ಆಂಜನೇಯ ಸ್ವಾಮಿ ಪೂಜೆ ಯಾವ ಸಮಯದಲ್ಲಿ ಮಾಡಬೇಕು? – ಶನಿವಾರ ಹನುಮಂತನಿಗೆ ಯಾಕೆ ಶ್ರೇಷ್ಠ

ಆಂಜನೇಯ ಸ್ವಾಮಿ ಪೂಜೆ ಯಾವ ಸಮಯದಲ್ಲಿ ಮಾಡಬೇಕು? – ಶನಿವಾರ ಹನುಮಂತನಿಗೆ ಯಾಕೆ ಶ್ರೇಷ್ಠ

ಯಾವ ಮನೆಯಲ್ಲಿ ಆಂಜನೇಯ ಸ್ವಾಮಿಯನ್ನು ಪೂಜಿಸಲಾಗುತ್ತದೆಯೋ ಆ ಮನೆಯಲ್ಲಿ ಸಂತೋಷ ಮತ್ತು ಸಂಪತ್ತು ವೃದ್ಧಿಯಾಗುತ್ತದೆ ಎನ್ನುವ ನಂಬಿಕೆಯಿದೆ. ದೆವ್ವ, ಭೂತಗಳಂತಹ ನಕಾರಾತ್ಮಕ ಶಕ್ತಿಯಿಂದ ಮುಕ್ತಿಯನ್ನು ಪಡೆಯುವುದಕ್ಕೂ ಕೂಡ ಆಂಜನೇಯ ಸ್ವಾಮಿ ಪೂಜೆಯು ಪ್ರಯೋಜನಕಾರಿಯಾಗಿದೆ. ಕೆಲವೊಬ್ಬರು ಮಂಗಳವಾರದ ದಿನದಂದು ಆಂಜನೇಯ ಸ್ವಾಮಿಯನ್ನು ಪೂಜಿಸಿದರೆ, ಇನ್ನು ಕೆಲವೊಬ್ಬರು ಶನಿವಾರದ ದಿನದಂದು ಆಂಜನೇಯ ಸ್ವಾಮಿಯನ್ನು ಪೂಜಿಸುತ್ತಾರೆ. ಆಂಜನೇಯ ಸ್ವಾಮಿ ಪೂಜೆಯನ್ನು ಮಾಡುವುದರಿಂದ ಭಕ್ತರ ಕಷ್ಟಗಳೆಲ್ಲಾ ಪರಿಹಾರವಾಗುವುದು. ಮನಸ್ಸಿನಲ್ಲಿ ಆತಂಕ, ಭಯ ನಿವಾರಣೆಯಾಗುವುದು.

ಶನಿವಾರದ ದಿನದಂದು ಆಂಜನೇಯ ಸ್ವಾಮಿಯನ್ನು ಪೂಜಿಸುವುದರ ಜೊತೆಗೆ ಆಂಜನೇಯ ಸ್ವಾಮಿಗೆ ಸಮರ್ಪಿತವಾದ ಈ ಮಂತ್ರಗಳನ್ನು ಕೂಡ ಪಠಿಸಬೇಕಾಗುತ್ತದೆ.

ಸಾಕಷ್ಟು ಜನರ ಮನಸ್ಸಿನಲ್ಲಿ ಹಿಳೆಯರು ಆಂಜನೇಯ ಸ್ವಾಮಿಯನ್ನು ಪೂಜಿಸಬೇಕೆ.? ಅಥವಾ ಬೇಡವೇ.? ಎಂಬುದಾಗಿದೆ ಪ್ರಶ್ನೆ ಇದೆ. ಶನಿವಾರದ ದಿನದಂದು ಮಾತ್ರವಲ್ಲ, ಇನ್ನಾವುದೇ ದಿನದಂದು ಮಹಿಳೆಯರು ಆಂಜನೇಯ ಸ್ವಾಮಿಯನ್ನು ಪೂಜಿಸುತ್ತಿದ್ದರೂ ಆಂಜನೇಯ ಸ್ವಾಮಿಯ ವಿಗ್ರಹಗಳನ್ನು ಸ್ಪರ್ಶಿಸುವುದು, ಆಂಜನೇಯ ಸ್ವಾಮಿಯ ಪಾದಗಳನ್ನು ಮುಟ್ಟುವುದು ಸರಿಯಲ್ಲ. ಮಹಿಳೆಯರು ಆಂಜನೇಯ ಸ್ವಾಮಿಯನ್ನು ದೂರದಿಂದಲೇ ಪೂಜಿಸಬೇಕು. ಆಂಜನೇಯ ಸ್ವಾಮಿಯ ಮುಂದೆ ಕುಳಿತು ಅವರು ಆಂಜನೇಯನ ಮಂತ್ರಗಳನ್ನು, ಸ್ತೋತ್ರಗಳನ್ನು ಪಠಿಸಬಹುದಾಗಿದೆ. ಹನುಮಂತನ ವಿಗ್ರಹವನ್ನು ಮುಟ್ಟದೆ ಮಹಿಳೆಯರು ಹನುಮಂತನನ್ನು ಪೂಜಿಸಬಹುದಾಗಿದೆ.

ಆಂಜನೇಯ ಸ್ವಾಮಿ ಪೂಜೆ ಯಾವ ಸಮಯದಲ್ಲಿ ಮಾಡಬೇಕು?

ನಮಗೆ ಆಂಜನೇಯ ಸ್ವಾಮಿಯನ್ನು ಪೂಜಿಸಲು ಯಾವುದೇ ರೀತಿಯಾದ ನಿಗದಿತವಾದ ಸಮಯವಿಲ್ಲ. ಶನಿವಾರದ ದಿನದಂದು ನೀವು ಬ್ರಹ್ಮ ಮುಹೂರ್ತದ ಸಮಯದಲ್ಲಿ ಅಥವಾ ಸಂಜೆ ಸೂರ್ಯಾಸ್ತದ ನಂತರ ಕೂಡ ಆಂಜನೇಯ ಸ್ವಾಮಿಯನ್ನು ಪೂಜಿಸಬಹುದಾಗಿದೆ. ಬ್ರಹ್ಮ ಮುಹೂರ್ತ ಹಾಗೂ ಸೂರ್ಯಾಸ್ತದ ನಂತರ ಆಂಜನೇಯ ಸ್ವಾಮಿಯನ್ನು ಪೂಜಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಆಂಜನೇಯ ಸ್ವಾಮಿಯನ್ನು ಶನಿವಾರದ ದಿನದಂದು ಮಾತ್ರವಲ್ಲದೇ, ಮಂಗಳವಾರದ ದಿನದಂದು ಕೂಡ ಪೂಜಿಸಬಹುದಾಗಿದೆ.

”ಓಂ ಹಂ ಹನುಮತೇ ನಮಃ”

ಇದೆಲ್ಲದರ ಜೊತೆಗೆ ಶನಿವಾರದ ದಿನದಂದು 108 ವೀಳ್ಯದೆಲೆಯನ್ನು ತೆಗೆದುಕೊಳ್ಳಿ. ಆ 108 ಎಲೆಗಳ ಮೇಲೂ ರಾಮ ನಾಮವನ್ನು ಬರೆಯಿರಿ. ನಂತರ ಆ ಹಾರವನ್ನು ”ಓಂ ಹಂ ಹನುಮತೇ ನಮಃ” ಎನ್ನುವ ಮಂತ್ರವನ್ನು 108 ಬಾರಿ ಪಠಿಸಿ ಹನುಮಂತನಿಗೆ ಅರ್ಪಿಸಿ. ಶನಿವಾರದ ದಿನದಂದು ನೀವು ಈ ಕೆಲಸವನ್ನು ಮಾಡುವುದರಿಂದ ಹನುಮಂತನು ನೀವು ಬೇಡಿದ ಎಲ್ಲಾ ವರವನ್ನು ಅನುಗ್ರಹಿಸುತ್ತಾನೆ ಎನ್ನುವ ನಂಬಿಕೆಯಿದೆ.

Kishor KV