ಟಿ20 ವಿಶ್ವಕಪ್ ಹಬ್ಬಕ್ಕೆ ಕೌಂಟ್ ಡೌನ್ – ನಸ್ಸೌ ಸ್ಟೇಡಿಯಂ ಸುತ್ತಮುತ್ತ ಬಿಗಿ ಭದ್ರತೆ
ಜೂನ್ 2 ರಿಂದ ಶುರುವಾಗುವ ಟಿ20 ವಿಶ್ವಕಪ್ ಹಬ್ಬಕ್ಕೆ ಜಗತ್ತಿನ ಸೆಲೆಬ್ರಿಟಿಗಳು ಕೂಡಾ ಸಾಕ್ಷಿಯಾಗಲಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಈ ಸಮಾರಂಭದಲ್ಲಿ ಅನೇಕ ಸ್ಟಾರ್ಸ್ ಪ್ರದರ್ಶನ ನೀಡಲಿದ್ದಾರೆ. ವಿಶ್ವಕಪ್ನ ಉದ್ಘಾಟನಾ ಸಮಾರಂಭವು ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆಯಲಿದೆ. ಟ್ರಿನಿಡಾಡಿಯನ್ ಗಾಯಕರಾದ ಡೇವಿಡ್ ರಡ್ಡರ್, ರವಿ ಬಿ, ಸಂಯೋಜಕ ಮತ್ತು ಗೀತರಚನೆಕಾರ ಇರ್ಫಾನ್ ಅಲ್ವೆಸ್, ಗಾಯಕ ಡಿಜೆ ಅನಾ ಮತ್ತು ಅಲ್ಟ್ರಾ ಸಿಮ್ಮೋ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ.
ಇದನ್ನೂ ಓದಿ: ಭವಾನಿ ರೇವಣ್ಣಗೆ ಬಂಧನದ ಭೀತಿ – ಒಂದೂವರೆ ಕೋಟಿ ಕಾರಿನ ಒಡತಿಗೆ 15 ಲಕ್ಷದ ಪೊಲೀಸ್ ಜೀಪ್ ಫಿಕ್ಸಾ?
ಇನ್ನು ಜೂನ್ 2 ರಂದು ಟೂರ್ನಿಗೆ ಅಧಿಕೃತವಾಗಿ ಚಾಲನೆ ಸಿಕ್ರೂ, ಕಿಕ್ಕೇರೋದು ಮಾತ್ರ ಜೂನ್ 9 ರಿಂದ. ಯಾಕಂದ್ರೆ ಅಂದು ಬದ್ಧವೈರಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇಂಡೋ-ಪಾಕ್ ಪಂದ್ಯಕ್ಕೆ ಭಯೋತ್ಪಾದಕರ ಕರಿಛಾಯೆ ಆವರಿಸಿದೆ. ಜೂನ್ 9 ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಡಲಿವೆ. ISIS-K ಉಗ್ರರಿಂದ ಬಾಂಬ್ ಬೆದರಿಕೆ ಕರೆ ಬಂದಿರುವುದರಿಂದ ನಸ್ಸೌ ಅಂತರಾಷ್ಟ್ರೀಯ ಸ್ಟೇಡಿಯಂ ಸುತ್ತಮುತ್ತ ಭದ್ರತೆಯನ್ನ ಹೆಚ್ಚಿಸಲಾಗಿದೆ. ಆಟಗಾರರು ತಂಗಿರುವ ಹೋಟೆಲ್ಗೆ ಮೂರು ಹಂತದ ಭದ್ರತೆ ಒದಗಿಸಲಾಗಿದೆ. 50 ಮೀಟರ್ ಒಳಗೆ ಅತಿಥಿಗಳನ್ನ ಹೊರತುಪಡಿಸಿ ಹೊರಗಿನವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.