ಮೂವರು ಮುದ್ದಾದ ಮಕ್ಕಳನ್ನ ಬಾವಿಗೆ ತಳ್ಳಿ ತಾಯಿ ಆತ್ಮಹತ್ಯೆ ! – ವಿಜಯಪುರದಲ್ಲಿ ಹೃದಯವಿದ್ರಾವಕ ಘಟನೆ

ಮೂವರು ಮುದ್ದಾದ ಮಕ್ಕಳನ್ನ ಬಾವಿಗೆ ತಳ್ಳಿ ತಾಯಿ ಆತ್ಮಹತ್ಯೆ ! – ವಿಜಯಪುರದಲ್ಲಿ ಹೃದಯವಿದ್ರಾವಕ ಘಟನೆ

ಪುಟ್ಟ ಪುಟ್ಟ ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿನಡೆದಿದೆ. ತಾಯಿಯಾದ 30 ವರ್ಷದ ರಾಜಶ್ರೀ ಶಂಕ್ರಪ್ಪ ಹಳ್ಳೂರ ತಮ್ಮ ಮಕ್ಕಳಾದ  ತನುಶ್ರೀ (7 ವರ್ಷ), ಅನುಶ್ರೀ (5 ವರ್ಷ) ಹಾಗೂ ಕೇವಲ 10 ತಿಂಗಳ ಹಸುಳೆ ಸಂತೋಷ್‌ರನ್ನು ಬಾವಿಗೆ ಎಸೆದು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಪಕ್ಕಾ ಸ್ಕೇಚ್ ಹಾಕಿ ರೌಡಿ ಶೀಟರ್ ಮ*ರ್ಡರ್‌ – ಬೆಳಗ್ಗೆ 4 ಗಂಟೆಗೆ ಹಂತಕರ ಪ್ಲ್ಯಾನ್ ಹೇಗಿತ್ತು ಗೊತ್ತಾ?

ಈ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ರಾಜಶ್ರೀ ಅವರ ಪತಿ ಶಂಕ್ರಪ್ಪ ಖಾಸಗಿ ಬಸ್ ಚಾಲಕನಾಗಿದ್ದು, ಪತಿ ಊರಲ್ಲಿ‌ ಇಲ್ಲದ ವೇಳೆ ಘಟನೆ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಇಂಡಿ ಗ್ರಾಮೀಣ ಪೊಲೀಸರ ಭೇಟಿ ನೀಡಿ, ಪರಿಶೀಲಿಸಿದರು. ಪತಿ ಹಾಗೂ ರಾಜಶ್ರೀ ತವರು ಮನೆಯವರು ಬಂದ ಬಳಿಕ ಮುಂದಿನ‌ ಪ್ರಕ್ರಿಯೆ ನಡೆಸುವುದಾಗಿ ಪೊಲೀಸರು ತಿಳಿಸಿದರು. ಪೊಲೀಸರ ತನಿಖೆ ಬಳಿಕ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬರಲಿದೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಗ್ರಾಮದ ಸಮೀಪವಿರುವ ಬಾವಿಯಲ್ಲಿ ಇಬ್ಬರು ಮಕ್ಕಳ ಶವಗಳು ತೇಲುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣವೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಇಂಡಿ ಗ್ರಾಮೀಣ ಪೊಲೀಸರು, ಪರಿಶೀಲನೆ ನಡೆಸಿದಾಗ ತಾಯಿ ಮತ್ತು ಮೂವರು ಮಕ್ಕಳ ಸಾವಿನ ಸುದ್ದಿ ದೃಢಪಟ್ಟಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. “ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಕುಟುಂಬದ ಸದಸ್ಯರ ವಿಚಾರಣೆ ನಡೆಸಲಾಗುತ್ತಿದೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವುದು ಮಿರಗಿ ಗ್ರಾಮದಲ್ಲಿ ಶೋಕ ಸಾಗರವನ್ನುಂಟು ಮಾಡಿದೆ.

Kishor KV