ಭಾರತ ಆರ್ಮಿಗೆ ಸಖತ್ ಪವರ್ – ಹೈಪರ್ ಸಾನಿಕ್ ಟೆಕ್ನಾಲಜಿ ಸಕ್ಸಸ್
ಈ ಮಿಸೈಲ್ ಎಷ್ಟು ಸ್ಟ್ರಾಂಗ್ ಗೊತ್ತಾ?

ಭಾರತ ಆರ್ಮಿಗೆ ಸಖತ್ ಪವರ್ – ಹೈಪರ್ ಸಾನಿಕ್ ಟೆಕ್ನಾಲಜಿ ಸಕ್ಸಸ್ಈ ಮಿಸೈಲ್ ಎಷ್ಟು ಸ್ಟ್ರಾಂಗ್ ಗೊತ್ತಾ?

ನಮ್ಮ ದೇಶದ ಮಿಲಿಟರಿ ಎಷ್ಟು ಸ್ಟ್ರಾಂಗ್ ಇರೋತ್ತೋ ಅಷ್ಟು ಸೇಫ್‌.. ನಮ್ಮಲ್ಲಿ ಅತ್ಯಾಧುನಿಕ ಟೆಕ್ನಾಲಜಿ,  ಮಿಲಿಟರಿ ಶಸ್ತ್ರಾಸ್ತ್ರಗಳು ಇದ್ದಾರೆ ನಮ್ಮ ತಂಟೆಗೆ ಯಾವ ಶತ್ರುಗಳು ಬರಲ್ಲ.. ಯುದ್ಧ ಅನ್ನೋ ಪ್ರಮೆಯ ಕೂಡ ಬರಲ್ಲ.. ನಮ್ಮ ದೇಶ ಶಾಂತಿಯಾಗಿ ಇರುತ್ತೇ.. ಹಾಗಾಗಿಯೇ ಮುಂದುವರಿದ  ದೇಶಗಳು ಹೆಚ್ಚು ಒತ್ತು  ಕೊಡುವುದು ಮಿಲಿಟರಿಗೆ. ಆ ಕೆಲಸವನ್ನ ಭಾರತ ಮಾಡುತ್ತಿದೆ.. ಸೂಪರ್ ಸ್ಪೀಡ್‌ನಲ್ಲಿ ಹೋಗುವ ಹೈಪರ್ ಸಾನಿಕ್ ಮಿಸೈಲ್‌ಗಳ ತಯಾರಿಗೆ ಭಾರತ ಮುಂದಾಗಿದ್ದು ಸಕ್ಸಸ್ ಕಾಣುತ್ತಿದೆ.

ಇದನ್ನೂ ಓದಿ:ಅಮೆರಿಕದಲ್ಲಿ ಭಾರತೀಯರಿಗೆ ಶಾಕ್- 7.5 ಲಕ್ಷ ಇಂಡಿಯನ್ಸ್ ಗಡಿಪಾರು!?

 ಏನಿದು ಹೈಪರ್ ಸಾನಿಕ್ ಮಿಸೈಲ್‌?

ನಮ್ಮಲ್ಲಿ ಅಗ್ನಿ ಪುಥ್ವಿ ಅನ್ನೋ ಸಾಕಷ್ಟು ಮಿಸೈಲ್‌ಗಳು ಇವೆ.  ಆದ್ರೆ ಹೈಪರ್ ಸಾನಿಕ್ ಮಿಸೈಲ್‌ಗಳು ಸಾಕಷ್ಟು ಸ್ಪೀಡ್ ಹೊಂದಿದ್ದು  ಈ ವಲಯದಲ್ಲಿ ಭಾರತ ಸಕ್ಸಸ್ ಆಗುತ್ತಿದೆ. ಹೈಪರ್‌ಸಾನಿಕ್ ಕ್ಷಿಪಣಿಯು ಶಬ್ಧಕ್ಕಿಂತ 5 ಪಟ್ಟು ವೇಗದಲ್ಲಿ ಚಲಿಸುತ್ತದೆ. ಇದು ಸಾಕಷ್ಟು ಸ್ಪೀಡ್  ಹಾಗೂ ಕಡಿಮೆ ಎತ್ತರದಲ್ಲಿ ಹಾರುತ್ತೆ, ಹೀಗಾಗಿ ಇದನ್ನ  ಪತ್ತೆಹಚ್ಚಲು ಅಥವಾ ತಡೆಯೊಡ್ಡಲು ಕಷ್ಟಕರವಾಗಿದೆ. ಇವು ಗಂಟೆಗೆ ಮ್ಯಾಕ್ 5 ವೇಗದಲ್ಲಿ ಅಂದರೆ ತಾಸಿಗೆ 6125 ಕಿ.ಮೀ. ಚಲಿಸುತ್ತದೆ.  ಭಾರತದ ಅಣ್ವಸ್ತ್ರ ಪ್ರತಿರೋಧ ಸಾಮರ್ಥ್ಯವನ್ನು ಈ ಕ್ಷಿಪಣಿಯು ಬಲಪಡಿಸಲಿದೆ.

ಹೊಸ ಕ್ರಾಂತಿ ಮಾಡಿದ ಭಾರತ 

ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನದಲ್ಲಿ ಭಾರತದ ಸಾಮರ್ಥ್ಯವು ಉನ್ನತಮಟ್ಟಕ್ಕೇರಿರುವುದನ್ನು ಹೈಪರ್‌ ಸಾನಿಕ್ ಕ್ಷಿಪಣಿಯ ಪ್ರಾಯೋಗಿಕ ಹಾರಾಟವು ಸಾಬೀತುಪಡಿಸಿದೆ. ಮಿಲಿಟರಿ ತಂತ್ರಜ್ಞಾನ ಮಿಲಿಟರಿ ತಂತ್ರಜ್ಞಾನ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರಗಳ ಸಾಲಿಗೆ ಸೇರ್ಪಡೆಗೊಂಡಿದೆ.  ಚೀನಾ, ರಷ್ಯಾ ಹಾಗೂ ಅಮೆರಿಕ ದೇಶಗಳು ಮಾತ್ರವೇ ಈವರೆಗೆ ಹೈಪರ್‌ ಸಾನಿಕ್ ಕ್ಷಿಪಣಿಯನ್ನು ಹೊಂದಿದ ರಾಷ್ಟ್ರಗಳಾಗಿದ್ದು ಇದೀಗ ಭಾರತವು ಅವುಗಳ ಸಾಲಿಗೆ ಸೇರ್ಪಡೆಗೊಂಡಿದೆ. . 1 500 ಕಿ.ಮೀ.ಗಿಂತಲೂ ಅಧಿಕ ದೊರದವರೆಗೆ ವಿವಿಧ ಪೇಲೋಡ್‌ಗಳನ್ನು ಕೊಂಡೊಯ್ಯಲು ಸಾಧ್ಯವಾಗುವಂತಹ ರೀತಿಯಲ್ಲಿ ಈ ಹೈಪರ್‌ ಸಾನಿಕ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ. ಭಾರತವು ತನ್ನ ಚೊಚ್ಚಲ ದೀರ್ಘ ವ್ಯಾಪ್ತಿಯ ಹೈಪರ್‌ ಸಾನಿಕ್ ಕ್ಷಿಪಣಿಯ ಹಾರಾಟದ ಪ್ರಯೋಗವನ್ನು ನವೆಂಬರ್‌ನಲ್ಲ ಯಶಸ್ವಿಯಾಗಿ ನಡೆಸುವ ಮೂಲಕ ಕ್ಷಿಪಣಿ ತಂತ್ರಜ್ಞಾನದಲ್ಲಿ ಮಹತ್ವದ ಮೈಲುಗಲ್ಲನ್ನು ಸಾಧಿಸಿತ್ತು. ಈಗ ಅದ್ರ ಇಂಜಿನ್ ಪ್ರಯೋಗದಲ್ಲಿ ಸಕ್ಸಸ್ ಆಗಿದೆ.

ಸ್ಕ್ರಾಮ್‌ಜೆಟ್ ಇಂಜಿನಿ ಪ್ರಯೋಗ ಸಕ್ಸಸ್

ಡಿಆರ್‌ಡಿಓ ಈಗ ಹೈಪರ್‌ ಸಾನಿಕ್ ಕ್ಷಿಪಣಿಗೆ ಬಳಸುವ ಸ್ಕ್ರಾಮ್‌ ಜೆಟ್‌ ಇಂಜಿನಿನನ್ನ ಅಭಿವೃದ್ಧಿ ಪಡಿಸಿದ್ದು, ಅದ್ರ ಪ್ರಯೋಗದಲ್ಲಿ ಸಕ್ಸಸ್ ಆಗಿದೆ. ಈ ಇಂಜಿನ್‌ಗೆ ಬೇಕಾದ ಥರ್ಮಲ್ ಬ್ಯಾರಿಯರ್ ಕೋಟಿಂಗ್‌ನ್ನ ಸಿದ್ದಪಡಿಸಿದೆ. ಈ ವಸ್ತು ಹೆಚ್ಚು ಶಾಕವನ್ನ  ತಡೆಯೋ ಕ್ಯಾಪಸಿಟಿ ಹೊಂದಿವೆ. ಅತೀ ವೇಗದ ಇಂಜಿನ್ ಕೆಲಕ್ಕೆ ಸಾಕಷ್ಟು ಸಹಕಾರಿಯಾಗಿದೆ.. ಇದನ್ನ 120 ಸೆಕೆಂಡ್‌ಗಳ ಕಾಲ ಪರೀಕ್ಷೆ ಮಾಡಿದ್ದು, ಅದ್ರಲ್ಲಿ ಸಕ್ಸಸ್ ಆಗಿದೆ. ಸ್ಕ್ರಾಮ್‌ ಜೆಟ್‌ ಇಂಜಿನ್‌ಗೆ ಬಳಸುವ ಇಂಧನ ಕೂಡ ಭಾರತದಲ್ಲಿ ತಯಾರಿಸುವಲ್ಲಿ ಡಿಆರ್‌ಡಿಓ ಯಶಸ್ವಿಯಾಗಿದೆ. ಭಾರತ ಮಿಸೈಲ್‌ಗಳ ಶಕ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬಾರತ ಸೂಪರ್‌ ಪವರ್ ಆಗುವಂತ್ತ ಹೆಜ್ಜೆ ಇಟ್ಟಿದೆ.

 

Kishor KV