ಶನಿವಾರ ಯಾವ ಕೆಲಸಗಳನ್ನು ಮಾಡಬೇಕು? ಯಾವುದನ್ನು ತಪ್ಪಿಸಬೇಕು ಗೊತ್ತಾ?

ಹಿಂದೂ ಧರ್ಮದಲ್ಲಿ ಪ್ರತಿಯೊಂದು ವಾರಕ್ಕೂ ತನ್ನದೇ ಆದ ವಿಶೇಷ ಮಹತ್ವವಿದೆ. ಅದರಲ್ಲೂ ವಿಶೇಷವಾಗಿ ‘ಶನಿವಾರ’ವು ಶನಿ ದೇವನಿಗೆ ಅರ್ಪಿತವಾದ ದಿನ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿವಾರದಂದು ಅನುಸರಿಸುವ ಕೆಲವು ಆಚರಣೆಗಳು ನಮ್ಮ ಜೀವನದ ಅದೃಷ್ಟ ಮತ್ತು ದುರದೃಷ್ಟದ ಮೇಲೆ ನೇರ ಪರಿಣಾಮ ಬೀರುತ್ತವೆ. ಹಾಗಾದರೆ, ಈ ದಿನ ಯಾವ ಕೆಲಸಗಳನ್ನು ಮಾಡಬೇಕು? ಯಾವುದನ್ನು ತಪ್ಪಿಸಬೇಕು? ಅನ್ನೋದ್ದನ್ನ ನೋಡೋಣ.
ಇದನ್ನೂ ಓದಿ: ಬೇಸಿಗೆಗಾಲದಲ್ಲಿ ಈ ಹಣ್ಣು ತಿಂದ್ರೆ ನಿರ್ಜಲೀಕರಣ ಸಮಸ್ಯೆ ಬರಲ್ಲ! – ತಾಳೆ ಹಣ್ಣಿನಿಂದ ಎಷ್ಟೊಂದು ಆರೋಗ್ಯ ಲಾಭ!
ಜ್ಯೋತಿಷ್ಯದ ಪ್ರಕಾರ ಶನಿ ಮತ್ತು ಮಂಗಳ ಗ್ರಹಗಳ ನಡುವೆ ವೈರತ್ವವಿದೆ. ಹೀಗಾಗಿ, ಶನಿವಾರದಂದು ಮಂಗಳನಿಗೆ ಸಂಬಂಧಿಸಿದ ವಸ್ತುಗಳನ್ನು ಅಥವಾ ಆಹಾರವನ್ನು ಸೇವಿಸುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಇದಲ್ಲದೇ ಮಸಾಲೆಯುಕ್ತ ಪದಾರ್ಥಗಳು, ಒಣ ಮೆಣಸಿನಕಾಯಿ, ಉಪ್ಪಿನಕಾಯಿ ಮತ್ತು ತೊಗರಿಬೇಳೆ ಸೇವಿಸುವುದನ್ನು ಈ ದಿನ ಆದಷ್ಟು ತಪ್ಪಿಸಿ. ಜ್ಯೋತಿಷ್ಯ ಶಾಸ್ತ್ರದ ನಂಬಿಕೆಯಂತೆ, ಶನಿವಾರದಂದು ಹೊಸ ಬಟ್ಟೆಗಳನ್ನು ಖರೀದಿಸುವುದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.
ನಿಮ್ಮ ಇಷ್ಟಾರ್ಥಗಳು ಈಡೇರಲು ಮತ್ತು ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಿಸಲು ಈ ಕ್ರಮಗಳನ್ನು ಅನುಸರಿಸಿ. ಶನಿವಾರದಂದು ರವಿ ವೃಕ್ಷಕ್ಕೆ (ಅರಳಿ ಮರ) ಹೋಗಿ ಐದು ಪ್ರದಕ್ಷಿಣೆ ಹಾಕಿ, ಹಳದಿ ದಾರವನ್ನು ಕಟ್ಟುವುದು ವಿಶೇಷ ಫಲ ನೀಡುತ್ತದೆ. ಅಲ್ಲದೆ, ಸಕ್ಕರೆ ಬೆರೆಸಿದ ನೀರನ್ನು ಮರದ ಬುಡಕ್ಕೆ ಸುರಿಯುವುದರಿಂದ ಆರ್ಥಿಕ ಅಭಿವೃದ್ಧಿ ಉಂಟಾಗುತ್ತದೆ. ಇದಲ್ಲದೇ ಹಸು, ಮೀನು, ಇರುವೆ ಮತ್ತು ಮಂಗಗಳಿಗೆ ಬೆಲ್ಲ ಮಿಶ್ರಿತ ಆಹಾರವನ್ನು ನೀಡುವುದು ದುರದೃಷ್ಟವನ್ನು ದೂರವಾಗಿಸಿ, ಶುಭವನ್ನು ತರುತ್ತದೆ ಎಂದು ನಂಬಲಾಗಿದೆ.

ನೋಡಿರಿ

