ಭಾರತದಲ್ಲಿರೋ ಬೆಚ್ಚಿ ಬೀಳಿಸೋ ಗುಹೆಗಳು- ಹತ್ತಿರ ಹೋದ್ರೆ ಫಿನಿಷ್
ಗುಣ ಗುಹೆಗಿಂತ ಡೇಂಜರ್ ಈ ಗುಹೆ

ಭಾರತದಲ್ಲಿರೋ ಬೆಚ್ಚಿ ಬೀಳಿಸೋ ಗುಹೆಗಳು- ಹತ್ತಿರ ಹೋದ್ರೆ ಫಿನಿಷ್ಗುಣ ಗುಹೆಗಿಂತ ಡೇಂಜರ್ ಈ ಗುಹೆ

ನೀವೆಲ್ಲ ಮಲಯಾಳಂ ಸೂಪರ್ ಹಿಟ್ ಸಿನಿಮಾ  ಮಂಜುಮ್ಮೆಲ್ ಬಾಯ್ಸ್ ನೋಡಿರಬಹುದು. ಕೇರಳದ ಗೆಳೆಯರ ಗುಂಪು ಕೊಡೈಕೆನಾಲ್‌ಗೆ  ಪ್ರವಾಸಕ್ಕೆ ಹೊರಡುತ್ತದೆ. ಅದರಲ್ಲೊಬ್ಬಾತ ಪ್ರವಾತದೊಳಗೆ ಬೀಳುತ್ತಾನೆ. ಆತನನ್ನು ಹೇಗೆ ಮೇಲೆಕ್ಕೆ ಎತ್ತುತ್ತಾರೆ ಎನ್ನುವುದೇ ಕಥೆ. ಅಂದಹಾಗೆ ಈ ಸಿನಿಮಾ ಸುತ್ತುವುದು ಗುಣ ಎಂಬ ಗುಹೆಯ  ಸುತ್ತ. ಈ ಗುಣ ಗುಹೆಗಳನ್ನು ಡೆವಿಲ್ಸ್ ಕಿಚನ್  ಎಂದು ಕರೆಯಲಾಗುತ್ತದೆ.  

ತಮಿಳುನಾಡಿನ ಕೊಡೈಕೆನಾಲ್ ನಲ್ಲಿರುವ ಗುಣ ಗುಹೆಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿಶೇಷವಾದ ಕಲ್ಲುಗಳು, ಕಿರಿದಾದ ದಾರಿ, ನೈಸರ್ಗಿಕ ಸೊಬಗು ಎಲ್ಲರ ಗಮನ ಸೆಳೆಯುತ್ತೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಪ್ರಕೃತಿ ಮಡಿಲಲ್ಲಿ ಮಿಂದೇಳುವ ಮೂಲಕ ಹಚ್ಚಹಸಿರಿನಲ್ಲಿ ಅದ್ಭುತ ಕ್ಷಣಗಳನ್ನು ಅನುಭವಿಸುತ್ತಾರೆ. ಕೊಡೈಕೆನಾಲ್ ನಲ್ಲಿ ಅತ್ಯದ್ಭುತವಾದ ತಾಣಗಳಲ್ಲಿ ಗುಣ ಗುಹೆಗಳು ಪ್ರಮುಖವಾದದ್ದು. ಕೊಡೈಕೆನಾಲ್ ನಲ್ಲಿ ಗುಣ ಗುಹೆ ಎಂದು ಗುರುತಿಸಿಕೊಂಡಿರುವ ಈ ಗುಹೆಯ ಮೊದಲ ಹೆಸರು ಡೆವಿಲ್ಸ್ ಕಿಚನ್. ಈ ಗುಹೆಗಳಲ್ಲಿ ಹಲವು ಕೌತುಕ ವಿಚಾರಗಳು ಅಡಗಿದ್ದು, ಇಲ್ಲಿನ ನಿಗೂಢತೆ ತಿಳಿದುಕೊಳ್ಳಲು ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ ಕಮಲ್ ಹಾಸನ್ ಅಭಿನಯದ ಗುಣ ಸಿನಿಮಾ ಶೂಟಿಂಗ್ ಈ ಗುಹೆಯಲ್ಲಿ ನಡೆದ ಮೇಲೆ ಡೆವಿಲ್ಸ್ ಕಿಚನ್ ಎನ್ನುವ ಬದಲು  ಗುಣ ಗುಹೆ ಎಂದು ಕರೆಯುತ್ತಾ ಬಂದರು.

ಇದನ್ನೂ ಓದಿ:ಮಾನಸ ಅತಿರೇಕದ ವರ್ತನೆ.. ಬಿಗ್‌ ಬಾಸ್‌ ನಿಂದ OUT? – ತುಕಾಲಿ ಪತ್ನಿ ದೃಷ್ಟಿ ಗೊಂಬೆ

 ಗುಣ ಗುಹೆಯಲ್ಲಿದೆ ರಹಸ್ಯ ಕೋಣೆ

2006ರಲ್ಲಿ ಯುವ ಪರಿಶೋಧಕರ ಗುಂಪು ತಮಿಳುನಾಡಿನ ಕೊಡೈಕೆನಾಲ್‌ನಲ್ಲಿರುವ ಗುಣ ಗುಹೆಗಳಲ್ಲಿ ಸಾಹಸ ಪ್ರವಾಸಕ್ಕೆ ಆಗಮಿಸಿದ್ದರು. ಗುಹೆಯೊಳಗೆ ಹೋಗಿದ್ದ ಯುವಕರು ಪ್ರತಿಯೊಂದನ್ನು ಪರಿಶೀಲಿಸುತ್ತಾ ನಿಗೂಢತೆಯನ್ನು ಬೆನ್ನಟ್ಟಿದ್ದರು. ಕೌತುಕದ ತಾಣದ ದಾರಿಯಲ್ಲಿ ಹಾದು ಹೋಗುವಾಗ ತಲೆಮಾರುಗಳವರೆಗೆ ಪತ್ತೆಯಾಗದೆ ಇದ್ದ ರಹಸ್ಯ ಕೋಣೆಯನ್ನು ನೋಡಿದರು. ಈ ಕೊಠಡಿಯಲ್ಲಿನ ಗೋಡೆಗಳಲ್ಲಿ ಹಲವು ಪುರಾತನ ಚಿತ್ರಗಳನ್ನು ಬಹಿರಂಗಪಡಿಸಿದ್ರು.

 ಗುಣ ಗುಹೆಯಲ್ಲಿ 12 ಜನ ಸಾವು.!

ಸೆಪ್ಟೆಂಬರ್ 3, 2006 ರಂದು, ಕೇರಳದ ಎರ್ನಾಕುಲಂ ಜಿಲ್ಲೆಯ ಮಂಜುಮ್ಮೆಲ್ ನಿವಾಸಿಯಾಗಿರುವ ಕಟ್ಟಡ ಕಾರ್ಮಿಕ ಸುಭಾಷ್ ತನ್ನ ಒಂಬತ್ತು ಮಂದಿ ಸ್ನೇಹಿತರ ಜೊತೆ ಗುಣ ಗುಹೆಗಳಿಗೆ ಭೇಟಿ ನೀಡಿದ್ದರು. ಗುಣ ಗುಹೆಗಳ ದಾರಿಯಲ್ಲಿ ಹಾದುಹೋಗುವಾಗ ಒಂದು ಕಂದಕ ದಾಟುವಾಗ ಗುಹೆಯೊಳಗಿನ ನಿಗೂಢ ಸ್ಥಳಕ್ಕೆ ಬಿದ್ದಿದ್ದನು. ಆತನ ಸ್ನೇಹಿತ ಸಿಜು ಡೇವಿಡ್, ಧೈರ್ಯದಿಂದ ರಕ್ಷಣಾ ಕಾರ್ಯದಲ್ಲಿ ತೊಡಗಿ ಸ್ನೇಹಿತನನ್ನು ಹೊರ ತೆಗೆದರು. ಈ ರಕ್ಷಣಾ ಕಾರ್ಯ ಥ್ರಿಲ್ಲಿಂಗ್ ಹಾಗೂ ಭಯಾನಕವಾಗಿತ್ತು ಎಂದು ಹೇಳಿಕೊಂಡಿದ್ದರು. ಇದೇ ನೈಜಕಥೆಯನ್ನು ಮಲಯಾಳಂ ಸಿನಿಮಾ ಮಂಜುಮ್ಮೆಲ್ ಬಾಯ್ಸ್ ನಲ್ಲಿ ರೋಚಕವಾಗಿ ದೃಶ್ಯರೂಪದಲ್ಲಿ ತೋರಿಸಲಾಗಿದೆ. ಈ ಗುಹೆಯಲ್ಲಿ ಸುಮಾರು 12 ಯುವಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತದೆ.

ಗುಣ ಗುಹೆಗಿಂತ ಡೇಂಜರ್ ಈ ಗುಹೆ

ಇಷ್ಟೋ ತನಕ ಗುಣ ಗುಹೆ ನೋಡಿದ್ರಿ ಇದಕ್ಕಿಂತಲೂ ಅಪಾಯಕಾರಿ ಗುಹೆ ಒಂದಿದೆ. ಜಗತ್ತಿನ ಅತ್ಯಂತ ಅಪಾಯಕಾರಿ ಗುಹೆ ಎನಿಸಿಕೊಂಡಿದೆ. ಅದುವೇ ‘ಕ್ಯೂವಾ ಡೆ ಲಾ ಮುರ್ಟೆ’ . ಇದನ್ನು ಸಾವಿನ ಗುಹೆ ಎಂದೂ ಕರೆಯುತ್ತಾರೆ. ಈ ಸಾವಿನ ಗುಹೆಯು ಕೋಸ್ಟಾರಿಕಾದ ಪೋಯಾಸ್ ಜ್ವಾಲಾಮುಖಿಯ ಬಳಿಯಿದೆ.  ಗುಹೆಯ ಮುಂದೆ ಜನರು ಪ್ರವೇಶಿಸದಂತೆ ಎಚ್ಚರಿಕೆ ನೀಡುವ ಫಲಕವನ್ನೂ ಹಾಕಲಾಗಿದೆ.  ಆರು ಅಡಿ ಆಳ ಮತ್ತು ಹತ್ತು ಅಡಿ ಉದ್ದವಿರುವ ಈ ಗುಹೆಯಲ್ಲಿ ಯಾವುದೇ ಪ್ರಾಣಿಗಳು, ವಿಷಕಾರಿ ಸಸ್ಯಗಳು, ಹಾವುಗಳು ಅಥವಾ ಜೇಡಗಳಿಲ್ಲ. ಆದರೆ ಒಮ್ಮೆ ನೀವು ಗುಹೆಯನ್ನು ಪ್ರವೇಶಿಸಿದರೆ ಹಿಂತಿರುಗಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಏಕೆಂದರೆ ಈ ಗುಹೆಯಲ್ಲಿ ಒಂದು ಲೋಟ ಆಮ್ಲಜನಕವೂ ಇಲ್ಲ. ಬದಲಾಗಿ ಈ ಗುಹೆಯಲ್ಲಿ ಕಾರ್ಬನ್ ಡೈಆಕ್ಸೆಡ್ ತುಂಬಿದೆ.

ಈ ಗುಹೆಯೊಳಗೆ ಇಳಿದರೆ ಉಸಿರುಗಟ್ಟುತ್ತದೆ.  ಹೃದಯದ ಬಡಿತವು ನಿಂತು ಕಳಗೆ ಬೀಳುತ್ತಾರೆ.. ಈ ಗುಹೆಯು  ಗಂಟೆಗೆ 30 ಕೆಜಿ ಕಾರ್ಬನ್ ಡೈಯಾಕ್ಸೆಡ್ ಅನ್ನು ಹೊರಸೂಸುತ್ತದೆ ಎಂದು ಹೇಳಿದ್ದಾರೆ. ವ್ಯಾನ್ ರೆಂಟರ್ಜೆಮ್ ಅವರ ವಿಡಿಯೋವನ್ನ ಮಾಡಿದ್ದಾರೆ. ಒಂದು ಕೋಲಿಗೆ ಬಟ್ಟೆ ಸುತ್ತಿ ಬೆಂಕಿ ಹಾಕುತ್ತಾರೆ. ಆದ್ರೆ ಗುಹೆಯಲ್ಲಿ ಆಮ್ಲಜನಕ ಇಲ್ಲದೇ ಇರೋದ್ರಿಂದ ಆ ಬೆಂಕಿ ನಂದಿ ಹೋಗುತ್ತೆ. ಹೀಗೆ ನಾವು ನೋಡದ ಸಾಕಷ್ಟು ವಿಚಾರಗಳು ಈ ಜಗತ್ತಿನಲ್ಲಿ.. ನಮ್ಮ ಸುತ್ತ ಮುತ್ತಲೇ ಇವೆ.. ಇಂತಹ ಇಂಟ್ರಸ್ಟಿಂಗ್‌ ಸ್ಟೋರಿಗಳನ್ನ ತೆರೆದಿಡುವ ಕೆಲಸವನ್ನ ನಿಮ್ಮ ಸುದ್ದಿಯಾನ ಮಾಡುತ್ತೆ.. ನಮಸ್ಕಾರ

Kishor KV