ಬ್ಯಾಚುಲರ್ಸ್.. ಹೋಟೆಲ್‌ನಲ್ಲಿ ತಿನ್ನೋದು ಈಗಲೇ ಬಿಡಿ – ಜಸ್ಟ್ ಐದು ನಿಮಿಷದಲ್ಲೇ ರೆಡಿ ಮಾಡಿ ಈ ರೆಸಿಪಿ

ಬ್ಯಾಚುಲರ್ಸ್‌ಗಳ ದೊಡ್ಡ ಸಮಸ್ಯೆ ಅಂದ್ರೆ ಅಡಿಗೆ ಮಾಡೋದು. ಹೀಗಾಗಿ ಸಾಕಷ್ಟು ಜನ ಹೋಟೆಲ್ ಊಟ ತಿಂದ ತಮ್ಮ ಆರೋಗ್ಯವನ್ನ ಹಾಳು ಮಾಡಿಕೊಳ್ತಾರೆ. ಆದ್ರೆ ಫಟಾಫಟ್ ಅಂತ ನೀವು ಕೂಡ ಸುಲಭದ ರೆಸಿಫಿ ಮಾಡಿಕೊಳ್ಳಬಹುದು. ಕುಕ್ಕರ್‌ನಲ್ಲಿ ಕೇವಲ 5 ನಿಮಿಷಗಳಲ್ಲಿ ಅಷ್ಟೇ ರುಚಿಯಾದ ಹೋಟೆಲ್ ಶೈಲಿಯ ಶೆಜುವಾನ್ ಫ್ರೈಡ್ ರೈಸ್ ರೆಡಿಯಾಗುತ್ತೆ. ಹಾದಿದ್ರೆ ಇದ್ದನ್ನ ಮಾಡೋದು ಹೇಗೆ ಅನ್ನೋದ್ದನ್ನೋ ನೋಡೋಣ.
ಶೆಜುವಾನ್ ಫ್ರೈಡ್ ರೈಸ್‌ಗೆ ಬೇಕಾಗುವ ಸಾಮಗ್ರಿಗಳು
*ಬೇಯಿಸಿದ ಅನ್ನ * ಶೆಜುವಾನ್ ಸಾಸ್ • ಎಣ್ಣೆ • ಬೆಳ್ಳುಳ್ಳಿ • ಹಸಿ ಮೆಣಸಿನಕಾಯಿ • ಈರುಳ್ಳಿ • ಕ್ಯಾರೆಟ್ • ಕ್ಯಾಪ್ಸಿಕಂ • ಎಲೆಕೋಸು • ಸೋಯಾ ಸಾಸ್ • ಉಪ್ಪು • ಕಾಳುಮೆಣಸಿನ ಪುಡಿ • ಸೀಮೆ ಈರುಳ್ಳಿ
ಮಾಡುವ ವಿಧಾನ
ಮೊದಲು ಕುಕ್ಕರ್ ಅನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ನಂತರ, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಲಘುವಾಗಿ ಹುರಿಯಿರಿ. ಬೆಳ್ಳುಳ್ಳಿಯ ಘಮ ಬರಲು ಪ್ರಾರಂಭವಾದಾಗ ಈರುಳ್ಳಿ ಸೇರಿಸಿ ಅದು ಕೆಂಪಾಗುವವರೆಗೆ ಬಾಡಿಸಿ. – ಈಗ ಕತ್ತರಿಸಿಟ್ಟುಕೊಂಡ ಕ್ಯಾರೆಟ್, ಎಲೆಕೋಸು ಮತ್ತು ಕ್ಯಾಪ್ಸಿಕಂ ತರಕಾರಿಗಳನ್ನು ಕುಕ್ಕರ್‌ಗೆ ಸೇರಿಸಿ. ತರಕಾರಿಗಳು ಅತಿ ಹೆಚ್ಚು ಬೇಯಬಾರದು; ಅವುಗಳಲ್ಲಿನ ಕುರುಕುಲುತನ ಉಳಿಯುವಂತೆ ಮೂರು ನಿಮಿಷಗಳ ಕಾಲ ಅಧಿಕ ಉರಿಯಲ್ಲಿ ಹುರಿಯಿರಿ. – ಈಗ ಮುಖ್ಯ ಪದಾರ್ಥಗಳಾದ ಶೆಜುವಾನ್ ಸಾಸ್, ಸೋಯಾ ಸಾಸ್, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎಲ್ಲ ಪದಾರ್ಥಗಳು ಸಮನಾಗಿ ಬೆರೆತುಕೊಂಡಿವೆ ಎಂದು ನೋಡಿ. – ನಂತರ, ಮೊದಲೇ ಬೇಯಿಸಿಟ್ಟುಕೊಂಡ ಉದುರು ಉದುರಾದ ಅನ್ನವನ್ನು ಕುಕ್ಕರ್‌ಗೆ ಹಾಕಿ. ಅನ್ನದ ಅಗುಳುಗಳು ಮುರಿಯದಂತೆ ಎಚ್ಚರಿಕೆಯಿಂದ ಸಾಸ್ ಮತ್ತು ತರಕಾರಿಗಳೊಂದಿಗೆ ಹಗುರವಾಗಿ ಬೆರೆಸಿ. ಅನ್ನವು ಸಾಸ್ ಅನ್ನು ಚೆನ್ನಾಗಿ ಹೀರಿಕೊಳ್ಳಲು ಎರಡು ನಿಮಿಷ ಸಣ್ಣ ಉರಿಯಲ್ಲಿ ಬಿಸಿ ಮಾಡಿ. – ಅಂತಿಮವಾಗಿ, ಸಣ್ಣಗೆ ಹೆಚ್ಚಿದ ಹಸಿರು ಈರುಳ್ಳಿಯನ್ನು ಮೇಲೆ ಉದುರಿಸಿ. ಈಗ ನಿಮ್ಮ ಸ್ಪೈಸಿ ಶೆಜುವಾನ್ ಫ್ರೈಡ್ ರೈಸ್ ಸವಿಯಲು ಸಿದ್ಧವಾಗಿದೆ

ನೋಡಿರಿ

