ಸೀತಾರಾಮ ಎಂಡ್‌.. ಸಿಹಿ ಕಣ್ಣೀರ ಲೈಫ್.. ರೀತು ಜೀವನ ಇನ್ಮುಂದೆ ಕಷ್ಟ ಕಷ್ಟ! -ಬಾಲನಟಿಗೆ ಇನ್ನು ಚಾನ್ಸ್‌ ಸಿಗಲ್ವಾ? ‌

ಸೀತಾರಾಮ ಎಂಡ್‌.. ಸಿಹಿ ಕಣ್ಣೀರ ಲೈಫ್.. ರೀತು ಜೀವನ ಇನ್ಮುಂದೆ ಕಷ್ಟ ಕಷ್ಟ! -ಬಾಲನಟಿಗೆ ಇನ್ನು ಚಾನ್ಸ್‌ ಸಿಗಲ್ವಾ? ‌

My name is ಸಿಹಿ SIHI.. S ಕ್ಯಾಪಿಟಲ್ ಈ ಡೈಲಾಗ್‌ ಹೇಳಿದ ತಕ್ಷಣವೇ ಮುದ್ದು ಮುಖ ನೆನ್ಪಾಗುತ್ತೆ ಅಲ್ವಾ? ಸೀತಾರಾಮ ಸೀರಿಯಲ್‌ನ ಸಿಹಿ ಪಾತ್ರಧಾರಿ ರೀತು ಸಿಂಗ್ ಈ ಪಾತ್ರದ ಮೂಲಕವೇ ಕರುನಾಡ ಜನರ ಮನಗೆದ್ದಿದು. ಈಕೆಯ ಆಕ್ಟಿಂಗ್ ನೋಡಿ ವೀಕ್ಷಕರು ಫಿದಾ ಆಗಿದ್ರು. ಆಕೆಗಾಗೇ ಸೀರಿಯಲ್ ನೋಡುತ್ತಿದ್ದವರು ಜಾಸ್ತಿ. ಆದ್ರೆ ಸೀತಾರಾಮ ಸೀರಿಯಲ್‌ ಮುಕ್ತಾಯವಾಗಿದೆ.. ಸಿಹಿ ಪಾತ್ರವನ್ನ ಅದೆಷ್ಟೋ ಮಂದಿ ಮಿಸ್‌ ಮಾಡ್ಕೊಳ್ತಿದ್ದಾರೆ. ಆದ್ರೀಗ ರೀತು ಸಿಂಗ್‌ಗೆ ತನ್ನ ಫ್ಯೂಚರ್‌ ಕತೆ ಏನು? ಜೀವನಕ್ಕಾಗಿ ಮುಂದಿನ ದಾರಿ ಯಾವುದು ಅನ್ನೋ ಚಿಂತೆ ಕಾಡ್ತಿದೆ.

ಇದನ್ನೂ ಓದಿ: RCB ಕಪ್ ಕ್ರೆಡಿಟ್ ಕೊಹ್ಲಿಗೆ ಮಾತ್ರನಾ? – ಕಿಂಗ್ ಮುಂದೆ ರಜತ್ ಸೈಡ್ ಲೈನ್ ಆದ್ರಾ?

ರೀತು ಸಿಂಗ್‌.. ಸಿಹಿ ಪಾತ್ರದ ಮೂಲಕವೇ ವೀಕ್ಷಕರ ಮನಸ್ಸಿಗೆ ಹತ್ತಿರವಾದವಳು.. ಕೋಪ ಇರ್ಲಿ.. ತಮಾಷೆ ಇರ್ಲಿ.. ಜಗಳ ಇರ್ಲಿ.. ನಗು ಇರ್ಲಿ.. ನವರಸಗಳನ್ನು ಅರೆದು ಕುಡಿದವಳಂತೆ ಅಭಿನಯಿಸುತ್ತಾಳೆ. ಇದು ರಿತು ಸಿಂಗ್ ನಟನೆಯ ಸಾಮರ್ಥ್ಯ. ಸಿಹಿ ಪಾತ್ರವನ್ನ ನೋಡಿದವರೆಲ್ಲಾ ಈಕೆ ರಿಚ್‌ಕಿಡ್‌ ಅಂತಾ ಎಲ್ಲರೂ ಅಂದ್ಕೊಂಡಿದ್ರು.. ಆಮೇಲೆ ಗೊತ್ತಾಗಿದ್ದು. ಪಾತ್ರ ಸಿಹಿಯಾಗಿದ್ರೂ ರಿಯಲ್‌ ಲೈಫ್‌ನಲ್ಲಿ ಬರೀ ಕಹಿಯೇ ತುಂಬಿದೆ ಅಂತಾ.. ಇದೀಗ ಇಡೀ ಮನೆ ಜವಾಬ್ದಾರಿ ರೀತು ಸಿಂಗ್‌ ಮೇಲೆ ಇದೆ. ಸಣ್ಣ ವಯಸ್ಸಿನಲ್ಲೇ ಅತೀದೊಡ್ಡ ಜವಾಬ್ದಾರಿ ಈಕೆ ಮೇಲಿದೆ.

ಹೌದು ರೀತು ಸಿಂಗ್‌ ಮೂಲತಃ ನೇಪಾಳದವಳು. ರೀತು ಆರು ತಿಂಗಳ ಮಗುವಾಗಿದ್ದಾಗ್ಲೇ ಆಕೆಯ ಅಪ್ಪ, ತಾಯಿ, ಮಕ್ಕಳನ್ನ ಮನೆಯಿಂದ ಆಚೆ ಹಾಕ್ತಾರೆ. ಬಳಿಕ ಆಕೆಯ ಅಮ್ಮ ಪುಟ್ಟ ಮಕ್ಕಳನ್ನ ಕರ್ಕೊಂಡು ನೇಪಾಳದಿಂದ ಮೈಸೂರಿಗೆ ಕರ್ಕೊಂಡು ಬರ್ತಾರೆ. ಮನೆ ಕೆಲಸ ಮಾಡ್ಕೊಂಡು ಮಕ್ಕಳನ್ನ ಸಾಕ್ತಾರೆ. ಮೈಸೂರಿನಲ್ಲೇ ಬೆಳೆದ ರೀತು ಕನ್ನಡವನ್ನ ಕಲಿತಾಳೆ.. ಅಲ್ಲೇ ಸ್ಕೂಲ್‌ಗೆ ಹೋಗ್ತಾಳೆ.. ಬಳಿಕ ಆಕೆ ಜೀಕನ್ನಡದ ಜನಪ್ರಿಯ ಶೋ ಡ್ರಾಮಾ ಜೂನಿಯರ್‌ಗೆ ಸೆಲೆಕ್ಟ್‌ ಆಗ್ತಾಳೆ. ಅಲ್ಲಿಂದ ಶುರುವಾದ ರೀತು ನಟನಾ ಜರ್ನಿ ಈಗ ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ರೀತು ಆಗಿದ್ದ ಈಕೆ ಸಿಹಿ ಅಂತಾನೇ ಫೇಮಸ್‌ ಆಗಿದ್ದಾಳೆ.. ಆಷ್ಟರ ಮಟ್ಟಿಗೆ ಅದ್ಭುತವಾಗಿ ನಟಿಸಿದ್ದಳು ರೀತು.

ಆದ್ರೀಗ ಜನಪ್ರೀಯ ಸೀತಾರಾಮ ಸೀರಿಯಲ್‌ ಮುಕ್ತಾಯ ಆಗಿದೆ. ಸೀರಿಯಲ್‌ ಶೂಟಿಂಗ್‌ನ ಕೊನೆಯ ದಿನ ಇಡೀ ಸೀರಿಯಲ್‌ ಟೀಮ್‌ನಲ್ಲಿರೋ ಬಹುತೇಕರು ಭಾವುಕರಾಗಿದ್ರು.. ಆದ್ರೇ ರೀತು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಯಾಕಂದ್ರೆ ಆಕೆಗೆ ಮುಂದೇನು ಅನ್ನೋ ಚಿಂತೆ ಕಾಡಿದೆ. ಸೀರಿಯಲ್‌ ಮುಗಿತಿದ್ದಂತೆ ಮುಂದಿನ ದಾರಿ ಏನು ಅನ್ನೋ ಚಿಂತೆ ಕಾಡಲು ಶುರುವಾಗಿದೆ.

ಹೌದು, ರೀತು ಸೀರಿಯಲ್‌ನಲ್ಲಿ ಆಕ್ಟ್‌ ಮಾಡಲು ಶುರು ಮಾಡಿದ್ಮೇಲೆ ಆಕೆಯ ಮನೆಯ ಆದಾರ ಸ್ಥಂಭ ಆಗಿದ್ದಾಳೆ. ಯಾಕಂದ್ರೆ ಮನೆ ಕೆಲಸ ಮಾಡಿಕೊಂಡಿದ್ದ ತಾಯಿ ಕೂಡ ರೀತು ಜೊತೆಯೂ ಶೂಟಿಂಗ್‌ಗೆ ಬರ್ತಿದ್ರು. ರೀತು ನಟನೆಯಿಂದ ಪಡಿತಾ ಇದ್ದ ಸಂಭಾವನೆಯಿಂದಲೇ ಇಷ್ಟು ದಿನ ಮನೆ ನಡೆಸ್ತಾ ಇದ್ರು.. ಅದ್ರ ಜೊತೆ ರೀತು ಹಾಗೂ ಆಕೆಯ ಅಣ್ಣ ಎಜುಕೇಶನ್‌ ಕೂಡ ನಡಿತಾ ಇತ್ತು.. ಸಣ್ಣ ವಯಸ್ಸಿನಲ್ಲೇ ರೀತು ಎಲ್ಲವನ್ನ ಮ್ಯಾನೇಜ್‌ ಮಾಡ್ತಿದ್ದಾಳೆ. ಆಕೆಯ ಪರಿಶ್ರಮಕ್ಕೆ ತಕ್ಕಂತೆ ಯಶಸ್ಸು ಕೂಡ ಸಿಕ್ಕಿದೆ. ಆದ್ರೆ   ಇವೆರಡೂ ಈಗ ಮುಗಿದು ಹೋಗಿದೆ ಎನ್ನಿಸುತ್ತಿದೆ ಆಕೆಗೆ. ಇದೇ ಕಾರಣಕ್ಕೆ ಸೀತಾರಾಮ ಸೀರಿಯಲ್​ ಮುಗಿದಾಗ ಎಲ್ಲರಕ್ಕಿಂತ ಹೆಚ್ಚಾಗಿ ದುಃಖ ಪಟ್ಟಿದ್ಲು​. ಈ ಬಗ್ಗೆ ಅಶೋಕ್ ಪಾತ್ರಧಾರಿ ಅಶೋಕ್​ ಶರ್ಮಾ ಸಂದರ್ಶನವೊಂದ್ರಲ್ಲಿ ಮಾತನಾಡಿದ್ದಾರೆ. ಸಿಹಿಗೆ ಸಿಕ್ಕಾಪಟ್ಟೆ ಟ್ಯಾಲೆಂಟ್​ ಇರುವುದರಿಂದ ಆಕೆಗೆ ಮುಂದೆ ಅವಕಾಶಗಳು ಸಿಗುತ್ತವೆ. ಆದರೆ ಸದ್ಯ ಸೀತಾರಾಮ ಸೀರಿಯಲ್​ ಬಿಟ್ಟು ಹೋಗುವ ಸಂದರ್ಭದಲ್ಲಿ ಸಿಕ್ಕಾಪಟ್ಟೆ ಅತ್ತಳು. ಆಕೆಗೆ ತನ್ನ ಭವಿಷ್ಯದ ಚಿಂತೆ ಶುರುವಾಗಿ ಬಿಟ್ಟಿದೆ. ನಿನಗೆ ಎಲ್ಲಾದರೂ ಅವಕಾಶ ಸಿಗುತ್ತದೆ. ನೀನು ಹುಟ್ಟಿರೋದೇ ನಟನೆಗೆ ಎಂದು ನಾನು ಆಕೆಗೆ ಸಮಾಧಾನ ಮಾಡಿದಾಗ, ನಾನು ಹುಟ್ಟಿರೋದೇ ಸೀತಾರಾಮ ನಟನೆಗೆ ಎಂದು ಬಿಕ್ಕಿಬಿಕ್ಕಿ ಅತ್ತಳು. ಅವಳು ತುಂಬಾ ನೋವಿನಲ್ಲಿದ್ದಾಳೆ ಎಂದು ಹೇಳಿದ್ರು..

ಅಂದ್ಹಾಗೆ ರೀತು ಮುಂದಿನ ನಟನಾ ಜೀವನ ಕಷ್ಟ ಇದೆ. ಬೇರೆ ನಟರಿಗಾದ್ರೆ  ಸೀರಿಯಲ್​, ಸಿನಿಮಾಗಳಲ್ಲಿ ಅವಕಾಶಗಳು ಸಿಗಬಹುದು. ಆದರೆ ರೀತು ಸಿಂಗ್​ ತುಂಬಾ ಚಿಕ್ಕವಳು. ಚಿಕ್ಕ ಮಕ್ಕಳ ಪಾತ್ರವೇ ಪ್ರಧಾನ ಆಗಿರುವಂಥ ಸೀರಿಯಲ್​ಗಲ್ಲಿ ಆಕೆಗೆ ಅವಕಾಶ ಸಿಗಬೇಕಷ್ಟೇ. ಇಲ್ದಿದ್ರೆ ಚಿಕ್ಕಪುಟ್ಟ ಪಾತ್ರಗಳು ಸಿಗಬಹುದು, ಸಿನಿಮಾಗಳಲ್ಲಿಯೂ ಅವಕಾಶ ತೀರಾ ಕಡಿಮೆ. ಚಿಕ್ಕಮಕ್ಕಳ ಪಾತ್ರ ಇದ್ರೆ ಮಾತ್ರ ಚಾನ್ಸ್‌. ಹೀಗಾಗಿ ಒಂದು ಕಡೆ ಹಣ, ಇನ್ನೊಂದು ಕಡೆ ಹೆಸರು.. ಈ ಎರಡೂ ಎಲ್ಲರಿಗೂ ಕ್ಷಣಿಕವೇ.. ಆದರೆ, ಈ ವಿಷಯ ತುಂಬಾ ದೊಡ್ಡವರಾದ ಮೇಲೆ ಹಲವರ ಅರಿವಿಗೆ ಬರುತ್ತದೆ. ಆದರೆ ಪುಟಾಣಿ ರೀತು ಈಗಾಗಲೇ ಈ ಬಗ್ಗೆ ಅರಿತುಕೊಂಡಿರುವಂತೆ ಕಾಣಿಸುತ್ತಿದೆ. ರೀತು ತುಂಬಾ ಟ್ಯಾಲೆಂಟೆಡ್‌.. ಆಕೆಯ ಪ್ರತಿಭೆಯಿಂದ ಈಗಾಗಲೇ ಕರುನಾಡಿನ ಮನಸ್ಸು ಗೆದ್ದಾಗಿದೆ. ಈಕೆಗೆ ಮುಂದಿನ ದಿನಗಳಲ್ಲಿ ಉತ್ತಮ ಚಾನ್ಸ್‌ ಸಿಗಲಿ.. ಕಷ್ಟಗಳೆಲ್ಲಾ ಆದಷ್ಟು ದೂರ ಆಗಲಿ.. ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಕಾಣಲಿ ಅನ್ನೋದೇ ಎಲ್ಲರ ಆಶಯ.

Shwetha M