ರೀಲ್‌ ಲೈಫ್‌ನಂತೆಯೇ ರಿಯಲ್‌ ಲೈಫ್‌ – ಸೀತಾರಾಮ ಸೀರಿಯಲ್‌ನ ಸಿಹಿಯ ಬಾಳಿನ ಕಹಿಯೇನು? 

ರೀಲ್‌ ಲೈಫ್‌ನಂತೆಯೇ ರಿಯಲ್‌ ಲೈಫ್‌ – ಸೀತಾರಾಮ ಸೀರಿಯಲ್‌ನ ಸಿಹಿಯ ಬಾಳಿನ ಕಹಿಯೇನು? 

ಸೀತಾ ರಾಮ ಸೀರಿಯಲ್‌ ಕಥೆಯಲ್ಲೀಗ ರೋಚಕ ಟ್ವಿಸ್ಟ್‌ ಎದುರಾಗುತ್ತಿದೆ. ಸೀತಾಳಿಗೆ ಮಗಳಿರುವ ವಿಚಾರ ಭಾರ್ಗವಿಗೆ ಗೊತ್ತಾಗಿದೆ. ಈ ನಡುವೆ, ಸೀತಾಳ ಹಿನ್ನೆಲೆ ಏನು? ಸಿಹಿ ಅಪ್ಪ ಯಾರು ಅಂತಾ ಭಾರ್ಗವಿ ಹುಡುಕಾಟ ನಡೆಸ್ತಾ ಇದ್ದಾರೆ.. ಈ ಸೀರಿಯಲ್ ನಲ್ಲಿ ಸಿಹಿ ಪಾತ್ರವೇ ಸೆಂಟರ್ ಆಫ್ ಆಟ್ರ್ಯಾಕ್ಷನ್.. ಆಕೆಯ ಕ್ಯೂಟ್ ನೆಸ್.. ಮುಗ್ದತೆ ವೀಕ್ಷಕರಿಗೆ ಇಷ್ಟ ಆಗ್ತಾ ಇದೆ.. ಸದಾ ನಗ್ತಾ ಇರೋ ಸಿಹಿಯ ರೀಲ್ ಲೈಫ್, ರಿಯಲ್ ಲೈಫ್ ನಲ್ಲಿ ಬರೀ ಕಹಿಯೇ ತುಂಬಿದೆ.. ಆಕೆಯ ಬಾಳಲ್ಲಿ ಘನಘೋರ ಕತೆಯಿದೆ.. ಅಷ್ಟಕ್ಕೂ ಸಿಹಿ ಪಾತ್ರ ಮಾಡ್ತಿರೋ ಮುದ್ದು ಪುಟಾಣಿ ಯಾರು? ಆಕೆಯ ರಿಯಲ್ ಸ್ಟೋರಿ ಏನು ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಬಂಗಲೆ‌ ಖರೀದಿಸಿದ 2 ವರ್ಷದ ರಾಹಾ! –  ಸ್ಟಾರ್‌ ಕಿಡ್‌ ₹250 ಕೋಟಿಯ ಒಡತಿ!

ಸೀತಾರಾಮ ಸೀರಿಯಲ್‌ ನೋಡೋರಿಗೆ ಸಿಹಿಯ ಪಾತ್ರ ಇಷ್ಟ ಆಗೇ ಇರುತ್ತೆ.. ಸೀತಾಳಿಗೆ ಸಿಹಿಯೇ ಎಲ್ಲಾ.. ಸಿಹಿಗೆ ಸೀತಾನೇ ಎಲ್ಲಾ.. ಇವರಿಬ್ಬರ ಬಾಳಲ್ಲಿ ರಾಮ್ ಎಂಟ್ರಿಕೊಟ್ಟಿದ್ದಾನೆ.. ಸೀತಾ, ರಾಮ್ ಮಧ್ಯೆ ಪ್ರೀತಿ ಚಿಗುರಿದ್ದು, ಮದುವೆ ಆಗಲು ಮುಂದಾಗಿದ್ದಾರೆ.. ಆದ್ರೆ ರಾಮ್ ನನ್ನು ಫ್ರೆಂಡ್ ಆಗಿ ಇಷ್ಟ ಪಡೋ ಸಿಹಿ.. ಆತನನ್ನು ತಂದೆ ಆಗಿ ಸ್ವೀಕರಿಸೋಕೆ ಇಷ್ಟ ಪಡ್ತಿಲ್ಲ.. ಹೀಗಾಗಿ ಸೀತಾ ರಾಮ್  ಮದುವೆಗೆ ಸಿಹಿ ನೋ ಅಂದಿದ್ದಾಳೆ.. ಇತ್ತ ಭಾರ್ಗವಿ ಸೀತಾ ರಾಮ್ ನನ್ನು ಬೇರೆ ಮಾಡೊದಿಕ್ಕೆ ಹೊಸ ಅಸ್ತ್ರ ಹೂಡಿದ್ದಾಳೆ.. ಸಿಹಿ ಅಪ್ಪ ಯಾರು ಅಂತಾ ಪತ್ತೆ ಹಚ್ಚೋದಿಕ್ಕೆ ರುದ್ರಪತಾಪ್ ಗೆ ಸುಪಾರಿ ಕೊಟ್ಟಿದ್ದಾಳೆ. ಸೀರಿಯಲ್ ನಲ್ಲಿ ಸಿಹಿ ಹಿನ್ನೆಲೆ ಹುಡುಕುತ್ತಿದ್ರೆ, ಇತ್ತ ವೀಕ್ಷಕರು ಸಿಹಿ ಪಾತ್ರಧಾರಿಯ ರಿಯಲ್ ಲೈಫ್ ಬಗ್ಗೆ ಚರ್ಚೆ ಮಾಡ್ತಾ ಇದ್ದಾರೆ..  ಆ ಮಟ್ಟಿಗೆ ಈ ಮುದ್ದು ಮುಖದ ಸುಂದರಿ ಮೋಡಿ ಮಾಡಿದ್ದಾಳೆ.. ಇಂಥದ್ದೊಂದು ಪಾತ್ರಕ್ಕೆ ಬೇರ್ಯಾವ ಮಗು ಬಂದಿದ್ದರೂ ಇಷ್ಟು ಅದ್ಭುತವಾಗಿ ನಟಿಸುತ್ತಿತ್ತೋ, ಇಲ್ವೋ ಗೊತ್ತಿಲ್ಲ. ಬಹುಶಃ ಕಷ್ಟ ಅನಿಸುತ್ತೆ. ಆದರೆ ಈ ಪುಟ್ಟ ಕಲಾವಿದೆಯ ಅಭಿನಯಕ್ಕೆ ಮಾರು ಹೋಗದವೇ ಇಲ್ಲ ಅನ್ನಬಹುದು. ಅಂದ್ಹಾಗೆ ಸಿಹಿಯ ರಿಯಲ್ ನೇಮ್ ರಿತು ಸಿಂಗ್.. ಈಕೆಯ ವಯಸ್ಸು ಕೇವಲ 5.. ಇಷ್ಟು ಚಿಕ್ಕ  ವಯಸ್ಸಲ್ಲಿ ವಿನಯ, ಸರಳತೆ, ವಯಸ್ಸಿಗೂ ಮೀರಿದ ಪಾತ್ರ ಮಾಡುವುದನ್ನು ನೋಡಿದ್ರೆ ಈಕೆ ಸಾಕ್ಷಾತ್‌  ಸರಸ್ವತಿ ದೇವಿಯ ಪುತ್ರಿಯೇ ಅನಿಸುತ್ತೆ..

ಸೀತಾರಾಮ ಸಿರೀಯಲ್‌ನಲ್ಲಿ ಇಷ್ಟು ಮುದ್ದಾಗಿ ಮಾತಾಡೋ ಸಿಹಿಯ ಬದುಕಿನಲ್ಲಿ ಘನಘೋರ ಕಥೆಯಿದೆ.. ಹೌದು! ಧಾರವಾಹಿಯಲ್ಲಿ ನಡೆಯುತ್ತಿರುವ ಘಟನೆಗಳು ಈ ಮಗು ಬಾಳಲ್ಲಿ ನಡೆದು ಹೋಗಿದೆ..  ಸೀರಿಯಲ್‌ನಲ್ಲಿ ಅಪ್ಪನಿಲ್ಲದೇ ತಾಯಿಯ ಮಡಿಲಿನಲ್ಲಿ ಹೇಗೆ ಬೆಳೆಯುತ್ತಿದ್ದಾಳೋ ಹಾಗೇ ನಿಜ ಜೀವನದಲ್ಲೂ ಈಕೆಯ ಪಾಲಿಗೆ ತಂದೆ ಇಲ್ಲ..

ಅಂದ್ಹಾಗೆ ಸಿಹಿ ಅಲಿಯಾಸ್‌ ರಿತು ಸಿಂಗ್‌ ಇಲ್ಲಿಯವಳಲ್ಲ.. ಈಗೆ ನೇಪಾಳದ ಬೆಡಗಿ.. ಮೂಲತಃ ನೇಪಾಳದಿಂದ ಬಂದಿರುವ ರಿತು ಸಿಂಗ್ ಮನೆಯಲ್ಲಿ ಕಿತ್ತು ತಿನ್ನುವ ಬಡತನ.. ಹುಟ್ಟಿದ ಜಾಗದಲ್ಲಿಯೇ ಇದ್ದರೆ ಬದುಕು ಕಷ್ಟ ಅಂತ ಭಾರತಕ್ಕೆ ಗಂಟು ಮೂಟೆ ಕಟ್ಟಿಕೊಂಡು ಬರುತ್ತಾರೆ.. ದೇಶ ಗೊತ್ತಿಲ್ಲ, ಭಾಷೆ ಗೊತ್ತಿಲ್ಲ..ತಮ್ಮವರು ಅನ್ನೋರು ಯಾರು ಇಲ್ಲ.. ಇಲ್ಲಿ ಬಂದು ರಿತು ತಾಯಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ.. ಕರ್ನಾಟಕಕ್ಕೆ ಬಂದು ಕನ್ನಡ ಕಲಿತಿದ್ದಾರೆ.. ಇಲ್ಲಿಯೇ ಬದುಕು ಕಟ್ಟಿಕೊಳ್ತಾರೆ..

ಇವತ್ತು ಇಷ್ಟೋಂದು ಖುಷಿಯಾಗಿ, ನಗು ನಗುತ್ತಾ ಮಾತಾಡೋ ರಿತು ಸಿಂಗ್‌ಗೆ ಅಪ್ಪನ ಪ್ರೀತಿಯೇ ಸಿಕ್ಕಿಲ್ಲ.. ಈಕೆ ಮಗು ಇದ್ದಾಗಲೇ ತಂದೆ ಮನೆಬಿಟ್ಟು ಹೋಗಿದ್ದರು.. ಹೀಗಾಗಿ ಅಪ್ಪನನ್ನ ನೋಡಿದ ನೆನಪು ಈಕೆಗೆ ಇಲ್ಲ.. ಈ ಮುದ್ದು ಗೊಂಬೆ ಚಿಕ್ಕವಳಿದ್ದಾಗ ಅಪ್ಪ ಬೇಕು ಎಂದು ಹಠ ಮಾಡಿದಾಗ ಅಮ್ಮನಿಗೆ ಏನು ಹೇಳಬೇಕು ಎಂದು ಗೊತ್ತಾಗದೇ ಸುಮ್ಮನಾಗಿ ಬಿಡುತ್ತಿದ್ದರಂತೆ..

ನಂತರ ತಿನ್ನೋಕೆ ಅನ್ನವಿಲ್ಲದ ಕಾರಣ ರಿತು ತಾಯಿ ಬೆಂಗಳೂರಿನಲ್ಲಿ ಮನೆಕೆಲಸ ಮಾಡುತ್ತಿದ್ದರಂತೆ.. ಮನೆ ಕೆಲಸ ಮಾಡಿಕೊಂಡು ಈವರೆಗೂ ಅವರು ಮನೆ ನಡೆಸುತ್ತಿದ್ದಾರೆ.. ಸ್ಕ್ರೀನ್‌ ಮೇಲೆ ನಗುತ್ತಾ ಎಲ್ಲರನ್ನು ಮನರಂಜಿಸೋ ಸಿಹಿಯ ಬದುಕಲ್ಲಿ ಇಂತಹ ಕಹಿಯಿದೆ..  ಇನ್ನು ಸಿಹಿ ಈ ಹಿಂದೆ ಜೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್‌ ರಿಯಾಲಿಟಿ ಶೋನಲ್ಲಿ ಗಮನ ಸೆಳೆದಿದ್ದರು. ಶೋ ನಲ್ಲಿ ಈಕೆಯ ಪರ್ಫಾಮೆನ್ಸ್‌ ನೋಡಿ ಈಕೆಗೆ ಸೀತಾರಾಮ ಸೀರಿಯಲ್ ನಲ್ಲಿ ಸಿಹಿ ಪಾತ್ರ ಸಿಕ್ಕಿದೆ.. ಆದರೆ ಸಿಕ್ಕ ಅವಕಾಶವನ್ನು ಮಾತ್ರ ಈ ಪುಟಾಣಿ ಚೆನ್ನಾಗಿ ಬಳಸಿಕೊಂಡಿದ್ದಾಳೆ.ಚಿಕ್ಕ ವಯಸ್ಸಲ್ಲೇ ಜೀವನದಲ್ಲಿ ಕಹಿ ತಿಂದಿರುವ ರಿತುಗೆ ಮುಂದೆ ಬಾಳಿನುದ್ದಕ್ಕೂ   ಸಿಹಿ ಸಿಗಲಿ ಅನ್ನೋದೇ ಎಲ್ಲರ ಹಾರೈಕೆ.

Shwetha M