ಸೀ ದ ಬಾಲ್ & ಹಿಟ್ ದ ಬಾಲ್ – ಬ್ಯಾಟಿಂಗ್ ಬಿರುಗಾಳಿ ಜೈಸ್ವಾಲ್ ಸಕ್ಸಸ್ ಸೀಕ್ರೆಟ್

ಸೀ ದ ಬಾಲ್ & ಹಿಟ್ ದ ಬಾಲ್ – ಬ್ಯಾಟಿಂಗ್ ಬಿರುಗಾಳಿ ಜೈಸ್ವಾಲ್ ಸಕ್ಸಸ್ ಸೀಕ್ರೆಟ್

ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ-20 ಮ್ಯಾಚ್​​ನ್ನು ಟೀಂ ಇಂಡಿಯಾ ಗೆದ್ದುಕೊಂಡಿದೆ. ಸೆಕೆಂಡ್​ ಮ್ಯಾಚ್​​ನಲ್ಲಿ ಮತ್ತೊಮ್ಮೆ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳು ಅಬ್ಬರಿಸಿದ್ದಾರೆ. ಜೊತೆಗೆ ಆದ್ರೆ ಈ ಮ್ಯಾಚ್​ನಲ್ಲಿ ಓಪನರ್ ಯಶಸ್ವಿ ಜೈಸ್ವಾಲ್ ಸ್ಫೋಟಕ ಬ್ಯಾಟಿಂಗ್‌ ಮೂಲಕ ಮಿಂಚಿದ್ದಾರೆ. ಜೈಸ್ವಾಲ್ ಸಕ್ಸಸ್ ಸೀಕ್ರೆಟ್ ಬಗ್ಗೆ ಅವರ ಕೋಚ್ ಏನು ಹೇಳಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಗುಜರಾತ್ ಟೈಟಾನ್ಸ್ ಕ್ಯಾಪ್ಟನ್ ಆಗಿದ್ದ ಹಾರ್ದಿಕ್ ಪಾಂಡ್ಯಾ ಮರಳಿ ಮುಂಬೈಗೆ – ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಯಾರು?

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಕೇವಲ 25 ಬಾಲ್​ಗಳಲ್ಲಿ 53 ರನ್​ ಹೊಡೆಯುವ ಮೂಲಕ ಮಿಂಚಿದ್ದಾರೆ. ಅದರಲ್ಲೂ ಸೀನ್ ಅಬಾಟ್​​ ಬೌಲಿಂಗ್​​ನಲ್ಲಂತೂ ಒಂದೇ ಓವರ್​​ನಲ್ಲಿ ಮೇಲಿಂದ ಮೇಲೆ ಮೂರು ಬೌಂಡರಿ, ಎರಡು ಸಿಕ್ಸರ್ ಹೊಡೆದಿದ್ದಾರೆ. ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯನ್ನರ ಲೆಕ್ಕಾಚಾರಗಳನ್ನೆಲ್ಲಾ ಬುಡಮೇಲು ಮಾಡಿದ್ದೇ ಜೈಸ್ವಾಲ್. ವರ್ಲ್ಡ್​​ಕಪ್​ನಲ್ಲಿ ರೋಹಿತ್​ ಶರ್ಮಾ ಆಡಿದಂತೆ ಜೈಸ್ವಾಲ್ ಓಪನಿಂಗ್ ಬಂದು ಅಬ್ಬರದ ಬ್ಯಾಟಿಂಗ್ ಮಾಡಿ ಒಂದು ಒಳ್ಳೆಯ ಆರಂಭ ನೀಡಿದರು. ಇದೀಗ ಯಶಸ್ವಿ ಜೈಸ್ವಾಲ್ ತಮ್ಮ ಸಕ್ಸಸ್ ಸೂತ್ರದ ಬಗ್ಗೆಯೂ ಮಾತನಾಡಿದ್ದಾರೆ. ನಿರ್ಭೀತಿಯಿಂದ ಆಡುವುದು, ತನ್ನದೇ ಆದ ರೀತಿಯಲ್ಲಿ ಬ್ಯಾಟಿಂಗ್​ ಮಾಡುವುದರಿಂದ ಸಕ್ಸಸ್ ಕಾಣುತ್ತಿದ್ದೇನೆ ಅಂತಾ ಜೈಸ್ವಾಲ್ ಹೇಳಿದ್ದಾರೆ. ಪಂದ್ಯಕ್ಕೂ ಮುನ್ನ ಕೋಚ್ ವಿವಿಎಸ್ ಲಕ್ಷ್ಮಣ್ ಮತ್ತು ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಕೂಡ ಜೈಸ್ವಾಲ್​ಗೆ ಇದೇ ಮಾತನ್ನ ಹೇಳಿದ್ರಂತೆ. ಎದುರಾಳಿ ಯಾರು ಅನ್ನೋ ಬಗ್ಗೆ ತಲೆಕೆಡಿಸಿಕೊಳ್ಳೋ ಅಗತ್ಯ ಇಲ್ಲ. ನ್ಯಾಚ್ಯುರಲ್​ ಸ್ಟೈಲ್​​ನಲ್ಲೇ ಆಡುವಂತೆ ಸೂಚಿಸಿದ್ರಂತೆ. ಜೈಸ್ವಾಲ್ ನ್ಯಾಚ್ಯುರಲ್ ಸ್ಟೈಲ್ ಅಂದ್ರೆ ಅಗ್ರೆಸ್ಸಿವ್ ಬ್ಯಾಟಿಂಗ್. ಪವರ್​ಪ್ಲೇನಲ್ಲಿ ಆಡೋಕೆ ಜೈಸ್ವಾಲ್​ ಹೇಳಿ ಮಾಡಿಸಿದಂಥಾ ಬ್ಯಾಟ್ಸ್​ಮನ್​.

ಇನ್ನು ಜೈಸ್ವಾಲ್ ಬ್ಯಾಟಿಂಗ್​ ಸ್ಟೈಲ್​​ ಬಗ್ಗೆ ಅವರ ಚೈಲ್ಡ್​​ವುಡ್ ಕೋಚ್ ಜ್ವಾಲಾ ಸಿಂಗ್ ಕೂಡ ಮಾತನಾಡಿದ್ದಾರೆ. ಜೈಸ್ವಾಲ್​​ರಲ್ಲಿ ಎರಡು ರೀತಿಯ ಬ್ಯಾಟ್ಸ್​​ಮನ್​ಗಳಿದ್ದಾರೆ. ಒಂದು ವಿರೇಂದ್ರ ಸೆಹ್ವಾಗ್ ಮತ್ತು ಸೌರವ್ ಗಂಗೂಲಿ. ಈ ಇಬ್ಬರೂ ಬ್ಯಾಟ್ಸ್​​ಮನ್​ಗಳ ಸ್ಟೈಲ್​​ನ್ನ ಕೂಡ ಜೈಸ್ವಾಲ್ ಫಾಲೋ ಮಾಡ್ತಾರೆ. ವಿರೇಂದ್ರ ಸೆಹ್ವಾಗ್‌ರದ್ದು ಯಾವಗಲೂ ಒಂದೇ ಸ್ಟ್ರ್ಯಾಟಜಿಯಾಗಿತ್ತು.. ಸೀ ದ ಬಾಲ್ & ಹಿಟ್ ದ ಬಾಲ್.. ಜೊತೆಗೆ ಸೆಹ್ವಾಗ್​​ರ ಹ್ಯಾಂಡ್-ಐ ಕಾರ್ಡಿನೇಷನ್ ಕೂಡ ಎಕ್ಸ್​​ಲೆಂಟ್ ಆಗಿತ್ತು. ಅಷ್ಟೇ ಅಲ್ಲ, ಬೌಲರ್​ ರನ್​ಅಪ್​ ತೆಗೆದುಕೊಳ್ಳುತ್ತಲೇ ಸೆಹ್ವಾಗ್​ ಯಾವುದಾದ್ರು ಹಿಂದಿ ಹಾಡನ್ನು ಹೇಳ್ತಾನೆ ಬ್ಯಾಟ್ ಬೀಸುತ್ತಿದ್ದರು. ಈಗ ಜೈಸ್ವಾಲ್ ಕೂಡ ಹೀಗೆಯೇ ಮಾಡುತ್ತಿದ್ದಾರೆ. ಸೀ ದ ಬಾಲ್ & ಹಿಟ್ ದ ಬಾಲ್.. ಟೋಟಲಿ ಅಟ್ಯಾಕಿಂಗ್ ಬ್ಯಾಟಿಂಗ್​.. ಎದುರಾಳಿ ಟೀಂ ಯಾವುದೇ ಇರಲಿ.. ಬೌಲರ್​ ಅದ್ಯಾರೇ ಆಗಿರಲಿ.. ಪಿಚ್​ ಕೂಡ ಹೇಗೆ ಬೇಕಾದ್ರೂ ಇರಲಿ.. ಬಾಲ್​​ನ್ನ ಬೌಂಡರಿ ಲೈನ್ ಆಚೆಗೆ ಕಳುಹಿಸೋದೆ ಜೈಸ್ವಾಲ್​ರ ವನ್​ ಪಾಯಿಂಟ್ ಅಜೆಂಡಾ. ಜೊತೆಗೆ ವಿರೇಂದ್ರ ಸೆಹ್ವಾಗ್​ರಂತೆ ಜೈಸ್ವಾಲ್​ ಕೂಡ ಬ್ಯಾಟಿಂಗ್ ವೇಳೆ ಹಿಂದಿ ಹಾಡುಗಳನ್ನು ಹೇಳ್ತಾರಂತೆ. ಜೈಸ್ವಾಲ್​ ಚೈಲ್ಡ್​​ವುಡ್ ಕೋಚ್ ಹೇಳುವ ಪ್ರಕಾರ, ಜೈಸ್ವಾಲ್​ ಅವರು ವಿರೇಂದ್ರ ಸೆಹ್ವಾಗ್​ರ ಅಪ್​ಗ್ರೇಡ್ ವರ್ಷನ್ ಅಂತೆ. ವಿರೇಂದ್ರ ಸೆಹ್ವಾಗ್​ ಬಿಗ್​ ಶಾಟ್ಸ್​​ಗಳನ್ನ ಆಡೋವಾಗ ತಮ್ಮ ಕಾಲನ್ನ ಚೆನ್ನಾಗಿ ಬಳಸಿಕೊಳ್ತಾ ಇದ್ರು. ಬಾಡಿ ಬ್ಯಾಲೆನ್ಸ್ ತುಂಬಾ ಚೆನ್ನಾಗಿರ್ತಿತ್ತು. ಜೈಸ್ವಾಲ್​ ಕೂಡ ಅಷ್ಟೇ, ಶಾಟ್ ಆಡುವಾಗಲೆಲ್ಲಾ ಬಾಡಿ ಬ್ಯಾಲೆನ್ಸ್​​ ಬಗ್ಗೆ ಹೆಚ್ಚು ಫೋಕಸ್ ಮಾಡ್ತಿದ್ದಾರೆ. ಸ್ವಲ್ಪ ಬ್ಯಾಲೆನ್ಸ್​ ತಪ್ಪಿದರೂ ಕ್ಯಾಚ್ ಹೋಗುವ ಸಾಧ್ಯತೆ ಹೆಚ್ಚಿರುತ್ತೆ.

ಇದು ಯಶಸ್ವಿ ಜೈಸ್ವಾಲ್​ರ ಸೆಹ್ವಾಗ್​ ವರ್ಷನ್ ಆದ್ರೆ, ಇನ್ನು ಗಂಗೂಲಿ ಸ್ಟೈಲ್​​ನಲ್ಲೂ ಜೈಸ್ವಾಲ್ ಬ್ಯಾಟಿಂಗ್ ಮಾಡ್ತಾರೆ. ನಿಮಗೆ ಗೊತ್ತಿರೋ ಹಾಗೆ ಸೌರವ್​ ಗಂಗೂಲಿಯನ್ನ ಆಫ್ ಸೈಡ್ ದೇವ್ರು ಅಂತಾನೆ ಕರೀತಾ ಇದ್ರು. ಯಾಕಂದ್ರೆ, ಆಫ್​ಸೈಡ್​ನಲ್ಲಿ ಎಷ್ಟೇ ಫೀಲ್ಡರ್ಸ್​ಗಳನ್ನ ನಿಲ್ಲಿಸಿದ್ರೂ ಗಂಗೂಲಿ ಗ್ಯಾಪ್​ ನೋಡಿ ಬೌಂಡರಿ ಹೊಡೀತಿದ್ರು. ಯಶಸ್ವಿ ಜೈಸ್ವಾಲ್ ಕೂಡ ಅಷ್ಟೇ, ಆಫ್​​ಸೈಡ್​​ಗೆ ಅದ್ಭುತವಾಗಿ ಪ್ಲೇಸ್​ಮೆಂಟ್ ಮಾಡ್ತಾರೆ. ಗಂಗೂಲಿ ಶೈಲಿಯಲ್ಲೇ ಜೈಸ್ವಾಲ್ ಕೂಡ ಸ್ಕ್ವಾರ್​​ಕಟ್ ಹೊಡೀತಾರೆ. ಇನ್ನು ಕೇವಲ ಟಿ-20ಯಲ್ಲಷ್ಟೇ ಅಲ್ಲ, ವಂಡೇ, ಟೆಸ್ಟ್​ ಸೇರಿ ಕ್ರಿಕೆಟ್​ನ ಮೂರೂ ಫಾರ್ಮೆಟ್​ಗಳಲ್ಲೂ ಪರ್ಫಾಮ್​ ಮಾಡೋ ಆಟಗಾರ ಜೈಸ್ವಾಲ್. ಕೋಚ್ ಜ್ವಾಲಾ ಸಿಂಗ್ ​​ಹೇಳುವ ಪ್ರಕಾರ, ಫೋಕಸ್ ಮತ್ತು ಟೆಂಪರಮೆಂಟ್ ಶಿಫ್ಟ್​​ ಮಾಡೋ ಕಲೆ ಜೈಸ್ವಾಲ್​​ಗೆ ಚೆನ್ನಾಗಿಯೇ ಕರಗತವಾಗಿದ್ಯಂತೆ. ಅಂದ್ರೆ, ಈಗ ಟಿ-20 ಆಡಿದ್ರೆ, ನೆಕ್ಸ್ಟ್ ವಂಡೇ ಸೀರಿಸ್ ಆಡ್ತಾರೆ ಅಂದ್ರೆ ಆ ಫಾರ್ಮೆಟ್​ಗೆ ಕೂಡಲೇ ಸೆಟ್ ಆಗ್ತಾರೆ. ನಂತರ ಟೆಸ್ಟ್​ ಆಡಬೇಕು ಅಂದ್ರೂ ಆ ಫಾರ್ಮೆಟ್​ಗೂ ಮೆಂಟಲಿ ರೆಡಿಯಾಗ್ತಾರೆ. ಬ್ರೈನ್​ ಶಿಫ್ಟಿಂಗ್​​ನಲ್ಲಿ ಜೈಸ್ವಾಲ್​ ಎಕ್ಸ್​​ಪರ್ಟ್ ಆಗಿದ್ದಾರೆ. ಮೂರೂ ಫಾರ್ಮೆಟ್​ಗಳಲ್ಲೂ ಸ್ಕೋರ್ ಡೆಲಿವರಿ ಮಾಡೋ ಕೆಪಾಸಿಟಿ ಜೈಸ್ವಾಲ್​ಗೆ ಇದೆ. ಟಿ-20ಯಲ್ಲಿ ಯಾವ ರೀತಿ ಫಾಸ್ಟ್​ ಆಗಿ ಸ್ಕೋರ್​ ಮಾಡಬೇಕು.. ಟೆಸ್ಟ್​ನಲ್ಲಿ ಹೇಗೆ ಕ್ರೀಸ್​​ನಲ್ಲಿ ಫಿಕ್ಸ್​ ಆಗಿ ಲಾಂಗ್​ ಇನ್ನಿಂಗ್ಸ್​​ ಆಡಬೇಕು ಅನ್ನೋದು ಜೈಸ್ವಾಲ್​ಗೆ ಚೆನ್ನಾಗಿಯೇ ಗೊತ್ತಿದೆ. ಮ್ಯಾಚ್​ಗೂ ಮುನ್ನ ಅದಕ್ಕೆ ತಕ್ಕಂತೆ ಪ್ರಾಕ್ಟೀಸ್ ಕೂಡ ಮಾಡ್ತಾರೆ.

ಇನ್ನು ಯಾವುದೇ ಪಿಚ್​​ನಲ್ಲಿ ಬೇಕಾದ್ರೂ ಜೈಸ್ವಾಲ್​ ಅಗ್ರೆಸ್ಸಿವ್ ಆಗಿ ಬ್ಯಾಟಿಂಗ್ ಮಾಡೋ ಸಾಮರ್ಥ್ಯ ಹೊಂದಿದ್ದಾರೆ. ಅದಕ್ಕೆ ಕಾರಣ ಕೋಚ್ ಜ್ವಾಲಾ ಸಿಂಗ್. ರಫ್ ಸರ್ಫೇಸ್ ಇರಲಿ, ಇನ್ಯಾವುದೇ ರೀತಿಯ ಪಿಚ್ ಇರಲಿ, ಕೋಚ್​ ಜ್ವಾಲಾ ಸಿಂಗ್ ಅವರು ಜೈಸ್ವಾಲ್​ಗೆ ಪರ್ಟಿಕ್ಯುಲರ್ ಟಾರ್ಗೆಟ್ ಕೊಡ್ತಿದ್ರು. ಉದಾಹರಣೆಗೆ ಎಲ್ಲಾ ರೀತಿಯ ಪಿಚ್​​ನಲ್ಲೂ ಸಿಕ್ಸರ್​ ಹೊಡಿಯುವ ಹಾಗೆ, ಅಗ್ರೆಸ್ಸಿವ್ ಬ್ಯಾಟಿಂಗ್ ಮಾಡೋ ರೀತಿ ಟ್ರೈನ್ ಮಾಡಿದ್ರು. ಹೀಗಾಗಿ ಪಿಚ್​ ಬಗ್ಗೆ ತಲೆಕೆಡಿಸಿಕೊಳ್ಳದೆ ಟಿ-20ನಲ್ಲಿ ಜೈಸ್ವಾಲ್​ ಫೀಯರ್​​ಲೆಸ್ ಬ್ಯಾಟಿಂಗ್ ಮಾಡ್ತಾ ಇದ್ದಾರೆ. 2024ರ ಟಿ-20 ವರ್ಲ್ಡ್​ಕಪ್​​ಗೆ ಜೈಸ್ವಾಲ್​ ಟೀಂನಲ್ಲಿ ಸೆಲೆಕ್ಟ್ ಆಗೋದಂತೂ ಗ್ಯಾರಂಟಿ ಅಂತಾನೆ ಹೇಳಬಹುದು. ಅಂತೂ ರೈಟ್ ಟೈಮ್​​​ನಲ್ಲಿ ಜೈಸ್ವಾಲ್​ರಂಥಾ ಟ್ಯಾಲೆಂಟೆಡ್ ಬ್ಯಾಟ್ಸ್​​ಮನ್​​ ಟೀಂ ಇಂಡಿಯಾಗೆ ಸಿಕ್ಕಿದ್ದಾರೆ. ಈ ಯಂಗ್​ ಬ್ಯಾಟ್ಸ್​​​ಮನ್ ಒಬ್ಬ ಗಿಫ್ಟೆಡ್ ಪ್ಲೇಯರ್ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ.

Sulekha