ಫಿಟ್ನೆಸ್‌ಗಾಗಿ IND ಪ್ಲೇಯರ್ಸ್‌ಗೆ ಇಂಜೆಕ್ಷನ್? – ಸರ್ಫರಾಜ್ ಸ್ಲಿಮ್ ಸೀಕ್ರೆಟ್ ರಿವೀಲ್
CSK ಸೋಲಿಸಲು MIಗೆ ಪಾಂಡ್ಯ ಅಸ್ತ್ರ!

ಫಿಟ್ ನೆಸ್ ಕಾಪಾಡಲು ಕೆಲ ಕ್ರಿಕೆಟರ್ ಗಳು ಇಂಜೆಕ್ಷನ್ ಮೊರೆ ಹೋಗುತ್ತಿದ್ದಾರೆ. ಐಪಿಎಲ್ ನಲ್ಲಿ ಹಾರ್ದಿಕ್ ಪಾಂಡ್ಯ ಮೇಲೆ ಸಾಕಷ್ಟು ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಟೀಮ್ ಇಂಡಿಯಾ ಸೇರಲು ಸರ್ಫರಾಜ್ ಖಾನ್ 17 ಕೆಜಿ ತೂಕ ಇಳಿಸಿದ್ದಾರೆ. ಹೀಗೆ ಕ್ರಿಕೆಟ್ ಬಗೆಗಿನ ಕೆಲ ಕುತೂಹಲಕಾರಿ ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ : 2027ರ ವಿಶ್ವಕಪ್ ಗಿಲ್ಲ ವೆಸ್ಟ್ ಇಂಡೀಸ್ – 10 ಟೀಂ.. Qualifier ಪಾಸ್ ಆಗ್ತಾರಾ?
- ಟೀಂ ಇಂಡಿಯಾ ಆಟಗಾರರ ಫಿಟ್ನೆಸ್ ಬಗ್ಗೆ ಕಳವಳಕಾರಿ ವಿಚಾರ ಬೆಳಕಿಗೆ ಬಂದಿದೆ. ಕೆಲ ಆಟಗಾರರು ಅಲ್ಟ್ರಾ-ಲೀನ್ ಲುಕ್ ಪಡೆಯಲು, ತೂಕ ಇಳಿಸಲು ವಿಶೇಷ ಇಂಜೆಕ್ಷನ್ಗಳನ್ನು ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿವೆ. IPL ಹಾಗೂ ರಾಷ್ಟ್ರೀಯ ತಂಡದ ಕೆಲವು ಆಟಗಾರರು ಒಝೆಂಪಿಕ್ ಮತ್ತು ಮೌಂಜಾರೊ ನಂತಹ ಮಧುಮೇಹ ನಿಯಂತ್ರಣ ಹಾಗೂ ತೂಕ ಇಳಿಕೆಯ ಇಂಜೆಕ್ಷನ್ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ದೇಹದ ಕೊಬ್ಬು ಕರಗಿಸಿ, ಕ್ಯಾಮೆರಾ ಮುಂದೆ ಸ್ಲಿಮ್ ಆಗಿ ಕಾಣಲು ಈ ಶಾರ್ಟ್ಕಟ್ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
- ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್, ಕಿಂಗ್ ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ವಿರಾಟ್ ಒಬ್ಬ ಮಾದರಿ ವೃತ್ತಿಪರ ಆಟಗಾರ ಎಂಬುದರಲ್ಲಿ ಸಂಶಯವಿಲ್ಲ. ಅವರು ತಮಗಾಗಿ ನಿಗದಿಪಡಿಸಿಕೊಳ್ಳುವ ಮಾನದಂಡಗಳನ್ನು ಪೂರೈಸಲು, ತಾವು ಪ್ರತಿನಿಧಿಸುವ ಯಾವುದೇ ತಂಡದ ಪರ ಆಡುವಾಗಲೂ ತನ್ನ ಪ್ರಯತ್ನ ಮುಂದುವರೆಸುತ್ತಾರೆ. ಅದಕ್ಕಾಗಿಯೇ ಅವರು ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಹೀಗಾಗಿಯೇ ಅನೇಕ ಆಟಗಾರರು ಅವರನ್ನು ಅನುಸರಿಸಲು ಬಯಸುತ್ತಾರೆ ಎಂದು ವಿವಿಎಸ್ ಲಕ್ಷ್ಮಣ್ ಕೊಹ್ಲಿಯವರನ್ನ ಹೊಗಳಿದ್ದಾರೆ.
- ಕ್ರಿಕೆಟ್ ಲೋಕದ ಬೇಬಿಬಾಸ್ ಈಗ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಕ್ರಿಕೆಟ್‌ನಿಂದ ಕೊಂಚ ವಿರಾಮ ಪಡೆದಿರುವ ವೈಭವ್ ಸೂರ್ಯವಂಶಿ ತಮ್ಮ ಸ್ನೇಹಿತ ಜೊತೆ ಮಹಾರಾಷ್ಟ್ರದ ಬೋರ್ ಟೈಗರ್ ರಿಸರ್ವ್‌ಗೆ ಭೇಟಿ ನೀಡಿದ್ದಾರೆ. ಫ್ರೆಂಡ್ಸ್ ಜೊತೆ ಪ್ರಕೃತಿಯಲ್ಲಿ ಸಮಯ ಕಳೆಯುತ್ತಿರುವ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
- ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಸರ್ಫರಾಜ್ ಖಾನ್ ಎರಡು ವರ್ಷಗಳ ನಂತರ ಮರಳಿದ್ದಾರೆ. ಸಾಯಿ ಸುದರ್ಶನ್ ಬದಲಿಗೆ ತಂಡಕ್ಕೆ ಎಂಟ್ರಿಕೊಟ್ಟ ಸರ್ಫರಾಜ್ ಖಾನ್ ಲುಕ್ ಈಗ ಚೇಂಜ್ ಆಗಿದೆ. ಸರ್ಫರಾಜ್ ಬರೋಬ್ಬರಿ 17 ಕೆಜಿ ತೂಕ ಇಳಿಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಕ್ರಿಕೆಟ್‌ಗಾಗಿ ಸರ್ಫರಾಜ್ ಖಾನ್ ಕಠಿಣ ಪರಿಶ್ರಮ ಪಟ್ಟಿದ್ದಾರೆ. ಇದೇ ಪರಿಶ್ರಮದ ಮೂಲಕ ಮತ್ತೆ ಟೀಮ್ ಇಂಡಿಯಾಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ.
- ನಿವೃತ್ತಿ ಘೋಷಣೆ ಸಂದರ್ಭದಲ್ಲಿ, ತನಗೆ ಮೊದಲು ಕಾಲ್ ಮಾಡಿದ್ದು ಸಚಿನ್ ತೆಂಡೂಲ್ಕರ್ ಎಂಬ ವಿಚಾರವನ್ನು ಅಜಿಂಕ್ಯಾ ರಹಾನೆ ಹೇಳಿಕೊಂಡಿದ್ದಾರೆ. ಸಚಿನ್ ತೆಂಡಲ್ಕೂರ್ ಕರೆ ಮಾಡಿ ನೀವು ಇನ್ನು ಕೆಲವು ಕಾಲ ಕ್ರಿಕೆಟ್ ಆಡಬಹುದು ಎಂದು ಭಾವಿಸಿದ್ದೆ ಎಂದು ಹೇಳಿದ್ರು. ಜೊತೆಗೆ ಇರ್ಫಾನ್ ಪಠಾಣ್ ಕರೆ ಮಾಡಿ ಮಾತಾಡಿದರು. ಕೊಹ್ಲಿ, ರೋಹಿತ್ ಮತ್ತು ಬುಮ್ರಾ ಸಂದೇಶ ಕಳಿಸಿದ್ರು ಎಂದು ರಹಾನೆ ಹೇಳಿಕೊಂಡಿದ್ದಾರೆ. ಈ ಎಲ್ಲಾ ಆಟಗಾರರ ಬೆಂಬಲಕ್ಕೆ ರಹಾನೆ ಧನ್ಯವಾದ ಹೇಳಿದ್ದಾರೆ.
- ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯರನ್ನ ತಂಡಕ್ಕೆ ಸೇರಿಸಿಕೊಳ್ಳಲು ಸಿಎಸ್‌ಕೆ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಶಿವಂ ದುಬೆ, ಖಲೀಲ್ ಅಹ್ಮದ್ ಮತ್ತು ಕಾಂಬೋಜ್‌ರನ್ನು ಮುಂಬೈ ಟ್ರೇಡಿಂಗ್‌ಗೆ ಮುಂದಾಗಿದೆ ಅನ್ನೋ ಚರ್ಚೆ ನಡೆಯುತ್ತಿದೆ. ಇದರ ಮಧ್ಯೆ ಮಾಜಿ ಕ್ರಿಕಟರ್ ಆರ್ ಅಶ್ವಿನ್ ಸಿಎಸ್‌ಕೆ ಎಚ್ಚರಿಕೆ ನೀಡಿದ್ದಾರೆ. ದುಬೆ ಅವರನ್ನು CSK ಬಿಟ್ಟುಕೊಟ್ಟರೆ ಅವರು ಬೇರೆ ತಂಡದಲ್ಲಿ ಸ್ಟ್ರಾಂಗ್ ಪ್ಲೇಯರ್ ಆಗಲಿದ್ದಾರೆ. ಹಾರ್ದಿಕ್‌ಗಾಗಿ ಪ್ರಮುಖ ವೇಗಿಗಳನ್ನು ಬಿಟ್ಟುಕೊಟ್ಟರೆ CSKಯ ಬೌಲಿಂಗ್ ವಿಭಾಗ ದುರ್ಬಲಗೊಳ್ಳಲಿದೆ. ಮುಂಬೈ ಇಂಡಿಯನ್ಸ್ CSK ತಂಡದ ಬೆನ್ನೆಲುಬು ಮುರಿಯಲು ಯತ್ನಿಸುತ್ತಿದೆ ಎಂದು ಅಶ್ವಿನ್ ಎಚ್ಚರಿಸಿದ್ದಾರೆ.
- MI ನಾಯಕ ಹಾರ್ದಿಕ್ ಪಾಂಡ್ಯ ರನ್ನು ತಮ್ಮ ತಂಡಕ್ಕೆ ಸೆಳೆಯಲು ಕೆಲ ಫ್ರಾಂಚೈಸಿಗಳು ಮುಂದಾಗಿವೆ ಎಂಬ ಅಪ್‌ಡೇಟ್ಸ್ ಸಿಕ್ಕಿದೆ. ಈಗಾಗಲೇ MI ಮತ್ತು ಸಿಎಸ್‌ಕೆ ನಡುವೆ ಟ್ರೇಡ್ ನಡೆಯುತ್ತಿವೆ ಎನ್ನುವಾಗಲೇ ಡಿಸಿ ತಂಡ ಕೂಡಾ ಟ್ರೇಡ್‌ಗೆ ಆಸಕ್ತಿ ತೋರಿದೆ ಎಂದು ಹೇಳಲಾಗ್ತಿದೆ. ಹಾರ್ದಿಕ್ ಮತ್ತು ಅಕ್ಷರ್ ವಿನಿಮಯಕ್ಕೆ MI ಆಸಕ್ತಿ ತೋರುತ್ತಿದೆ ಎಂದು ವರದಿಯಾಗಿದೆ. ಮತ್ತೊಂದೆಡೆ RR ಮತ್ತು MI ನಡುವೆ ಟ್ರೇಡ್ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಹಾರ್ದಿಕ್ ಮತ್ತು ಜೈಸ್ವಾಲ್ ವಿನಿಮಯ ಸಾಧ್ಯತೆಯಿದೆ ಎಂದು ವರದಿಯಾಗಿದೆ.
- CSK CEO ಕಾಶಿ ವಿಶ್ವನಾಥನ್ ಅವರು ಹೆಡ್ ಕೋಚ್ ಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಮಹತ್ವದ ನಿರ್ಧಾರದಲ್ಲಿ ಮಾಜಿ ನಾಯಕ ಎಂ.ಎಸ್. ಧೋನಿ ಹಾಗೂ ನಾಯಕ ರುತುರಾಜ್ ಗಾಯಕ್ವಾಡ್ ಅವರ ಸಲಹೆಗಳನ್ನು ಪಡೆಯಲಾಗುತ್ತಿದೆ ಎಂದು ಕಾಶಿ ವಿಶ್ವನಾಥನ್ ತಿಳಿಸಿದ್ದಾರೆ. ಹೊಸ ಕೋಚ್ ಸಿಕ್ಕ ನಂತರವೇ ಹಾರ್ದಿಕ್ ಪಾಂಡ್ಯ ಟ್ರೇಡ್ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ತಿಳಿಸಿದೆ.
- ಮತ್ತೊಂದೆಡೆ ಸಿಎಸ್‌ಕೆ ಟೀಮ್‌ಗೆ ಹೆಡ್‌ಕೋಚ್ ಆಗಿ ಪ್ರಮುಖ ವಿದೇಶಿ ದಿಗ್ಗಜ ಆಟಗಾರರು ರೇಸ್‌ನಲ್ಲಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ಮಾಜಿ ಕ್ರಿಕೆಟರ್ ಬ್ರೆಂಡನ್ ಮೆಕಲಮ್, ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಆಗಿರುವ ಮೈಕಲ್ ಹಸ್ಸಿ, ಸಿಎಸ್‌ಕೆ ಮಾಜಿ ಆಲ್‌ರೌಂಡರ್ ಅಲ್ಬಿ ಮಾರ್ಕೆಲ್, ಆರ್‌ಸಿಬಿ ಮತ್ತು ನ್ಯೂಝಿಲೆಂಡ್ ತಂಡಗಳ ಮಾಜಿ ಕೋಚ್ ಆಗಿರುವ ಮೈಕ್ ಹೆಸನ್ ಸಿಎಸ್‌ಕೆ ಹೆಡ್‌ಕೋಚ್ ಆಗಲು ಮುಂದೆ ಬಂದಿದ್ದಾರೆ.
- ಟೀಂ ಇಂಡಿಯಾ ಮಾಜಿ ನಾಯಕ ಹಾಗೂ BCCI ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಅವರ ಪತ್ನಿ ಡೋನಾ ಗಂಗೂಲಿಗೆ ಜೀವ ಬೆದರಿಕೆ ಕರೆ ಹಾಗೂ ಬೆದರಿಕೆ ಪತ್ರ ಬಂದಿದೆ. ಈ ಸಂಬಂಧ ಗಂಗೂಲಿ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೋಮವಾರ ಗಂಗೂಲಿ ಅವರ ಕಚೇರಿಗೆ ಕೊರಿಯರ್ ಮೂಲಕ ಬಂದಿದ್ದ ಪತ್ರವೊಂದನ್ನು ತೆರೆದು ನೋಡಿದಾಗ ಬೆದರಿಕೆ ವಿಚಾರ ಬೆಳಕಿಗೆ ಬಂದಿದೆ. ಪತ್ರದಲ್ಲಿ, ಗಂಗೂಲಿ ಹಾಗೂ ಅವರ ಕುಟುಂಬವನ್ನು ಕೊನೆಗೊಳಿಸುವುದಾಗಿ ಬೆದರಿಕೆ ಹಾಕಲಾಗಿತ್ತು.

ನೋಡಿರಿ

