ಮರೆಯಾಗುತ್ತಿದೆ ಶನಿಗ್ರಹದ ವಿಶಿಷ್ಟ ‘ಉಂಗುರ’!

ಮರೆಯಾಗುತ್ತಿದೆ ಶನಿಗ್ರಹದ ವಿಶಿಷ್ಟ ‘ಉಂಗುರ’!

ಸೂರ್ಯ, ಚಂದ್ರ, ನಕ್ಷತ್ರಪುಂಜ, ಗ್ರಹಗಳ ಬಗ್ಗೆ ವಿಜ್ಷಾನಿಗಳು ನಿರಂತರವಾಗಿ ಅಧ್ಯಯನ ನಡೆಸುತ್ತಲೇ ಇರುತ್ತಾರೆ. ಬಾಹ್ಯಕಾಶದಲ್ಲಿ ನಡೆಯುವ ಕುತೂಹಲಕಾರಿ ಸಂಗತಿ, ಅಪಾಯದ ಮುನ್ಸೂಚನೆಗಳನ್ನು ನೀಡುತ್ತಲೇ ಬಂದಿದ್ದಾರೆ. ಇದೀಗ ವಿಜ್ಞಾನಿಗಳು ಶನಿಗ್ರಹದ ಬಗ್ಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಜಿಮ್.. ರೂಮ್.. ಕೆಂಪು ಮರಳು – ಮಂಗಳ ಗ್ರಹದಲ್ಲಿ ವಾಸಿಸುವವರಿಗೆ ಮನೆಗಳು ರೆಡಿ..!

ಶನಿ ಗ್ರಹ ಕೇವಲ ತನ್ನ ಬೃಹತ್‌ ಆಕಾರದಿಂದಷ್ಟೇ ಅಲ್ಲ,  ವಿಶಿಷ್ಟವಾದ ಉಂಗುರಗಳಿಂದಲೇ ಹೆಸರುವಾಸಿಯಾಗಿದೆ. ಆದರೆ ಇದೀಗ ಶನಿ ಗ್ರಹದ ಉಂಗುರಗಳು ಅಪಾಯದಲ್ಲಿದ್ದು, ಅವುಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ ಎಂದು ವಿಜ್ಞಾನಿಗಳು ಆತಂಕಕಾರಿ ಮಾಹಿಯನ್ನು ಹಂಚಿಕೊಂಡಿದ್ದಾರೆ.

ಬೃಹದಾಕಾರದ ಮಂಜುಗಡ್ಡೆಯಿಂದ ರೂಪುಗೊಂಡಿರುವ ಶನಿ ಗ್ರಹದ ಉಂಗುರಗಳು ಕಾಲ ಕಳೆದಂತೆ ಸವೆಯುತ್ತಿದೆ.  ಆ ಉಂಗುರಗಳು ಎಷ್ಟು ಕಾಲ ಉಳಿಯಲಿವೆ ಎಂದು ಹೇಳಲಾಗದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಶನಿ ಗ್ರಹದ  ಸುತ್ತ ಸುತ್ತುತ್ತಿರುವ ಮಂಜುಗಡ್ಡೆಯ ಬ್ಲಾಕ್ ಗಳು ಪರಸ್ಪರ ಡಿಕ್ಕಿಯಾಗುತ್ತಿವೆ. ಇದರಿಂದಾಗಿ ಶನಿ ಗ್ರಹದ ರಿಂಗ್ ಗಳು ತೆಳ್ಳಗಾಗುತ್ತಿವೆ. ಅವುಗಳು ಎಷ್ಟು ವೇಗವಾಗಿ ಸವೆದು ಹೋಗುತ್ತಿವೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಈ ಬೆಳವಣಿಗೆಯು ನಮ್ಮೆಲ್ಲರನ್ನೂ ಅಚ್ಚರಿಗೆ ನೂಕಿದೆ ಎಂದು ಶನಿಗ್ರಹದ ಕಣ್ಮರೆಯಾಗುತ್ತಿರುವ ಉಂಗುರಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಸಂಶೋಧಕರ ತಂಡದ ಮುಖ್ಯಸ್ಥ ಡಾ.ಜೇಮ್ಸ್‌ ಓ ಡೊನೊಗ್‌ ಹೇಳಿದ್ದಾರೆ.

ಶನಿ ಗ್ರಹವು ಭೂಮಿಗಿಂತ 9 ಪಟ್ಟು ದೊಡ್ಡ ಗ್ರಹ. ಉಂಗುರಗಳು ಆರಂಭದಿಂದಲೂ ಶನಿ ಗ್ರಹದೊಂದಿಗೆ ಇವೆ ಎಂದೇ ಅನೇಕರು ನಂಬಿದ್ದಾರೆ. ಆದರೆ, ಕೇವಲ 100 ದಶಲಕ್ಷ ವರ್ಷಗಳಷ್ಟು ಹಿಂದೆಯಷ್ಟೇ ಶನಿ ಗ್ರಹದ ಉಂಗುರಗಳು ರೂಪುಗೊಂಡಿವೆ ಎಂದು ಜೇಮ್ಸ್ ಹೇಳಿದ್ದಾರೆ.

suddiyaana