ಸೀತಾ ಸಾವು.. ಭಾರ್ಗವಿ ಕತೆ ಕ್ಲೋಸ್.. – ಸೀತಾರಾಮ ಕ್ಲೈಮ್ಯಾಕ್ಸ್ ರೋಚಕ

ಜೀಕನ್ನಡದಲ್ಲಿ ಪ್ರಸಾರವಾಗ್ತಿರೋ, ಜನಪ್ರಿಯ ಧಾರಾವಾಹಿಗಳಲ್ಲಿ ಸೀತಾರಾಮ ಸೀರಿಯಲ್ ಕೂಡ ಒಂದು. ಟಿಆರ್‌ಪಿ ರೇಸ್‌ನಲ್ಲೂ ಸೀರಿಯಲ್ ಮುಂದಿತ್ತು. ಆದ್ರೀಗ ಸೀರಿಯಲ್ ಏಕಾಏಕಿ ಅಂತ್ಯ ಕಾಣ್ತಿದೆ. ಇದೇ ವಾರ ಸೀರಿಯಲ್ ಎಂಡ್ ಆಗ್ತಿದ್ದು. ದಿನಕ್ಕೊಂದು ಕತೆಯನ್ನ ಹೊತ್ತು ತರಲಿದೆ ಈ ಸೀರಿಯಲ್. ಇದೀಗ ಸುಬ್ಬಿ ಜನ್ಮ ರಹಸ್ಯ ಗೊತ್ತಾಗಿದೆ. ಅಷ್ಟೇ ಅಲ್ಲ ಸೀರಿಯಲ್ ಕ್ಲೈಮ್ಯಾಕ್ಸ್ ನಲ್ಲಿ ಬಿಗ್ ಟ್ವಿಸ್ಟ್ ಕೊಡಲಾಗಿದೆ.
ಇದನ್ನೂ ಓದಿ: RCBಗೆ ಬದಲಿ ಆಟಗಾರರ ಟೆನ್ಷನ್ – LSG ಸದೆ ಬಡಿದ್ರೆ ಟಾಪ್-2 ಫಿಕ್ಸ್
ಕಿರುತೆರೆಯ ಅಂಗಳದಲ್ಲಿ ಸೀತಾ ರಾಮ ಸೀರಿಯಲ್ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಸೀತಮ್ಮ ಸಿಹಿಯ ಕತೆ ಸೀರಿಯಲ್ ಪ್ರೇಮಿಗಳಿಗೆ ಸಖತ್ ಇಷ್ಟ ಆಗಿತ್ತು. ಮೈ ನೇಮ್ ಸಿಹಿ.. Sihi S ಕ್ಯಾಪಿಟಲ್ ಅನ್ನೋ ಡೈಲಾಗ್ ಮನೆಮಾತಾಗಿತ್ತು. ಆದ್ರೀಗ ಸೀರಿಯಲ್ ಮುಕ್ತಾಯ ಆಗಲಿದೆ. ಆದ್ರೆ ಧಾರಾವಾಹಿಯು ಯಾವ ರೀತಿಯಲ್ಲಿ ಮುಕ್ತಾಯಗೊಳ್ಳಲಿದೆ ಎಂಬ ವಿಚಾರ ವೀಕ್ಷಕರಿಗೆ ಗೊತ್ತಿರಲಿಲ್ಲ. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ. ಈ ವಾರ ಸೀರಿಯಲ್ ಕತೆ ಯಾವ ರೀತಿಯಲ್ಲಿ ಇರಲಿದೆ ಎಂಬೋದನ್ನ ಜೀ ಕನ್ನಡ ವಾಹಿನಿ ಪ್ರೋಮೋ ರಿಲೀಸ್ ಮಾಡಿದೆ. ಈ ವಾರ ಸೀರಿಯಕ್ ವೆಬ್ ಸೀರಿಸ್ ತರ ದಿನಕ್ಕೊಂದು ಕತೆ ಪ್ರಸಾರವಾಗಲಿದೆ.
2023 ಜುಲೈ 17ರಂದು ಸೀತಾ ರಾಮ ಧಾರಾವಾಹಿ ತೆರೆಗೆ ಬಂದಿತ್ತು. ಮೊದಲ ಸಂಚಿಕೆಯಿಂದಲೇ ಸೀರಿಯಲ್ ವೀಕ್ಷಕರ ಮನಗೆದ್ದಿತ್ತು. ಇದ್ರಲ್ಲಿ ಅಮ್ಮ ಮಗಳ ಸ್ಟೋರಿಯೇ ಹೈಲೈಟ್ ಆಗಿತ್ತು. ಆದ್ರೆ ಏಕಾಏಕಿ ಸಿಹಿಯನ್ನ ಸಾಯಿಸಲಾಯ್ತು. ಈ ಬೆನ್ನಲ್ಲೇ ಸೀತಾ ಇನ್ನೊಬ್ಬ ಮಗಳು ಸುಬ್ಬಿ ಪಾತ್ರ ಎಂಟ್ರಿ ಕೊಟ್ಟಿತ್ತು. ಸುಬ್ಬಿ ಕೂಡ ವೀಕ್ಷಕರ ಮನಗೆಲ್ತಿದಂತೆ ಈಗ ಸೀರಿಯಲ್ ಎಂಡ್ ಆಗ್ತಿದೆ. ಮೇ 30ಕ್ಕೆ ಧಾರಾವಾಹಿಯ ಕೊನೆ ಎಪಿಸೋಡ್ ಪ್ರಸಾರ ಕಾಣಲಿದೆ. ಇದೀಗ ಸೀತಾ ರಾಮ ಸೀರಿಯಲ್ ಕ್ಲೈಮ್ಯಾಕ್ಸ್ ಏನು ಅನ್ನೋದು ರಿವೀಲ್ ಆಗಿದೆ.
ಹೌದು, ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿ ಹಾಗೂ ಸುಬ್ಬಿ ಎಂಬ ಗುಟ್ಟು ಸೀತಾ ಹಾಗೂ ರಾಮನಿಗೆ ಗೊತ್ತಿರಲಿಲ್ಲ. ಈಗ ಈ ಗುಟ್ಟು ರಟ್ಟಾಗಿದೆ. ಈ ವಿಚಾರ ಸೀತಾ ರಾಮ್ ಗೆ ಗೊತ್ತಾಗಿದೆ. ಅಷ್ಟೇ ಅಲ್ಲ ಅಶೋಕ ಹಾಗೂ ಸತ್ಯ ಭಾರ್ಗವಿ ಬಣ್ಣ ಬಯಲು ಮಾಡಿದ್ದಾರೆ. ಇನ್ನು ಮಂಗಳವಾರ ಸಂಚಿಕೆಯಲ್ಲಿ ಭಾರ್ಗವಿ ವಿರುದ್ಧ ಸೀತಾಗೆ ಬಲವಾದ ಸಾಕ್ಷಿ ಸಿಗುತ್ತೆ. ಗುರುವಾರದ ಸಂಚಿಕೆಯಲ್ಲಿ ಭಾಗರ್ವಿ ಕಳ್ಳಾಟಕ್ಕೆ ಬ್ರೇಕ್ ಬೀಳುತ್ತೆ. ಇನ್ನು ಗುರುವಾರದ ಸಂಚಿಕೆಯಲ್ಲಿ ಕರಾಳ ಸತ್ಯಗಳ ಅನಾವರಣ. ಶುಕ್ರವಾರ ಸೀರಿಯಲ್ ಕ್ಲೈಮ್ಯಾಕ್ಸ್ ಪ್ರಸಾರವಾಗಲಿದೆ. ಇಡೀ ಮನೆಯವರಿಗೆ ಭಾರ್ಗವಿಯ ನಿಜ ವಿಚಾರ ಗೊತ್ತಾಗುತ್ತದೆ. ಬಳಿಕ ಭಾರ್ಗವಿಗೆ ಶಿಕ್ಷೆಯಾಗೋ ಸಾಧ್ಯತೆ ಇದೆ.
ಇದೀಗ ಸೀರಿಯಲ್ ಅಭಿಮಾನಿಗಳು ನಾನಾ ಕಾಮೆಂಟ್ ಮಾಡ್ತಿದ್ದಾರೆ. ಕೆಲವರು ಈಗ್ಲಾದ್ರೂ ಕತೆ ಮುಗಿಸುತ್ತೀದ್ದೀರಾ ಒಳ್ಳೆಯದಾಯಿತು ಎಂದಿದ್ದಾರೆ. ಮತ್ತೆ ಕೆಲವರು ಧಾರಾವಾಹಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ, ಆರಂಭದಲ್ಲಿ ಚೆನ್ನಾಗಿತ್ತು, ಬರ್ತಾ ಬರ್ತಾ ಕಥೆಯನ್ನು ಎಳೆಯಲಾಗುತ್ತಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.