ಸೈಕಲ್ ಬಿಡುತ್ತಲೇ ಸ್ಕಿಪ್ಪಿಂಗ್… ಭಲೇ… ಭಲೇ.. ಏನ್ ಬ್ಯಾಲೆನ್ಸ್..!

ಸೈಕಲ್ ಬಿಡುತ್ತಲೇ ಸ್ಕಿಪ್ಪಿಂಗ್… ಭಲೇ… ಭಲೇ.. ಏನ್ ಬ್ಯಾಲೆನ್ಸ್..!

ಬೈಕ್, ಸೈಕಲ್ ಗಳಲ್ಲಿ ಯುವಕರು ಸ್ಟಂಟ್ ಮಾಡಿ ತಮ್ಮ ಸಾಹಸ ಪ್ರದರ್ಶಿಸುತ್ತಾರೆ. ಇಂತಹ ಹುಚ್ಚು ಸಾಹಸಗಳತ್ತ ಯುವತಿಯರು ಹೋಗುವುದು ಕಡಿಮೆ. ಆದರೆ ಇಲ್ಲೊಬ್ಬಳು ಯುವತಿ ತನ್ನ ಸೈಕಲ್ ನಲ್ಲಿ ಮಾಡಿರುವ ಸ್ಟಂಟ್, ಎಲ್ಲರನ್ನು ಹುಬ್ಬೇರುವಂತೆ ಮಾಡಿದೆ.

ಯುವತಿಯೊಬ್ಬಳು ಸೈಕಲ್ ನಲ್ಲಿ ಹೋಗುತ್ತಿರುವ ವೇಳೆ ತನ್ನ ಸಾಹಸವನ್ನು ಪ್ರದರ್ಶಿಸಿದ್ದಾಳೆ. ಈ ವಿಡಿಯೋವನ್ನು iamsecretgirl023 ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಭಾರಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಕಿಟಕಿಯಿಂದ ಚಲಿಸುತ್ತಿರುವ ಬಸ್ ಹತ್ತಿದ ಯುವತಿ – ಸೀಟಿಗಾಗಿ ಈ ಸಾಹಸ ಬೇಕಾ?  

ವೈರಲ್ ಆದ ವಿಡಿಯೋದಲ್ಲಿ, ಸೈಕಲ್‌ನಲ್ಲಿ ಯುವತಿಯೊಬ್ಬಳು ಸಾಗುತ್ತಿರುವ ದೃಶ್ಯದ ಮೂಲಕ ಶುರುವಾಗುತ್ತದೆ. ಆದರೆ, ಹೀಗೆ ಹೋಗುತ್ತಿರುವ ವೇಳೆ ಸೈಕಲ್ ಹ್ಯಾಂಡಲ್ ಮೇಲಿದ್ದ ತನ್ನ ಎರಡು ಕೈಗಳನ್ನು ಬಿಡುತ್ತಾಳೆ. ಬಳಿಕ ತನ್ನ ಬಳಿ ಇದ್ದ  ಸ್ಕಿಪ್ಪಿಂಗ್ ರೋಪನ್ನು ಹಿಡಿದು ಸ್ಕಿಪ್ಪಿಂಗ್ ಮಾಡುತ್ತಾ ಸರಾಗವಾಗಿ ಸಾಗಿದ್ದಾಳೆ.

ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆದರೆ, ಈಕೆಯ ಸಾಹಸ ಕಂಡು ನೆಟ್ಟಿಗರು ಮಿಶ್ರಪ್ರತಿಕ್ರಿಯೆ ನೀಡಿದ್ದಾರೆ. ಒಂದಷ್ಟು ಮಂದಿ ಈ ಸಾಹಸವನ್ನು ಕಂಡು ಅಚ್ಚರಿಪಟ್ಟರೆ, ಕೆಲವರು ಇದು ಅಪಾಯಕಾರಿ ಸಾಹಸ, ಇದರಿಂದ ಜೀವಕ್ಕೆ ತೊಂದರೆ ಎದುರಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಖಂಡಿತಾ ಇದು ಅಪಾಯಕಾರಿ. ಇದನ್ನು ಯಾರೂ ಅನುಕರಣೆ ಮಾಡಲು ಹೋಗಬೇಡಿ. ಯಾಕೆಂದರೆ, ನಿಮ್ಮ ಭಂಡ ಧೈರ್ಯ ಶಾಶ್ವತ ನೋವಿಗೂ ಕಾರಣವಾಗಬಹುದು ಎಂದು ನೆಟ್ಟಿಗರು ಹೇಳಿದ್ದಾರೆ.

suddiyaana