ನಟ ನಾಗಚೈತನ್ಯಗೆ ಎರಡನೇ ಮದುವೆ – ನಾಗರ್ಜುನ ಕುಟುಂಬ ಕುಡಿ ಜೊತೆ ಮದುವೆಗೆ ಸಿದ್ಧತೆ?

ನಟ ನಾಗಚೈತನ್ಯಗೆ ಎರಡನೇ ಮದುವೆ – ನಾಗರ್ಜುನ ಕುಟುಂಬ ಕುಡಿ ಜೊತೆ ಮದುವೆಗೆ ಸಿದ್ಧತೆ?

ಟಾಲಿವುಡ್ ನಟ ನಾಗಚೈತನ್ಯ ಸದ್ಯ ಒಂಟಿಯಾಗಿದ್ದಾರೆ. ಮಾಜಿ ಪತ್ನಿ ನಟಿ ಸಮಂತಾ ಜೊತೆಗೆ ಮದುವೆ ಮುರಿದು ಬಿದ್ದು ಈಗಾಗಲೇ ಎರಡು ವರ್ಷಗಳು ಕಳೆದಿವೆ. ಡಿವೋರ್ಸ್ ಬಳಿಕ ಸಿನಿಮಾಗಳತ್ತ ಹೆಚ್ಚು ಗಮನ ನೀಡುತ್ತಿದ್ದ ನಾಗಚೈತನ್ಯ ಈಗ ಎರಡನೇ ಮದುವೆಯ ಸಿದ್ಧತೆಯಲ್ಲಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ಮಾಜಿ ಪತಿ ನಾಗಚೈತನ್ಯ ಸಹಿಯ ಟ್ಯಾಟೂ ಕಾಣಿಸುತ್ತಿಲ್ಲ – ಪ್ರೀತಿಯ ನೆನಪನ್ನು ಸಂಪೂರ್ಣ ಅಳಿಸಿಹಾಕಿದ್ರಾ ನಟಿ ಸಮಂತಾ?

ಟಾಲಿವುಡ್‌ನ ಕ್ಯೂಟ್ ಜೋಡಿಗಳೆಂದೇ ಫೇಮಸ್ ಆಗಿರುವ ಸಮಂತಾ ಮತ್ತು ನಾಗಚೈತನ್ಯ ದೂರಾಗಿದ್ದಾರೆ. ಇವರಿಬ್ಬರ ದಾಂಪತ್ಯ ಜೀವನ ಅಂತ್ಯವಾಗಿ 2 ವರ್ಷಗಳಾಗಿದೆ. ಆದರೆ, ವೃತ್ತಿರಂಗದಲ್ಲಿ ಇಬ್ಬರು ಕೂಡಾ ಬ್ಯುಸಿಯಾಗಿದ್ದಾರೆ. ಹೀಗಿರುವಾಗಲೇ ಈಗ ನಾಗಚೈತನ್ಯ ಅವರ ಎರಡನೇ ಮದುವೆ ವಿಚಾರ ಜೋರಾಗಿಯೇ ಸೌಂಡ್ ಮಾಡ್ತಿದೆ. ನಾಗಚೈತನ್ಯ ತಂದೆ ನಾಗಾರ್ಜುನ ಅವರು ಪುತ್ರನ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ. ಸೊಸೆಯಾಗಿ ಆಯ್ಕೆ ಮಾಡಿರುವ ಆ ಹುಡುಗಿ ಬೇರೆ ಯಾರೂ ಅಲ್ಲ. ನಾಗಾರ್ಜುನನ ಸೋದರ ಸಂಬಂಧಿಯಂತೆ. ಈಗಾಗಲೇ ಮದುವೆಗೆ ಸಕಲ ಸಿದ್ಧತೆ ನಡೆದಿದೆಯಂತೆ.

ಸಮಂತಾ ಜೊತೆಗಿನ ಡಿವೋರ್ಸ್ ನಂತರ ನಾಗಚೈತನ್ಯ ಬಾಲಿವುಡ್ ನ ಶೋಭಿತಾ ದೂಳಿಪಾಲ ಅವರೊಂದಿಗೆ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಇದಲ್ಲದೇ ವಿದೇಶದಲ್ಲಿ ಡಿನ್ನರ್ ಡೇಟ್ ಮಾಡಿರುವ ಫೋಟೋ ಕೂಡ ರಿವೀಲ್ ಆಗಿತ್ತು. ಇದೀಗ ನಾಗಚೈತನ್ಯ ಮದುವೆಗೆ ಸಿದ್ಧತೆ ನಡೆಯುತ್ತಿದೆ ಹುಡುಗಿ ಇವರೇನಾ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.

Sulekha