ಕಳೆದ ವಾರ ಕಿತ್ತಾಟ, ಕಣ್ಣಿಗೆ ಏಟು, ಅತಿರೇಕದ ವರ್ತನೆಗೆ ಬಿಗ್‌ಬಾಸ್ ಸುಸ್ತು – ಈ ವಾರ ಸ್ಕೂಲ್ ಟಾಸ್ಕ್.. ಮನರಂಜನೆಯಷ್ಟೇ ಸಾಕು..!
ಕಳೆದವಾರದ ಕಿತ್ತಾಟ, ಹೊಡೆದಾಟ, ನೀರಿನ ಎರಚಾಟ, ಸೋಶಿಯಲ್ ಮೀಡಿಯಾದಲ್ಲಿ ಹೊರಬಿದ್ದ ಆಕ್ರೋಶ.. ಇದನ್ನು ನೋಡಿಯೋ ಏನೋ.. ಈ ವಾರ ಬಿಗ್‌ಬಾಸ್ ಬರೀ ಮನರಂಜನೆಗಷ್ಟೇ ಸ್ಪರ್ಧಿಗಳನ್ನು ಸೀಮಿತಗೊಳಿಸಿದೆ. ಈ ವಾರ ಸ್ಕೂಲ್ ಟಾಸ್ಕ್ ನೀಡಲಾಗಿದೆ. ಹೀಗಾಗಿ, ಈ ವಾರ ಎಲ್ಲವೂ ಸಖತ್ ಫನ್ ಆಗಿರಲಿದೆ.
ಇದನ್ನೂ ಓದಿ:ಕಿಚ್ಚನ ಚಪ್ಪಾಳೆ ಬಗ್ಗೆ ನಮ್ರತಾ ಮತ್ತು ವಿನಯ್ ಅನುಮಾನ – ಸುದೀಪ್ ಮೇಲೆ ಇಂಥಾ ಅನುಮಾನ ಸರಿಯೇ ಬಿಗ್‌ಬಾಸ್?
ಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್ ವಿಚಾರ ರಿವೇಂಜ್ ತೀರಿಸಿಕೊಳ್ಳುವ ತನಕವೂ ಹೋಗಿತ್ತು. ಸ್ಪರ್ಧಿಗಳು ಆಸ್ಪತ್ರೆಗೂ ದಾಖಲಾದರು. ಈಗಲೂ ಸಂಗೀತಾ ಮತ್ತು ಡ್ರೋನ್ ಕಣ್ಣಿಗೆ ಆಗಿರುವ ಏಟು ಕಡಿಮೆಯಾಗಿಲ್ಲ. ಹಾಗಿದ್ದರೂ ಇವರಿಬ್ಬರ ನೋವಿಗೆ ಕಾರಣರಾದವರಿಗೆ ಪಶ್ಚಾತ್ತಾಪ ಕೂಡಾ ಆಗಿಲ್ಲ. ಇದನ್ನು ಬಿಗ್‌ಬಾಸ್ ಪ್ರಶ್ನೆ ಕೂಡಾ ಮಾಡಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಜನ ಆಕ್ರೋಶ ಹೊರಹಾಕಿದ್ದರು. ಹೀಗಾಗಿಯೇ ಏನೋ.. ಈ ವಾರ ಬಿಗ್‌ಬಾಸ್ ಬರೀ ಮನರಂಜನೆ ಸಿಗುವಂತಾ ಆಟವನ್ನೇ ಆಡಿಸುತ್ತಿದೆ. ಈ ವಾರ ಸ್ಕೂಲ್ ಟಾಸ್ಕ್ ಆಡಿಸುತ್ತಿದೆ. ಅದರಲ್ಲೂ ಮೈಕಲ್ ಅಜಯ್ ಈ ವಾರ ಕನ್ನಡ ಮೇಷ್ಟ್ರಾಗಿದ್ದಾರೆ. ಮೈಕಲ್‌ಗೆ ಶುದ್ಧವಾಗಿ ಕನ್ನಡ ಮಾತನಾಡಲು ಬರದೇ ಇದ್ದರೂ ಅವರು ಇಲ್ಲಿನ ಭಾಷೆ ಕಲಿಯುವ ಪ್ರಯತ್ನವನ್ನಂತೂ ಮಾಡುತ್ತಿದ್ದಾರೆ. ಈಗ ಅವರು ಬಿಗ್ ಬಾಸ್ ಶಾಲೆಯಲ್ಲಿ ಕನ್ನಡ ಕಲಿಸುವ ಮೇಷ್ಟ್ರಾಗಿದ್ದಾರೆ. ಮೈಕಲ್ ಅಜಯ್ ಅವರು ನೈಜೀರಿಯಾದವರು. ಅವರ ತಾಯಿ ಕರ್ನಾಟಕದವರು. ಹೀಗಾಗಿ ಅವರಿಗೆ ಕನ್ನಡದ ಟಚ್ ಇದೆ. ಶುದ್ಧವಾಗಿ ಕನ್ನಡ ಮಾತನಾಡಲು ಬರದೇ ಇದ್ದರೂ ಅವರು ಇಲ್ಲಿನ ಭಾಷೆ ಕಲಿಯುವ ಪ್ರಯತ್ನವನ್ನಂತೂ ಮಾಡುತ್ತಿದ್ದಾರೆ. ಈಗ ಅವರು ಬಿಗ್ ಬಾಸ್ ಶಾಲೆಯಲ್ಲಿ ಕನ್ನಡ ಕಲಿಸುವ ಮೇಷ್ಟ್ರಾಗಿದ್ದಾರೆ. ‘ವಿದೇಶದಿಂದ ಬಂದಿದ್ದೀನಿ. ಕನ್ನಡದ ಮೇಲೆ ಪ್ರೀತಿ ಆಯ್ತು. ಈಗ ಪಂಡಿತ ಆಗೋಕೆ ಪ್ರಯತ್ನ ಮಾಡುತ್ತಿದ್ದೇನೆ’ ಎಂದಿದ್ದಾರೆ ಮೈಕಲ್. ಇಂಗ್ಲಿಷ್ ಮಾತನಾಡಿದರೆ ಪನಿಶ್ಮೆಂಟ್ ಕೊಡೋ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ. ಬಿಗ್ ಬಾಸ್ ಮನೆ ಶಾಲೆಯಾಗಿ ಬದಲಾಗಿದೆ. ‘ಬಿಗ್ ಬಾಸ್ ಶಾಲೆ’ ಬೋರ್ಡ್ ಗಮನ ಸೆಳೆದಿದೆ.