ಮನುಷ್ಯನಿಗಿಂತ ಜೇನುನೊಣಗಳೇ ಬುದ್ಧಿವಂತ ಜೀವಿ – ಅಧ್ಯಯನದಿಂದ ಬಯಲಾಯ್ತು ಅಚ್ಚರಿಯ ಮಾಹಿತಿ
ನಾವು, ನೀವೆಲ್ಲಾ ಮನುಷ್ಯನಷ್ಟು ಬುದ್ಧಿವಂತ ಜೀವಿ ಈ ಜಗತ್ತಿನಲ್ಲಿ ಬೇರೆ ಯಾವುದೂ ಇಲ್ಲ. ನಮ್ಮ ಮೆದುಳಿಗೆ ಇರುವಷ್ಟು ಚಿಂತನಾ ಸಾಮರ್ಥ್ಯ ಇನ್ಯಾರಿಗೂ ಇಲ್ಲ. ಮನುಷ್ಯ ಅತ್ಯಂತ ವೇಗವಾಗಿ ನಿರ್ಧಾರಗಳನ್ನ ತೆಗೆದುಕೊಳ್ಳಬಲ್ಲ ಜೀವಿ ಅಂತಾ ಭಾವಿಸಿದ್ದೇವೆ. ಆದ್ರೆ ಇದು ಶುದ್ಧ ತಪ್ಪು. ಜಗತ್ತಿನಲ್ಲಿ ಅತೀ ವೇಗವಾಗಿ ಮತ್ತು ಸಮರ್ಪಕವಾಗಿ ನಿರ್ಧಾರ ತೆಗೆದುಕೊಳ್ಳುವ ಏಕೈಕ ಜೀವಿ ಅಂದ್ರೆ ಅದು ಜೇನು ನೊಣಗಳು.
ಇದನ್ನೂ ಓದಿ : ಅಲೆಗಳ ನಡುವೆ ದಡಕ್ಕೆ ಅಪ್ಪಳಿಸಿದ ರಾಶಿ ರಾಶಿ ಮೀನು – ಹಾರುವ ಮೀನು ಹಿಡಿಯಲು ಮುಗಿಬಿದ್ದ ಜನ
ನಿಜ. ಜಗತ್ತಿನ ಅತ್ಯಂತ ಬುದ್ಧಿವಂತ ಜೀವಿ ಅಂದರೆ ಅದು ಜೇನುನೊಣಗಳು. ಈ ವಿಚಾರ ಆಸ್ಟ್ರೇಲಿಯಾದ ಯುನಿರ್ವಸಿಟಿ ಪ್ರೊಫೆಸರ್ಗಳ ತಂಡ ನಡೆಸಿದ ಅಧ್ಯಯನದಿಂದ ಬಹಿರಂಗವಾಗಿದೆ. ಜೇನು ನೊಣಗಳು ಅತ್ಯಂತ ಸಮತೋಲನದಿಂದ, ಅತೀ ವೇಗವಾಗಿ ಮತ್ತು ಅಷ್ಟೇ ನಿಖರವಾಗಿ ತಮ್ಮ ನಿರ್ಧಾರಗಳನ್ನ ತೆಗೆದುಕೊಳ್ಳುತ್ತವಂತೆ. ಹಲವು ಮಿಲಿಯನ್ ವರ್ಷಗಳಿಂದ ಈ ಭೂಮಿಯಲ್ಲಿ ಜೇನು ನೊಣಗಳು ವಾಸಿಸುತ್ತಿವೆ. ತಮ್ಮ ಆಹಾರಕ್ಕಾಗಿ ಜೇನುಗೂಡು ನಿರ್ಮಿಸುವ ನೊಣಗಳು ಈ ಪ್ರಕ್ರಿಯೆ ವೇಳೆ ಅತ್ಯಂತ ಚುರುಕಿನಿಂದ ಮತ್ತು ವೇಗವಾಗಿ ತಮ್ಮ ನಿರ್ಧಾರಗಳನ್ನ ತೆಗೆದುಕೊಳ್ಳುತ್ತವೆಯಂತೆ. ಆಹಾರಕ್ಕಾಗಿ ತಾವೇ ಜೇನು ಉತ್ಪಾದಿಸುವ ಕಾರಣದಿಂದ ಈ ನೊಣಗಳು ಅತ್ಯಂತ ವೇಗವಾಗಿ ಮತ್ತು ನಿಖರವಾಗಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹೊಂದಿವೆ ಅಂತಾ ಅಧ್ಯಯನ ವರದಿಯಿಂದ ಗೊತ್ತಾಗಿದೆ.
ಜೇನುನೊಳಗಳು ಅತ್ಯಂತ ಸಣ್ಣ ಗಾತ್ರದ ಮೆದುಳನ್ನ ಹೊಂದಿದ್ದು, ಆದರೂ ನಿರ್ಧಾರಗಳನ್ನ ಕೈಗೊಳ್ಳುವ ಸಾಮರ್ಥ್ಯದಲ್ಲಿ ಮನುಷ್ಯ ಅದಕ್ಕೆ ಪ್ರತಿಸ್ಪರ್ಧಿಯೇ ಅಲ್ಲ. ಯಾವ ಹೂವಿನಲ್ಲಿ ಮಕರಂದ ಇದೆ ಅನ್ನೋದನ್ನ ಪತ್ತೆ ಹಚ್ಚಿ, ಗೂಡಿಗೆ ಬಂದು.. ಜೇನು ಉತ್ಪಾದಿಸುವಾಗ ಪರಭಕ್ಷಕಗಳನ್ನೂ ಎದುರಿಸಿ ವೇಗವಾಗಿ ತಮ್ಮ ಕೆಲಸಗಳನ್ನ ನಿರ್ವಹಿಸುತ್ತವೆ. ಇನ್ನು ಒಂದು ಜೇನು ನೊಣಕ್ಕೆ ಹೂವಿನಲ್ಲಿ ಮಕರಂದ ಇದ್ಯಾ ಇಲ್ವಾ ಅನ್ನೋದನ್ನ ಪತ್ತೆ ಹಚ್ಚೋಕೆ ಕೇವಲ 0.6 ಸೆಕೆಂಡುಗಳಷ್ಟೇ ಸಾಕು. ಅಂದ್ರೆ ಹೂವಿನ ಮೇಲೆ ಹಾರಾಡುತ್ತಲೇ ಅದ್ರಲ್ಲಿ ಮಕರಂದ ಇದ್ಯಾ ಇಲ್ವಾ? ಅದು ಹೂವೇನಾ ಇಲ್ಲಾ ಅದೇ ರೀತಿ ಹೋಲುವ ಬೇರೆ ಕೀಟವಾ ಇವೆಲ್ಲವನ್ನ ನಿರ್ಧರಿಸಿ 0.6 ಸೆಕೆಂಡ್ಗಳಲ್ಲಿ ಮಕರಂದ ಹೀರೋಕೆ ಹೂವಿನ ಮೇಲೆ ಕೂರುತ್ತವೆ.
ಹೀಗೆ ಸಾವಿರಾರು ಹೂವುಗಳ ಮೇಲೆ ಕುಳಿತು ಮಕರಂದವನ್ನು ಹೀರಿ ತಮ್ಮ ಗೂಡುಗಳಲ್ಲಿ ಸಂಗ್ರಹಿಸಿಡುವ ಪರಿ ಅನನ್ಯವಾದದ್ದು. ಈ ಜೇನು ತುಪ್ಪದ ಸ್ವಾದವು ಪ್ರಪಂಚದ ಯಾವುದೇ ಆಹಾರ ವಸ್ತುವಿಗೆ ಇಲ್ಲ. ಈ ಮಕರಂದವು ತಿಂಗಳುಗಟ್ಟಲೇ ಹಾಳಾಗದೇ ಉಳಿಯುತ್ತದೆ. ಪುಟ್ಟ ಹೂವು, ಪುಟ್ಟ ಜೇನುನೊಣ, ಅಲ್ಪ ಪ್ರಮಾಣದ ಮಕರಂದ ಸಂಗ್ರಹಿಸಿ ಇವುಗಳಿಂದ ಕೆಜಿಗಳಷ್ಟು ಜೇನು ತುಪ್ಪ ಸಿಗುವುದು ಅಚ್ಚರಿಯ ಸಂಗತಿಯೇ ಸರಿ. ಅಷ್ಟೊಂದು ಜೇನು ತುಪ್ಪ ಸಿಗಲು ಆ ನೊಣಗಳು ಎಷ್ಟು ಬಾರಿ ಹೂವುಗಳತ್ತ ಹಾರಿರಬಹುದು? ನೂರಾರು ವರ್ಷಗಳಿಂದ ಜೇನುನೊಣಗಳ ಮೇಲೆ, ಅವುಗಳ ಜೀವನ ಚಕ್ರದ ಬಗ್ಗೆ, ಅವುಗಳು ನಿರ್ಮಿಸುವ ಗೂಡುಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ. ಆದರೆ ‘ಬುದ್ಧಿವಂತ’ ಮಾನವನಿಗೆ ಒಂದು ಪುಟ್ಟ ಕೀಟವಾದ ಜೇನುನೊಣದ ರಹಸ್ಯಗಳನ್ನು ಸಂಪೂರ್ಣವಾಗಿ ಬಯಲು ಮಾಡಲು ಇನ್ನೂ ಆಗಿಲ್ಲ.
ಮಾನವನು ಪರಿಸರದ ಮೇಲೆ ಮಾಡುತ್ತಿರುವ ದೌರ್ಜನ್ಯದ ಪರಿಣಾಮವಾಗಿ ಕೀಟಗಳ ಸಂಖ್ಯೆ ಅದರಲ್ಲೂ ಜೇನುನೊಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ನಗರೀಕರಣದ ನೆಪದಲ್ಲಿ ನಾವು ಗಿಡ ಮರಗಳನ್ನು ಕಡಿದಿದ್ದೇವೆ. ಯಥೇಚ್ಛವಾಗಿ ಹೂವು ಬಿಡುವಂತಹ ಗಿಡಗಳು ಕಡಿಮೆಯಾಗಿವೆ. ಇದನ್ನೆಲ್ಲಾ ಗಮನಿಸಿದ ವಿಶ್ವ ಸಂಸ್ಥೆಯು 2018ರ ಜನವರಿ 17ರಂದು ಮೇ 20ನ್ನು ‘ವಿಶ್ವ ಜೇನುನೊಣ ದಿನ’ ಎಂದು ಘೋಷಿಸಿತು. ಆ ಬಳಿಕ ಪ್ರತೀ ವರ್ಷ ಮೇ 20ರಂದು ಜೇನುನೊಣಗಳ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಜನರಲ್ಲಿ ತಮ್ಮ ತಮ್ಮ ಪರಿಸರವನ್ನು ಕಾಪಾಡಿಕೊಳ್ಳುವ ಮತ್ತು ಜೇನುನೊಣಗಳ ಬದುಕಿಗೆ ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ.