ಕಠಿಣ ಅಭ್ಯಾಸ, ನಿರಂತರ ಪರಿಶ್ರಮ – ಸ್ಪಿನ್ನರ್ಸ್ ಗೆ ಸರ್ಫರಾಜ್ ಯಾವಾಗಲೂ ಸಿಂಹಸ್ವಪ್ನ..!
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಡೆಬ್ಯೂ ಮಾಡಿರೋ ಸರ್ಫರಾಜ್ ಖಾನ್ ತಮ್ಮ ಫಸ್ಟ್ ಇಂಟರ್ನ್ಯಾಷನಲ್ ಮ್ಯಾಚ್ನಲ್ಲೇ ಇಂಗ್ಲೆಂಡ್ ಬೌಲರ್ಸ್ಗಳ ಬೆವರಿಳಿಸಿದ್ದರು. ಆಂಗ್ಲ ಸ್ಪಿನ್ನರ್ಸ್ಗಳನ್ನು ಸರಿಯಾಗಿಯೇ ಬೆಂಡೆತ್ತಿದ್ದರು. ಯಾಕೆಂದರೆ, ಸ್ಪಿನ್ ಬೌಲಿಂಗ್ನ್ನ ಫೇಸ್ ಮಾಡೋದ್ರಲ್ಲಿ ಸರ್ಫರಾಜ್ ಖಾನ್ ಎಕ್ಸ್ಪರ್ಟ್.
ಇದನ್ನೂ ಓದಿ:ರೋಹಿತ್ ಶರ್ಮಾ ಹಾಕಿರೋ ಪೋಸ್ಟ್ ಏನು? – ಕ್ಯಾಪ್ಟನ್ ಹೊಗಳಿರುವ ಆ ಮೂವರು ಆಟಗಾರರು ಯಾರು?
ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲೂ ಅಷ್ಟೇ, ಸ್ಪಿನ್ ಬೌಲಿಂಗ್ಗೆ ಸರ್ಫರಾಜ್ ಲೀಲಾಜಾಲವಾಗಿ ಆಡಿದರು. ಸರ್ಫರಾಜ್ಗೆ ಬೌಲಿಂಗ್ ಮಾಡೋಕೆ ಸ್ಪಿನ್ನರ್ಸ್ಗಳು ಹಿಂದೇಟು ಹಾಕೋ ಮಟ್ಟಿಗೆ ಯುವ ದಾಂಡಿಗ ಚೆನ್ನಾಗಿಯೇ ಸ್ಕೋರ್ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧವೂ ಅಷ್ಟೇ, ಸ್ಪಿನ್ನರ್ಸ್ಗಳನ್ನ ತುಂಬಾ ಚೆನ್ನಾಗಿ ಫೇಸ್ ಮಾಡಿದ್ರು. ಬಟ್ ಸ್ಪಿನ್ ಬೌಲಿಂಗ್ನ್ನ ಎದುರಿಸೋ ಸ್ಪೆಷಲ್ ಸ್ಕಿಲ್, ಟೆಕ್ನಿಕ್ ಸರ್ಫರಾಜ್ಗೆ ಹಾಗೆ ಸುಮ್ನೆ ಬಂದಿಲ್ಲ. ಸ್ಪಿನ್ ಬೌಲಿಂಗ್ನ್ನ ಆಡೋಕೆ ಅಂತಾನೆ ಸರ್ಫರಾಜ್ ಸಣ್ಣ ವಯಸ್ಸಿನಿಂದಲೇ ಸಾಕಷ್ಟು ಟ್ರೈನಿಂಗ್ ಪಡೆದಿದ್ದರು. ಕಳೆದ 15 ವರ್ಷಗಳಿಂದ ಸ್ಪಿನ್ನರ್ಸ್ಗಳನ್ನ ಫೇಸ್ ಮಾಡೋಕೆ ಅಂತಾನೆ ಸರ್ಫರಾಜ್ ಸ್ಪೆಷಲ್ ಟ್ರೈನಿಂಗ್ ಪಡೆದಿದ್ದಾರೆ.
15 ವರ್ಷಗಳಿಂದ ಸರ್ಫರಾಜ್ ದಿನಕ್ಕೆ 500 ಸ್ಪಿನ್ ಬಾಲ್ಗಳನ್ನ ಆಡ್ತಾ ಬಂದಿದ್ದಾರೆ. ದಿನನಿತ್ಯ 500 ಸ್ಪಿನ್ ಬಾಲ್ಗಳಿಗೆ ನೆಟ್ಸ್ನಲ್ಲಿ ಪ್ರಾಕ್ಟೀಸ್ ಮಾಡ್ತಾ ಇದ್ದರು. ಸರ್ಫರಾಜ್ ತಂದೆ ನೌಶಾದ್ ಖಾನ್ ಕಣ್ಣ ಮುಂದೆಯೇ ಸ್ಪಿನ್ ಬಾಲ್ಗೆ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದರು. ಆಫ್ ಸ್ಪಿಲ್, ಲೆಗ್ ಸ್ಪಿನ್ ಯಾವುದನ್ನ ಹೇಗೆ ಫೇಸ್ ಮಾಡಬೇಕು ಅಂತಾ ಸರ್ಫರಾಜ್ಗೆ ಟ್ರೈನಿಂಗ್ ನೀಡ್ತಾ ಇದ್ದಿದ್ದೇ ತಂದೆ ನೌಶಾದ್. ಅದ್ರಲ್ಲೂ ಕೊರೊನಾ ಲಾಕ್ಡೌನ್ ಟೈಮ್ನಲ್ಲಂತೂ ಸ್ಪಿನ್ ಬೌಲಿಂಗ್ ವಿಚಾರದಲ್ಲಿ ಸರ್ಫರಾಜ್ ತುಂಬಾ ಸಿಸ್ಟಮ್ಯಾಟಿಕ್ ಆಗಿ ತಂದೆಯಿಂದಲೇ ಟ್ರೈನಿಂಗ್ ಪಡೆದಿದ್ರು. ಸ್ಪಿನ್ನರ್ಸ್ಗಳನ್ನ ಫೇಸ್ ಮಾಡೋಕೆ ಅಂತಾನೆ ಮುಂಬೈ ಅಜಾದ್ ಗ್ರೌಂಡ್ನಲ್ಲಿ ಸ್ಪೆಷಲ್ ನೆಟ್ ಸೆಷನ್ನನ್ನ ಸರ್ಫರಾಜ್ಗಾಗಿ ಡೇಲಿ ಫಿಕ್ಸ್ ಮಾಡ್ತಾ ಇದ್ರು. ಹಾಗೆಯೇ ಕಾನ್ಪುರ್ನಲ್ಲಿರೋ ಕ್ರಿಕೆಟ್ ಅಕಾಡೆಮಿಯಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ಕುಲ್ದೀಪ್ ಯಾದವ್ ನಿರಂತರವಾಗಿ ಸರ್ಫರಾಜ್ಗೆ ಬೌಲ್ ಮಾಡ್ತಾ ಇದ್ರು. ಸರ್ಫರಾಜ್ ಮತ್ತು ಕುಲ್ದೀಪ್ ಯಾದವ್ ಇಬ್ಬರೂ ನೆಟ್ಸ್ನಲ್ಲಿ ಗಂಟೆಗಟ್ಟಲೆ ಪ್ರಾಕ್ಟೀಸ್ ಮಾಡುತ್ತಿದ್ದರು.
ಇಷ್ಟೇ ಅಲ್ಲ, ಸರ್ಫರಾಜ್ ಸ್ಪಿನ್ ಟ್ರೈನಿಂಗ್ ವಿಚಾರವಾಗಿ ಇನ್ನೊಂದು ಇಂಟ್ರೆಸ್ಟಿಂಗ್ ಸ್ಟೋರಿ ಕೂಡ ಇದೆ. ಕೊರೊನಾ ಲಾಕ್ಡೌನ್ ಟೈಮ್ನಲ್ಲಿ ಸರ್ಫರಾಜ್ ದೇಶದ ಹಲವೆಡೆ ಸುಮಾರು 1600 ಕಿಲೋ ಮೀಟರ್ ಕಾರ್ ಜರ್ನಿ ಕೈಗೊಂಡಿದ್ರಂತೆ. ಮುಂಬೈ – ಅಮ್ರೋಹಾ, ಮೊರದಾಬಾದ್, ಮೀರತ್, ಕಾನ್ಪುರ್, ಮಥುರಾ ಮತ್ತು ಡ್ರೆಹ್ರಾಡೂನ್ಗೆ ಕಾರ್ ಡ್ರೈವ್ ಮಾಡಿದ್ರೆ. ಹಾಗಂತಾ ಸರ್ಫರಾಜ್ ಏನು ಸುಮ್ನೆ ಟ್ರಿಪ್ ಹೋಗಿಲ್ಲ. ಲಾಕ್ಡೌನ್ ಟೈಮ್ನಲ್ಲಿ ಟ್ರಿಪ್ ಮಾಡೋಕೆ ಎಲ್ಲಿ ಅವಕಾಶ ನೀಡ್ತಿದ್ರು. ಬಟ್ ಸರ್ಫರಾಜ್ ಕ್ರಿಕೆಟ್ ಟ್ರೈನಿಂಗ್ಗಾಗಿಯೇ ಈ ಸಿಟಿ ಟು ಸಿಟಿ ಟೂರ್ ಮಾಡಿದ್ರು. ಸರ್ಫರಾಜ್ ಟೂರ್ ಕೈಗೊಂಡಿದ್ದೇ ಕ್ರಿಕೆಟ್ ಅಕಾಡೆಮಿ ಇರೋ ನಗರಗಳಿಗೆ. ಪ್ರತಿ ಸಿಟಿಗೂ ಹೋದಾಗಲೂ ಅಲ್ಲಿರೋ ಕ್ರಿಕೆಟ್ ಅಕಾಡೆಮಿಯಲ್ಲಿ ಸ್ಪಿನ್ನರ್ಸ್ಗಳನ್ನ ಫೇಸ್ ಮಾಡ್ತಿದ್ರು. ಅಲ್ಲೊಂದಷ್ಟು ದಿನ ಸ್ಪಿನ್ ಬೌಲಿಂಗ್ಗೆ ಬ್ಯಾಟಿಂಗ್ ಮಾಡಿ, ಬಳಿಕ ಮತ್ತೊಂದು ಸಿಟಿಗೆ ಹೋಗಿ ಅಲ್ಲೂ ಟ್ರೈನಿಂಗ್ ಕಂಟಿನ್ಯೂ. ಹೀಗೆ 1600 ಕಿಲೋ ಮೀಟಿರ್ ಜರ್ನಿ ಮಾಡಿ, ವಿವಿಧ ಕಂಡೀಷನ್ಗಳಲ್ಲಿ, ವಿವಿಧ ಪಿಚ್ಗಳನ್ನ ಸ್ಪಿನ್ನರ್ಸ್ಗಳನ್ನ ಫೇಸ್ ಮಾಡೋಕೆ ಅಂತಾನೆ ಟ್ರೈನಿಂಗ್ ಪಡೀತಾ ಇದ್ರು. ಲಾಕ್ಡೌನ್ ಟೈಮ್ನಲ್ಲಿ ಇದಕ್ಕಾಗಿ ಸರ್ಫರಾಜ್ ಸ್ಪೆಷಲ್ ಟ್ರಾವೆಲಿಂಗ್, ಟ್ರೈನಿಂಗ್ ಪರ್ಮಿಷನ್ ಕೂಡ ಪಡೆದುಕೊಂಡಿದ್ರು. ಇಷ್ಟೆಲ್ಲಾ ಟ್ರೈನಿಂಗ್ ಪಡೆದು, 15 ವರ್ಷಗಳಿಂದ ದಿನಕ್ಕೆ 500 ಬಾಲ್ಗಳನ್ನ ಫೇಸ್ ಮಾಡಿದ್ರಿಂದಾಗಿಯೇ ಸರ್ಫರಾಜ್ ಈಗ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ.
ತನ್ನ ಕಠಿಣ ಪ್ರಾಕ್ಟೀಸ್ನಿಂದಾಗಿಯೇ ಡೆಬ್ಯೂ ಮ್ಯಾಚ್ನಲ್ಲೇ ಇಂಗ್ಲೆಂಡ್ ಸ್ಪಿನ್ನರ್ಸ್ ಸೇರಿದಂತೆ ಬೌಲರ್ಸ್ಗಳನ್ನ ಸರ್ಫರಾಜ್ ಅಷ್ಟೊಂದು ಕಾನ್ಫಿಡೆನ್ಸ್ನಿಂದ, ಈಸಿಯಾಗಿ ಫೇಸ್ ಮಾಡಿರೋದು. ಸರ್ಫರಾಜ್ಗೆ ಇರೋ ಕ್ಯಾಲಿಬರ್ನ್ನ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದು, ಹೀಗಾಗಿ ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ನ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಸರ್ಫರಾಜ್ರನ್ನ ಬೇಗನೆ ಬ್ಯಾಟಿಂಗ್ ಕಳುಹಿಸಿದ್ರು. ಬ್ಯಾಟಿಂಗ್ ಆರ್ಡರ್ನಲ್ಲಿ ಸರ್ಫರಾಜ್ಗೆ ಪ್ರಪೋಷನ್ ನೀಡಿದ್ರು. ಆಫ್ಟರ್ ಮ್ಯಾಚ್ ಪ್ರೆಸ್ಮೀಟ್ನಲ್ಲೂ ರೋಹಿತ್ ಇದಕ್ಕೆ ಕ್ಲ್ಯಾರಿಟಿ ಕೊಟ್ಟಿದ್ರು, ಸ್ವಿಚ್ಯುವೇಷನ್ಗೆ ತಕ್ಕಂತೆ ಆಡೋ ಕೆಪಾಸಿಟಿ ಸರ್ಫರಾಜ್ಗೆ ಇದೆ. ಎಷ್ಟೋ ಬಾರಿ ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಪ್ರೆಷರ್ ಟೈಮ್ನಲ್ಲೇ ಸರ್ಫರಾಜ್ ಬಿಗ್ ಸ್ಕೋರ್ ಮಾಡಿದ್ರು. ಹೀಗಾಗಿಯೇ ಅಪ್ ಇನ್ ದಿ ಆರ್ಡರ್ ಬ್ಯಾಟಿಂಗ್ ಕಳಿಸಿದ್ದೆ ಅಂತಾ ರೋಹಿತ್ ಹೇಳಿದ್ದಾರೆ. ಅಂತೂ ರೋಹಿತ್ ಡಿಫೈನ್ ಮಾಡಿದಂತೆ ಈ ಆಜ್ ಕಲ್ ಕೇ ಹುಡುಗ್ರು ಟೀಂ ಇಂಡಿಯಾಗೆ ದೊಡ್ಡ ಗಿಫ್ಟ್ನಂತೆ ಕಾಣ್ತಾ ಇದ್ದಾರೆ. ಬಟ್ ಮುಂದಿನ ದಿನಗಳಲ್ಲೂ ಗ್ರೌಂಡೆಡ್ ಆಗಿಯೇ ಇದ್ದು ಈ ಪರ್ಫಾಮೆನ್ಸ್ನ್ನ, ಹಾರ್ಡ್ವರ್ಕ್ ಕಂಟಿನ್ಯೂ ಮಾಡಬೇಕಿದೆ. ಯೇ ಆಜ್ ಕಲ್ ಕೇ ಬಚ್ಚೇ ಫ್ಯೂಚರ್ ಸ್ಟಾರ್ಸ್ ಆಗೋದ್ರಲ್ಲಿ ಡೌಟೇ ಇಲ್ಲ.