‘KD’ ಸಿನಿಮಾದ ‘ಸರ್ಸೆ ಸೆರಗ ಸರ್ಸೆ’ ಸಾಂಗ್ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ

‘KD’ ಸಿನಿಮಾದ ‘ಸರ್ಸೆ ಸೆರಗ ಸರ್ಸೆ’ ಸಾಂಗ್ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ

ಜೋಗಿ ಪ್ರೇಮ್‌ ನಿರ್ದೇಶನದ ಹಾಗೂ ನಟ ಧ್ರುವ ಸರ್ಜಾ ಅಭಿನಯದ ‘ಕೆಡಿ’ ಸಿನಿಮಾದ ‘ಸರ್ಸೆ ಸರ್ಸೆ ನಿನ್ನ ಸೆರಗಾ ಸರ್ಸೆ’ ಹಾಡನ್ನು ಕೇಂದ್ರ ಸರ್ಕಾರ ಬ್ಯಾನ್‌ ಮಾಡಿದೆ. ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಸರ್ಕಾರ ಈ ಹಾಡಿನ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಭಾರತದಲ್ಲಿ ವಾಕ್ ಸ್ವಾತಂತ್ರ್ಯವು ಸಾಂವಿಧಾನಿಕ ಮಿತಿಗಳಿಗೆ ಒಳಪಟ್ಟಿರುತ್ತದೆ. ಸಂವಿಧಾನವು ಸೂಚಿಸಿರುವ ಸಮಂಜಸವಾದ ನಿರ್ಬಂಧಗಳ ವ್ಯಾಪ್ತಿಯಲ್ಲಿ ಅಭಿವ್ಯಕ್ತಿ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಹಾಡಿನ ಬಗ್ಗೆ ಮೌನ ಮುರಿದ ನಟಿ ನೋರಾ ಫತೇಹಿ

ಭಾರಿ ವಿವಾದಕ್ಕೆ ಕಾರಣ ಆಗಿರುವ ‘ಕೆಡಿ’  ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿನ ಬಗ್ಗೆ ನಟಿ ನೋರಾ ಫತೇಹಿ ಅವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಈ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ ಇದೆ ಎಂಬ ಕಾರಣಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಹಿಂದಿ ವರ್ಷನ್   ಹಾಡನ್ನು ಕೂಡಲೇ ಡಿಲೀಟ್ ಮಾಡಲಾಯಿತು. ಇಷ್ಟೆಲ್ಲ ವಿವಾದ ಆಗಿದ್ದಕ್ಕೆ ನಟಿ ನೋರಾ ಫತೇಹಿ  ಅವರು ಪ್ರತಿಕ್ರಿಯೆ ನೀಡಿದ್ದಾರೆ. ಹಾಡಿನಲ್ಲಿ ಇಷ್ಟು ಕೆಟ್ಟ ಸಾಹಿತ್ಯ ಇದೆ ಎಂಬುದು ನನಗೆ ಗೊತ್ತೇ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಆಂಬ್ಯುಲೆನ್ಸ್‌ನಲ್ಲಿ ಬಂದಳು.. ಸ್ಟ್ರೆಚರ್ ಮೇಲೆ ಮಲಗಿಕೊಂಡೇ ಪರೀಕ್ಷೆ ಬರೆದಳು – SSLC ವಿದ್ಯಾರ್ಥಿನಿ ಎಲ್ಲರಿಗೂ ಮಾದರಿ..!

“ಇದನ್ನು ನಾನು ಬೆಂಬಲಿಸುತ್ತೇನೆ ಎಂದು ಯಾರಾದರೂ ಭಾವಿಸದರೆ, ಅದನ್ನು ನಾನು ಇಷ್ಟಪಡುವುದಿಲ್ಲ.. ಈ ವಿಷಯದಲ್ಲಿ ನೀವು ನೀಡಿದ ಪ್ರತಿಕ್ರಿಯೆ ಮತ್ತು ಒತ್ತಡಕ್ಕೆ ಧನ್ಯವಾದಗಳು, ಇದರಿಂದಾಗಿ ಚಿತ್ರತಂಡವು ಅದೃಷ್ಟವಶಾತ್ ಆ ಹಾಡನ್ನು ಕೆಳಗಿಳಿಸಿದೆ. ಅಲ್ಲದೆ, ಈ ಹಾಡನ್ನು ಯಾರೂ ಹಂಚಿಕೊಳ್ಳಬೇಡಿ ಎಂದು ನಾನು ವಿನಂತಿಸುತ್ತೇನೆ, ಏಕೆಂದರೆ ನೀವು ಅನಗತ್ಯವಾಗಿ ಅದಕ್ಕೆ ಪ್ರಚಾರ ನೀಡಿದಂತಾಗುತ್ತದೆ” ಎಂದು ನೋರಾ ಫತೇಹಿ ಹೇಳಿದ್ದಾರೆ.

“ಇನ್ನೊಂದು ವಿಷಯವೆಂದರೆ, ನಿಮ್ಮಲ್ಲಿ ಕೆಲವರು ಇದನ್ನು ನನ್ನ ಚಾರಿತ್ರ್ಯವನ್ನು ಹೀಯಾಳಿಸಲು ಬಳಸಿಕೊಳ್ಳುತ್ತಿರುವುದನ್ನು ನಾನು ಗಮನಿಸಿದ್ದೇನೆ.. ಇದು ನಿಜಕ್ಕೂ ದುರದೃಷ್ಟಕರ. ಇಂಥದ್ದರ ಬಗ್ಗೆ ಮುಂದಿನ ದಿನಗಳಲ್ಲಿ ನಾನು ಮತ್ತು ನನ್ನ ತಂಡ ಹೆಚ್ಚು ಜಾಗರೂಕರಾಗಿರುತ್ತೇವೆ. ಆದಾಗ್ಯೂ, ಈ ಹಿಂದಿ ಹಾಡಿನ ಬಗ್ಗೆ ನನಗೆ ಯಾವುದೇ ಅರಿವಿರಲಿಲ್ಲ, ನಾನು ಅದಕ್ಕೆ ನೃತ್ಯ ಮಾಡಿಲ್ಲ ಮತ್ತು ನನ್ನ ಚಿತ್ರಣವನ್ನು ಬಳಸಲು ಯಾವುದೇ ಅನುಮತಿಯನ್ನು ಪಡೆದಿಲ್ಲ ಎಂದು ನಾನು ಮತ್ತೊಮ್ಮೆ ಸ್ಪಷ್ಟಪಡಿಸಲು ಬಯಸುತ್ತೇನೆ” ಎಂದು ನೋರಾ ಫತೇಹಿ ತಿಳಿಸಿದ್ದಾರೆ.

Kishor KV