ಅಮರನಾಥ ಯಾತ್ರೆಗೆ ಭಕ್ತ ಸಾಗರ – ಭದ್ರತಾ ಪಡೆಗಳಿಂದ ಎಲ್ಲೆಲ್ಲೂ ಕಟ್ಟೆಚ್ಚರ

ಜುಲೈ 3 ರಿಂದ ಅಮರನಾಥ ಯಾತ್ರೆ ಶುರುವಾಗಿದೆ. ಇಲ್ಲಿಯವರೆಗೆ ಒಂದೂವರೆ ಲಕ್ಷಕ್ಕೂ ಹೆಚ್ಚು ಯಾತ್ರಿಕರು ಅಮರನಾಥ ಯಾತ್ರೆ ಮಾಡಿ ಧನ್ಯರಾಗಿದ್ದಾರೆ. ಯಾತ್ರೆಗೆ ಬರುವ ಭಕ್ತರಿಗಾಗಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.
ಇದನ್ನೂ ಓದಿ:ತಿಮ್ಮಪ್ಪನ ಭಕ್ತರಿಗೆ ಅನ್ನಪ್ರಸಾದದಲ್ಲಿ ಸಿಗಲಿದೆ ರುಚಿಕರ ವಡೆ- ಪ್ರತಿದಿನ 35 ಸಾವಿರ ಮಸಾಲಾ ವಡೆ ರೆಡಿ
ಅಮರನಾಥ ಯಾತ್ರೆ ಕಳೆದ ಎಂಟುದಿನಗಳಿಂದ ಆರಂಭವಾಗಿದ್ದು, ಇಲ್ಲಿಯವರೆಗೆ 1.45 ಲಕ್ಷಕ್ಕೂ ಹೆಚ್ಚು ಯಾತ್ರಿಕರು ದೇವರ ದರ್ಶನ ಮಾಡಿದ್ದಾರೆ. ಅಮರನಾಥ ಯಾತ್ರೆ ಪ್ರಯುಕ್ತ ವಿವಿಧ ಪೂಜೆ ನೆರವೇರುತ್ತಿದೆ. ಪಹಲ್ಗಾಮ್‌ನಲ್ಲಿ ಶಿವನ ಪವಿತ್ರ ಗದೆಯ ಭೂಮಿ ಪೂಜೆ ನೆರವೇರಿದೆ. ಶ್ರೀನಗರದ ದಶನಾಮಿ ಅಖಾಡ ಕಟ್ಟಡದಲ್ಲಿರುವ ಅದರ ಸ್ಥಾನದಿಂದ ಪಹಲ್ಗಾಮ್‌ಗೆ ಛಾರಿ ಮುಬಾರಕ್ ಅನ್ನು ಪಹಲ್ಗಾಮ್‌ಗೆ ಕೊಂಡೊಯ್ಯಲಾಗಿದೆ. ಆಗಸ್ಟ್ 9 ರಂದು ಚಾರಿ ಮುಬಾರಕ್ ಪವಿತ್ರ ಗುಹಾ ದೇವಾಲಯವನ್ನು ತಲುಪಲಿದ್ದು, ಆಗ ಯಾತ್ರೆ ಅಧಿಕೃತವಾಗಿ ಮುಕ್ತಾಯಗೊಳ್ಳುತ್ತದೆ.
ಈ ವರ್ಷದ ಅಮರನಾಥ ಯಾತ್ರೆಗೆ ಅಧಿಕಾರಿಗಳು ವ್ಯಾಪಕವಾದ ಬಹು ಹಂತದ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಸೇನೆ, ಬಿಎಸ್‌ಎಫ್, ಸಿಆರ್‌ಪಿಎಫ್, ಎಸ್‌ಎಸ್‌ಬಿ ಮತ್ತು ಸ್ಥಳೀಯ ಪೊಲೀಸರ ಅಸ್ತಿತ್ವದಲ್ಲಿರುವ ಬಲವನ್ನು ಹೆಚ್ಚಿಸಲು ಹೆಚ್ಚುವರಿಯಾಗಿ 180 ಕಂಪನಿಗಳ ಸಿಎಪಿಎಫ್‌ಗಳನ್ನು ಕರೆಸಲಾಗಿದೆ. ಅಮರನಾಥ ಯಾತ್ರೆಗೆ ಭದ್ರತೆಗಾಗಿ ಪೊಲೀಸರು, ಕೇಂದ್ರ ಮೀಸಲು ಪೊಲೀಸ್ ಪಡೆ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಮತ್ತು ಇತರ ಅರೆಸೈನಿಕ ಪಡೆಗಳಿಂದ ಸಾವಿರಾರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಡ್ರೋನ್ ಕ್ಯಾಮೆರಾ ಕೂಡ ಅಳವಡಿಸಲಾಗಿದೆ.

ನೋಡಿರಿ

