ಇರಾನ್-‌ ಇಸ್ರೇಲ್‌ ಯುದ್ಧ ಆತಂಕ – ದುಬೈನಿಂದ ಬೆಂಗಳೂರಿಗೆ 490 ಪ್ರಯಾಣಿಕರು ಸುರಕ್ಷಿತವಾಗಿ ವಾಪಸ್

ಇರಾನ್-‌ ಇಸ್ರೇಲ್‌ ಯುದ್ಧ ಆತಂಕ – ದುಬೈನಿಂದ ಬೆಂಗಳೂರಿಗೆ 490 ಪ್ರಯಾಣಿಕರು ಸುರಕ್ಷಿತವಾಗಿ ವಾಪಸ್

ಇರಾನ್-‌ ಇಸ್ರೇಲ್‌ ಯುದ್ಧ  ಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು  ತಾಯ್ನಾಡಿಗೆ ಕರೆತರುವ ಕಾರ್ಯಾಚರಣೆ ತೀವ್ರಗೊಂಡಿದೆ. ಇಂದು ದುಬೈ  ಮಾರ್ಗವಾಗಿ ಎರಡನೇ ವಿಶೇಷ ವಿಮಾನವು  ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಶಸ್ವಿಯಾಗಿ ಬಂದಿಳಿದಿದ್ದು, ಒಟ್ಟು 490 ಪ್ರಯಾಣಿಕರು ಸುರಕ್ಷಿತವಾಗಿ ನಾಡಿಗೆ ಮರಳಿದ್ದಾರೆ. ಈ ವಿಮಾನದಲ್ಲಿ ಜೆಡಿಎಸ್ ಎಂಎಲ್ ಸಿ ಎಸ್.ಎಲ್. ಭೋಜೇಗೌಡ ಹಾಗೂ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಸೇರಿದಂತೆ ಹಲವು ಪ್ರಮುಖರು ಬೆಂಗಳೂರಿಗೆ ಆಗಮಿಸಿದ್ದಾರೆ.

ಮೊದಲ ವಿಮಾನದಲ್ಲಿ 213 ಪ್ರಯಾಣಿಕರು ಆಗಮಿಸಿದ್ದರು. ಇದೀಗ ಎರಡನೇ ವಿಮಾನದಲ್ಲಿ ದಾಖಲೆ ಸಂಖ್ಯೆಯ 490 ಜನರು ಮರಳಿದ್ದಾರೆ.   ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರನ್ನು ಅಧಿಕಾರಿಗಳು ಬರಮಾಡಿಕೊಂಡಿದ್ದು, ಅಗತ್ಯ ವೈದ್ಯಕೀಯ ತಪಾಸಣೆ ಹಾಗೂ ಮುಂದಿನ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ತಾಯ್ನಾಡಿಗೆ ಮರಳಿದ ಪ್ರಯಾಣಿಕರ ಮುಖದಲ್ಲಿ ಆತಂಕದ ನಡುವೆಯೂ ನೆಮ್ಮದಿಯ ನಗು ಎದ್ದು ಕಾಣುತ್ತಿತ್ತು.

ಇದನ್ನೂ ಓದಿ: ಇಂದು ರಕ್ತ ಚಂದ್ರಗ್ರಹಣ – ಜ್ಯೋತಿಷ್ಯದ ಪ್ರಕಾರ ಏನೆಲ್ಲಾ ಮಾಡಬೇಕು? ಏನ್ ಮಾಡಬಾರದು?

ಸದ್ಯ ಕೊಲ್ಲಿ ರಾಷ್ಟ್ರಗಳಲ್ಲಿ ಇರಾನ್‌ನ ದಾಳಿ ಮುಂದುವರಿದಿದ್ದು, ಅಲ್ಲಿರುವ ಭಾರತೀಯರು ಭಯದಿಂದ ದಿನ ದೂಡುವಂತಾಗಿದೆ. ದುಬೈ ಸೇರಿದಂತೆ ಭಾರತೀಯರು, ಕನ್ನಡಿಗರು ಅಧಿಕ ಸಂಖ್ಯೆಯಲ್ಲಿರುವ ದೇಶಗಳ ವೇಳೆ ಆಕ್ರಮಣ ಮುಂದುವರಿದಿದೆ. ಮನೆ, ಕಚೇರಿ, ಹೋಟೆಲ್‌ ಸಮೀಪ ಬಾಂಬ್‌ ಸ್ಫೋಟದ ಸದ್ದು ಕೇಳಿ ಬರುತ್ತಿದ್ದು, ಭಾರತೀಯರು ಜೀವ ಕೈಯಲ್ಲಿ ಹಿಡಿದು ದಿನ ದೂಡುತ್ತಿದ್ದಾರೆ. ವಿಮಾನ ಸಂಚಾರ ರದ್ದಾದ ಕಾರಣ ಹಲವರು ಏರ್‌ಪೋರ್ಟ್‌ನಲ್ಲಿ ಬಾಕಿ ಆಗಿದ್ದಾರೆ. ಸದ್ಯ ಮೊದಲ ವಿಮಾನ ಸುರಕ್ಷಿತವಾಗಿದ್ದು ಬೆಂಗಳೂರಿಗೆ ಬಂದಿಳಿದಿದ್ದು, ಉಳಿದರವನ್ನು ಕರೆತರಲು ಪ್ರಯತ್ನಿಸುವುದಾಗಿ ಸರ್ಕಾರ ತಿಳಿಸಿದೆ.

Kishor KV