ಸೌದಿ ಅರೇಬಿಯಾ ಬಸ್ ದುರಂತ ಪ್ರಕರಣ – 45 ಮಂದಿ ಪೈಕಿ ಓರ್ವ ಕನ್ನಡಿಗನೂ ಬಲಿ

ಸೌದಿ ಅರೇಬಿಯಾದ ಮೆಕ್ಕಾ-ಮದೀನಾ ರಸ್ತೆಯಲ್ಲಿ ಬಸ್ ಹಾಗೂ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬಸ್ ಹೊತ್ತಿ ಉರಿದಿತ್ತು. ದುರ್ಘಟನೆಯಲ್ಲಿ 45 ಮಂದಿ ಭಾರತೀಯರು ಸಜೀವ ದಹನವಾಗಿದ್ದಾರೆ. ಈ ಪೈಕಿ ಓರ್ವ ಕನ್ನಡಿಗ ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ನಾನು ಕೂಡ ಉ*ಗ್ರಗಾಮಿ, ಕನ್ನಡಿಗರ ವಿರೋಧಿ – ನಮ್ಮ ಮೆಟ್ರೊ ನಿಲ್ದಾಣಕ್ಕೆ ಬಾಂಬ್ ಬೆದರಿಕೆ
ಹುಬ್ಬಳ್ಳಿಯ ಅಬ್ದುಲ್ ಘಣಿ ಶಿರಹಟ್ಟಿ (55) ಸಾವಿಗೀಡಾಗಿರುವ ಕನ್ನಡಿಗ. ಇವರು ಹುಬ್ಬಳ್ಳಿ ನಗರದ ಗಣೇಶಪೇಟ್ ನಿವಾಸಿ. ದುಬೈನಲ್ಲಿ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ದುಬೈನಿಂದ ಸೌದಿಗೆ ಉಮ್ರಾಗೆ ಹೋಗಿದ್ದರು. ಅಲ್ಲಿ ಅಬುದಾಬಿ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ಡ್ರೈವರ್ ಕೂಡ ಆಗಿದ್ದರು. ಮೊನ್ನೆ ನಡೆದ ಬಸ್ ದುರಂತದಲ್ಲಿ ಇವರು ಕೂಡ ಸಾವನ್ನಪ್ಪಿದ್ದಾರೆ. ಅಬ್ದುಲ್ ಅವರ ಮೃತದೇಹ ಈಗ ಸೌದಿಯಲ್ಲಿ ಇದೆ. ಹೀಗಾಗಿ, ತಮ್ಮನ್ನು ಸೌದಿಗೆ ಕಳುಹಿಸುವಂತೆ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಅಬ್ದುಲ್ ಅವರ ಮಕ್ಕಳಾದ ಅಂಜುಮ್, ಮೌಲಾಲಿ, ನಫಿಸಾ, ರೇಷ್ಮಾ, ಹೆಂಡತಿ ಜಬಿನಾ ಅಳಲು ತೋಡಿಕೊಂಡಿದ್ದಾರೆ.
ಹುಬ್ಬಳ್ಳಿ ಗಣೇಶ ಪೇಟೆಯ ಶೆಟ್ಟರ್ ಓಣಿಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತಂದೆ ಮುಖ ನೋಡಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ. ಮೃತ ಅಬ್ದುಲ್ ಮನೆಗೆ ಮುಸ್ಲಿಂ ಮುಖಂಡರ ಭೇಟಿ ನೀಡಿದ್ದಾರೆ. ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಎಂಐ ಹಿಂಡಸಗೇರಿ ಪ್ರತಿಕ್ರಿಯಿಸಿ, ಹಜ್ ಸಚಿವರು ಮತ್ತು ಡಿಸಿ ಜೊತೆಗೆ ಮಾತುಕತೆ ನಡೆಸಿದ್ದೇವೆ. ಸೌದಿಗೆ ತೆರಳಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದೇವೆಂದು ತಿಳಿಸಿದ್ದಾರೆ.

ನೋಡಿರಿ

