್ಟ್​ ಯುಗದಲ್ಲಿ ಎಲ್ಲರ ಕೈಯಲ್ಲೂ ಆ್ಯಂಡ್ರೋಯಿಡ್​ ಪೋನ್​ಗಳಿರುತ್ತದೆ. ತಮ್ಮ ಬಜೆಟ್​ಗೆ ತಕ್ಕಂತೆ, ತಮಗೆ ಬೇಕಾದ ಫೀಚರ್​ಗಳನ್ನು ಹೊಂದಿರುವ ಫೋನ್​ಗಳನ್ನು ಖರೀದಿಸುತ್ತಾರೆ. ಯುವಕರಂತೂ ತಾವು ಹೋದ ಸ್ಥಳಗಳಲ್ಲೇಲ್ಲಾ ಫೋಟೋಸ್​, ಸೆಲ್ಫಿ ತೆಗೆಯುತ್ತಾರೆ. ಈ ಕ್ರೇಜ್ ಎಷ್ಟಿದೆ ಎಂದರೆ ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ, ಅನೇಕ ಜನರು ಅಪಾಯಗಳನ್ನು ಮೈಮೇಲೆ ಎಳೆದುಕೊಂಡ ಘಟನೆಗಳು, ಸಾವನ್ನಪ್ಪಿದ ಘಟನೆಗಳು ಇವೆ. ಇಂತಹ ಅಪಘಾತಗಳನ್ನು ತಡೆಗಟ್ಟಲು, ವಿಶ್ವದ ಕೆಲವು ಸ್ಥಳಗಳಲ್ಲಿ ಸೆಲ್ಫಿ ತೆಗೆಯುವುದನ್ನು ನಿಷೇಧಿಸಲಾಗಿದೆ. ನೀವು ಸೆಲ್ಫಿಪ್ರಿಯರಾಗಿದ್ದರೆ, ಈ ಸ್ಥಳಗಳಿಗೆ ಭೇಟಿ ನೀಡುವ ಮೊದಲು ಸ್ವಲ್ಪ ಜಾಗರೂಕರಾಗಿರಿ. ಇಲ್ಲಿ ಸೆಲ್ಫಿ ತೆಗೆದುಕೊಂಡರೆ, ನೀವು ತುಂಬಾ ದೊಡ್ಡ ದಂಡವನ್ನು ಪಾವತಿಸಬೇಕಾಗಬಹುದು.

ಗ್ಯಾರುಪ್ ಬೀಚ್

ದಕ್ಷಿಣ ಫ್ರಾನ್ಸ್ ನ ಸುಂದರ ಕಡಲತೀರ ಗ್ಯಾರುಪ್ ಬೀಚ್. ಈ ಬೀಚ್ ತುಂಬಾ ಫೇಮಸ್ ಆಗಿದೆ. ಆದರೆ ವ್ಯವಸ್ಥಾಪಕರು ಇಲ್ಲಿ ಸೆಲ್ಫಿ ತೆಗೆದುಕೊಳ್ಳುವುದನ್ನು ನಿಷೇಧಿಸಿದ್ದಾರೆ. ಇಲ್ಲಿನ ಜನರು ಸಮುದ್ರದ ಅಲೆಗಳು ಮತ್ತು ನೀರಿನ ಚಟುವಟಿಕೆಗಳನ್ನು ಆನಂದಿಸುವ ಬದಲು ಸೆಲ್ಫಿ ತೆಗೆದುಕೊಳ್ಳಲು ಹೆಚ್ಚು ಗಮನ ಹರಿಸುತ್ತಾರೆ. ಇದರಿಂದಾಗಿ ಹಲವು ಜನ ಸಾವನ್ನಪ್ಪಿದ್ದಾರೆ. ಅದಕ್ಕಾಗಿಯೇ ಇಲ್ಲಿ ಸೆಲ್ಫಿ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ.

ಸ್ಪೇನ್

ರನ್ನಿಂಗ್ ಆಫ್ ದಿ ಬುಲ್ಸ್ ಸಮಯದಲ್ಲಿ, ಸ್ಪೇನ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವುದರಿಂದ ನೀವು ಊಹಿಸಬಹುದಾದುದಕ್ಕಿಂತ ಹೆಚ್ಚು ವೆಚ್ಚವಾಗುತ್ತದೆ. ದಂಡವು € 3000 ಯುರೋಗಳವರೆಗೆ ಇರುತ್ತೆ ಎಂದರೆ ನಿಜಕ್ಕೂ ಶಾಕ್ ಆಗುತ್ತೆ. ಅಧಿಕಾರಿಗಳು ಜನರ ಜೀವಗಳನ್ನು ಉಳಿಸಲು ಬಯಸುವುದರಿಂದ ಈ ಕಠಿಣ ಕ್ರಮ ವಿಧಿಸಲಾಗಿದೆ. ತಮ್ಮ ಮೂರ್ಖತನದಿಂದಾಗಿ ಪಂದ್ಯದ ಸಮಯದಲ್ಲಿ ಸೆಲ್ಫಿ ತೆಗೆದುಕೊಳ್ಳುವುದರಿಂದ ಅನೇಕ ಪ್ರೇಕ್ಷಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ, ಈ ಹಿನ್ನೆಲೆಯಲ್ಲಿ ಸೆಲ್ಫಿ ನಿಷೇಧಿಸಲಾಗಿದೆ.

 ಯುನೈಟೆಡ್ ಕಿಂಗ್ಡಮ್

ಯುನೈಟೆಡ್ ಕಿಂಗ್ ಡಮ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವ ಬಗ್ಗೆ ಕಠಿಣ ಕ್ರಮ ವಿಧಿಸಲಾಗಿದೆ. ಮತ ಚಲಾಯಿಸುವಾಗ ಅಥವಾ ಮತಪೆಟ್ಟಿಗೆಯ ಪಕ್ಕದಲ್ಲಿ ಸೆಲ್ಫಿ ಕ್ಲಿಕ್ಕಿಸದಂತೆ ಮತದಾರರಿಗೆ ಸಲಹೆ ನೀಡಲಾಗುತ್ತದೆ. ಈ ನಿಯಮ ಅಧಿಕಾರಿಗಳಿಗೆ ವಿಶೇಷವಾಗಿ ಚುನಾವಣಾಧಿಕಾರಿಗಳಿಗೆ ಸಹ ಅನ್ವಯಿಸುತ್ತದೆ. ಯುನೈಟೆಡ್ ಕಿಂಗ್ ಡಮ್ ಚುನಾವಣಾ ಆಯೋಗದಿಂದ ಬರುವುದರಿಂದ ಈ ಕ್ರಮಗಳು ಕಠಿಣ ಮತ್ತು ಕಡ್ಡಾಯವಾಗಿವೆ.

ಫುಕೆಟ್ ಫುಕೆಟ್

ಮೈ ಖಾವೋ ಬೀಚ್ ನಲ್ಲಿ ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳುವಂತಿಲ್ಲ. ಅಷ್ಟೇ ಅಲ್ಲ, ನೀವು ಇಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಸಿಕ್ಕಿಬಿದ್ದರೆ, ನಿಮಗೆ ಕಠಿಣ ಶಿಕ್ಷೆಯಾಗಬಹುದು. ಆದುದರಿಂದ ಈ ತಪ್ಪು ಮಾಡೋ ಮುನ್ನ ಯೋಚನೆ ಮಾಡುವುದು ಉತ್ತಮ.

ದಕ್ಷಿಣ ಕೊರಿಯಾ

ಸೆಲ್ಫಿ ಸ್ಟಿಕ್‌ಗಳ ಬಳಕೆ ನಿರ್ಬಂಧಿಸಲು ಕೊರಿಯಾ ಗಣರಾಜ್ಯವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇಲ್ಲಿ, ರೇಡಿಯೋ ತರಂಗಗಳನ್ನು ಬಳಸುವ ಗ್ಯಾಜೆಟ್ ವೆಲ್ಟರ್‌ಗೆ ಈ ಕಡ್ಡಿಗಳು ಅಡ್ಡಿಪಡಿಸಬಹುದು ಎಂಬ ಭಯ ಹೆಚ್ಚುತ್ತಿದೆ. ಆದ್ದರಿಂದ ಸೆಲ್ಫಿ ಸ್ಟಿಕ್ ಬಳಕೆ ನಿಷೇಧಿಸಲಾಗಿದ್ದು, ಒಂದು ವೇಳೆ ನೀವು ಪ್ರಮಾಣೀಕರಿಸದ ಸೆಲ್ಫೀ ಸ್ಟಿಕ್ ಬಳಸಿದರೆ ದಂಡ ವಿಧಿಸುತ್ತಾರೆ.

ಜೋಹಾನ್ಸ್ ಬರ್ಗ್

ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್ ನಲ್ಲಿರುವ ಲಯನ್ ಪಾರ್ಕ್ ಗೆ ಭೇಟಿ ನೀಡಲು ಹೊರಟಿದ್ದರೆ, ಪ್ರವಾಸಿಗರು ಇಲ್ಲಿ ಸಿಂಹ ಮತ್ತು ಕರಡಿ ಮರಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸಿಂಹಗಳು ಮತ್ತು ಕರಡಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವಾಗ ಇಲ್ಲಿನ ಜನರು ಅನೇಕ ಬಾರಿ ಅಪಘಾತಗಳಿಗೆ ಬಲಿಯಾಗಿದ್ದಾರೆ. ಹಾಗಾಗಿ, ಇಲ್ಲಿ ಸೆಲ್ಫಿ ತೆಗೆದುಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

suddiyaana