ಸಿಹಿಯ ರಿಯಲ್‌ ತಂದೆ ಎಂಟ್ರಿ? – ಮೇಘಶ್ಯಾಮ್ ಗೂ ಸೀತಾಗೂ ಏನ್‌ ಸಂಬಂಧ?
ಸೀತಾರಾಮ ಸೀರಿಯಲ್‌ ನಲ್ಲಿ ಟ್ವಿಸ್ಟ್‌?

ಸಿಹಿಯ ರಿಯಲ್‌ ತಂದೆ ಎಂಟ್ರಿ? – ಮೇಘಶ್ಯಾಮ್ ಗೂ ಸೀತಾಗೂ ಏನ್‌ ಸಂಬಂಧ?ಸೀತಾರಾಮ ಸೀರಿಯಲ್‌ ನಲ್ಲಿ ಟ್ವಿಸ್ಟ್‌?

ಸೀತಾರಾಮ ಸೀರಿಯಲ್‌ ಕತೆಯಲ್ಲಿ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಸಿಗುತ್ತಿದೆ.. ಸಿಹಿ ಹಾಸ್ಟೆಲ್‌ಗೆ ಹೋಗಿ ಆಯ್ತು.. ‌ಇನ್ನು ಸೀತಾರಾಮ ಸೀರಿಯಲ್‌ ಪಕ್ಕಾ ಡಲ್‌ ಹೊಡೆಯುತ್ತೆ ಅಂತಾ ಫ್ಯಾನ್ಸ್‌ ಅಂದುಕೊಳ್ಳುವಾಗಲೇ, ನಿರ್ದೇಶಕರು ಡೊಡ್ಡ ಟ್ವಿಸ್ಟ್‌ ನೀಡಿದ್ದಾರೆ.. ಸಿಹಿಗೆ ಕಂಪನಿ ಕೊಡೋಕೆ ಹೊಸ ಪಾತ್ರ ಎಂಟ್ರಿ ಕೊಟ್ಟಿದೆ.. ಮೇಘಶ್ಯಾಮ್‌ ಎಂಟ್ರಿಯಿಂದ ವೀಕ್ಷಕರ ತಲೆಗೆ ಹುಳ ಬಿಟ್ಟಂತಾಗಿದೆ.. ಆ ಮೇಘಶ್ಯಾಮ್‌ ಗೂ ಸಿಹಿಗೂ ಏನ್‌ ಸಂಬಂಧ? ಸಿಹಿ ರಹಸ್ಯ ಈಗಲಾದರೂ ಬಯಲಾಗುತ್ತಾ ಅಂತಾ ವೀಕ್ಷಕರ ಮನದಲ್ಲಿ ಹಲವು ಪ್ರಶ್ನೆಗಳು ಕಾಡುತ್ತಿದೆ.

ಇದನ್ನೂ ಓದಿ: ₹20 ಕೋಟಿ ಹಣ.. ಕಾರು, ಮನೆಗಳೆಷ್ಟು? – 2 ವಾರದಲ್ಲೇ 25 ಪಟ್ಟು ಹೆಚ್ಚಿತಾ ಆಸ್ತಿ?

ಸಿಹಿ ಹಾಸ್ಟೆಲ್‌ ಸೇರ್ಕೊಂಡ್ಲು.. ಇನ್ನು ಸೀರಿಯಲ್‌ ಪಕ್ಕಾ ಡಲ್‌ ಹೊಡೆಯುತ್ತೆ.. ಇನ್ನು ನೋಡೋದು ವೇಸ್ಟ್‌ ಅಂತಾ ಸೀರಿಯಲ್ ಫ್ಯಾನ್ಸ್‌ ಅಂದುಕೊಳ್ತಿದ್ರು.. ಈ ಹೊತ್ತಲ್ಲೇ ಡೈರೆಕ್ಟರ್‌ ಟ್ವಿಸ್ಟ್‌ ಕೊಟ್ಟಿದ್ದಾರೆ.. ಒಂದು ಪಾತ್ರದ ಎಂಟ್ರಿಯಿಂದ ವೀಕ್ಷಕರ ತಲೆಗೆ ಹುಳಬಿಟ್ಟಂತಾಗಿದೆ..

ಹೌದು.. ಭಾರ್ಗವಿ ಕುತಂತ್ರದಿಂದ ಸಿಹಿ ಬೋರ್ಡಿಂಗ್‌ ಸ್ಕೂಲ್‌ಗೆ ಸೇರಿದ್ದಾಳೆ.. ಸಿಹಿಗೆ ಮನೆ ಬಿಟ್ಟು ಇರೋಕೆ ಆಗ್ತಿಲ್ಲ.. ಮನೆಯ ನೆನಪು ಆಕೆಯನ್ನ ಕಾಡ್ತಿದೆ. ಈ ಹೊತ್ತಲ್ಲೇ  ಡಾ ಮೇಘ ಶ್ಯಾಮ್ ಪಾತ್ರ ಎಂಟ್ರಿಕೊಟ್ಟು ವೀಕ್ಷಕರ ತಲೆಗೆ ಹುಳ ಬಿಟ್ಟಂಗಾಗಿದೆ. ಪೀಡಿಯಾಟ್ರೀಶನ್ ಅಂತ ಎಂಟ್ರಿ ಏನೋ ಕೊಟ್ರು. ಆಮೇಲೆ ಸಿಹಿಗೆ ತುಂಬಾ ಕ್ಲೋಸ್‌ ಆದ.. ಇಷ್ಟೇ ಆಗಿದ್ರೆ ಪರ್ವಾಗಿಲ್ಲ.. ವೀಕ್ಷಕರು ಅಷ್ಟೊಂದಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.. ಈಗ ಈ ಮನುಷ್ಯನ ಪರ್ಸನಲ್ ಟ್ರ್ಯಾಕ್ ಓಪನ್ ಆಗಿದೆ. ಅದರಲ್ಲಿ ಈತ ಮಗುವಿಗಾಗಿ ಹಂಬಲಿಸೋದು, ಆದರೆ ಈತನ ಹೆಂಡ್ತಿ ಈತನಿಗೆ ಮಕ್ಕಳಾಗದಿರೋ ಬಗ್ಗೆ ಮಾತಾಡೋದು.. ಈತನಿಗೆ ಸಿಹಿ ಮೇಲೆ ಹೊಸ ಬಾಂಡಿಂಗ್‌ ಶುರು ಆಗೋದು.. ಇದೆಲ್ಲಾ ವೀಕ್ಷಕರಲ್ಲಿ ಕನ್ಫ್ಯೂಶನ್ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ.

ಹೌದು, ಸಿಹಿ ಹಾಗೂ ಮೇಘಶ್ಯಾಮ್‌ ಇಬ್ಬರು ಫುಲ್‌ ಕ್ಲೋಸ್‌ ಆಗಿದ್ದಾರೆ.. ಫ್ರೆಂಡ್ಸ್‌ ಅಂತಾ ಕೈ ಕೈ ಕುಲುಕಿಕೊಂಡಿದ್ದಾರೆ.. ಹಾಸ್ಟೆಲ್‌ನಲ್ಲಿ ನಡೆದ ವಿಚಾರವನ್ನೆಲ್ಲಾ ಸಿಹಿ ಕಾಲ್‌ ಮಾಡಿ ಸೀತಾ, ರಾಮ್‌ ಗೆ ಹೇಳ್ತಾಳೆ.. ಡಾಕ್ಟರ್ ಅಂಕಲ್ ತುಂಬಾ ಸ್ವೀಟ್, ನನಗೆ ಇನ್ಸುಲಿನ್ ಕೊಟ್ರು. ಅಂತಾ ಹೇಳ್ತಾಳೆ.. ಅಷ್ಟೇ ಅಲ್ಲದೇ ಆತನ ಹೇಸರು ಹೇಳಿದಾಗ ಸೀತಾ ಫುಲ್‌ ಶಾಕ್‌ ಆಗ್ತಾಳೆ..  ಇನ್ನು ಸಿಹಿ ನನ್ಗೆ ಊಟ ಸೇರ್ತಿಲ್ಲ, ನಿದ್ದೆ ಬರ್ತಿಲ್ಲ. ನನ್ನ ಜೊತೆ ಯಾರೂ ಫ್ರೆಂಡ್ಸ್ ಇಲ್ಲ ಅಂತ ಹೇಳಿದ್ಲು.. ಇದನ್ನು ಕೇಳಿ ರಾಮ್ ಬೇಸರ ಮಾಡಿಕೊಂಡಿದ್ದಾನೆ. ಹೀಗಾಗಿ ಸೀತಾಳನ್ನ ಕರೆದುಕೊಂಡು ಏಕಾಏಕಿ ಬೋರ್ಡಿಂಗ್ ಸ್ಕೂಲ್ಗೆ ಹೊರಟಿದ್ದಾನೆ ರಾಮ್.‌ ಈ ವೇಳೆ ರಾಮ್‌ ಹಾಗೂ ಮೇಘಶ್ಯಾಮ್‌ ಕೂಡ ಮುಖಾಮುಖಿಯಾಗಿದ್ದಾರೆ. ಫುಲ್‌ ಕ್ಲೋಸ್‌ ಆಗಿ ಮಾತನಾಡಿದ್ದಾರೆ. ಇದನ್ನ ನೋಡಿ ಸೀತಾ ಫುಲ್‌ ಶಾಕ್‌ ಆದವಳಂತೆ ನಿಂತಿದ್ದಾಳೆ.. ಮುಂದೇನಾಗುತ್ತೆ ಅಂತಾ ವೀಕ್ಷಕರು ಕುತೂಹಲದಿಂದ ಸೀರಿಯಲ್‌ ನೋಡುತ್ತಿದ್ದಾರೆ..

ಮೇಘಶ್ಯಾಮ್ ಪಾತ್ರ ಎಂಟ್ರಿ ಆಗಿರೋದು ಈ ಸೀರಿಯಲ್‌ ಗೆ  ಒಂದೊಳ್ಳೆ ಟ್ವಿಸ್ಟ್ ಕೊಟ್ಟಿರೋದು ಸುಳ್ಳಲ್ಲ.. ಸಿಹಿಗೆ ಒಬ್ಬ ರಿಯಲ್ ಫ್ರೆಂಡ್ ಸಿಕ್ಕಂಗಾಗಿದೆ. ಇವರಿಬ್ಬರ ನಡುವೆ ಸಾಮಾನ್ಯವಲ್ಲದ ಯಾವುದೋ ಬಂಧ ಇರೋದು ವೀಕ್ಷಕರಿಗೆ ಗೊತ್ತಾಗ್ತಿದೆ. ಅವರು ಇವರಿಬ್ಬರ ಪಾತ್ರವನ್ನು ಚೆನ್ನಾಗಿ ಎಂಜಾಯ್ ಮಾಡ್ತಿದ್ದಾರೆ. ಬಹುಶಃ ರಾಮ್ ಸಿಹಿಯನ್ನು ಕರ್ಕೊಂಡು ಹೋಗೋದಕ್ಕೆ ಬಂದರೂ ಸಿಹಿ ಮತ್ತೆ ಬೋರ್ಡಿಂಗ್ ಸ್ಕೂಲಿಗೆ ಸೇರೋ ಸ್ಥಿತಿ ಸೃಷ್ಟಿಯಾಗಬಹುದು. ಈ ಮೇಘಶ್ಯಾಮ್ ಜೊತೆಗೆ ಅವಳ ಬಂಧ ಬೆಳೆಯಬಹುದು. ಮುಂದೆ ಇದು ಮತ್ತೆಲ್ಲೋ ಹೋಗಿ ಇವರಿಬ್ಬರು ಅಪ್ಪ ಮಗಳು ಅನ್ನೋ ಸತ್ಯ ಜಗತ್ತಿನ ಮುಂದೆ ರಿವೀಲ್‌ ಆಗಬಹುದು ಅಂತಾ ವೀಕ್ಷಕರು ಊಹೆ ಮಾಡ್ತಾ ಇದ್ದಾರೆ.

ಒಟ್ಟಿನ್ನಲ್ಲಿ ಮೇಘಶ್ಯಾಮ್ ಎಂಟ್ರಿಯಿಂದ ಸೀರಿಯಲ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ. ಸೀತಾ ಮತ್ತು ರಾಮ್ ಜೊತೆಗೆ ಸಿಹಿಯ ಸೀನ್ ನೋಡಿ ಬೇಜಾರಾಗಿತ್ತು.. ಈಗ ಫ್ರೆಶರ್‌ ಮುಖ ನೋಡಿ ಖುಷಿಯಾಯ್ತು ಅಂತಾ ವೀಕ್ಷಕರು ಹೇಳ್ತಿದ್ದಾರೆ.. ಇನ್ನೂ ಕೆಲವರು ಈತನೇ ಸಿಹಿ ಅಪ್ಪ ಅಂತಾ ಕಾಮೆಂಟ್‌ ಮಾಡ್ತಾ ಇದ್ದಾರೆ.

Shwetha M

Leave a Reply

Your email address will not be published. Required fields are marked *