ಸಿಹಿ ಸಾವು ಸುಬ್ಬಿ ಎಂಟ್ರಿ – ಸೀತಾ ಹುಚ್ಚಿ.. ರಾಮ್‌ ಮತ್ತೊಂದು ಮದುವೆ‌
ಇದು ಟ್ವಿಸ್ಟ್‌ ಅಲ್ಲ.. ಸ್ಟೋರಿ ಕಿಲ್!!

ಸಿಹಿ ಸಾವು ಸುಬ್ಬಿ ಎಂಟ್ರಿ – ಸೀತಾ ಹುಚ್ಚಿ.. ರಾಮ್‌ ಮತ್ತೊಂದು ಮದುವೆ‌ಇದು ಟ್ವಿಸ್ಟ್‌ ಅಲ್ಲ.. ಸ್ಟೋರಿ ಕಿಲ್!!

ಜೀಕನ್ನಡದಲ್ಲಿ ಪ್ರಸಾರ ಆಗ್ತಿರುವ ಸೀತಾರಾಮ ಸೀರಿಯಲ್‌ ಮಹಾ ತಿರುವು ಪಡೆದುಕೊಂಡಿದೆ. ಸಿಹಿಯೇ ಸೀರಿಯಲ್‌ ಹೈಲೈಟ್‌ ಆಗಿದ್ದು, ಈಗ ಸೀತಾ, ರಾಮ್‌ ಜೊತೆನೇ ಆಕೆ ಉಳಿದುಕೊಂಡಿದ್ದಾಳೆ. ಎಲ್ಲವೂ ಚೆನ್ನಾಗಿ ಸಾಗ್ತಾ ಇದ್ದಂತೆ ಸೀರಿಯಲ್‌ ಡೈರೆಕ್ಟರ್‌ ದೊಡ್ಡ ಟ್ವಿಸ್ಟ್‌ ಕೊಟ್ಟು ಬಿಟ್ಟಿದ್ದಾರೆ. ಸೀರಿಯಲ್‌ ನಾಯಕಿ ಸಿಹಿ ಪಾತ್ರವನ್ನೇ ಎಂಡ್‌ ಮಾಡಿದ್ದಾರೆ. ಸಿಹಿ ಸಾಯ್ತಾ ಇದ್ದಂತೆ ಸೀತಾ ವಿಚಿತ್ರವಾಗಿ ವರ್ತಿಸ್ತಾ ಇದ್ದಾಳೆ.. ಇಲ್ಲೂ ಕೂಡ ಡೈರೆಕ್ಟರ್‌ ಮತ್ತೊಂದು ಟ್ವಿಸ್ಟ್‌ ನೀಡಿ ಸೀರಿಯಲ್‌ ಕತೆಯನ್ನೇ ಚೇಂಜ್‌ ಮಾಡಿದ್ದಾರೆ.. ಅಷ್ಟಕ್ಕೂ ಏನಿದು ಹೊಸ ಬದಲಾವಣೆ? ಸಿಹಿ ಪಾತ್ರ ಇನ್ನು ಇರಲ್ವಾ? ಹೊಸ ನಾಯಕಿಯ ಎಂಟ್ರಿ ಆಗುತ್ತಾ? ರಾಮ್‌ ಬೇರೆ ಮದುವೆ ಆಗ್ತಾನಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 16 ವರ್ಷದೊಳಗಿನ ಮಕ್ಕಳೇ ಅಲರ್ಟ್! – ಮಕ್ಕಳಿಗೆ Social Media ಬ್ಯಾನ್

ಸೀತಾರಾಮ ಸೀರಿಯಲ್‌ ಸದ್ಯ ಹೊಸ ತಿರುವು ಪಡೆದುಕೊಂಡಿದೆ. ಶ್ಯಾಮ್‌ ಮತ್ತು ಶಾಲಿನಿಯ ಹಿಡಿತದಿಂದ ತಪ್ಪಿಸಿಕೊಂಡು, ಸೀತಮ್ಮ ಮತ್ತು ರಾಮ್‌ ಜೊತೆಗೆ ಹಾಯಾಗಿದ್ದಾಳೆ ಸಿಹಿ. ಆದರೆ, ಮುಂದಿನ ಭವಿಷ್ಯ ನೆನಪಿಸಿಕೊಂಡರೆ ಇಲ್ಲಿ ಅಚ್ಚರಿಗಳ ಗುಚ್ಛವೇ ಕಣ್ಣಮುಂದೆ ಬಂದು ನಿಲ್ಲುತ್ತದೆ. ಕಳೆದ ಒಂದು ತಿಂಗಳ ಹಿಂದಷ್ಟೇ ಜೀ ಕನ್ನಡ ವಾಹಿನಿ, ಸೀತಾ ರಾಮ ಧಾರಾವಾಹಿಯ ಹೊಸ ಪ್ರೋಮೋವೊಂದನ್ನು ಬಿಡುಗಡೆ ಮಾಡಿತ್ತು. ಆ ಪ್ರೋಮೋದಲ್ಲಿ ಸೀತಾ ರಾಮ್‌  ಜೊತೆಗಿದ್ದ ಸಿಹಿ, ಅಪಘಾತದಲ್ಲಿ ಸಾವನ್ನಪ್ಪಿದ್ದಳು. ಈಗ ಅದರ ಮುಂದುವರಿದ ಭಾಗದ ಪ್ರೋಮೋ ಬಿಡುಗಡೆ ಆಗಿದೆ. ಇದ್ರ ಹೊಸ ಪಾತ್ರದ ಎಂಟ್ರಿ ಆಗಿದ್ದಲ್ಲದೇ ಸೀರಿಯಲ್‌ ಹೊಸ ತಿರುವು ಪಡೆದ್ದನ್ನ ತೊರಿಸಲಾಗಿದೆ.

ಹೌದು, ಸಿಹಿ ಪ್ರಪಂಚಕ್ಕೆ ಇದೀಗ ಸುಬ್ಬಿಯ ಎಂಟ್ರಿಯಾಗಿದೆ. ಅಂದರೆ, ಸಿಹಿಯನ್ನೇ ಹೋಲುವ ಹುಡುಗಿಯ ಆಗಮನವಾಗಿದೆ. ಶ್ರಾವಣಿಯ ಪರ್ಸ್‌ ಎಗರಿಸಿ ಆಕೆಯ ಕೈಗೆ ಸಿಕ್ಕಿಬಿದ್ದ ಹುಡುಗಿಯನ್ನು ಕಂಡು ಶ್ರಾವಣಿಗೂ ದಿಗ್ಬ್ರಮೆಯಾಗಿತ್ತು. ಹೀಗಿರುವಾಗ ಅಮ್ಮನಿಲ್ಲದ ಆ ಪುಟಾಣಿ ಸುಬ್ಬಿ ಸೀತಾಳ ಮಡಿಲು ಸೇರುವುದು ಹೇಗೆ? ಸಿಹಿ ಸುಬ್ಬಿ ಒಂದಾಗ್ತಾರಾ? ಹೀಗೆ ಕಥೆ ತಿರುವು ಪಡೆದುಕೊಂಡಿದೆ. ಹೀಗಿರುವಾಗಲೇ ಹೊಸ ಪ್ರೋಮೋವೊಂದನ್ನು ಹೊರತಂದ ಜೀ ಕನ್ನಡ ವಾಹಿನಿ, ವೀಕ್ಷಕರಿಗೂ ಶಾಕ್‌ ನೀಡಿದೆ.

ಪ್ರೋಮೋದಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ದ ಸಿಹಿಯ ನೋವಿನಲ್ಲಿಯೇ ಸೀತಾ ಮತ್ತು ರಾಮ ಕಾಲ ಕಳೆಯುತ್ತಿದ್ದಾರೆ. ಮತ್ತೊಂದು ಕಡೆ, ಸಿಹಿ ಇಲ್ಲದ ಜೀವನವನ್ನು ಸೀತಾ ಊಹಿಸಿಕೊಳ್ಳುವುದಕ್ಕೂ ಸಾಧ್ಯವಾಗಿಲ್ಲ. ಮಾನಸಿಕವಾಗಿ ಕುಗ್ಗಿ ಹೋಗಿದ್ದಾಳೆ. ಗೊಂಬೆಯೊಂದನ್ನು ಕೈಯಲ್ಲಿ ಹಿಡಿದು, ಹುಚ್ಚಿಯಂತೆ ವರ್ತಿಸುತ್ತಿದ್ದಾಳೆ. ಸೀತಾಳ ಸ್ಥಿತಿ ನೋಡಿ ರಾಮ್‌ ಕಣ್ಣೀರಿಡುತ್ತಿದ್ದಾನೆ. ಇನ್ನೊಂದ್ಕಡೆ ಭಾರ್ಗವಿ ಸಿಕ್ಕಿದ್ದೇ ಚಾನ್ಸ್‌ ಅಂತಾ ತನ್ನ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾಳೆ.. ಸೀತಾ ಹುಚ್ಚಿಯಾಗ್ತಿದ್ದಂತೆ ರಾಮ್‌ ಗೆ ಇನ್ನೊಂದು ಮದುವೆ ಮಾಡಿಸೋ ಪ್ಲಾನ್ ಮಾಡಿದ್ದಾಳೆ. ಈ ಬಗ್ಗೆ ತಾತನ ಜೊತೆ ಕೂಡ ಚರ್ಚೆ ಮಾಡಿದ್ದಾಳೆ. ಪ್ರೇತವಾಗಿ ಬದಲಾದ ಸಿಹಿ ಬಾರ್ಗವಿ ಮಾತನ್ನ ಕೇಳಿಸಿಕೊಂಡಿದ್ದಾಳೆ. ನಾನು ಸೀತಮ್ಮನಿಗೆ ಕಾಣಿಸಬೇಕು ಅಂದ್ರೆ ಏನ್‌ ಮಾಡಬೇಕು? ಅಂತ ಯೋಚಿಸುತ್ತಿದ್ದಾಗಲೇ, ಸರ್ಕಸ್‌ ಮಾಡುತ್ತಿದ್ದ ಸುಬ್ಬಿ ಸಿಹಿ ಕಣ್ಣಿಗೆ ಬಿದ್ದಿದ್ದಾಳೆ. ಯಾರ ಕಣ್ಣಿಗೂ ಕಾಣದ ಸಿಹಿ, ಸುಬ್ಬಿಗೆ ಕಾಣಿಸಿದ್ದಾಳೆ. ಸಿಹಿ – ಸುಬ್ಬಿ ಇಬ್ಬರ ಹೆಸರೂ ತಿಳಿದುಕೊಂಡಿದ್ದಾರೆ. ಸೇಮ್‌ ಟು ಸೇಮ್‌ ಇರುವುದನ್ನೂ ನೋಡಿ ಅಚ್ಚರಿಗೊಂಡಿದ್ದಾರೆ. ಹಾಗಾದರೆ ಸಿಹಿ ಮನಸ್ಸಲ್ಲಿರೋ ಪ್ರಶ್ನೆಗೆ ಉತ್ತರವಾಗ್ತಾಳಾ ಸುಬ್ಬಿ? ಈ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

ಇದೀಗ ಸೀರಿಯಲ್‌ ಟ್ವಿಸ್ಟ್‌ ನೋಡಿದ ವೀಕ್ಷಕರು, ಚೆನ್ನಗಿರೋ ಸೀರಿಯಲ್ ನ ಯಾಕೆ ಹೀಗೆ ಹಾಳು ಮಾಡ್ತಿದೀರಾ?  ಹೀಗೆ ಕಥೆ ಮಾಡ್ತಾ ಇದ್ರೆ ಸೀತಾ ಅಲ್ಲ ನೋಡೋ ಜನ ಹುಚ್ಚುರಾಗ್ತಾರೆ ಅಷ್ಟೇ..  ಹುಚ್ಚು ಬಿದ್ದು ನಾವ್ ನೋಡ್ತಿವಲ್ಲ, ನಮಿಗ್ ಹುಚ್ಚು ಅಂತೆಲ್ಲಾ ಹೇಳ್ತಿದ್ದಾರೆ ಜನ. ಅಷ್ಟೇ ಅಲ್ಲ ಅಯ್ಯೋ ದೇವಾ ಸೀತಾ ದೇವಿಗೂ ಇಷ್ಟೊಂದು ಕಷ್ಟ ಬಂದಿರ್ಲಿಲ್ಲ ಅನ್ಸತ್ತೆ.. ಈ ಸೀತೆಗೆ ಎಷ್ಟೊಂದು ಕಷ್ಟಾನಪ್ಪ.. ಎಲ್ಲಾ ಸಿನಿಮಾಗಳನ್ನು ಮಿಕ್ಸ್ ಮಾಡಿ ಒಂದು ಧಾರಾವಾಹಿ ಮಾಡ್ತಾ ಇದ್ದಾರೆ. ಚೆನ್ನಾಗಿ ಇದ್ದ ಸೀರಿಯಲ್ ಸಿಹಿ ಸಿಹಿ ಸಿಹಿ ಅಂದ್ಕೊಂಡು ವೀಕ್ಷಕರ ಪಾಲಿಗೆ ಕಹಿ ಆಗ್ತಿದೆ ಹೇಳ್ತಿದ್ದಾರೆ ವೀಕ್ಷಕರು.

Shwetha M