ಸರ್ಫರಾಜ್ ಸೆಲೆಕ್ಷನ್ POLITICS – BCCIಗೆ ಟ್ಯಾಲೆಂಟ್ ಗಿಂತ ಬಕೆಟ್ ಮುಖ್ಯ?
10 ತಿಂಗಳಲ್ಲೇ ಕೆರಿಯರ್ ಮುಗಿಸಿದ್ರಾ?

ಸರ್ಫರಾಜ್ ಸೆಲೆಕ್ಷನ್ POLITICS – BCCIಗೆ ಟ್ಯಾಲೆಂಟ್ ಗಿಂತ ಬಕೆಟ್ ಮುಖ್ಯ?10 ತಿಂಗಳಲ್ಲೇ ಕೆರಿಯರ್ ಮುಗಿಸಿದ್ರಾ?

ಟೀಂ ಇಂಡಿಯಾ ಸದ್ಯ ಬ್ಯಾಕ್ ಟು ಬ್ಯಾಕ್ ಸರಣಿ, ಟೂರ್ನಿಗಳಲ್ಲಿ ಬ್ಯುಸಿಯಾಗಿದೆ. ಟಿ-20ಐ, ಓಡಿಐ, ಟೆಸ್ಟ್ ಅಂತಾ ಪ್ರತೀ ತಿಂಗಳು ಒಂದಿಲ್ಲೊಂದು ಶೆಡ್ಯೂಲ್ ಇದ್ದೇ ಇರುತ್ತೆ.. ಆಯಾ ಫಾರ್ಮೆಟ್​ಗೆ ತಕ್ಕಂತೆ ಆಟಗಾರರನ್ನ ಬಿಸಿಸಿಐ ಸೆಲೆಕ್ಷನ್ ಕಮಿಟಿ ಆಯ್ಕೆ ಮಾಡ್ತಿದೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಟೀಂ ಇಂಡಿಯಾದಲ್ಲಿ ಟ್ಯಾಲೆಂಟ್ ಇದ್ದೂ ಕೂಡ ಕೆಲ ಆಟಗಾರರನ್ನ ಸೈಡ್​ಲೈನ್ ಮಾಡಲಾಗ್ತಿದೆ. ಒಂಥರಾ ಅವ್ರ ಕರಿಯರ್​ನೇ ಮುಗಿಸ್ತಿದ್ದಾರೆ ಅಂದ್ರೂ ತಪ್ಪಿಲ್ಲ. ಈ ಪೈಕಿ ರೆಡ್ ಬಾಲ್ ಫಾರ್ಮೆಟ್​ನಲ್ಲಿ ಸಾಲಿಡ್ ಫಾರ್ಮ್​ನಲ್ಲಿರೋ ಸರ್ಫರಾಜ್ ಖಾನ್​  ಕೂಡ ಒಬ್ರು. ದೇಶಿ ಕ್ರಿಕೆಟ್​ನಲ್ಲಿ ರನ್ ಮಳೆ ಸುರಿಸಿದ್ರೂ ಬಿಸಿಸಿಐ ಮಾತ್ರ ಕ್ಯಾರೇ ಅಂತಿಲ್ಲ.

ಇದನ್ನೂ ಓದಿ : ಅಭಿಷೇಕ್ ONE MAN SHOW – AUS ಎದುರು ಗೆದ್ದು ಸೋತ ಭಾರತ

ಐಪಿಎಲ್, ಇಂಟರ್​ನ್ಯಾಷನಲ್, ಡೊಮೆಸ್ಟಿಕ್ ಹೀಗೆ ಎಲ್ಲಾ ಮಾದರಿಯಲ್ಲೂ ಸದ್ದು ಮಾಡಿದ ಆಟಗಾರ ಸರ್ಫರಾಜ್ ಖಾನ್. ರಿಯಲಿ ಟ್ಯಾಲೆಂಟೆಡ್ ಪ್ಲೇಯರ್. ಅದ್ಯಾಕೋ ಏನೋ ಸರ್ಫರಾಜ್ ಲಕ್ ಸರಿ ಇಲ್ವೋ ಅಥವಾ ಮ್ಯಾನೇಜ್​ಮೆಂಟ್ ಪಾಲಿಟಿಕ್ಸೋ ಏನೋ. ಒಬ್ಬ ಪ್ರತಿಭಾವಂತ ಆಟಗಾರನನ್ನ ಕಂಪ್ಲೀಟ್ ಆಗಿ ಇಗ್ನೋರ್ ಮಾಡ್ತಿದ್ದಾರೆ. ಮೇನ್ ಟೀಮ್​ಗೆ ಸೆಲೆಕ್ಟ್ ಮಾಡೋಕೆ ಆಗದೇ ಇದ್ರೂ ಇಟ್ಸ್ ಓಕೆ. ಅಟ್​ಲೀಸ್ಟ್ ಎ ಟೀಂ ಅಂದ್ರೆ ಅನಧಿಕೃತ ಪಂದ್ಯಗಳಿಗೂ ಅವಕಾಶ ಕೊಡ್ತಿಲ್ಲ. ಭಾರತೀಯ ಕ್ರಿಕೆಟ್​ ಮಂಡಳಿಯಲ್ಲಿನ ರಾಜಕೀಯಕ್ಕೆ  ಸರ್ಫರಾಜ್​ನಂಥ ಅಪ್ಪಟ ಪ್ರತಿಭೆ ತೆರೆಮರೆಗೆ ಸರಿಯುತ್ತಾ ಅನ್ನೋ ಆತಂಕ ಶುರುವಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಎ ತಂಡಕ್ಕೂ ಸೆಲೆಕ್ಟ್ ಆಗದ ಸರ್ಫರಾಜ್!

ಹೌದು. ಸರ್ಫರಾಜ್ ಖಾನ್ ಹೆಸರು ಚರ್ಚೆಯಾಗೋಕೆ ಮುಖ್ಯ ಕಾರಣವೇ ದಕ್ಷಿಣಾ ಆಫ್ರಿಕಾ ವಿರುದ್ಧದ ಅನಧಿಕೃತ ಪಂದ್ಯಗಳು. ಭಾರತ ಎ ತಂಡ, ದಕ್ಷಿಣ ಆಫ್ರಿಕಾ ಎ ವಿರುದ್ಧ ನಾಲ್ಕು ದಿನಗಳ ಎರಡು ಪಂದ್ಯಗಳನ್ನು ಆಡಲಿದೆ. ಈ ಪಂದ್ಯಕ್ಕೆ ಬಿಸಿಸಿಐ ಭಾರತ ಎ ತಂಡವನ್ನು ಇತ್ತೀಚೆಗಷ್ಟೇ ಅನೌನ್ಸ್ ಮಾಡಿತ್ತು. ಇದ್ರಲ್ಲಿ ವಿಕೆಟ್‌ ಕೀಪರ್‌ ರಿಷಭ್ ಪಂತ್‌ಗೆ ನಾಯಕತ್ವವನ್ನು ನೀಡಲಾಗಿದೆ. ಆತಿಥೇಯ ತಂಡ ಅಕ್ಟೋಬರ್ 30 ರಂದು ಮೊದಲನೇ ಪಂದ್ಯವನ್ನು ಆಡಲಿದೆ. ಆದರೆ, ದೇಶಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಾಲಿಡ್ ಫಾರ್ಮ್​ನಲ್ಲಿದ್ರೂ ಸರ್ಫರಾಜ್ ಖಾನ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇದೇ ಈಗ ಮಾಜಿ ಕ್ರಿಕೆಟಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಒಂದೇ ವರ್ಷದಲ್ಲಿ ಕರಿಯರ್ ಮುಗಿಸಿತಾ ಬಿಸಿಸಿಐ?

28 ವರ್ಷದ ಸರ್ಫರಾಜ್ ಖಾನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ಬ್ಯಾಟ್ಸ್‌ಮನ್. 2024ರ ಫೆಬ್ರವರಿ 15 ರಂದು ರಾಜ್‌ಕೋಟ್‌ನಲ್ಲಿ ಪ್ರಾರಂಭವಾದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತೀಯ ತಂಡಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲೂ ಆಡಿದರು. ಆದ್ರೆ ಆ ನಂತ್ರ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಸೋ 2024ರ ಫೆಬ್ರವರಿ ಮತ್ತು ನವೆಂಬರ್ ನಡುವೆ ಭಾರತದ ಪರ 6 ಟೆಸ್ಟ್ ಪಂದ್ಯಗಳನ್ನು ಆಡಿದ್ರು. ಈ ವೇಳೆ 11 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ 1 ಶತಕ ಮತ್ತು 3 ಅರ್ಧಶತಕಗಳೊಂದಿಗೆ 371 ರನ್ ಗಳಿಸಿದರು. ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ 150 ರನ್ ಗಳಿಸಿದರು. ಆದ್ರೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗಲಿಲ್ಲ. ಇಂಗ್ಲೆಂಡ್ ಪ್ರವಾಸದಲ್ಲಿ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಯಿತು. ಈಗ ಅವರಿಗೆ ಭಾರತ ಎ ತಂಡದಲ್ಲೂ ಚಾನ್ಸ್ ಕೊಡ್ತಿಲ್ಲ. ಈ ಬಗ್ಗೆ ಸಾಕಷ್ಟು ಜನ ಪ್ರಶ್ನೆ ಮಾಡ್ತಿದ್ದಾರೆ. ರವಿಚಂದ್ರನ್ ಅಶ್ವಿನ್ ಅಂತೂ ಇದನ್ನ ಮಿಸ್ಟರಿ ಅಂತಾ ಕರೆದಿದ್ದಾರೆ. ಸುನಿಲ್ ಗವಾಸ್ಕರ್ ಹಾಗೇ ರಾಜಕೀಯ ನಾಯಕರೂ ಪ್ರಶ್ನಿಸಿದ್ದಾರೆ. ಅಸಾದುದ್ದೀನ್ ಓವೈಸಿ, ಶಶಿ ತರೂರ್, ಶಮಾ ಮೊಹಮ್ಮದ್ ಪ್ರಶ್ನೆ ಮಾಡಿದ್ದಾರೆ. ಅಷ್ಟಕ್ಕೂ ಸರ್ಫರಾಜ್​ ಬಗ್ಗೆ ಧ್ವನಿ ಎತ್ತೋಕೆ ಕಾರಣವೇ ಅವ್ರ ಪ್ಯೂರ್ ಟ್ಯಾಲೆಂಟ್. ರಣಜಿಯಲ್ಲಿ ಸರ್ಫರಾಜ್ ಖಾನ್ ಆ ಮಟ್ಟಿಗಿನ ಪ್ರದರ್ಶನ ನೀಡಿದ್ದಾರೆ.

ರಣಜಿ ರಾಜ ಸರ್ಫರಾಜ್!

2021-22 : 9 ಇನ್ನಿಂಗ್ಸ್, 122.75 ಸರಾಸರಿ, 982 ರನ್ಸ್

2022-23 : 9 ಇನ್ನಿಂಗ್ಸ್, 92.66 ಸರಾಸರಿ, 556 ರನ್ಸ್

2023-24 : 5 ಇನ್ನಿಂಗ್ಸ್, 50.00 ಸರಾಸರಿ, 200 ರನ್ಸ್

ಪ್ರಥಮದರ್ಜೆ ಕ್ರಿಕೆಟ್ ಸಾಧನೆ : 55 ಪಂದ್ಯ, 4,685 ರನ್, 65.98 ಸರಾಸರಿ, 16 ಶತಕ

ಇನ್ನು ಕಳೆದ ಆಗಸ್ಟ್​ನಲ್ಲಿ ಬುಚಿ ಬಾಬು ಟೂರ್ನಮೆಂಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. TNCA ಇಲೆವೆನ್ ವಿರುದ್ಧದ ಮೊದಲ ಪಂದ್ಯದಲ್ಲಿ ಅವ್ರ ತಂಡವು 98/3 ಸ್ಕೋರ್‌ನಲ್ಲಿ ಸಂಕಷ್ಟದಲ್ಲಿದ್ದಾಗ ಸರ್ಫರಾಜ್ ಬ್ಯಾಟಿಂಗ್‌ಗೆ ಬಂದರು. 114 ಎಸೆತಗಳಲ್ಲಿ 138 ರನ್ ಗಳಿಸಿ ಬಳಿಕ ಹೊಟ್ಟೆನೋವಿನಿಂದಾಗಿ ಹೊರ ನಡೆದಿದ್ರು. ಹಾಗೇ ಹರಿಯಾಣ ವಿರುದ್ಧದ ಮುಂದಿನ ಪಂದ್ಯದಲ್ಲಿ, ತಂಡವು 84/4 ರೊಂದಿಗೆ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್​ಗೆ ಬಂದ ಸರ್ಫರಾಜ್ 112 ಎಸೆತಗಳಲ್ಲಿ 111 ರನ್ ಗಳಿಸಿದರು. ಹೀಗಿದ್ರೂ ಭಾರತ ರೆಡ್ ಬಾಲ್ ಫಾರ್ಮೆಟ್​ನಲ್ಲಿ ಅವ್ರನ್ನ ಲೆಕ್ಕಕ್ಕೇ ಇಟ್ಟುಕೊಳ್ತಿಲ್ಲ.

17 ಕೆಜಿ ತೂಕ ಇಳಿಸಿಕೊಂಡ್ರೂ ಪರಿಗಣಿಸದ ಬಿಸಿಸಿಐ!

ಆರಂಭದಲ್ಲಿ ಸರ್ಫರಾಜ್​ರನ್ನ ಕೈಬಿಟ್ಟ ಬಗ್ಗೆ ಬಿಸಿಸಿಐ ಫಿಟ್​ನೆಸ್ ರೀಸನ್ ನೀಡಿತ್ತು. ಹೆವಿ ವೇಯ್ಟ್ ಇದ್ದಾರೆ ಅನ್ನೋ ನೆಪ ಅದು. ಬಟ್ ಇದನ್ನೇ ಚಾಲೆಂಜಿಂಗ್ ಆಗಿ ತಗೊಂಡಿದ್ದ ಸರ್ಫರಾಜ್ ಬರೋಬ್ಬರಿ 17 ಕೆಜಿ ತೂಕ ಇಳಿಸಿಕೊಂಡು ಫಿಟ್ ಌಂಡ್ ಫೈನ್ ಆಗಿದ್ರು. ಜಸ್ಟ್ ಎರಡು ತಿಂಗಳ ಅವಧಿಯಲ್ಲೇ ತಮ್ಮ ಆಹಾರ ಪದ್ಧತಿಯನ್ನ ಕಂಪ್ಲೀಟ್ ಆಗಿ ಚೇಂಜ್ ಮಾಡಿಕೊಂಡು ತೂಕ ಇಳಿಸಿಕೊಂಡಿದ್ರು. ಹೀಗಿದ್ರೂ ಬಿಸಿಸಿಐ ಮಾತ್ರ ಸರ್ಫರಾಜ್ ಕಡೆ ನೋಡ್ತಾನೇ ಇಲ್ಲ. ವೈಟ್ ಬಾಲ್ ಫಾರ್ಮೆಟ್ ಬೇಡ ಅಟ್​ಲೀಸ್ಟ್ ರೆಡ್ ಬಾಲ್ ಫಾರ್ಮೆಟ್​ನಲ್ಲಿ ಎ ತಂಡಕ್ಕಾದ್ರೂ ಅವಕಾಶ ಕೊಡ್ಬೋದಿತ್ತು. ಆದ್ರೆ ಪದೇಪದೆ ಇಗ್ನೋರ್ ಮಾಡ್ತಿರೋದನ್ನ ನೋಡಿದ್ರೆ ಆಯ್ಕೆ ಸಮಿತಿಯಲ್ಲಿನ ಪಾಲಿಟಿಕ್ಸ್ ಅನ್ನೋದು ಗೊತ್ತಾಗ್ತಿದೆ. ಗಂಭೀರ್ ಮತ್ತು ಅಗರ್ಕರ್ ಆಟಕ್ಕೆ ಪ್ಯೂರ್ ಟ್ಯಾಲೆಂಟೆಡ್ ಪ್ಲೇಯರ್ ಕರಿಯರ್ ಎಂಡ್ ಆಗುತ್ತಾ ಅನ್ನೋ ಪ್ರಶ್ನೆಗಳು ಮೂಡಿವೆ.

Shantha Kumari