ಸೀತಾ – ಶ್ಯಾಮ.. ಪಾಪ ರಾಮ್ – ಸಿಹಿ ಸೀತಮ್ಮ ಜೊತೆ ಇರ್ಬೇಕಾ ಬೇಡ್ವಾ?
ಅನ್ಯಾಯ ಆಗ್ತಿರೋದು ಯಾರಿಗೆ?

ಸೀತಾರಾಮ ಸೀರಿಯಲ್ ಸದ್ಯ ಹೊಸ ತಿರುವು ಪಡೆದುಕೊಂಡಿದೆ. ಸಿಹಿ ಜನ್ಮ ರಹಸ್ಯದತ್ತ ಕತೆ ಸಾಗ್ತಾ ಇದೆ. ಇದೀಗ ಡಾ.ಮೇಘಶ್ಯಾಮ ಹಾಗೂ ಶಾಲಿನಿ ದಂಪತಿಯ ಮಗಳು ಸಿಹಿ ಎಂದು ಗೊತ್ತಾಗಿದೆ. ಇನ್ನು ಸೀತಾಗೂ ಸಿಹಿ ಮೇಘಶ್ಯಾಮನ ಮಗಳು ಎಂಬುದು ತಿಳಿದಿದ್ದು, ಆತಂಕ ಶುರುವಾಗಿದೆ. ಇದೀಗ ಬಾಡಿಗೆ ತಾಯ್ತನದ ಒಪ್ಪಂದಂತೆ ಸೀತಾ ಸಿಹಿಯನ್ನು ಅವರ ತಂದೆ ತಾಯಿಗೆ ಬಿಟ್ಟುಕೊಡಬೇಕಾ ಎಂಬ ಪ್ರಶ್ನೆ ಎಲ್ಲರನ್ನ ಕಾಡುತ್ತಿದೆ. ಆದ್ರೆ ಇತ್ತ ಸೀರಿಯಲ್ ಟೀಮ್ ಗೆ ವೀಕ್ಷಕರು ಕ್ಲಾಸ್ ತಗೋತಿದ್ದಾರೆ.. ಸೀತಾಗೆ ಅನ್ಯಾಯ ಮಾಡೋದು ಸರಿಯಲ್ಲ.. ಸಿಹಿಯನ್ನ ಹೀಗೆ ತೋರಿಸ್ಬೇಡಿ ಅಂತಾ ಕಾಮೆಂಟ್ ಮಾಡ್ತಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: BCCI ಎಡವಟ್ಟಿಗೆ ಫುಲ್ ಟ್ರೋಲ್ – AFG Vs NZ.. ಮ್ಯಾಚ್ ನಡೆಯಲ್ವಾ?
ಸೀತಾರಾಮ ಸೀರಿಯಲ್ ನಲ್ಲಿ ಈಗ ಸಿಹಿ ಯಾರಿಗೆ ಸೇರಬೇಕು ಎಂಬುದು ಒದ್ದಾಟ ಶುರುವಾಗಿದೆ. ಒಂದೆಡೆ ಡಾ.ಅನಂತಲಕ್ಷ್ಮಿ ಕರೆ ಮಾಡಿ ಡಾ. ಮೇಘಶ್ಯಾಮನಿಗೆ ನಿಮ್ಮ ಮಗು ಜೀವಂತವಾಗಿದೆ ಎಂಬ ಸತ್ಯವನ್ನು ಹೇಳಿದ್ದಾಳೆ. ಈ ಬೆನ್ನಲ್ಲೇ ಮೇಘಶ್ಯಾಮ್ ಮಗು ಹುಡುಕಲು ಮುಂದಾಗಿದ್ದಾನೆ. ಇದಕ್ಕಾಗಿ ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾನೆ. ಅಷ್ಟೇ ಅಲ್ಲ ಇದಕ್ಕೆ ರಾಮನ ಸಹಾಯ ಕೂಡ ಕೇಳಿದ್ದಾನೆ.. ರಾಮ ಕೂಡ ಮಗುವನ್ನ ಹುಡುಕಲು ಹೆಲ್ಪ್ ಮಾಡ್ತೇನೆ ಅಂತ ಭರವಸೆ ನೀಡಿದ್ದಾನೆ. ಇದೀಗ ಇದಕ್ಕೆ ಸೂಕ್ತ ವೇದಿಕೆ ಆಗುವಂತೆ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಡಾ. ಮೇಘಶ್ಯಾಮ ಮತ್ತು ಶಾಲಿನಿ ಇಬ್ಬರೂ ದೇಸಾಯಿ ಮನೆಗೆ ಬಂದಿದ್ದಾರೆ. ಅಲ್ಲಿ ಸೀತಾ, ರಾಮ ಹಾಗೂ ಮಗಳು ಸಿಹಿಯನ್ನು ನೋಡಿದ್ದಾರೆ. ಸಿಹಿಯನ್ನು ತಮ್ಮ ಮಗಳು ಎಂಬಂತೆ ಮುದ್ದಾಡುತ್ತಾ, ಮೇಘಶ್ಯಾಮ ತುಂಬಾ ಆತ್ಮೀಯವಾಗಿ ಸಮಯ ಕಳೆಯುತ್ತಿದ್ದಾನೆ. ಇನ್ನು ಮೇಘಶ್ಯಾಮ ಮತ್ತು ಸಿಹಿ ಇಬ್ಬರ ಅಭಿರುಚಿಗಳು ಒಂದೇ ಎಂಬುದು ಇಲ್ಲಿ ಕಂಡುಬರುತ್ತಿದೆ. ಈ ಹೋಲಿಕೆಗಳಿಂದ ವೀಕ್ಷಕರಿಗೆ ಸಿಹಿ ಅವರ ಮಗಳು ಎಂಬುದು ತಿಳಿದರೂ, ಧಾರಾವಾಹಿಯಲ್ಲಿ ಸಂಬಂಧಪಟ್ಟವರಿಗೆ ಇನ್ನೂ ಸತ್ಯಾಂಶ ತಿಳಿಯಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತೆ ಅನ್ನೋದಂತೂ ಸತ್ಯ..
ಇನ್ನು ಸೀತಾ ಬಾಡಿಗೆ ತಾಯಿ.. ಸಿಹಿಗೆ ಸತ್ಯ ಗೊತ್ತಾದ್ರೆ ಮುಂದೇನು ಮಾಡ್ತಾಳೆ ಅನ್ನೋ ಭಯ ಸದಾ ಕಾಡ್ತಾ ಇದೆ. ಹೀಗಾಗಿ ಆಕೆ ಸತ್ಯವನ್ನ ಇಷ್ಟು ವರ್ಷಗಳ ಕಾಲ ಮುಚ್ಚಿಟ್ಟಿದ್ದಳು. ಮಗುವನ್ನು ಪೋಷಕರು ಪಡೆಯಲಿಲ್ಲ ಅಂತ ಸೀತಾಳೇ ಕಷ್ಟಪಟ್ಟು ಸಿಹಿಯನ್ನ ಸಾಕಿದ್ದಾಳೆ. ಸಮಾಜದಲ್ಲಿ ಆಕೆಗೆ ಎಷ್ಟೇ ವಿರೋಧಗಳು ಬಂದಿದ್ದರೂ ಅವುಗಳನ್ನು ಲೆಕ್ಕಿಸಲಿಲ್ಲ. ಇದೀಗ ಸಿಹಿಯ ನಿಜವಾದ ತಂದೆ-ತಾಯಿ ಬಂದಿದ್ದು, ಅವರಿಗೆ ಮಗುವನ್ನು ಬಿಟ್ಟುಕೊಡಬೇಕಾ ಎಂಬ ಆತಂಕದಲ್ಲೇ ಸೀತಾ ಕಾಲ ಕಳಿತಾ ಇದ್ದಾಳೆ. ಇದೀಗ ಸಿಹಿ ಮೇಘಶ್ಯಾಮ್ ಜೊತೆ ಕ್ಲೋಸ್ ಆಗಿರೋದು ನೋಡಿ ಸೀತಾಗೆ ತಲೆನೋವು ಹೆಚ್ಚಾಗಿದೆ. ಸಿಹಿ ವರ್ತನೆ ನೋಡಿ ಶಾಕ್ ಆಗಿದ್ದಾಳೆ.. ಸಿಹಿಗೆ ಮಲ್ಲಿಗೆ ಮುಡಿಸ್ತೇನೆ ಬಾ ಅಂತಾ ಸೀತಾ ಹೇಳಿದಾಗ, ಆಕೆ ಶಾಲಿನಿ ಕೈಯಲ್ಲೇ ಹೂ ಮುಡಿಸಿಕೊಂಡಿದ್ದಾಳೆ. ಇದೀಗ ಸೀತಾ ಮತ್ತಷ್ಟು ಆತಂಕಗೊಂಡಿದ್ದಾಳೆ. ಮುದ್ದಿನ ಮಗಳು ಎಲ್ಲಿ ಕೈತಪ್ಪಿ ಹೋಗ್ತಾಳೆ ಅಂತಾ ಮರುಗುತ್ತಿದ್ದಾಳೆ. ಒಟ್ಟಾರೆ ಸಿಹಿ ಸೀತಾ ಮಡಿಲಲ್ಲಿಯೇ ಇರಬೇಕಾ ಅಥವಾ ಡಾ.ಮೇಘಶ್ಯಾಮ ದಂಪತಿ ಮಡಿಲಿಗೆ ಸೇರಬೇಕಾ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಮತ್ತೊಂದ್ಕಡೆ ವೀಕ್ಷಕರು ಸೀರಿಯಲ್ ಟೀಮ್ ವಿರುದ್ದ ಅಸಮಧಾನ ಹೊರ ಹಾಕಿದ್ದಾರೆ. ಸಿಹಿಯದ್ದು ಓವರ್ ಆಕ್ಟಿಂಗ್.. ಪ್ರತಿ ಸಲ ಯಾಕೆ ಅವಳನ್ನ ಓವರ್ ಸ್ಮಾರ್ಟ್ ಅನ್ನೋ ತರ ಬಿಂಬಿಸುತ್ತಿದ್ದೀರಾ? ಈ ಏಜ್ ನ ಮಕ್ಕಳು ಹೀಗೆ ಆಡಲ್ಲ ಅಂತಾ ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಸಿಹಿ ಸೀತಾ ಬಳಿಯೇ ಇರ್ಬೇಕು.. ಪೋಷಕರ ಬಳಿ ಹೋಗೋದು ಬೇಡ. ಸದಾ ಸೀತಮ್ಮ ಸೀತಮ್ಮ ಅಂತಾ ಹೇಳ್ತಿದ್ದ ಸಿಹಿಗೆ ಇದ್ದಕ್ಕಿಂದ್ದಂತೆ ಶಾಲಿನಿ ಮೇಲೆ ಹೇಗೆ ಲವ್ ಆಯ್ತು ಅಂತಾ ಕೇಳ್ತಿದ್ದಾರೆ. ಮತ್ತೆ ಕೆಲವರು ಇಷ್ಟು ವರ್ಷ ಕಷ್ಟ ಪಟ್ಟು. ತನ್ನ ಹೆಣ್ತನಾನ ಬದಿಗಿಟ್ಟು. ಮದುವೇನೇ ಆಗದೇ ಒಂದು ಮಗುವಿನ ತಾಯಿಯಾಗಿ. ತನ್ನ ಆಸೆ ಆಕಾಂಕ್ಷೆಗಳನ್ನೂ. ಲೆಕ್ಕಕ್ಕಿಡದೇ. ಮಗಳಿಗೋಸ್ಕರಾನೇ ಬದುಕುತ್ತಿರುವ ಸೀತಾಳಿಗೆ ಹೀಗೆ ಅನ್ಯಾಯ ಮಾಡುವುದು ಸರಿಯಿಲ್ಲ ಅಂತಾ ಹೇಳಿದ್ದಾರೆ.
ಒಟ್ಟಾರೆ ಸೀರಿಯಲ್ ಪ್ರೇಮಿಗಳು ಸೀತಾರಾಮ ಕತೆ ಬಗ್ಗೆ ಸಿಕ್ಕಾಪಟ್ಟೆ ತಲೆ ಕೆಡಿಸ್ಕೊಂಡಿದ್ದಾರೆ. ಸೀರಿಯಲ್ ನೋಡಿ ನೋಡಿ ಸೀರಿಯಲ್ ಡೈರೆಕ್ಟರ್‌ಗೆ ಕತೆ ಹೀಗೆ ಸಾಗ್ಲಿ ಅಂತಾ ಸಜೆಷನ್ ಕೊಡ್ತಿದ್ದಾರೆ..