ಐಪಿಎಲ್ ಪ್ಲೇ ಆಫ್ ವೇಳಾಪಟ್ಟಿ ಪ್ರಕಟ! – ಚಿನ್ನಸ್ವಾಮಿ ಕೈ ತಪ್ಪಿದ IPL ಫೈನಲ್

ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ ಐಪಿಎಲ್-2026ರ ಪ್ಲೇ ಆಫ್ ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇಂದು ಅಧಿಕೃತವಾಗಿ ವೇಳಾಪಟ್ಟಿ ಪ್ರಕಟಿಸಿದ್ದು, ಈ ಬಾರಿಯ ಟೂರ್ನಿಯ ಅಂತಿಮ ಹಣಾಹಣಿಯು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೇ 31ರಂದು ನಡೆಯಲಿದೆ.
ಇದನ್ನೂ ಓದಿ: ಒಂದೇ ಬಾಲ್‌ನಲ್ಲಿ ಎರಡು ಬಾರಿ ಔಟಾದ ನಿತೀಶ್ ರಾಣಾ! – ನಿಯಮ ಏನು ಹೇಳುತ್ತೆ? OUT Or ಡೆಡ್ ಬಾಲ್?
ಒಟ್ಟು 70 ಲೀಗ್ ಹಂತದ ಪಂದ್ಯಗಳ ನಂತರ ಐಪಿಎಲ್ ಟೂರ್ನಿಯು ಈಗ ನಿರ್ಣಾಯಕ ಘಟ್ಟವನ್ನು ಪ್ರವೇಶಿಸಿದೆ. ಈ ಹಿಂದೆ ಐಪಿಎಲ್ನ ಫೈನಲ್ ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಫೈನಲ್ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೇ 31ರಂದು ನಡೆಯಲಿದೆ.
ಇನ್ನು ಪ್ಲೇಆಫ್ ಹಂತದ ನಾಲ್ಕು ಪಂದ್ಯಗಳನ್ನು ಮೂರು ನಗರಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಅದರಂತೆ ಧರ್ಮಶಾಲಾ, ಚಂಡೀಗಢ್ ಮತ್ತು ಅಹಮದಾಬಾದ್ ನಗರಗಳಲ್ಲಿ ದ್ವಿತೀಯ ಸುತ್ತಿನ ಪಂದ್ಯಗಳು ನಡೆಯಲಿದೆ. ಮೊದಲ ಕ್ವಾಲಿಫೈಯರ್ ಪಂದ್ಯವು ಧರ್ಮಶಾಲಾದಲ್ಲಿ ಮೇ26ರಂದು ನಡೆದರೆ, ಎಲಿಮಿನೇಟರ್ ಪಂದ್ಯ ಮೇ 27 ರಂದು ಹಾಗೂ ಕ್ವಾಲಿಫೈಯರ್ 2: ಮೇ 29 ಪಂದ್ಯ ಚಂಡೀಗಢ್ನಲ್ಲಿ ನಡೆಯಲಿದೆ. ಇನ್ನು ಫೈನಲ್ ಪಂದ್ಯಕ್ಕೆ ಅಹಮದಾಬಾದ್ ನಗರ ಆತಿಥ್ಯವಹಿಸಲಿದೆ.
IPL ಫೈನಲ್ ಚಿನ್ನಸ್ವಾಮಿ ಕೈತಪ್ಪಲು ಕಾರಣವೇನು?
ಪೂರ್ವ ನಿಗದಿಯಂತೆ ಈ ಬಾರಿಯ ಐಪಿಎಲ್ ಫೈನಲ್ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿತ್ತು. ಆದರೆ, ತಾಂತ್ರಿಕ ಮತ್ತು ವ್ಯವಸ್ಥಾಪನಾ ಕಾರಣಗಳಿಂದಾಗಿ ಬಿಸಿಸಿಐ ಕೊನೆಯ ಕ್ಷಣದಲ್ಲಿ ಫೈನಲ್ ಪಂದ್ಯದ ಆತಿಥ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಿದೆ. ಇದಕ್ಕೆ ಮುಖ್ಯ ಶಾಸಕರ ಟಿಕೆಟ್ ಹಂಚಿಕೆ ವಿವಾದ, ಭದ್ರತಾ ಲೋಪ ಮತ್ತು ಸಿಸಿಟಿವಿ ವಿವಾದ, ಕ್ರೀಡಾಂಗಣದ ಸುರಕ್ಷತೆ ಮತ್ತು ಮೂಲಸೌಕರ್ಯ ಕೊರತೆ. ಈ ಎಲ್ಲಾ ಕಾರಣಗಳಿಂದಾಗಿ ಇದೀಗ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಪಿಎಲ್ನ ಫೈನಲ್ ಪಂದ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಲಾಗಿದೆ. ಅದರಂತೆ ಮೇ 31 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ಜರುಗಲಿದೆ.

ನೋಡಿರಿ

