ಸೀತಮ್ಮಳಿಂದ ಸುಬ್ಬಿಯೂ ದೂರ.. ಸುಬ್ಬಲಕ್ಷ್ಮೀ ರಹಸ್ಯ ರಿವೀಲ್ – ರಾಮ್ ಗೂ ಗುಡ್ ಬೈ ಹೇಳ್ತಾಳಾ ಸೀತಾ?

ಸಿಹಿ ಸತ್ತ ಮೇಲೆ ಸೀತಾ ಮಾನಸಿಕವಾಗಿ ಕುಗ್ಗಿ ಹೋಗಿದ್ಲು.. ಗೊಂಬೆಯನ್ನೇ ಸಿಹಿ ಅಂತಾ ಹೇಳ್ತಾ ಇದ್ಲು.. ಅದ್ರ ಜೊತೆಯೇ ಆಕೆ ಕಾಲ ಕಳಿತಾ ಇದ್ಲು. ಇದನ್ನೇ ಭಾರ್ಗವಿ ಅಡ್ವಾಂಟೇಜ್ ಆಗಿ ತೆಗೆದುಕೊಂಡಿದ್ಲು.. ಆದ್ರೆ ರಾಮ್ ಸೀತಾ ಮೊದಲಿನಂತೆ ಆಗ್ಬೇಕು ಅಂತಾ ಸಿಹಿಯಂತೆ ಇರೋ ಸುಬ್ಬಿಯನ್ನ ಮನೆಗೆ ಕರ್ಕೊಂಡು ಬಂದಿದ್ದ. ಸೀತಾಗೆ ಈ ವಿಚಾರ ಗೊತ್ತಿಲ್ಲ.. ಸುಬ್ಬಿಯೇ ಸಿಹಿ ಅಂತಾ ಆಕೆಯನ್ನೇ ಅತಿಯಾಗಿ ಹಚ್ಕೊಂಡಿದ್ದಾಳೆ. ಆದ್ರೀಗ ಸೀತಾ ಸುಬ್ಬಿ ದೂರ ಆಗೋ ಕಾಲ ಹತ್ತಿವಾಗಿದೆ. ಇದೀಗ ಸೀತಾಳಿಂದ ದೂರ ಮಾಡಲು ಹೊಸ ಪ್ಲ್ಯಾನ್ ಆಗಿದೆ.
ಇದನ್ನೂ ಓದಿ: ನಿಂತು ಹೋಯ್ತು ಭಾಗ್ಯ ಬ್ಯುಸಿನೆಸ್ – ಶ್ರೇಷ್ಠಾಳಿಂದ ತಾಂಡವ್ ಲೈಫ್ ಹಾಳು
ಸೀತಾರಾಮ ಸೀರಿಯಲ್ ಈಗ ರೋಚಕ ತಿರುವು ಪಡೆದುಕೊಂಡಿದೆ. ಸಿಹಿ ಸತ್ತ ಮೇಲೆ ಸೀತಾಗೆ ಹುಚ್ಚು ಹಿಡಿದಿತ್ತು.. ಗೊಂಬೆಯನ್ನ ಹಿಡ್ಕೊಂಡು ಇದು ತನ್ನ ಮಗಳು ಅಂತಾ ಹೇಳ್ತಿದ್ಲು. ಗೊಂಬೆಯನ್ನ ಬಿಟ್ಟು ಇರ್ತಿರ್ಲಿಲ್ಲ. ಇದು ಭಾರ್ಗವಿಗೆ ಅಡ್ವಾಂಟೇಜ್ ಆಯ್ತು. ಹೀಗಾಗೇ ಆಕೆ ಸೀತಾಳನ್ನ ಹುಚ್ಚಾಸ್ಪತ್ರೆಗೆ ಸೇರಿಸಲು ಮುಂದಾಗಿದ್ಲು. ಅಷ್ಟೊತ್ತಿಗೆ ರಾಮ್ ಹಾಗೂ ಅಶೋಕ್ ಗೆ ಸಿಹಿಯಂತೆ ಕಾಣೋ ಸುಬ್ಬಿ ಸಿಕ್ಕಿದ್ಲು.. ಸುಬ್ಬಿಯೂ ಸೀತಾ ಮಗಳೇ. ಹುಟ್ಟಿದಾಗ್ಲೇ ಆಕೆ ಕಳೆದು ಹೋಗಿದ್ಲು. ರಾಮ್ ಹಾಗೂ ಅಶೋಕ್ ಗೆ ಸುಬ್ಬಿ ಸಿಗ್ತಿದ್ದಂತೆ ಆಕೆಯನ್ನ ಮನೆಗೆ ಕರ್ಕೊಂಡು ಬಂದ್ರು.. ಇದ್ರಿಂದ ಸೀತಾ ಕೂಡ ಹುಷಾಗಿದ್ದಾಳೆ. ಇದೀಗ ಸೀತಾಳಿಂದ ಸುಬ್ಬಿಯೂ ದೂರ ಆಗೋ ಟೈಮ್ ಹತ್ರ ಬಂದಿದೆ.
ಹೌದು, ಸುಬ್ಬಿ ರಾಮ್ ಮನೆಗೆ ಬಂದು ಅಡ್ಜೆಸ್ಟ್ ಆಗಿದ್ದಾಳೆ. ಸಿಹಿಯಂತೆ ಇರಲು ರಾಮ್ ಚೆನ್ನಾಗೇ ಟ್ರೈನಿಂಗ್ ಕೊಟ್ಟಿದ್ದಾನೆ. ಸಿಹಿ ಆತ್ಮ ಕೂಡ ಆಕೆಗೆ ಸಹಾಯ ಮಾಡ್ತಿದೆ. ಆದ್ರೆ ಭಾರ್ಗವಿ ಮನೆಯಲ್ಲಿರೋದು ಸಿಹಿ ಅಲ್ಲ ಸುಬ್ಬಲಕ್ಷ್ಮೀ ಅಂತಾ ಪ್ರೂವ್ ಮಾಡಲು ಏನೇನೋ ಪ್ಲ್ಯಾನ್ ಮಾಡ್ತಿದ್ದಾಳೆ. ಆದ್ರೆ ಸಿಹಿಯಿಂದಾಗಿ ಅದೆಲ್ಲಾ ಉಲ್ಟಾ ಆಗ್ತಿದೆ. ಇದೀಗ ಸೀತಾಳಿಗೆ ಸುಳ್ಳು ಹೇಳಿ ಸುಬ್ಬಿಯನ್ನ ಆಕೆಯ ಅಜ್ಜನ ಮನೆಗೆ ಕರ್ಕೊಂಡು ಹೋಗಲಾಗಿದೆ. ಸುಬ್ಬಿ ಒಂದು ರಾತ್ರಿ ಅಲ್ಲಿಯೇ ಉಳ್ಕೊಂಡಿದ್ಲು. ಆದ್ರೆ ಸುಬ್ಬಿಗೆ ಸೀತಾಳನ್ನ ಬಿಟ್ಟಿರೋಕೆ ಆಗ್ತಿಲ್ಲ. ಸೀತಾಗೆ ಸುಬ್ಬಿಯನ್ನ ಬಿಟ್ಟಿರೋಕೆ ಆಗ್ತಿಲ್ಲ.. ಇಬ್ಬರೂ ನಿದ್ದೆ ಮಾಡಿಲ್ಲ. ಇನ್ನು ಸುಬ್ಬಿ ರಾಮ್ ಮನೆಗೆ ಹೊರಡ್ಬೇಕು ಅನ್ನುವಷ್ಟರಲ್ಲಿ ಆಕೆಯ ಅಜ್ಜ ಶಾಕ್ ಕೊಟ್ಟಿದ್ದಾರೆ.
ಹೌದು, ಸುಬ್ಬಿ ರಾಮ್ ಮನೆಗೆ ಹೊರಡಲು ರೆಡಿ ಆಗಿದ್ಲು.. ಅಜ್ಜನ ಜೊತೆ ಹೊರಟಿದ್ಲು. ಆದ್ರೆ ಆಕೆಯ ಅಜ್ಜನಿಗೆ ರಾಮ್ ಮನೆಗೆ ಕಳುಹಿಸಿಕೊಡಲು ಇಷ್ಟ ಇಲ್ಲ. ಹೀಗಾಗಿ ಆತ ಸುಬ್ಬಿಯನ್ನ ಬೇರೆಯವರಿಗೆ ದತ್ತುಕೊಡಲು ಮುಂದಾಗಿದ್ದಾನೆ. ಈ ವಿಚಾರ ಈಗ ಸುಬ್ಬಿಗೆ ಗೊತ್ತಾಗಿದೆ. ಇದೀಗ ಸುಬ್ಬಿನೂ ಸೀತಾಳಿಂದ ದೂರ ಆಗ್ತಾಳಾ? ರಾಮ್ ಸುಬ್ಬಿಯನ್ನ ಉಳಿಸಿಕೊಳ್ತಾನಾ. ಸುಬ್ಬಿ ರಹಸ್ಯ ಸೀತಾಗೆ ಗೊತ್ತಾದ್ರೆ ಏನಾಗ್ಬೋದು ಅನ್ನೋ ಕುತೂಹಲ ವೀಕ್ಷಕರನ್ನ ಕಾಡ್ತಿದೆ.
ಇದೀಗ ಸೀರಿಯಲ್ ನೋಡ್ತಿರೋ ವೀಕ್ಷಕರು ನಾನಾ ಕಾಮೆಂಟ್ ಮಾಡ್ತಿದ್ದಾರೆ. ರಾಮನ ಬಳಿ ದುಡ್ಡು ಇಸ್ಕೊಂಡಿರೋ ಈ ತಾತ ಅದು ಹೇಗೆ ದತ್ತು ಕೊಡಕಾಗತ್ತೆ ಅಂತಾ ಕೆಲವರು ಕೇಳಿದ್ರೆ, ಇನ್ನೂ ಕೆಲವರು ಸೀತಾಗಾಗಿ ರಾಮನೇ ಸುಬ್ಬಿಯನ್ನ ದತ್ತು ತೆಗೆದುಕೊಳ್ಬೋದಲ್ವಾ? ಅಂತಾ ಕೇಳ್ತಿದ್ದಾರೆ. ಇನ್ನು ಕೆಲವರು ಸುಬ್ಬಿ ರಹಸ್ಯವನ್ನ ಎಷ್ಟೇ ಹೈಡ್ ಮಾಡಲು ಪ್ರಯತ್ನ ಪಟ್ರೂ, ಭಾರ್ಗವಿ ಸೀತಾ ಮುಂದೆ ಬಯಲು ಮಾಡ್ತಾಳೆ. ಆಗ ರಾಮ್ ಸೀತಾ ದೂರ ಆಗೋ ಸಾಧ್ಯತೆ ಇರುತ್ತೆ ಅಂತಾ ಕಾಮೆಂಟ್ ಮಾಡಿದ್ದಾರೆ.