ಸಿಹಿ ಜನ್ಮ ರಹಸ್ಯ ರಿವೀಲ್‌ – ತಂದೆ ಬಳಿ ಸೀತಾ ಮಗಳು?
ಪ್ರಿಯಾ ಪಾತ್ರಕ್ಕೆ ಹೊಸ ನಟಿ?  

ಸಿಹಿ ಜನ್ಮ ರಹಸ್ಯ ರಿವೀಲ್‌ – ತಂದೆ ಬಳಿ ಸೀತಾ ಮಗಳು?ಪ್ರಿಯಾ ಪಾತ್ರಕ್ಕೆ ಹೊಸ ನಟಿ?  

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಸೀತಾರಾಮ ಸೀರಿಯಲ್‌ ಕತೆ ರೋಚಕ ತಿರುವು ಪಡೆದುಕೊಂಡಿದೆ. ಧಾರಾವಾಹಿಯಲ್ಲಿ ಹತ್ತು ಹಲವು ಪ್ರಶ್ನೆಗಳೇ ಇತ್ತು. ಸಿಹಿ ಅಪ್ಪ ಯಾರು ಎನ್ನೋದು ದೊಡ್ಡ ಪ್ರಶ್ನೆ ಆಗಿತ್ತು. ಡಾ ಅನಂತಲಕ್ಷ್ಮೀಗೂ ಸೀತಾಗೂ ಏನು ಸಂಬಂಧ? ಮೇಘಶ್ಯಾಮ್ ಪಾತ್ರ ಯಾಕೆ ಪರಿಚಯ ಆಯ್ತು? ಹೀಗೆ ಸಾಕಷ್ಟು ಪ್ರಶ್ನೆಗಳು ಇದ್ದವು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಇಷ್ಟುದಿನಗಳ ಕಾಲ ಕಾಡುತ್ತಿದ್ದ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ. ಹಾಗಾದ್ರೆ ಸೀರಿಯಲ್‌ನಲ್ಲಿ ಡೈರೆಕ್ಟರ್‌ ಕೊಟ್ಟ ಟ್ವಿಸ್ಟ್‌ ಏನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ದರ್ಶನ್ ಇಷ್ಟ..  ಮದುವೆ ಆಗ್ತೀನಿ! – ಬಳ್ಳಾರಿ ಜೈಲ ಬಳಿ ಮಹಿಳೆ ಹೈಡ್ರಾಮಾ

‘ಸೀತಾರಾಮ’ ಧಾರಾವಾಹಿ ಪ್ರಶ್ನೆಗಳಿಂದಲೇ ಕೂಡಿತ್ತು.. ಸೀತಾಗೆ ಈ ಹಿಂದೆ  ಮದುವೆ ಆಗಿದ್ಯಾ? ಸೀತಾ ಗಂಡ ಯಾರು? ಸಿಹಿ ಸೀತಾಳ ಮಗಳೇ? ಸಿಹಿ ವಿಚಾರದಲ್ಲಿ ಸೀತಾ ಏನು ಮುಚ್ಚಿಟ್ಟಿದ್ದಾಳೆ? ಹೀಗೆ ಹತ್ತು ಹಲವು ಪ್ರಶ್ನೆಗಳು ವೀಕ್ಷಕರನ್ನು ಕಾಡ್ತಾ ಇತ್ತು. ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.. ಸಿಹಿಯ ಜನ್ಮ ರಹಸ್ಯ ರಿವೀಲ್‌ ಆಗಿದೆ.

ಹೌದು, ವೀಕ್ಷಕರನ್ನ ಕಾಡ್ತಾ ಇದ್ದ ದೊಡ್ಡ ಪ್ರಶ್ನೆ ಅಂದ್ರೆ ಸಿಹಿಯ ಜನ್ಮ ರಹಸ್ಯ.. ಸಿಹಿ ಯಾರ ಮಗಳೆಂಬ ವಿಚಾರ ರೀವಿಲ್‌ ಆಗಿದೆ.  ಸೀತಾ ತಂದೆಗೆ ಅನಾರೋಗ್ಯ ಆಗಿತ್ತು. ಹೀಗಾಗಿ ಅವಳಿಗೆ ಹಣದ ಅವಶ್ಯಕತೆ ಇತ್ತು. ಹಣಕ್ಕೋಸ್ಕರ ಅವಳು ‘ಸರೋಗಸಿ ಮದರ್’ ಆದಳು. ಸರೋಗಸಿ ಅಂದರೆ ಬೇರೆಯವರ ಮಗುವನ್ನು ಬಾಡಿಗೆ ತಾಯಿಯ ಗರ್ಭದಲ್ಲಿ ಇಟ್ಟು ಬೆಳೆಸುವುದು. ಈ ಮೂಲಕ ಸಿಹಿ ಹುಟ್ಟಿದ್ದಾಳೆ ಅಂತ ಸೀರಿಯಲ್‌ ನಲ್ಲಿ ತೋರಿಸಲಾಗಿದೆ.

ಇನ್ನು ಸಿಹಿ ಯಾರ ಮಗಳು ಅನ್ನೋ ವಿಚಾರ ಕೂಡ ಗೊತ್ತಾಗಿದೆ. ಮೇಘಶ್ಯಾಮ್ ಹಾಗೂ ಚಾಂದಿನಿಯ ಮಗು ಸೀತಾ ಹೊಟ್ಟೆಯಲ್ಲಿ ಬೆಳೆದಿತ್ತು. ಹೌದು, ಮೇಘಶ್ಯಾಮ್‌ಗೆ ಮಕ್ಕಳು ಅಂದ್ರೆ ತುಂಬ ಇಷ್ಟ. ಆದರೆ ಅವನ ಹೆಂಡತಿ ಶಾಲಿನಿಗೆ ಮಗು ಅಂದ್ರೆ ಇಷ್ಟವೇ ಇಲ್ಲ. ಹೀಗಾಗಿ ಇವರು ಸರೋಗಸಿ ಮೊರೆ ಹೋಗಿದ್ದರು. ಸೀತಾಗೆ ಡೆಲಿವರಿ ಆದ ಬಳಿಕ ಮೇಘಶ್ಯಾಮ್ ಕುಟುಂಬದವರು ಬಂದು ಆ ಮಗುವನ್ನು ತಗೊಂಡು ಹೋಗುತ್ತಾರೆ ಅಂತಾ ಹೇಳಲಾಗಿತ್ತು. ಆಮೇಲೆ ಏನಾಯ್ತೋ ಏನೋ ಮೇಘಶ್ಯಾಮ್ ಆ ಮಗುವನ್ನು ಮನೆಗೆ ಕರೆತರಲಿಲ್ಲ. ಹೀಗಾಗಿ ಸೀತಾ ಅತಂತ್ರ ಸ್ಥಿತಿಯಲ್ಲಿ ಸಿಲುಕುತ್ತಾಳೆ. ಮಗುವನ್ನು ಅನಾಥಾಶ್ರಮಕ್ಕೆ ಬಿಡಲು ಇಷ್ಟವಿಲ್ಲದೆ. ಸಿಹಿಯನ್ನ ತನ್ನ ಮಗಳು ಅಂತಾ ಬೆಳೆಸಿದ್ದಾಳೆ. ಈ ಸತ್ಯ ಅನಂತಲಕ್ಷ್ಮೀ ವೈದ್ಯರಿಗೆ, ಸೀತಾಗೆ ಬಿಟ್ಟು ಬೇರೆ ಯಾರಿಗೂ ಗೊತ್ತಿರಲಿಲ್ಲ. ಈಗ ಅನಂತಲಕ್ಷ್ಮೀ ಬಳಿ ಸೀತಾ ಈ ವಿಚಾರವನ್ನು ನೆನಪು ಮಾಡಿಕೊಂಡಿದ್ದಾಳೆ. “ದಯವಿಟ್ಟು ಈ ಸತ್ಯವನ್ನು ಯಾರಿಗೂ ಹೇಳಬೇಡಿ. ಈ ವಿಷಯ ಸಿಹಿಗೆ ಗೊತ್ತಾದರೆ ಅವಳಿಗೆ ಬೇಸರ ಆಗುತ್ತದೆ” ಎಂದು ಹೇಳೋ ಮೂಲಕ ಸಿಹಿ ಜನ್ಮ ರಹಸ್ಯ ರಿವೀಲ್‌ ಮಾಡಿದ್ದಾಳೆ.

ಇನ್ನು ಸಿಹಿ ಹಾಗೂ ಮೇಘಶ್ಯಾಮ್‌ ಮಧ್ಯೆ ಒಳ್ಳೆ ಬಾಂಧವ್ಯ ಬೆಸೆದಿದೆ. ಸಿಹಿಯನ್ನು ಹಡೆದವಳು ಸೀತಾ ಅಂತ ಮೇಘಶ್ಯಾಮ್‌ಗಾಗಲೀ, ಮೇಘಶ್ಯಾಮ್ ಮಗಳು ಸಿಹಿ ಅಂತ ಸೀತಾಗಾಗಲೀ ಗೊತ್ತಿಲ್ಲ. ಬೋರ್ಡಿಂಗ್ ಸ್ಕೂಲ್‌ನಲ್ಲಿ ಸಿಹಿಯನ್ನು ಭೇಟಿ ಆಗಿದ್ದ ಮೇಘಶ್ಯಾಮ್‌ಗೆ ಈಗ ಸಿಹಿ, ರಾಮ್ ಮಗಳು ಅನ್ನೋದು ಗೊತ್ತಾಗಿದೆ. ಇದರ ಜೊತೆಗೆ ಅವನಿಗೆ ಸರೋಗಸಿ ಮೂಲಕ ಪಡೆದ ಮಗು ನೆನಪಾಗಿದೆ. ಅದನ್ನು ಅವನು ಅನಂತಲಕ್ಷ್ಮೀ ಬಳಿ ಅವರು ವಿಚಾರಿಸಿದ್ದಾಗ “ನಿಮ್ಮ ಮಗು ಆರೋಗ್ಯವಾಗಿ ಎಲ್ಲಿ ಇರಬೇಕೋ ಅಲ್ಲಿ ಚೆನ್ನಾಗಿ ಇದೆ” ಎಂದು ಹೇಳಿದ್ದಾರೆ.

ಈಗ ಮೇಘಶ್ಯಾಮ್‌ಗೆ ಆ ಮಗು ನೋಡಬೇಕು, ನನ್ನ ಲೈಫ್‌ನಲ್ಲಿ ಆ ಮಗು ಇರಬೇಕು ಎನ್ನುವ ಆಸೆ ಆಗಿದೆ. ಆ ಮಗು ಸಿಹಿ ಅಂತ ಯಾವಾಗ ಗೊತ್ತಾಗತ್ತೋ ಏನೋ.. ಒಟ್ಟಿನಲ್ಲಿ ಸಿಹಿ ಜನ್ಮ ರಹಸ್ಯ ರಿವೀಲ್‌ ಆಗಿದೆ. ಮುಂದೆ ಸೀತಾ ಮಡಿಲಲ್ಲೇ ಸಿಹಿ ಇರ್ತಾಳಾ? ಅಥವಾ ತನ್ನ ತಂದೆ ಮೇಘಶ್ಯಾಮ್‌ ಅನ್ನೋ ವಿಚಾರ ಸಿಹಿಗೆ ಗೊತ್ತಾಗುತ್ತಾ ಅಂತಾ ಕಾದುನೋಡ್ಬೇಕಿದೆ.

ಇನ್ನು ಇನ್ನೊಂದ್ಕಡೆ ಪ್ರಿಯಾಗೆ ಕ್ಯಾನ್ಸರ್‌ ಇರೋದು ಗೊತ್ತಾಗಿದೆ. ಈ ವಿಚಾರ ಸೀತಾಗೆ ಆಗ್ಲೀ, ರಾಮ್ ಗೆ ಆಗ್ಲಿ ಗೊತ್ತಿಲ್ಲ.. ಜೀವದ ಗೆಳೆಯನಿಂದ ಈ ವಿಚಾರನ ಮುಚ್ಚಿದ್ದಾನೆ ಅಶೋಕ್..‌ ಮತ್ತೊಂದ್ಕಡೆ ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ ಕೂಡ ಅನಾರೋಗ್ಯದಿಂದಾಗಿ ಶೂಟಿಂಗ್‌ ನಿಂದ ದೂರ ಉಳಿದಿದ್ದಾರೆ. ಸೀರಿಯಲ್‌ ನಲ್ಲೂ ಆ ಪಾತ್ರವನ್ನ ತೋರಿಸಲಾಗ್ತಿಲ್ಲ.. ಮೇಘನಾ ಸೀರಿಯಲ್‌ನಲ್ಲೇ ಮುಂದುವರಿತಾ ಅಥವಾ ಮೇಲೆ ನಟಿ ಎಂಟ್ರಿ ಕೊಡ್ತಾರಾ ಅಂತ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

Shwetha M