ಬುಲ್ಡೋಜರ್ ನ್ಯಾಯಕ್ಕೆ ಸುಪ್ರೀಂ ಬ್ರೇಕ್! -ಯೋಗಿ ಅಧಿಕಾರಿಗಳಿಗೆ ಬಿಗ್ ಶಾಕ್!
ಹೊಸ ರೂಲ್ಸ್‌ನಲ್ಲಿ ಇರೋದೇನು?

ಬಲ್ಡೋಜರ್.. ಈ ಹೆಸರು ಕೇಳಿದ್ರೆ ಕ್ರಿಮಿನಲ್ಗಳಿಗೆ ನಡುಕ ಹುಟ್ಟುತಿತ್ತು.. ದರಲ್ಲೂ ವಿಶೇಷ ವಾಗಿ ಉತ್ತರಪ್ರದೇಶದಲ್ಲಿ ಬಲ್ಡೋಜರ್ ನ್ಯಾಯ ಅಂದ್ರೆ ಭಯ ಶುರುವಾಗಿತ್ತು. ಮೊದಲ ಬಾರಿಗೆ ಯೋಗಿ ಸರ್ಕಾರ ಜಾರಿಗೆ ತಂದ ಈ ಬಲ್ಡೋಜರ್ ನ್ಯಾಯ ಹಲವು ರಾಜ್ಯಗಳಲ್ಲಿ ಸದ್ದು ಮಾಡಿತ್ತು. ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಆರೋಪಿಗಳ ಮನೆ ಸೇರಿದಂತೆ ಇತರೆ ಆಸ್ತಿ ಪಾಸ್ತಿಗಳನ್ನು ನಾಶ ಮಾಡುವುದಕ್ಕೆ ಬುಲ್ಡೋಜರ್ ನ್ಯಾಯ ಅನ್ನೋ ಹೆಸರಿತ್ತು. ಈಗ ಈ ಬಲ್ಡೋಜರ್ಗೆ ಸುಪ್ರೀಂ ಬ್ರೇಕ್ ಹಾಕಿ, ಹೊಸ ರೂಲ್ಸ್ ಜಾರಿಗೆ ಬಂದಿದೆ.
ಇದನ್ನೂ ಓದಿ: ಸುಳ್ಳು.. ದ್ವೇಷ.. BCCIಗೆ ಬಳೆ ತೊಡಿಸಿ – ನಾಲಗೆ ಹರಿ ಬಿಟ್ಟ ಪಾಕ್ ಕ್ರಿಕೆಟಿಗರು
ಉತ್ತರಪ್ರದೇಶ, ಹರಿಯಾಣ, ಮಧ್ಯಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಕಾನೂನು ಉಲ್ಲಂಘನೆ ಮಾಡಿದ ಆರೋಪಿಗಳ ಮನೆಗಳನ್ನು ನೆಲಸಮಗೊಳಿಸುವ ಬುಲ್ಡೋಜರ್ ಕಾರ್ಯಾಚರಣೆಗೆ ಸುಪ್ರೀಂಕೋರ್ಟ್ ಬ್ರೇಕ್ ಹಾಕಿದೆ. ಅಧಿಕಾರಿಗಳು ನ್ಯಾಯಾಧೀಶರಾಗಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದೆ. ದೇಶಾದ್ಯಂತ ಬುಲ್ಡೋಜರ್ ನ್ಯಾಯ ವ್ಯಾಪಿಸದಂತೆ ತಡೆಯಲು ನ್ಯಾಯಾಲಯ ನಿರ್ದೇಶನ ನೀಡಬೇಕೆಂದು ಸಲ್ಲಿಸಿದ್ದ ಮೇಲನವಿಯ ಅಂತಿಮ ತೀರ್ಪಿನಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ. ದೇಶಾದ್ಯಂತ ಬುಲ್ಡೋಜರ್ ಕಾರ್ಯಚರಣೆಗೆ ತಡೆಯಾಜ್ಞೆ ನೀಡಿರುವ ಸುಪ್ರೀಂಕೋರ್ಟ್, ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಸುಪ್ರೀಂ ಮಾರ್ಗಸೂಚಿಯಲ್ಲಿ ಏನಿದೆ?
* ನ್ಯಾಯಯುತವಾದ ವಿಚಾರಣೆಯಿಲ್ಲದೆ ಯಾರನ್ನೂ ಅಪರಾಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ.
* ಅಧಿಕಾರಿಗಳು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅನಿಯಂತ್ರಿತ ರೀತಿಯಲ್ಲಿ ವರ್ತಿಸಬಾರದು.
* ಕಟ್ಟಡ ತೆರವಿಗೆ ಮುನ್ನ ಅಂಚೆ ಮೂಲಕ ನೋಟಿಸ್ ನೀಡಬೇಕು.
*ನೋಟಿಸ್ನಲ್ಲಿ ಕಟ್ಟಡ ಹೇಗೆ ಅಕ್ರಮವಾಗಿದೆ? ಯಾವ ನಿಯಮಗಳ ಉಲ್ಲಂಘನೆಯಾಗಿದೆ ಸ್ಪಷ್ಟಪಡಿಸಬೇಕು. *ಕಟ್ಟಡದ ಹೊರಭಾಗದಲ್ಲಿ ಎದ್ದು ಕಾಣುವಂತೆ ನೋಟಿಸ್ ಅಂಟಿಸಬೇಕು
* ಮಾಲೀಕರ ಸ್ಪಷ್ಟನೆ ನೀಡಲು ಅವಕಾಶವನ್ನು ಕಲ್ಪಿಸಬೇಕು.
* ನೋಟಿಸ್ಗಳನ್ನು ಟ್ರ್ಯಾಕ್ ಮಾಡಲು ಮೂರು ತಿಂಗಳೊಳಗೆ ಡಿಜಿಟಲ್ ಪೋರ್ಟಲ್ ಸ್ಥಾಪಿಸಬೇಕು.
* ನೋಟಿಸ್ ಬಳಿಕ ಕಟ್ಟಡವನ್ನು ಪೂರ್ಣ ಅಥವಾ ಭಾಗಶಃ ತೆರವು ಮಾಡಬೇಕಾದರೆ ಕಾರಣ ಏನು ಎನ್ನುವ ಬಗ್ಗೆ ಆದೇಶಿಸಬೇಕು.
* ವಿವರವಾದ ಸ್ಪಾಟ್ ವರದಿಯನ್ನು ಸಿದ್ಧಪಡಿಸಬೇಕು
*ಕಟ್ಟಡ ತೆರವು ವೇಳೆ ಸ್ಥಳದಲ್ಲಿದ್ದ ಪೊಲೀಸರು ಮತ್ತು ಹಾಜರಿದ್ದ ಅಧಿಕಾರಿಗಳ ಮತ್ತು ತೆರವಿನ ವಿವರವಾದ ವಿಡಿಯೋವನ್ನು ಚಿತ್ರೀಕರಿಸಬೇಕು.
* ಸ್ಪಾಟ್ ವರದಿಯನ್ನು ಡಿಜಿಟಲ್ ಪೋರ್ಟಲ್ನಲ್ಲಿ ಪ್ರದರ್ಶಿಸಬೇಕು.
* ಈ ನಿರ್ದೇಶನಗಳ ಉಲ್ಲಂಘನೆಯು ನ್ಯಾಯಾಂಗ ನಿಂದನೆ ಅಥವಾ ಇತರ ಕಾನೂನು ಕ್ರಮಕ್ಕೆ ಕಾರಣವಾಗಬಹುದು.
* ಈ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ನಷ್ಟವಾದ ಆಸ್ತಿ ಮರುಪಾವತಿಗೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಯಾಗುತ್ತಾರೆ.
* ಸರ್ಕಾರದ ಆಸ್ತಿ, ರಸ್ತೆ, ಕೆರೆ, ರೈಲು ಮಾರ್ಗಗಳ ಒತ್ತುವರಿಯಾಗಿದ್ದರೆ ಈ ಮಾರ್ಗಸೂಚಿ ಅನ್ವಯವಾಗುವುದಿಲ್ಲ.
ಅಪರಾಧಕ್ಕೆ ಶಿಕ್ಷೆ ನೀಡುವುದು ನ್ಯಾಯಾಲಯದ ಕೆಲಸ. ಮನಬಂದಂತೆ ಮನೆ ಕೆಡವಿದರೆ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಒಬ್ಬ ವ್ಯಕ್ತಿಯ ತಪ್ಪಿಗೆ ಇಡೀ ಕುಟುಂಬವನ್ನು ಶಿಕ್ಷಿಸಲು ಸಾಧ್ಯವಿಲ್ಲ. ಒಬ್ಬನೇ ಆರೋಪಿಯಾಗಿದ್ದರೆ ಇಡೀ ಕುಟುಂಬದಿಂದ ಮನೆಯನ್ನು ಏಕೆ ಕಳೆದುಕೊಳ್ಳಬೇಕು ಎಂದು ಸುಪ್ರೀಂ ಪ್ರಶ್ನಿಸಿದೆ. ಸುಪ್ರೀಂ ಕೊಟ್ಟ ತಿರ್ಪುನ್ನ ಯುಪಿ ಸರ್ಕಾರ ಕೂಡ ಸ್ವಾಗತಿಸಿದೆ.