ಒಡಿಶಾದ SBA ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ – 10ಕ್ಕೂ ಹೆಚ್ಚು ರೋಗಿಗಳು ಸಾ*ವು, 11 ಜನಕ್ಕೆ ಗಂಭೀರ ಗಾಯ

ಒಡಿಶಾದ ಭೀಕರ ಘಟನೆ ನಡೆದಿದೆ. ಕಟಕ್‌ನಲ್ಲಿರುವ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಕನಿಷ್ಟ ಹತ್ತು ರೋಗಿಗಳು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 11 ಆಸ್ಪತ್ರೆ ಸಿಬ್ಬಂದಿ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. ಬೆಳಗಿನ ಜಾವ 2:30 ರಿಂದ 3 ಗಂಟೆಯ ಸುಮಾರಿಗೆ ಐಸಿಯುನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. . ಘಟನಾ ಸ್ಥಳಕ್ಕೆ ಹಲವಾರು ಅಗ್ನಿಶಾಮಕ ವಾಹನಗಳು ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.
ಇದನ್ನೂ ಓದಿ: 41 ಸೋಮವಾರ ಈ ಸಿಂಪಲ್ ಕೆಲಸ ಮಾಡಿ – ಹಣದ ಸಮಸ್ಯೆ ಪರಿಹಾರದ ಜೊತೆ ಬದಲಾಗುತ್ತೆ ನಿಮ್ಮ ಜೀವನ
ಎಸ್‌ಸಿಬಿ ಆಸ್ಪತ್ರೆ ಒಡಿಶಾದಲ್ಲಿ ಸರ್ಕಾರಿ ಸ್ವಾಮ್ಯದ ಪ್ರಮುಖ ವೈದ್ಯಕೀಯ ಸೌಲಭ್ಯವಾಗಿದ್ದು, ಘಟನೆ ನಡೆದ ಸ್ವಲ್ಪ ಸಮಯದ ನಂತರ, ಒಡಿಶಾ ಮುಖ್ಯಮಂತ್ರಿ ಆರೋಗ್ಯ ಸಚಿವ ಮುಖೇಶ್ ಮೋಹನ್ ಚರಣ್ ಮಾಝಿ, ಮಹಾಲಿಂಗ್ ಅವರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರ ರೋಗಿಗಳನ್ನು ಸಹ ಭೇಟಿ ಮಾಡಿದರು.
ಬಳಿಕ ಮಾತನಾಡಿ, ಒಟ್ಟು 23 ರೋಗಿಗಳನ್ನು ಇತರ ವಿಭಾಗಗಳಿಗೆ ಸ್ಥಳಾಂತರಿಸಲಾಗಿದೆ. ಇತರ ಐಸಿಯುಗಳು ಮತ್ತು ವಾರ್ಡ್‌ಗಳಿಗೆ ಸ್ಥಳಾಂತರಿಸುವಾಗ ಏಳು ಗಂಭೀರ ರೋಗಿಗಳು ಸಾವನ್ನಪ್ಪಿದರು, ಆದರೆ ಇನ್ನೂ ಮೂವರು ರೋಗಿಗಳು ನಂತರ ಸಾವನ್ನಪ್ಪಿದರು. ಗಾಯಗೊಂಡ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ” ಎಂದು ಮುಖ್ಯಮಂತ್ರಿ ಮಾಧ್ಯಮಗಳಿಗೆ ತಿಳಿಸಿದರು.ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿಲಾಗಿದೆ. ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಯನ್ನು ಮುಖ್ಯಮಂತ್ರಿ ಘೋಷಿಸಿದ್ದಾರೆ.

ನೋಡಿರಿ

