ಸೀತಾಗೆ ಸೀರೆ ಸೆನ್ಸ್ ಇಲ್ವಾ? – ಸಿಹಿ, ಸೀತಾ ಮೇಲೆ ವೀಕ್ಷಕರು ಸಿಟ್ಟಾಗಿದ್ದೇಕೆ?
ಸೀತಾರಾಮ ಸೀರಿಯಲ್ ಇದೀಗ ಕುತೂಹಲದ ಘಟ್ಟ ತಲುಪಿದೆ. ಇದೀಗ ಸೀತಾರಾಮ ಸೀರಿಯಲ್ ನಲ್ಲಿ ಸೀತಾ ಮತ್ತು ರಾಮನ ಮದುವೆ ಸಂಭ್ರಮ ನಡಿತಾ ಇದೆ.. ಹೆಣ್ಣು ಕೇಳುವ ಸಲುವಾಗಿ ಆಗರ್ಭ ಶ್ರೀಮಂತ ದೇಸಾಯಿ ಕುಟುಂಬ ಸೀತಾಳ ಪುಟ್ಟ ಮನೆಗೆ ಬಂದಿದೆ.. ಇದು ಸಿಹಿಯ ಖುಷಿಯನ್ನು ಹೆಚ್ಚಿಸುವಂತೆ ಮಾಡಿದೆ.. ತಾಂಬೂಲ ಬದಲಾಯಿಸುವಾಗಲೂ ಸಿಹಿಯೇ ಸೀತಾಳ ಮನೆಯವರ ಪರವಾಗಿ ತಾತ ಸೂರಿಗೆ ತಾಂಬೂಲ ನೀಡುತ್ತಾಳೆ.. ಇದೆಲ್ಲಾ ಸೀನ್ ತುಂಬಾನೆ ಅಚ್ಚುಕಟ್ಟಾಗಿ ಮೂಡಿಬಂದಿದೆ.. ಆದ್ರೆ ಈಗ ಸೀರಿಯಲ್ ಫ್ಯಾನ್ಸ್ ಸೀತಾ ಸೀರೆ ಬಗ್ಗೆ ಚರ್ಚೆ ನಡೆಸ್ತಾ ಇದ್ದಾರೆ.. ನಟಿ ವೈಷ್ಣವಿ ಡ್ರೆಸ್ ಗೆ ನಿರ್ಮಾಪಕರು ದುಡ್ದು ಕೊಟ್ಟಿಲ್ವಾ ಅಂತಾ ವೀಕ್ಷಕರು ಕೇಳ್ತಾ ಇದ್ದಾರೆ..
ಇದನ್ನೂ ಓದಿ: ಅಯ್ಯೋ ಪೂನಂ.. ಬಟ್ಟೆ ಎಲ್ಲಮ್ಮ!? – ಬೆತ್ತಲೆ ಫೋಟೋ ಶೇರ್ ಮಾಡಿದ ಬಾಲಿವುಡ್ ನಟಿ!
ಸೀತಾರಾಮ ಸೀರಿಯಲ್ ನಲ್ಲಿ ಎಲ್ಲಾ ವಿಘ್ನಗಳನ್ನು ದಾಟಿ ರಾಮ ಮತ್ತು ಸೀತಾಳ ಮದುವೆಗೆ ತಯಾರಿ ಶುರುವಾಗಿದೆ.. ಮಗು ಇರುವ ಸೀತಾಳನ್ನೇ ದೇಸಾಯಿ ಕುಟುಂಬ, ಇವಳೇ ನಮ್ಮ ಸೊಸೆ ಅಂತಾ ಒಪ್ಪಿಕೊಂಡಿದೆ.. ದೇಸಾಯಿ ಕುಟುಂಬ ಮಧ್ಯಮ ವರ್ಗದ ಶಾಂತಮ್ಮನ ವಠಾರಕ್ಕೆ ಬಂದಿದೆ. ಪುಟಾಣಿ ಸಿಹಿಯ ಓಡಾಟ ಈ ಪುಟ್ಟ ಕಾರ್ಯಕ್ರಮದ ಸಂಭ್ರಮ ಹೆಚ್ಚಿಸಿದೆ. ತಾಂಬೂಲ ಬದಲಾಯಿಸುವಾಗ ಸಿಹಿ ತಾನೇ ದೇವರ ಮನೆಯಿಂದ ತಾಂಬೂಲದ ತಟ್ಟೆ ತಂದು ಸೂರಿ ತಾತ ಅಂದರೆ ಸೂರ್ಯಪ್ರಕಾಶ್ ದೇಸಾಯಿ ಮುಂದಿಡುತ್ತಾಳೆ. ಸೀರಿಯಲ್ ಟೀಂ ಅಂದುಕೊಂಡಂತೆ ಎಲ್ಲಾ ಸೀನ್ ಕೂಡ ಅಚ್ಚುಕಟ್ಟಾಗಿ ಮೂಡಿಬಂದಿದೆ.. ಆದರೆ ಎಡವಟ್ಟು ಆಗಿದ್ದು ಸೀತಾ ಅಪ್ಪೀಯರೆನ್ಸ್‌ನಲ್ಲಿ. ಹೆಣ್ಣು ನೋಡಲು ಬರುವಾಗ ನಾಚುತ್ತಾ ತಲೆ ತಗ್ಗಿಸಿ ಸಾಂಪ್ರದಾಯಿಕ ಹೆಣ್ಣಿನಂತೆ ಬರೋ ಸೀತಾಳ ಅಪ್ಪೀಯರೆನ್ಸ್ ಏನೋ ವೀಕ್ಷಕರಿಗೆ ಇಷ್ಟ ಆಗಿದೆ. ಆದರೆ ಎಡವಟ್ಟಾದದ್ದು ಆಕೆ ಉಟ್ಟಿರುವ ಸೀರೆಯಲ್ಲಿ..
ಹೌದು, ಸೀತಾ ಉಟ್ಟಿದ್ದ ಕಡುನೀಲಿ ಬಣ್ಣದ ಮೇಲೆ ಬೆಳ್ಳಿ ಬಣ್ಣದ ದೊಡ್ಡ ಹೂಗಳ ಡಿಸೈನ್ ಇರುವ ಈ ಸೀರೆ ವೀಕ್ಷಕರಿಗೆ ಸ್ವಲ್ಪವೂ ಇಷ್ಟವಾಗಿಲ್ಲ. ಇದಕ್ಕೆ ಕಾಂಬಿನೇಶನ್ ಆಗಿ ಗೋಲ್ಡನ್ ಕಲರ್ ಬ್ಲೌಸ್ ತೊಟ್ಟಿದ್ದನ್ನೂ ‘ಥೂ, ಸ್ವಲ್ಪನೂ ಚೆನ್ನಾಗಿಲ್ಲ’ ಅಂತ ವೀಕ್ಷಕರು ಹಿಗ್ಗಾಮಗ್ಗಾ ಝಾಡಿಸುತ್ತಿದ್ದಾರೆ. ಸೀತಾ ಸೀರೆ ಸೆಲೆಕ್ಷನ್ನೇ ಸರಿಯಾಗಿಲ್ಲ, ಬ್ಲೌಸ್ ಖರಾಬಾಗಿದೆ. ಸೀತಾ ಈ ಲುಕ್‌ನಲ್ಲಿ ಅಜ್ಜಿ ಥರ ಕಾಣ್ತಿದ್ದಾಳೆ. ಸೀತಾಗೆ ಸ್ವಲ್ಪನೂ ಡೆಸ್ ಸೆನ್ಸ್ ಇಲ್ಲ.. ಸೀರಿಯಲ್ ನಟಿಯಾಗಿ ಕಲರ್ ಕಾಂಬಿನೇಷನ್ ಕೂಡ ಗೊತ್ತಾಗಲ್ವಾ? ಹೀಗೆ ನೂರಾರು ಕಾಮೆಂಟ್‌ಗಳನ್ನು ವೀಕ್ಷಕರು ಹಾಕ್ತಾ ಇದ್ದಾರೆ..
ಇನ್ನೊಂದು ಕಡೆ ದೇಸಾಯಿ ಫ್ಯಾಮಿಲಿ ಹೊಸ ಸೀರೆ ತಂದು, ಈ ಸೀರೆ ಉಟ್ಕೊ ಅಂದಾಗ ಸೀತಾ ನಿರಾಕರಿಸುತ್ತಾಳೆ. ಅವರೆಲ್ಲ ಅನುಮಾನದಲ್ಲಿ ಸೀತಾಳ ಕಡೆ ನೋಡಿದಾಗ ಆಕೆ ಹಿಂಜರಿಯುತ್ತಾ, ‘ಈ ಸೀರೆ ರಾಮನೇ ಕೊಡಿಸಿದ್ದು’ ಅಂತ ಹೇಳ್ತಾಳೆ. ಸರಿಹೋಯ್ತು, ಅಲ್ಲಿಗೆ ರಾಮನ ಟೇಸ್ಟ್ ಚೆನ್ನಾಗಿಲ್ಲ ಅಂದರೆ ಸೀತಾನೂ ಚೆನ್ನಾಗಿಲ್ಲ ಅಂದಂಗಾಗುತ್ತೆ. ಇರಲಿ.. ಇಷ್ಟಕ್ಕೇ ಮುಗಿದಿದ್ದರೆ ಪರವಾಗಿರಲಿಲ್ಲ. ರಾಮನ ಚಿಕ್ಕ ಚಿಕ್ಕಿ ಇದೇ ಸಮಯ ಅಂತ ರಾಮನ ಸೀರೆ ಸೆಲೆಕ್ಷನ್ ಅನ್ನು ಹಾಡಿ ಹೊಗಳುತ್ತಾಳೆ. ಈ ಸೀನ್ ಕೂಡ ಸಿಕ್ಕಾಪಟ್ಟೆ ಆಭಾಸ ಸೃಷ್ಟಿಸಿದೆ.
ವೀಕ್ಷಕರು ಸೀರಿಯಲ್‌ನ ಕಥೆಗೆ ಕೊಡುವಷ್ಟೇ ಮಹತ್ವವನ್ನು ಕಲಾವಿದರ ಉಡುಗೆಗೂ ನೀಡುತ್ತಾರೆ ಅನ್ನೋದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಈ ಹಿಂದೆ ‘ಲಕ್ಷ್ಮೀ ನಿವಾಸ’ ಸೀರಿಯಲ್‌ನ ಜಾನ್ವಿಗೂ ಈ ವಿಚಾರದಲ್ಲಿ ಸಿಕ್ಕಾಪಟ್ಟೆ ಝಾಡಿಸಿದ್ರು. ‘ನಿಂಗೆ ಬ್ಲೌಸ್ ಹೊಲಿಸಲಿಕ್ಕೂ ನಿರ್ಮಾಪಕರು ದುಡ್ಡು ಕೊಟ್ಟಿಲ್ವೇನಮ್ಮಾ’ ಎಂದೆಲ್ಲ ಕಾಲೆಳೆದಿದ್ದರು. ಅಷ್ಟೇ ಅಲ್ಲದೇ ಅಮೃತ ಧಾರೆ ಸೀರಿಯಲ್ ನಲ್ಲೂ ಶಕುಂತಲಾ ಉಲ್ಟಾ ಸೀರೇ ಉಟ್ಟಿದ್ದಳು.. ಇದೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.. ಇದೀಗ ಸೀತಾ ಸರದಿ. ಆಕೆಯ ಸೀರೆಯ ಡಿಸೈನ್, ಅದಕ್ಕೆ ಕಾಂಬಿನೇಶನ್ ಆಗಿ ತೊಟ್ಟಿರುವ ಬ್ಲೌಸ್ ಎಲ್ಲವೂ ವೀಕ್ಷಕರ ವಿರೋಧಕ್ಕೆ ಕಾರಣವಾಗಿದೆ. ಸೀತಾಳ ಹೇರ್‌ಸ್ಟೈಲ್ ಬಗೆಗೂ ಸಾಕಷ್ಟು ಕಾಮೆಂಟ್ ಹರಿದುಬರುತ್ತಿದೆ.
ಇನ್ನೂ ಸಿಹಿ ಪಾತ್ರದ ಬಗ್ಗೆಯೂ ವೀಕ್ಷಕರು ಸಿಕ್ಕಾಪಟ್ಟೆ ಕಾಮೆಂಟ್ ಮಾಡುತ್ತಿದ್ದಾರೆ.. ಸಿಹಿ ಒಳ್ಳೆ ಆಂಟಿ ತರ ಆಡ್ತಿದ್ದಾಳೆ ಅಂತಾ ವೀಕ್ಷಕರು ಹೇಳ್ತಿದ್ದಾರೆ. ರಿಯಲ್ ಲೈಫ್ ನಲ್ಲಿ ಸಿಹಿ ವಯಸ್ಸಿನ ಮಕ್ಕಳು ಯಾವಾಗಲೂ ಆಟದಲ್ಲೇ ಬ್ಯೂಸಿಯಾಗಿರ್ತಾರೆ.. ಆದ್ರೆ ಸಿಹಿ ಮನೆಯ ಹಿರಿಯರಂತೆ ಸೀತಾಳ ಮದುವೆ ಕಾರ್ಯದಲ್ಲಿ ಬ್ಯುಸಿಯಾಗಿದ್ದಾಳೆ.. ಮದುವೆ.. ಹೆಣ್ಣು ನೋಡೋ ಶಾಸ್ತ್ರದಲ್ಲಿ ಅವಳೇ ಓಡಾಡುತ್ತಾಳೆ.. ಇದು ವೀಕ್ಷಕರಿಗೆ ಕಿರಿಕಿರಿ ಅನ್ನಿಸಿದೆ.. ಸೀರಿಯಲ್ ನಲ್ಲಿ ಸ್ವಲ್ಪ ವಾಸ್ತವತೆ ಇರ್ಲಿ.. ಯಾವ ಏಜ್ ಗೆ ಯಾವ ಸನ್ನಿವೇಶ ಕೊಡ್ಬೇಕು ಅನ್ನೋ ಜ್ಞಾನ ಸೀರಿಯಲ್ ಟೀಂಗೆ ಇರ್ಲಿ ಅಂತಾ ಸೀರಿಯಲ್ ಅಭಿಮಾನಿಗಳು ಹೇಳ್ತಿದ್ದಾರೆ..
ಹೀಗಾಗಿ ಸೀರಿಯಲ್ ಟೀಂ ಪಾತ್ರಗಳಿಗೆ ಡೈಲಾಗ್ ಬರಿಯುವಾಗ, ಕಲಾವಿದರು ತಮ್ಮ ಉಡುಗೆ ತೊಡುಗೆ ವಿಚಾರದಲ್ಲಿ, ‘ಹೋಗ್ಲಿ ಬಿಡು, ಏನಾಗುತ್ತೆ?’ ಅಂತ ನಿರ್ಲಕ್ಷ್ಯ ಮಾಡೋ ಹಾಗಿಲ್ಲ. ತಮ್ಮ ಪ್ರತಿ ಕಾಸ್ಟ್ಯೂಮ್ ಬಗ್ಗೆಯೂ ಗಮನ ಕೊಡಲೇಬೇಕು. ಇಲ್ಲಾಂದರೆ ಹೀಗೆ ಕಾದ ಸೀಸದ ಹಾಗೆ ಬರುವ ವೀಕ್ಷಕರ ಕಾಮೆಂಟ್‌ಗಳಿಗೆ ಗುರಿಯಾಗಬೇಕಾಗುತ್ತದೆ.