ಕಾಯುತ್ತಿದ್ದ ದಿನಗಳು ಬಂದೇ ಬಿಟ್ಟಿತು – ಟೀಮ್ ಇಂಡಿಯಾ ತಂಡದಲ್ಲಿ ಸ್ಥಾನ ಪಡೆದ ಸರ್ಫರಾಜ್ ಖಾನ್

ಕಾಯುತ್ತಿದ್ದ ದಿನಗಳು ಬಂದೇ ಬಿಟ್ಟಿತು – ಟೀಮ್ ಇಂಡಿಯಾ ತಂಡದಲ್ಲಿ ಸ್ಥಾನ ಪಡೆದ ಸರ್ಫರಾಜ್ ಖಾನ್

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಹೊರಬಿದ್ದ ಬೆನ್ನಲ್ಲೇ, ಸರ್ಫರಾಜ್ ಖಾನ್ ಭಾರತ ತಂಡಕ್ಕೆ ಎಂಟ್ರಿ ಪಡೆದಿದ್ದಾರೆ. ಸುದೀರ್ಘ ಸಮಯದಿಂದ ಟೀಮ್‌ ಇಂಡಿಯಾಗೆ ಕಾಲಿಡಲು ಕಾಯುತ್ತಿದ್ದ ಖಾನ್‌, ಕೊನೆಗೂ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಸರ್ಫರಾಝ್ ಖಾನ್ ಸಿಡಿಲಬ್ಬರದ ಶತಕ – ಸ್ಫೋಟಕ ಸೆಂಚುರಿ ಸಿಡಿಸಿ ತಕ್ಕ ಉತ್ತರ ನೀಡಿದ ಯುವ ದಾಂಡಿಗ

ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿರೋ ಸರ್ಫರಾಜ್ ಖಾನ್ ಮತ್ತು ಸೌರಬ್ ಕುಮಾರ್ ಬಗ್ಗೆ ಒಂದಷ್ಟು ಹೇಳಲೇಬೇಕು. 26 ವರ್ಷದ ಸರ್ಫರಾಕ್​ ಒಬ್ಬ ಅಮೇಜಿಂಗ್ ಬ್ಯಾಟಿಂಗ್​ ಟ್ಯಾಲೆಂಟ್. ಕಳೆದ ಕೆಲ ವರ್ಷಗಳಿಂದಲೇ ಸರ್ಫರಾಜ್​ ಖಾನ್ ಹೆಸರು ಆಗಾಗ ಕೇಳಿ ಬರ್ತಾನೆ ಇತ್ತು. ಸರ್ಫರಾಜ್​ಗೆ ಟೀಂ ಇಂಡಿಯಾದಲ್ಲಿ ಚಾನ್ಸ್ ಕೊಡಬೇಕು ಅಂತಾ ಸುನಿಲ್​​ ಗವಾಸ್ಕರ್​ರಂಥಾ ಲೆಜೆಂಡ್ಸ್​​ಗಳು ಹಲವು ಬಾರಿ ಹೇಳಿದ್ರು. ಯಾಕಂದ್ರೆ ಫಸ್ಟ್​ ಕ್ಲಾಸ್​ ಕ್ರಿಕೆಟ್​​ನಲ್ಲಿ ಸರ್ಫರಾಜ್ ರನ್​ ಗುಡ್ಡೆಯನ್ನೇ ಹಾಕಿದ್ದಾರೆ. ಮುಂಬೈ ಪರ 45 ಮ್ಯಾಚ್​​ಗಳಲ್ಲಿ 3,912 ರನ್​ ಗಳಿಸಿದ್ದಾರೆ. 14 ಸೆಂಚೂರಿ, 11 ಹಾಫ್​ ಸೆಂಚೂರಿ ಹೊಡೆದಿದ್ದಾರೆ. 301 ರನ್​​​ ಸರ್ಫರಾಜ್​ರ ಹೈಯೆಸ್ಟ್ ಸ್ಕೋರ್. 69.85 ಬ್ಯಾಟಿಂಗ್ ಎವರೇಜ್ ಮೇಂಟೇನ್ ಮಾಡಿದ್ದಾರೆ. 2022ರಲ್ಲಿ ರಣಜಿಯಲ್ಲಿ 982 ರನ್ ಗಳಿಸೋ ಮೂಲಕ ಟಾಪ್ ಸ್ಕೋರರ್ ಆಗಿದ್ರು. 2020ರಲ್ಲಿ 928 ರನ್ ಹೊಡೆದಿದ್ರು. ಡೊಮೆಸ್ಟಿಕ್ ಕ್ರಿಕೆಟ್​​ನಲ್ಲಿ ಕನ್ಸಿಸ್ಟೆನ್ಸಿ ಮೇಂಟೇನ್ ಮಾಡಿರೋ ಸರ್ಫರಾಜ್​​ ಟೀಂ ಇಂಡಿಯಾದ ಬಾಗಿಲು ತಟ್ತಾನೆ ಇದ್ರು. ಸರ್ಫರಾಜ್​​ರನ್ನ ಸೆಲೆಕ್ಟ್​ ಮಾಡ್ತಾ ಇಲ್ಲ ಯಾಕೆ ಅಂತಾ ಬಿಸಿಸಿಐ ವಿರುದ್ಧವೂ ಸಾಕಷ್ಟು ಆಕ್ರೋಶ ಕೇಳಿ ಬಂದಿತ್ತು.

ಓವರ್​ ವೇಯ್ಟ್​​ ಹೊಂದಿರೋ ಸರ್ಫರಾಜ್​ ಫಿಟ್ನೆಸ್ ಮೇಂಟೇನ್​​ ಮಾಡಿಲ್ಲ ಅಂತಾನೂ ಕೆಲ ಆರೋಪಗಳು ಕೇಳಿ ಬಂದಿದ್ವು. ಓವರ್​ವೇಯ್ಟ್​ ಆಗಿದ್ರೇನು ರನ್ ಮಾಡ್ತಿದ್ರಲ್ಲಾ. ಇನ್ನೇನು ಬೇಕು ಅಂತಾ ಸುನಿಲ್​ ಗವಾಸ್ಕರ್​ ಕೂಡ ಸರ್ಫರಾಜ್ ಬೆನ್ನಿಗೆ ನಿಂತಿದ್ರು. ಇತ್ತೀಚೆಗಷ್ಟೇ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಮ್ಯಾಚ್​ನಲ್ಲಿ ಸರ್ಫರಾಜ್ 160 ಬಾಲ್​ಗಳಲ್ಲಿ 161 ರನ್​ ಗಳಿಸಿದ್ರು. ಸೋ ಫೈನಲಿ ಬಿಸಿಸಿಐ ಸರ್ಫರಾಜ್​ಗೆ ಟೀಂ ಇಂಡಿಯಾ ಡೋರ್ ಓಪನ್ ಮಾಡಿದೆ.

ಇನ್ನು ಇಂಗ್ಲೆಂಡ್​ ವಿರುದ್ಧದ ಸೆಕೆಂಡ್ ಟೆಸ್ಟ್​ಗೆ ಸರ್ಫರಾಜ್​ ಖಾನ್​ರನ್ನ ಪಿಕ್ ಮಾಡೋಕೆ ಇನ್ನೊಂದು ಮೇನ್ ರೀಸನ್ ಕೂಡ ಇದೆ. ಸಕೆಂಡ್ ಟೆಸ್ಟ್ ನಡೀತಾ ಇರೋದು ವಿಶಾಖಪಟ್ಟಣಂನಲ್ಲಿ. ಇಲ್ಲಿನದ್ದು ಸ್ಪಿನ್ ಫ್ರೆಂಡ್ಲಿ ಪಿಚ್ ಆಗಿದ್ದು, ಸರ್ಫರಾಜ್​ ಖಾನ್ ಸ್ಪಿನ್​​ ಬೌಲಿಂಗ್​ಗೆ ಚೆನ್ನಾಗಿ ಆಡೋ ಸಾಮರ್ಥ್ಯ ಹೊಂದಿದ್ದಾರೆ. ಪರ್ಫೆಕ್ಟ್​​​ ಸ್ಪೀಪ್​ ಶಾಟ್​ಗಳನ್ನ ಹೊಡೀತಾರೆ. ಫಸ್ಟ್​ ಟೆಸ್ಟ್​ನಲ್ಲಿ ನೀವು ಗಮನಿಸಿರಬಹುದು. ಇಂಗ್ಲೆಂಡ್​​ ಬ್ಯಾಟ್ಸ್​​ಮನ್​ಗಳೂ ನಮ್ಮ ಸ್ಪಿನ್ನರ್ಸ್​​ಗಳಿಗೆ ಸ್ವೀಪ್​ ಶಾಟ್​​ಗಳ ಮೂಲಕವೇ ಹೆಚ್ಚು ಸ್ಕೋರ್ ಮಾಡಿದ್ರು. ಇಂಗ್ಲೆಂಡ್​ ಟೀಮ್​​ ಕೂಡ ಅಷ್ಟೆ, ತನ್ನ ಸ್ಪಿನ್ನರ್ಸ್​​ಗಳಿಮದಾಗಿಯೇ ಭಾರತವನ್ನ ಸೋಲಿಸಿತ್ತು. ಹೀಗಾಗಿ ವಿಶಾಖಪಟ್ಟಣಂನದ್ದು ಸ್ಪಿನ್ ಪಿಚ್ ಬೇರೆ ಆಗಿರೋದ್ರಿಂದ ಸ್ಪಿನ್ನರ್ಸ್​​ಗಳನ್ನ ಎದುರಿಸೋ ಕ್ವಾಲಿಟಿ ಬ್ಯಾಟ್ಸ್​​ಮನ್​ನ ಅವಶ್ಯಕತೆ ಟೀಂ ಇಂಡಿಯಾಗೆ ಇದೆ. ಇದೇ ಕಾರಣಕ್ಕಾಗಿ ಸರ್ಫರಾಜ್​​ ಖಾನ್​ರನ್ನ ಸೆಲೆಕ್ಟ್ ಮಾಡಲಾಗಿದೆ.

ಇನ್ನೊಂದು ಇಂಟ್ರೆಸ್ಟಿಂಗ್​ ಸಂಗತಿ ಏನಂದ್ರೆ, ಟೆಸ್ಟ್​​ ಸ್ಕ್ವಾಡ್​​ಗೆ ಸರ್ಫರಾಜ್ ಖಾನ್ ಸೆಲೆಕ್ಟ್ ಆದ ಮರುದಿನವೇ, ಅಂದ್ರೆ ಜನವರಿ 30ರಂದು ಬೆಳಗ್ಗೆ 6.30ಕ್ಕೆ ಸರ್ಫರಾಜ್​ ನೆಟ್​​ಪ್ರಾಕ್ಟೀಸ್ ಶುರು ಮಾಡಿದ್ರು. ನಿಜಕ್ಕೂ ಸರ್ಫರಾಜ್​ಗೆ ಒಂದು ಒಳ್ಳೆಯ ಚಾನ್ಸ್ ಸಿಕ್ಕಿದೆ. ಹೀ ಡಿಸರ್ವ್ಸ್.. ಕೇವಲ ಸರ್ಫರಾಜ್ ಮಾತ್ರವಲ್ಲ ಫ್ಯೂಚರ್​​ನಲ್ಲಿ ಅವರ ತಮ್ಮ ಕೂಡ ಇಂಡಿಯನ್​ ಟೀಮ್​​ಗೆ ಸೆಲೆಕ್ಟ್ ಆದ್ರೂ ಆಗಬಹುದು. ಯಾಕಂದ್ರೆ ಸರ್ಫರಾಜ್ ತಮ್ಮ ಮುಶೀರ್ ಖಾನ್ ಕೂಡ ಮುಂಬೈ ಪರ ಫಸ್ಟ್​ ಕ್ಲಾಸ್ ಕ್ರಿಕೆಟ್ ಆಡ್ತಾ ಇದ್ದಾರೆ. ಅವರು ಅಣ್ಣನ ಹಾದಿಯಲ್ಲೇ ಸಾಗ್ತಾ ಇದ್ದಾರೆ.

ಇನ್ನು ಸೆಕೆಂಡ್​​ ಟೆಸ್ಟ್​ಗೆ ಸೆಲೆಕ್ಟ್ ಆಗಿರೋ ಸೌರಬ್ ಕುಮಾರ್​ 30 ವರ್ಷದ ಆಲ್ರೌಂಡರ್.  ಲೆಫ್ಟ್​ ಆರ್ಮ್ ಆರ್ಥೊಡಾಕ್ಸ್ ಸ್ಪಿನ್ ಬೌಲರ್. ಉತ್ತರಪ್ರದೇಶದ ಸೌರಬ್ ಫಸ್ಟ್ ಕ್ಲಾಸ್ ಕ್ರಿಕೆಟ್​ನಲ್ಲಿ 68 ಮ್ಯಾಚ್​​ಗಳಲ್ಲಿ 2061 ರನ್ ಹೊಡೆದಿದ್ದಾರೆ. ಹಾಗೆಯೇ 290 ವಿಕೆಟ್​​ಗಳನ್ನ ಗಳಿಸಿದ್ದಾರೆ. 2021ರಲ್ಲಿ ಇಂಗ್ಲೆಂಡ್ ವಿರುದ್ಧದ ಸೀರಿಸ್​ ವೇಳೆ ಸೌರಬ್ ಕುಮಾರ್ ನೆಟ್​​ ಬೌಲರ್ ಆಗಿದ್ರು. ಸ್ವಿಚ್ಯುವೇಶನ್​ಗೆ ತಕ್ಕಂತೆ ಬ್ಯಾಟಿಂಗ್​ ಮತ್ತು ಬೌಲಿಂಗ್ ಮಾಡುವ ಸೌರಬ್​ ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಟಾಪ್​ ಕ್ಲಾಸ್ ಪರ್ಫಾಮೆನ್ಸ್ ನೀಡಿದ್ದಾರೆ. ಬಟ್ ಈಗ ಸೆಕೆಂಡ್​ ಟೆಸ್ಟ್​ನಲ್ಲಿ ಸೌರಬ್​ಗೆ ಆಡೋಕೆ ಚಾನ್ಸ್ ಸಿಗುತ್ತಾ ಅನ್ನೋದು ಗ್ಯಾರಂಟಿ ಇಲ್ಲ. ಯಾಕಂದ್ರೆ ಕುಲ್​ದೀಪ್​ ಯಾದವ್ ಮತ್ತು ವಾಷಿಂಗ್ಟನ್​​ ಸುಂದರ್​ರಂಥಾ ಪ್ಲೇಯರ್ಸ್​ಗಳು ಕೂಡ ಇರೋದ್ರಿಂದ ಸೌರಬ್​ಗೆ ಆಡೋಕೆ ಅವಕಾಶ ಸಿಗೋದು ಡೌಟ್ ಅನ್ಸುತ್ತೆ. ಎನಿವೇ.. ಅಟ್​ಲೀಸ್ಟ್​​ ಸರ್ಫರಾಜ್​​ ಖಾನ್ ಆದ್ರೂ ಸೆಕೆಂಡ್​ ಟೆಸ್ಟ್​ನಲ್ಲಿ ಆಡಲಿ. ಯಾಕಂದ್ರೆ ಅವರ ಬ್ಯಾಟಿಂಗ್​ ನೋಡ್ಬೇಕು ಅಂತಾ ಸಾಕಷ್ಟು ಮಂದಿ ಕಾಯ್ತಾ ಇದ್ದಾರೆ. ಅಂಥಾ ಯಂಗ್​ ಟ್ಯಾಲೆಂಟ್​​ಗಳು ಕ್ಲಿಕ್ ಆಗಬೇಕು.

Sulekha