ಇದೇನಾ ‘ನಿಮ್ಮ ಸ್ವಚ್ಛಭಾರತ್’ ? – ಹಳ್ಳಿಗಳ ಪರಿಸ್ಥಿತಿ ಕಂಡು ಬಿಜೆಪಿ ವಿರುದ್ಧ ಕುಮಾರಸ್ವಾಮಿ ಫುಲ್ ಗರಂ
ವಿಧಾನಸಭೆ ಕಲಾಪದಲ್ಲಿ ಇವತ್ತು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಬಿಜೆಪಿಯ ಸ್ವಚ್ಛಭಾರತ್ ಅಭಿಯಾನವನ್ನು ಪ್ರಶ್ನೆ ಮಾಡಿದ್ದಾರೆ. ನಾನು ಉತ್ತರ ಕರ್ನಾಟಕದ ಅನೇಕ ಹಳ್ಳಿಗಳಿಗೆ ಭೇಟಿ ಮಾಡಿದ್ದೇನೆ. ಅಲ್ಲಿನ ವಾಸ್ತವಾಂಶಗಳನ್ನು ಪಟ್ಟಿಮಾಡಿಕೊಂಡೇ ಬಂದು ಮಾತನಾಡುತ್ತಿದ್ದೇನೆ ಎಂದಿರುವ ಕುಮಾರಸ್ವಾಮಿ ಹಳ್ಳಿಗಳಲ್ಲಿ ಮಹಿಳೆಯರು ಶೌಚಾಲಯವಿಲ್ಲದೇ ಪರದಾಡುತ್ತಿರುವ ವಿಚಾರದ ಬಗ್ಗೆ ಸದನದ ಗಮನ ಸೆಳೆದರು. ಉತ್ತರಕರ್ನಾಟಕದಲ್ಲಿ ತಲೆಗೊಂದು ಮುಂಡಾಸು, ಮನೆಗೊಂದು ಸಂಡಾಸು ಅನ್ನೋ ಬರಹ ಕಾಣುತ್ತದೆ. ಆದರೆ, ಅಲ್ಲಿನ ಹೆಣ್ಣು ಮಕ್ಕಳು ಶೌಚಕ್ಕೆ ಹೋಗಲು ಕಣ್ಣೀರು ಹಾಕುತ್ತಿದ್ದಾರೆ. ಬೆಳಗ್ಗೆ ಸೂರ್ಯ ಹುಟ್ಟುವ ಮೊದಲು, ಇಲ್ಲವೇ ಕತ್ತಲಾದ ಮೇಲೆ ಹಳ್ಳಿಗಳ ಹೆಣ್ಣು ಮಕ್ಕಳು ಬಹಿರ್ದೆಸೆಗೆ ಹೋಗಬೇಕು. ನೀವು ಶೌಚಾಲಯ ಕಟ್ಟಿಕೊಟ್ಟರೆ ಸಾಕಾ.. ನೀರು ಕೊಡದೇ ಇದ್ದರೆ ಹೇಗೆ.. ಇದೇನಾ ನಿಮ್ಮ ಸ್ವಚ್ಛಭಾರತ್ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು. ನಮ್ಮ ರಾಜ್ಯ ಪ್ರಗತಿ ಕಂಡಿದೆ ನಿಜ. ಆದರೆ ಅಷ್ಟೇ ಬಡತನವೂ ನಮ್ಮ ರಾಜ್ಯದಲ್ಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: 10 ಕಿ.ಮೀ ಪ್ರಯಾಣಕ್ಕೆ 29 ನಿಮಿಷ 10ಸೆಕೆಂಡ್ ಬೇಕು – ಟ್ರಾಫಿಕ್ ನಲ್ಲಿ ವಿಶ್ವಕ್ಕೇ ಬೆಂಗಳೂರೇ ನಂಬರ್-2..!
ನಮ್ಮ ರಾಜ್ಯದ ಹಳ್ಳಿಗಳಲ್ಲಿ ಇನ್ನೂ ಶೌಚಾಲಯಗಳ ಕೊರತೆಯಿದೆ. ಇನ್ನು ಕೆಲವೊಂದು ಕಡೆ ನೀರು ಕೊಡ್ತೀವಿ ಅಂತಾ ಪೈಪ್ ಹಾಕಿ ಬಿಟ್ಟಿದ್ದಾರೆ. ಆದರೆ, ಆ ಪೈಪ್‌ಗಳಲ್ಲಿ ನೀರೇ ಬರಲ್ಲ. ಕೆರೆ ನೀರೇ ಅನೇಕ ಹಳ್ಳಿಗಳಿಗೆ ಆಧಾರವಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇನ್ನು ಪ್ರತಿಪಕ್ಷಗಳನ್ನ ವಿಕಲಚೇತನ ಸರ್ಕಾರ ಎಂದು ಲೇವಡಿ ಮಾಡಿದ್ದ ಸಿ.ಟಿ ರವಿ ಬಗ್ಗೆ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೀರಾವೇಶದಿಂದ ಸದನದಲ್ಲಿ ಕೆಲವರು ಮಾತನಾಡಿದ್ದಾರೆ. ಆದರೆ, ವಿಕಲಚೇತನರಿಗೆ ನನ್ನ ಸರ್ಕಾರದಲ್ಲಿ ಆದಷ್ಟು ಸಹಾಯಮಾಡಿದ್ದೇನೆ ಎಂದು ಬಿಜೆಪಿ ಸರ್ಕಾರಕ್ಕೆ ಹೆಚ್ ಡಿಕೆ ಟಾಂಗ್ ಕೊಡುವ ರೀತಿಯಲ್ಲಿ ಮಾತನಾಡಿದರು.